1
ಅಂಜೂರ ಮತ್ತು ಆಲಿವ್ ಹಣ್ಣಿನಾಣೆ.
2
ಶುಭ ಸುಂದರ ‘ತ್ವೂರ್’ ಪರ್ವತದಾಣೆ.
3
ನಿರ್ಭೀತಿಯ ತಾಣವಾಗಿರುವ ಈ ಊರಿನಾಣೆ.
4
ಮನುಷ್ಯನನ್ನು ನಾವು ಅತ್ಯುತ್ತಮ ರೂಪದಲ್ಲಿ ಸೃಷ್ಟಿಸಿದ್ದೇವೆ.
5
ನಂತರ ಅವನನ್ನು ಅತ್ಯಂತ ದುರ್ಬಲಾವಸ್ಥೆಗೆ ಮರಳಿಸುತ್ತೇವೆ.
6
ಆದರೆ ಸತ್ಯ ವಿಶ್ವಾಸವನ್ನು ಅಂಗೀಕರಿಸಿ ಸತ್ಕರ್ಮ ವೆಸಗುವವರಿಗೆ ಒಮ್ಮೆಯೂ ನಿಂತು ಹೋಗದ ಪ್ರತಿಫಲವಿದೆ.
7
ಇದರ ಬಳಿಕವೂ ಪ್ರತಿಫಲ ದಿನವನ್ನು ನೀನೇಕೆ ಸುಳ್ಳಾಗಿಸುವೆ?
8
ಅಲ್ಲಾಹು ಎಲ್ಲಾ ನ್ಯಾಯಾಧೀಶರಿಗಿಂತಲೂ ಶ್ರೇಷ್ಟ ನ್ಯಾಯಾಧೀಶನಲ್ಲವೇ?