ಸೃಷ್ಟಿಸಿದ ನಿಮ್ಮ ಪ್ರಭುವಿನ ನಾಮದೊಂದಿಗೆ ಓದಿರಿ.
ಮನುಷ್ಯನನ್ನು ಅವನು ರಕ್ತ ಪಿಂಡದಿಂದ ಸೃಷ್ಟಿಸಿರುವನು.
ಓದಿರಿ, ತಮ್ಮ ಪಾಲಕ ಪ್ರಭು ಅತ್ಯಂತ ಉದಾರಿಯಾಗಿರುವನು.
ಲೇಖನಿಯ ಮೂಲಕ ಕಲಿಸಿಕೊಟ್ಟವನು.
ಮನುಷ್ಯನಿಗೆ ತಿಳಿದಿರದ ಕಾರ್ಯಗಳನ್ನು ಅವನು ಕಲಿಸಿಕೊಟ್ಟಿರುವನು .
ಖಂಡಿತ ಮನುಷ್ಯನು ದ್ರೋಹವೆಸಗುತ್ತಾನೆ .
ಅವನು ತನ್ನನ್ನು ಆರ್ಥಿಕ ಸ್ವಾವಲಂಬಿ ಎಂದು ತಿಳಿದುಕೊಂಡಿರುವುದರಿಂದ !
ನಿನ್ನ ಪ್ರಭುವಿನ ಬಳಿಗಾಗಿದೆ ನಿನ್ನ ಮರಳುವಿಕೆ.
ತಡೆಯುವ ಒಬ್ಬ ವ್ಯಕ್ತಿಯನ್ನು ಕಂಡೆಯಾ?
ಒಬ್ಬ ದಾಸನನ್ನು, ಅವನು ನಮಾಝ್ ಮಾಡುವಾಗ!
ಕಂಡೆಯಾ! ಆ ದಾಸನು ಸನ್ಮಾರ್ಗದಲ್ಲಾಗಿದ್ದರೆ,
ಅಥವಾ ಅವನು ದೇವಭಕ್ತಿಯ ಆದೇಶ ನೀಡುತ್ತಿದ್ದರೆ, (ತಡೆದವನ ಗತಿಯೇನು?)
ಕಂಡೆಯಾ? ಆತ (ಆ ದಾಸನನ್ನು) ಸುಳ್ಳಾಗಿಸಿದರೆ ಮತ್ತು ಸತ್ಯವಿಶ್ವಾಸದಿಂದ ವಿಮುಖನಾದರೆ,
ಅಲ್ಲಾಹು ಅವನನ್ನು ಕಾಣುತ್ತಿದ್ದಾನೆ ಎಂಬುದನ್ನು ಅವನು ಅರಿತಿಲ್ಲವೆ?
ಖಂಡಿತ ಬೇಡ, ಆತ (ಅಬೂಜಹಲ್) ತನ್ನ ಈ ದುಷ್ಕøತ್ಯವನ್ನು ಕೊನೆಗೊಳಿಸದಿದ್ದರೆ ನಾವು ಆತನ ಜುಟ್ಟನ್ನು ಹಿಡಿದು ನರಕಕ್ಕೆ ತಳ್ಳುತ್ತೇವೆ.
ಆ ಜುಟ್ಟುಗಾರನು ಸುಳ್ಳುಗಾರನೂ ಅಪರಾಧಿಯೂ ಆಗಿರುವನು.
ಅವನು ತನ್ನ ಬಳಗದವರನ್ನು ಕರೆದುಕೊಳ್ಳಲಿ.
(ಅದಕ್ಕೆ ಪ್ರತಿಯಾಗಿ) ನಾವು ಕಠಿಣ ದಂಡಕ ದೇವಚರರನ್ನು ಕರೆದುಕೊಳ್ಳುವೆವು.
ಬೇಡ! ತಾವು ಆ ಜುಟ್ಟುಗಾರನನ್ನು ಅನುಸರಿಸ ಬೇಡಿರಿ. ಬದಲು (ಅಲ್ಲಾಹನಿಗೆ) ಸಾಷ್ಟಾಂಗವೆರಗಿರಿ ಹಾಗೂ ಸಾಮಿಪ್ಯವನ್ನು ಪಡೆಯಿರಿ.