1
ಭಯಂಕರ ಸದ್ದಿನ ಆ ಮಹಾ ದುರಂತ!
2
ಅದೆಂತಹ ಭೀಕರ ಘಟನೆ!
3
ಆ ಭೀಕರ ಘಟನೆ ಏನೆಂದು ತಮಗೆ ಗೊತ್ತೆ?
4
ಮನುಷ್ಯರೆಲ್ಲರೂ ಚದುರಿದ ಹಾತೆಗಳಂತೆ ಚೆಲ್ಲಾಪಿಲ್ಲಿಯಾಗುವ ದಿನ.
5
ಅಂದು ಪರ್ವತಗಳು ಹಿಂಜಿದ ಅರಳೆಯಂತಾಗುವುವು !
6
(ಆಗ) ಯಾರ ಸತ್ಕರ್ಮಗಳ ತಟ್ಟೆಯು ಭಾರವಾಗಿರುವುದೋ,
7
ಅವನು ತೃಪ್ತಿಕರವಾದ ಜೀವನದಲ್ಲಾಗುವನು.
8
ಆಗ ಯಾರ ಸತ್ಕರ್ಮಗಳ ತಟ್ಟೆಯು ಹಗುರ ವಾಗಿರುವುದೋ,
9
ಅವನ ವಾಸಸ್ಥಳ ಪ್ರಪಾತವಾಗಿರುವುದು.
10
ಆ ಪ್ರಪಾತ ಏನೆಂದು ನಿಮಗೆ ಗೊತ್ತೆ ?
11
ಘೋರತಾಪದ ನರಕವದು.