ಆಲ್ ಇಸ್ಲಾಂ ಲೈಬ್ರರಿ
1

ಹೇಂಕರಿಸುತ್ತ ರಭಸದಿಂದ ಓಡುವ ಕುದುರೆಗಳಾಣೆ!

2

ಗೊರಸುಗಳಿಂದ ಕಿಡಿ ಹಾರಿಸುವ ಕುದುರೆಗಳಾಣೆ!

3

ಪ್ರಭಾತದ ವೇಳೆ ಶತ್ರುಗಳ ಮೇಲೆ ಮುಗಿ ಬೀಳುವ ಕುದುರೆಗಳಾಣೆ !

4

ಆಗ ಅವು ಧೂಳೆಬ್ಬಿಸುತ್ತವೆ.

5

ಆ ಧೂಳಿನೊಂದಿಗೆ ಶತ್ರು ಸೇನೆಯ ಮಧ್ಯಕ್ಕೆ ಲಗ್ಗೆಯಿಡುತ್ತವೆ.

6

ಖಂಡಿತವಾಗಿಯೂ ಮನುಷ್ಯನು ತನ್ನ ಪರಿಪಾ ಲಕನಾದ ಅಲ್ಲಾಹನಿಗೆ ಬಹಳ ಕೃತಘ್ನನಾಗಿದ್ದಾನೆ.

7

ಅವನ ಕೃತಘ್ನತೆಗೆ ಅವನೇ ಸಾಕ್ಷಿಯಾಗಿದ್ದಾನೆ.

8

ಮನುಷ್ಯನು ಸಂಪತ್ತುಗಳ ಮೇಲೆ ತೀವ್ರ ಮೋಹವುಳ್ಳವನು.

9

ಅವನು ತಿಳಿದಿಲ್ಲವೇ? ಸಮಾಧಿಗಳಿಂದ (ಮೃತರನ್ನು) ಹೊರಡಿಸಲಾದರೆ?

10

ಹೃದಯಗಳಲ್ಲಿರುವುದನ್ನು ಬಹಿರಂಗಗೊಳಿಸಲಾದರೆ,

11

ಆ ದಿನ ಅವರ ಪರಿಪಾಲಕನಾದ ಅಲ್ಲಾಹನು ಅವರನ್ನು ಸೂಕ್ಷ್ಮವಾಗಿ ತಿಳಿಯುವವನಾಗಿದ್ದಾನೆ.