All Islam Directory
1

ಸೂರ್ಯ ಮತ್ತು ಅದರ (ಪೂರ್ವಾಹ್ನ) ಪ್ರಕಾಶದಾಣೆ !

2

ಚಂದ್ರನಾಣೆ; ಅದು ಸೂರ್ಯನನ್ನು ಹಿಂಬಾಲಿಸಿ ದಾಗ,

3

ಹಗಲಿನಾಣೆ, ಅದು ಸೂರ್ಯನನ್ನು ಪ್ರದರ್ಶಿಸಿದಾಗ,

4

ರಾತ್ರಿಯಾಣೆ, ಅದು ಸೂರ್ಯನನ್ನು ಆವರಿಸಿದಾಗ,

5

ಆಕಾಶದಾಣೆ ಹಾಗೂ ಅದನ್ನು ನಿರ್ಮಿಸಿದವನಾಣೆ !

6

ಭೂಮಿಯಾಣೆ ಹಾಗೂ ಅದನ್ನು ಹಾಸಿದವನಾಣೆ !

7

ಆತ್ಮದಾಣೆ ಹಾಗೂ ಅದನ್ನು (ಜೋಡಿಸಿ) ಸಮುಚಿತಗೊಳಿಸಿದವನಾಣೆ !

8

ಬಳಿಕ ಅದರ ದುಷ್ಟತೆಯನ್ನೂ ಅದರ ಶಿಷ್ಟತೆ ಯನ್ನೂ ಅಲ್ಲಾಹು ಅದಕ್ಕೆ ತಿಳಿಯಪಡಿಸಿದನು.

9

ಆತ್ಮವನ್ನು ಪರಿಶುದ್ಧಗೊಳಿಸಿಕೊಂಡವನು ಖಂಡಿತ ಜಯ ಹೊಂದಿರುವನು.

10

ಅದನ್ನು ಕುಲಗೆಡಿಸಿಕೊಂಡವನು ಖಂಡಿತ ಸೋಲುಂಡನು .

11

ತಮ್ಮ ದುಷ್ಕøತ್ಯಗಳ ಮೂಲಕ ಸಮೂದ್ ಜನಾಂಗವು ಸತ್ಯವನ್ನು ಸುಳ್ಳಾಗಿಸಿತು.

12

ಅವರಲ್ಲಿ ಅತ್ಯಂತ ನತದೃಷ್ಟನು ಸೆಟೆದೆದ್ದು ನಿಂತಾಗ.

13

ಅಲ್ಲಾಹನ ಪ್ರವಾದಿಯು ಅವರೊಂದಿಗೆ ಹೇಳಿದರು, ಅಲ್ಲಾಹನ ಒಂಟೆಯನ್ನು ಮತ್ತು ಅದರ ಜಲಪಾನವನ್ನು ಅದರ ಪಾಡಿಗೆ ಬಿಟ್ಟು ಬಿಡಿ.

14

ಆದರೆ ಅವರು ಅಲ್ಲಾಹನ ಪ್ರವಾದಿಯನ್ನು ಸುಳ್ಳಾಗಿಸಿದರು ಹಾಗೂ ಒಂಟೆಯನ್ನು ಕೊಯ್ದು ಕೊಂದರು. ಅವರ ಈ ಪಾಪದ ಫಲವಾಗಿ ಅವರ ಪ್ರಭುವು ಅವರ ಮೇಲೆ ನಾಶವನ್ನು ತಟ್ಟಿದನು. ಆಮೇಲೆ (ಯಾವನೂ ಬಾಕಿಯಾಗದಂತೆ) ಸಮಗೊಳಿಸಿದನು.

15

ದುರಂತದ ಮುಂದಿನ ಫಲಿತಾಂಶದ ಬಗ್ಗೆ ಅಲ್ಲಾಹನಿಗೆ ಭಯವಿಲ್ಲ.