1
ಪರಮ ದಯಾಮಯನೂ ಕೃಪಾನಿಧಿಯೂ ಆದ ಅಲ್ಲಾಹನ ನಾಮದೊಂದಿಗೆ,
2
ಸಕಲ ಲೋಕ ಪರಿಪಾಲಕನಾದ ಅಲ್ಲಾಹನಿಗೇ ಸರ್ವಸ್ತುತಿ.
3
ಸರ್ವದಯಾಳು, ವಿಶೇಷ ಕೃಪಾನಿಧಿ.
4
ಪ್ರತಿಫಲದ ದಿನದ ಅಧಿಪತಿ.
5
ನಿನ್ನನ್ನೇ ನಾವು ಆರಾಧಿಸುತ್ತೇವೆ, ನಿನ್ನಲ್ಲೇ ನಾವು ಸಹಾಯ ಬೇಡುತ್ತೇವೆ.
6
ನೇರವಾದ ದಾರಿಯಲ್ಲಿ ನಮ್ಮನ್ನು ನೆಲೆನಿಲ್ಲಿಸು.
7
ನೀನು ಅನುಗ್ರಹಿಸಿದವರ ಮಾರ್ಗದಲ್ಲಿ, ಕ್ರೋಧಕ್ಕೊಳಗಾದವರ ಮಾರ್ಗದಲಿ ್ಲ ಅಲ್ಲ; ದಾರಿ ತಪ್ಪಿದವರದ್ದೂ ಅಲ್ಲ. (ಆಮೀನ್)