ಆಲ್ ಇಸ್ಲಾಂ ಲೈಬ್ರರಿ

90 - The City - Al-Balad

:1

ಈ ನಾಡಿನ ಮೇಲೆ ನಾನು ಆಣೆ ಹಾಕುತ್ತಿದ್ದೇನೆ.

:2

ತಾವು ಈ ಊರಲ್ಲಿ ಮುಕ್ತರಾಗಿದ್ದೀರಿ.

:3

ಜನಕ ಹಾಗೂ ಜಾತರ ಆಣೆ,

:4

ಮನುಷ್ಯರನ್ನು ನಾವು ಕಷ್ಟ ಅನುಭವಿಸುವ ರೀತಿಯಲ್ಲಿ ಸೃಷ್ಟಿಸಿದ್ದೇವೆ.

:5

ಅವನನ್ನು ಪರಾಭವಗೊಳಿಸಲು ಯಾರಿಂದಲೂ ಸಾಧ್ಯವಿಲ್ಲವೆಂದು ಅವನು ಭಾವಿಸುತ್ತಾನೆಯೇ?

:6

ನಾನು ಅಡಿಗಡಿಗೆ ಧಾರಾಳ ಖರ್ಚು ಮಾಡಿದ್ದೇನೆ ಎನ್ನುತ್ತಿದ್ದಾನೆ.

:7

ಅವನನ್ನು ಯಾರೂ ಕಾಣುತ್ತಿಲ್ಲವೆಂದು ಅವನು ಭಾವಿಸುತ್ತಾನೆಯೇ?

:8

ಅವನಿಗೆ ನಾವು ಎರಡು ಕಣ್ಣುಗಳನ್ನು ನೀಡಿಲ್ಲವೇ?

:9

ಅವನಿಗೆ ನಾವು ಒಂದು ನಾಲಗೆಯನ್ನೂ ಎರಡು ತುಟಿಗಳನ್ನೂ ನೀಡಿಲ್ಲವೇ?

:10

ಅವನಿಗೆ ನಾವು ಎರಡು ಮಾರ್ಗಗಳನ್ನು ತೋರಿಸಿ ಕೊಡಲಿಲ್ಲವೇ?

:11

ಅವನಿಗೆ ಬೆಟ್ಟದ ಕಡಿದಾದ ದಾರಿಯಲ್ಲಿ ಹಾದು ಹೋಗಬಾರದಿತ್ತೆ?

:12

ಬೆಟ್ಟದ ಕಡಿದಾದ ದಾರಿ ಯಾವುದೆಂದು ನಿಮಗೆ ಗೊತ್ತೆ ?

:13

ದಾಸ್ಯ ಮುಕ್ತಿ.

:14

ಅಥವಾ ಹಸಿದ ದಿನದಲ್ಲಿ ಉಣಬಡಿಸುವುದು.

:15

ಸಂಬಂಧಿಕರಾದ ಅನಾಥ ಮಕ್ಕಳಿಗೆ.

:16

ಅಥವಾ ಕೈಬರಿದಾದ ಕಡು ಬಡವನಿಗೆ.

:17

ಅಲ್ಲದೆ, ಅವನು ಸತ್ಯ ವಿಶ್ವಾಸವಿರಿಸಿದ ಹಾಗೂ ಸಹನೆಗೆ ಪರಸ್ಪರ ಉಪದೇಶ ಮತ್ತು ಕರುಣೆಗೆ ಪರಸ್ಪರ ಉಪದೇಶ ನೀಡುವವರ ಸಾಲಿಗೆ ಸೇರಿದವನಾಗುವುದು.

:18

ಅವರೇ ಬಲಗಡೆಯವರು.

:19

ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರು ಯಾರೋ ಅವರೇ ಎಡಗಡೆಯವರು.

:20

ಅವರ ಮೇಲೆ ಆವರಿಸಿಕೊಂಡ ನರಕಾಗ್ನಿಯಿದೆ.