ಆಲ್ ಇಸ್ಲಾಂ ಲೈಬ್ರರಿ
1

(ಪ್ರವಾದಿವರ್ಯರೇ) ಹೇಳಿರಿ, ಮನುಷ್ಯರ ಪಾಲಕ ಪ್ರಭುವಿನೊಂದಿಗೆ ನಾನು ಅಭಯ ಯಾಚಿಸುತ್ತೇನೆ.

2

ಮನುಷ್ಯರ ಅಧಿಪತಿಯಾದ (ಅಲ್ಲಾಹನೊಂದಿಗೆ)

3

ಮನುಷ್ಯರ ಆರಾಧ್ಯನಾದ (ಅಲ್ಲಾಹನೊಂದಿಗೆ.)

4

ಹೊಂಚುಗಾರನಾದ ಶೈತಾನನ ಕೇಡಿನಿಂದ.

5

ಮನುಷ್ಯರ ಹೃದಯಗಳಲ್ಲಿ ಚಂಚಲ ಮೂಡಿಸುವ

6

ಜಿನ್ನ್ ಮತ್ತು ಮನುಷ್ಯರ ಪೈಕಿ