1
ಭೂಮಿಯು ತನ್ನ ಉಗ್ರ ಕಂಪನದೊಂದಿಗೆ ಕಂಪಿಸಲ್ಪಟ್ಟರೆ,
2
(ಆಗ) ಭೂಮಿ ತನ್ನ ಒಡಲಲ್ಲಿರುವ ಹೊರೆಗಳನ್ನು ಹೊರ ಹಾಕಿದರೆ,
3
(ಆಗ) ಮನುಷ್ಯನು ಹೇಳುವನು ‘ಭೂಮಿಗೆ ಏನು ಸಂಭವಿಸಿದೆ?
4
ಅಂದು ಭೂಮಿಯು ತನ್ನ ವೃತ್ತಾಂತವನ್ನು ವಿವರಿಸುವುದು.
5
ಏಕೆಂದರೆ ತಮ್ಮ ಪಾಲಕನಾದ ಅಲ್ಲಾಹು ಅದಕ್ಕೆ ಹಾಗೆ ಆದೇಶ ಕೊಟ್ಟಿರುವನು.
6
ಅಂದು ಅವರವರ ಕರ್ಮಗಳ ಪ್ರತಿಫಲವನ್ನು ಕಾಣಲಿಕ್ಕಾಗಿ ಜನರು ಬೇರೆ ಬೇರೆಯಾಗಿ ತೆರಳುವರು.
7
ಯಾರು ಅಣುಗಾತ್ರದಷ್ಟು ಒಳಿತನ್ನು ಮಾಡುತ್ತಾನೋ, ಅವನು ಅದರ ಫಲವನ್ನು ಕಾಣುವನು.
8
ಯಾರು ಅಣುಗಾತ್ರದಷ್ಟು ಕೆಡುಕನ್ನು ಮಾಡುತ್ತಾನೋ, ಅವನು ಅದರ ಫಲವನ್ನು ಕಾಣುವನು.