All Islam Directory
1

ನಾವು ತಮಗಾಗಿ ತಮ್ಮ ಹೃದಯವನ್ನು ವಿಸ್ತಾರ ಗೊಳಿಸಲಿಲ್ಲವೇ?

2

ತಮ್ಮ ಕರ್ತವ್ಯ ಭಾರವನ್ನು ನಾವು ಇಳಿಸಲಿಲ್ಲವೇ?

3

ಆ ಕರ್ತವ್ಯ ಭಾರವು ತಮ್ಮ ಬೆನ್ನು ಮುರಿಯುವಂತಿತ್ತು .

4

ತಮ್ಮ ಮಹಿಮೆಯನ್ನು ತಮಗೆ ನಾವು ಎತ್ತರಕ್ಕೇರಿಸಲಿಲ್ಲವೇ?

5

ನಿಜವಾಗಿಯೂ ಕಷ್ಟದ ಜೊತೆ ಸುಲಭವಿದೆ.

6

ಕಷ್ಟದ ಜೊತೆ ಖಂಡಿತ ಸುಲಭವಿದೆ.

7

ತಾವು ವಿರಮಿಸಿದರೆ ಆರಾಧನೆಯಲ್ಲಿ ತೊಡಗಿರಿ,

8

ತಮ್ಮ ಪ್ರಭುವಿನ ಕಡೆಗೆ ಮೊರೆ ಹೋಗಿರಿ.