ಆಲ್ ಇಸ್ಲಾಂ ಲೈಬ್ರರಿ
1

ಇದನ್ನು (ಖುರ್‍ಆನನ್ನು) ನಾವು ಖದ್‍ರಿನ ರಾತ್ರಿಯಲ್ಲಿ ಅವತೀರ್ಣಗೊಳಿಸಿದ್ದೇವೆ.

2

ಖದ್‍ರಿನ ರಾತ್ರಿ ಏನೆಂದು ಗೊತ್ತೆ?

3

ಖದ್‍ರಿನ ರಾತ್ರಿಯು ಸಾವಿರ ಮಾಸಕ್ಕಿಂತಲೂ ಶ್ರೇಷ್ಟವಾಗಿದೆ .

4

ಅಂದು ಅಲ್ಲಾಹನ ಸಮ್ಮತಿ ಮೇರೆಗೆ ಎಲ್ಲ ಕಾರ್ಯಗಳಿಗಾಗಿ ದೇವಚರರು ಹಾಗೂ ‘ರೂಹ್’ ಇಳಿದು ಬರುವರು.

5

ಆ ರಾತ್ರಿಯು ಪ್ರಭಾತದವರೆಗೆ ಸುರಕ್ಷೆಯಾಗಿದೆ.