1
ಹೆಚ್ಚುಗಾರಿಕೆಯ ಪೈಪೋಟಿಯು ನಿಮ್ಮನ್ನು (ದೇವ ಶ್ರದ್ಧೆಯಿಂದ) ಮೊಟಕುಗೊಳಿಸಿದೆ.
2
ನೀವು ಸಮಾಧಿಗಳನ್ನು ಸಂದರ್ಶಿಸುವವರೆಗೆ .
3
ಜೋಕೆ! (ಮರಣದ ವೇಳೆ) ನೀವು ತಿಳಿಯಲಿದ್ದೀರಿ!
4
ಎಚ್ಚರವಿರಲಿ! ನಂತರ (ಸಮಾಧಿಯೊಳಗೆ) ನೀವು ತಿಳಿಯಲಿದ್ದೀರಿ.
5
ಖಂಡಿತ ! (ಪೈಪೋಟಿಯ ಪರ್ಯವಸಾನವನ್ನು) ನೀವು ಖಚಿತವಾಗಿ ತಿಳಿದಿದ್ದರೆ...! (ನೀವು ಪೈಪೋಟಿ ನಡೆಸುತ್ತಿರಲಿಲ್ಲ.)
6
ನೀವು ನರಕವನ್ನು ಕಂಡೇ ತೀರುವಿರಿ.
7
ಪುನಃ ನೀವದನ್ನು ಖಚಿತ ದೃಷ್ಟಿಯಲ್ಲಿ ಕಾಣಲಿದ್ದೀರಿ.
8
ಆಮೇಲೆ ನಿಮಗೆ ದೊರೆತಿದ್ದ ಅನುಗ್ರಹಗಳ ಕುರಿತು ಅಂದು ನಿಮ್ಮಲ್ಲಿ ವಿಚಾರಿಸಲಾಗುವುದು.