All Islam Directory
1

ಬಿಸಿಲೇರುವ ಹೊತ್ತಿನಾಣೆ!

2

ರಾತ್ರಿಯಾಣೆ. ಅದು ಕತ್ತಲಾವರಿಸಿದರೆ,

3

ತಮ್ಮ ಪಾಲಕನಾದ ಅಲ್ಲಾಹು ತಮ್ಮನ್ನು ಕೈಬಿಡಲಿಲ್ಲ ಹಾಗೂ ತಮ್ಮ ಮೇಲೆ ಕೋಪಿಸಲಿಲ್ಲ.

4

ಐಹಿಕ ಲೋಕಕ್ಕಿಂತ ಪರಲೋಕವು ತಮಗೆ ಉತ್ತಮವಾಗಿದೆ.

5

ತಮ್ಮ ಪರಿಪಾಲಕನಾದ ಅಲ್ಲಾಹು ಮುಂದೆ ತಮಗೆ ನೀಡುವನು, ಆಗ ತಾವು ಸಂತೃಪ್ತರಾಗುವಿರಿ.

6

ಅವನು ತಮ್ಮನ್ನು ಅನಾಥರನ್ನಾಗಿ ಕಂಡಾಗ ತಮ್ಮನ್ನು ಸಂರಕ್ಷಿಸಲಿಲ್ಲವೇ?

7

ತಮ್ಮನ್ನು ದಾರಿ ತಿಳಿಯದವರಾಗಿ ಕಂಡಾಗ ಸರಿಯಾದ ದಾರಿಯನ್ನು ತೋರಲಿಲ್ಲವೇ?

8

ತಮ್ಮನ್ನು ಬಡವನಾಗಿ ಕಂಡಾಗ ಸ್ಥಿತಿವಂತನನ್ನಾಗಿ ಮಾಡಲಿಲ್ಲವೇ?

9

ಆದುದರಿಂದ ತಾವು ಅನಾಥರನ್ನು ದಮನಿಸ ಬೇಡಿರಿ.

10

ಭಿಕ್ಷುಕನನ್ನು ಜರೆಯಬೇಡಿರಿ.

11

ತಮ್ಮ ಪರಿಪಾಲಕನಾದ ಅಲ್ಲಾಹು ತಮಗೆ ನೀಡಿದ ಅನುಗ್ರಹವನ್ನು ಎತ್ತಿ ಹೇಳಿರಿ.