ಆಲ್ ಇಸ್ಲಾಂ ಲೈಬ್ರರಿ
1

(ಸತ್ಯವಿಶ್ವಾಸಿಗಳೇ) ನೀವು ಒಪ್ಪಂದ ಮಾಡಿ ಕೊಂಡಿದ್ದ ಬಹುದೇವ ವಿಶ್ವಾಸಿಗಳಿಗೆ ಅಲ್ಲಾಹು ಮತ್ತು ಅವನ ರಸೂಲರಿಂದ ಒಪ್ಪಂದ ರದ್ಧತಿಯ ಘೋಷಣೆಯಿದು.

2

(ಓ ಬಹುದೇವ ವಿಶ್ವಾಸಿಗಳೇ) ಆದ್ದರಿಂದ ಇನ್ನು ನಾಲ್ಕು ತಿಂಗಳು ಭೂಮಿಯಲ್ಲಿ ಸಂಚರಿಸಿಕೊಳ್ಳಿರಿ. ಖಂಡಿತವಾಗಿಯೂ ನೀವು ಅಲ್ಲಾಹನನ್ನು ಪರಾಜಿತಗೊಳಿಸಲಾರಿರೆಂಬುದನ್ನೂ ಅಲ್ಲಾಹನು ಸತ್ಯನಿಷೇಧಿಗಳನ್ನು ಅವಮಾನಗೊಳಿಸಲಿರುವನೆಂಬುದನ್ನೂ ಚೆನ್ನಾಗಿ ತಿಳಿದುಕೊಳ್ಳಿರಿ.

3

ಅಲ್ಲಾಹನೂ ಅವನ ಸಂದೇಶವಾಹಕರೂ ಬಹುದೇವ ವಿಶ್ವಾಸಿಗಳಿಂದ ಹೊಣೆ ಮುಕ್ತರಾಗಿರುವರೆಂದು ಅಲ್ಲಾಹು ಮತ್ತು ಅವನ ರಸೂಲರ ಕಡೆಯಿಂದ ಎಲ್ಲಾ ಜನರಿಗಾಗಿ ಈ ಮಹಾ ಹಜ್ಜ್‍ನ ದಿನದಂದು ಮಾಡಲಾಗುತ್ತಿರುವ ಸಾರ್ವತ್ರಿಕ ಘೋಷಣೆಯಿದು. ಆದರೆ (ಬಹುದೇವ ವಿಶ್ವಾಸಿಗಳೇ) ನೀವು ಪಶ್ಚಾತ್ತಾಪಪಟ್ಟು ಮರಳುವುದಾದರೆ ಅದು ನಿಮಗೆ ಒಳಿತು. ಇನ್ನು ನೀವು ವಿಮುಖರಾಗುವುದಾದರೆ ಖಂಡಿತವಾಗಿಯೂ ನೀವು ಅಲ್ಲಾಹನನ್ನು ಪರಾಜಿತ ಗೊಳಿಸಲಾರಿರೆಂದು ಚೆನ್ನಾಗಿ ತಿಳಿದುಕೊಳ್ಳಿರಿ. (ಪ್ರವಾದಿಯವರೇ) ವೇದನಾಯುಕ್ತವಾದ ಶಿಕ್ಷೆಯ ಬಗ್ಗೆ ಸತ್ಯನಿಷೇಧಿಗಳಿಗೆ ನೀವು `ಸಂತೋಷ ವಾರ್ತೆ’ ತಿಳಿಸಿರಿ .

4

ನಿಮ್ಮೊಂದಿಗೆ ಒಡಂಬಡಿಕೆ ಮಾಡಿಕೊಂಡು ನಂತರ ತಮ್ಮ ಒಪ್ಪಂದ ಪಾಲನೆಯಲ್ಲಿ ಯಾವುದೇ ಲೋಪ ವನ್ನು ಮಾಡದೆಯೂ ನಿಮ್ಮ ವಿರುದ್ಧ ಯಾರಿಗೂ ನೆರವಾಗದೆಯೂ ಇರುವ ಬಹುದೇವಾರಾಧಕರ ಹೊರತು. ಆದ್ದರಿಂದ ಅವರ ಒಪ್ಪಂದವನ್ನು ಅವಧಿಯವರೆಗೆ ಪಾಲಿಸಿರಿ. ನಿಜವಾಗಿಯೂ ಜಾಗ್ರತೆಯುಳ್ಳ ಧರ್ಮನಿಷ್ಠರನ್ನು ಅಲ್ಲಾಹನು ಮೆಚ್ಚುತ್ತಾನೆ.

5

ನಿಷಿದ್ಧ (ನಾಲ್ಕು) ಮಾಸಗಳು ಮುಗಿದರೆ (ಒಪ್ಪಂ ದವನ್ನು ಮುರಿದ) ಆ ಮುಶ್ರಿಕರನ್ನು ಕಂಡಲ್ಲಿ ವಧಿಸಿರಿ. ಅವರನ್ನು ಸೆರೆಹಿಡಿಯಿರಿ. ಅವರನ್ನು ಸುತ್ತುವರಿಯಿರಿ. ಎಲ್ಲ ಕಾವಲು ಸ್ಥಳಗಳಲ್ಲಿ ಅವರಿಗೆ ಹೊಂಚು ಹಾಕಿ ಕುಳಿತುಕೊಳ್ಳಿರಿ . ಇನ್ನು ಅವರು ಪಶ್ಚಾತ್ತಾಪಪಟ್ಟು ಮರಳಿದರೆ, ನಮಾಜನ್ನು ನೆಲೆಗೊಳಿಸಿದರೆ, ಝಕಾತ್ ನೀಡಿದರೆ ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿರಿ. ಅಲ್ಲಾಹನು ಪರಮ ಕ್ಷಮಾಶೀಲನೂ ಪರಮ ದಯಾಳುವೂ ಆಗಿರುವನು.

6

ಮುಶ್ರಿಕರ ಪೈಕಿ ಯಾರಾದರೂ ನಿಮ್ಮೊಡನೆ ಅಭಯ ಕೇಳಿದರೆ ಅವನಿಗೆ ಅಭಯ ಕೊಡಿರಿ. ಅಲ್ಲಾಹನ ವಚನವನ್ನು ಅವನು ಕೇಳಿಸಿಕೊಳ್ಳುವ ಸಲುವಾಗಿ. ನಂತರ ಅವನನ್ನು ಅವನ ಅಭಯ ಸ್ಥಾನಕ್ಕೆ ತಲುಪಿಸಿರಿ. ಅವರು ತಿಳುವಳಿಕೆ ಯಿಲ್ಲದವರಾದುದರಿಂದ ಹೀಗೆ ಮಾಡಬೇಕಾಗಿದೆ.

7

ಮಸ್ಜಿದ್ ಹರಾಮ್‍ನ ಬಳಿ ನಿಮ್ಮೊಂದಿಗೆ ಒಪ್ಪಂದ ಮಾಡಿಕೊಂಡವರ ಹೊರತು ಇತರ ಮುಶ್ರಿಕರಿಗೆ ಅಲ್ಲಾಹುವಿನ ಬಳಿ ಹಾಗೂ ಅವನ ರಸೂಲರ ಬಳಿ ಒಡಂಬಡಿಕೆ ನೆಲೆಗೊಳ್ಳುವುದು ಹೇಗೆ ? ಆದ್ದರಿಂದ ಅವರು ನಿಮ್ಮೊಂದಿಗೆ ನ್ಯಾಯ ಪಾಲಿಸಿದರೆ ನೀವೂ ಅವರೊಂದಿಗೆ ನ್ಯಾಯ ಪಾಲಿಸಿರಿ. ನಿಜವಾಗಿಯೂ ಅಲ್ಲಾಹನು ಜಾಗ್ರತೆಯುಳ್ಳವರನ್ನು ಪ್ರೀತಿಸುತ್ತಾನೆ.

8

ಅವರೊಂದಿಗೆ ಒಪ್ಪಂದವಿರುವುದಾದರೂ ಹೇಗೆ? ಅವರು ನಿಮ್ಮ ವಿರುದ್ಧ ಜಯ ಗಳಿಸಿದರೆ ನಿಮ್ಮೊಂದಿಗಿರುವ ರಕ್ತ ಸಂಬಂಧವನ್ನಾಗಲೀ, ಒಡಂಬಡಿಕೆಯನ್ನಾಗಲಿ ಅವರು ಪರಿಗಣಿಸುವವರಲ್ಲ! ಅವರು ಬರೇ ಬಾಯಿ ಮಾತುಗಳಿಂದ ನಿಮ್ಮನ್ನು ಮೆಚ್ಚಿಸಲು ಯತ್ನಿಸುತ್ತಾರೆ. ಅವರ ಮನಸ್ಸುಗಳು ಅದನ್ನು ನಿಷೇಧಿಸುತ್ತವೆ. ಅವರಲ್ಲಿ ಹೆಚ್ಚಿನವರು ಕರ್ಮಭ್ರಷ್ಟರಾಗಿರುವರು.

9

ಅವರು ಅಲ್ಲಾಹನ ಆಯತ್‍ಗಳ ಬದಲಿಗೆ ತುಚ್ಚ ಬೆಲೆಯನ್ನು ಪಡಕೊಂಡರು. ಅನಂತರ ಅಲ್ಲಾಹನ ಮಾರ್ಗದಿಂದ ಜನರನ್ನು ತಡೆದರು. ಅವರು ಮಾಡು ತ್ತಿರುವುದು ಅತ್ಯಂತ ನಿಕೃಷ್ಟ ಕಾರ್ಯವಾಗಿದೆ.

10

ಒಬ್ಬ ಸತ್ಯವಿಶ್ವಾಸಿಯ ವಿಷಯದಲ್ಲಿ ಅವರು ಬಾಂಧವ್ಯವನ್ನಾಗಲಿ ಒಪ್ಪಂದದ ಹೊಣೆಯನ್ನಾ ಗಲಿ ಪರಿಗಣಿಸುವುದಿಲ್ಲ. ಅವರೇ ಅತಿಕ್ರಮಿಗಳು.

11

ಆದರೂ ಅವರು ಪಶ್ಚಾತ್ತಾಪಪಟ್ಟು ನಮಾಜು ನೆಲೆಗೊಳಿಸಿದರೆ, ಝಕಾತ್ ನೀಡಿದರೆ ಅವರು ಧರ್ಮದಲ್ಲಿ ನಿಮ್ಮ ಸೋದರರು. ಗ್ರಹಿಸುವ ಜನರಿಗೆ ನಾವು ನಮ್ಮ ಪುರಾವೆಗಳನ್ನು ವಿವರಿಸುತ್ತಿದ್ದೇವೆ.

12

ಒಡಂಬಡಿಕೆ ಮಾಡಿಕೊಂಡ ಬಳಿಕ ಅವರು ಪುನಃ ತಮ್ಮ ಶಪಥಗಳನ್ನು ಮುರಿದು ನಿಮ್ಮ ಧರ್ಮವನ್ನು ಆಕ್ಷೇಪಿಸಿದರೆ ಆ ಸತ್ಯನಿಷೇಧಿಗಳ ಮುಂದಾಳುಗಳೊಂದಿಗೆ ಯುದ್ಧ ಮಾಡಿರಿ. ಏಕೆಂದರೆ, ನಿಜವಾಗಿಯೂ ಅವರಿಗೆ ಯಾವುದೇ ಒಪ್ಪಂದ ಅಸ್ತಿತ್ವದಲ್ಲಿಲ್ಲ. ಅವರು ಸತ್ಯನಿಷೇಧವನ್ನು ವರ್ಜಿಸಲೂಬಹುದು .

13

ತಮ್ಮ ಒಪ್ಪಂದವನ್ನು ಉಲ್ಲಂಘಿಸಿದ ಹಾಗೂ ರಸೂಲರನ್ನು ನಾಡಿನಿಂದ ಹೊರ ಹಾಕಲು ಉದ್ದೇಶ ವಿಟ್ಟ ಜನತೆಯ ವಿರುದ್ಧ ನೀವು ಯುದ್ಧ ಮಾಡುವುದಿಲ್ಲವೇ? ಆರಂಭದಲ್ಲಿ ಯುದ್ಧವನ್ನು ಆರಂಭಿಸಿದವರು ಅವರೇ. ನೀವು ಅವರಿಗೆ ಹೆದರುತ್ತೀರಾ? ನೀವು ಸತ್ಯವಿಶ್ವಾಸಿಗಳಾಗಿದ್ದರೆ ಭಯ ಪಡಲು ಹೆಚ್ಚು ಹಕ್ಕುದಾರನು ಅಲ್ಲಾಹನಾ ಗಿರುವನು.

14

ನೀವು ಅವರ ವಿರುದ್ಧ ಯುದ್ಧ ಮಾಡಿರಿ. ನಿಮ್ಮ ಕೈಯ್ಯಾರೆ ಅಲ್ಲಾಹು ಅವರಿಗೆ ಶಿಕ್ಷೆ ಕೊಡಿಸುವನು, ಅವರನ್ನು ನಿಂದ್ಯಗೊಳಿಸುವನು. ಅವರ ವಿರುದ್ಧ ನಿಮಗೆ ನೆರವು ನೀಡುವನು. ಸತ್ಯ ವಿಶ್ವಾಸಿಗಳಾದ ಜನತೆಯ ಹೃದಯಗಳನ್ನು ತಣಿಸುವನು.

15

ಅವರ ಹೃದಯಗಳ ಬೇಗುದಿಯನ್ನು ಹೋಗಲಾಡಿಸುವನು ಮತ್ತು ತಾನಿಚ್ಛಿಸಿದವರ ಪಶ್ಚಾತ್ತಾಪವನ್ನು ಅಲ್ಲಾಹು ಸ್ವೀಕರಿಸುವನು. ಅಲ್ಲಾಹನು ಸರ್ವಜ್ಞನೂ ಪರಮ ಯುಕ್ತಿವಂತನೂ ಆಗಿರುವನು.

16

ವಸ್ತುತಃ ನಿಮ್ಮ ಪೈಕಿ ಅತಿಯಾಗಿ ಪರಿಶ್ರಮಿಸಿದ ವರು ಯಾರೆಂದೂ ಅಲ್ಲಾಹನನ್ನೂ ಸಂದೇಶವಾಹ ಕರನ್ನೂ ಸತ್ಯವಿಶ್ವಾಸಿಗಳನ್ನೂ ಹೊರತು ಅನ್ಯರೊಂದಿಗೆ ಒಳ ಸಂಬಂಧ ಮಾಡಿಕೊಳ್ಳದವರಾರೆಂದೂ ಅಲ್ಲಾಹು ಕಂಡರಿಯದೆ ನಿಮ್ಮನ್ನು ಸುಮ್ಮನೆ ಉಪೇಕ್ಷಿಸುವನೆಂದು ನೀವು ಭಾವಿಸಿ ಕೊಂಡಿದ್ದೀರಾ? ನಿಮ್ಮ ಪ್ರವೃತ್ತಿಗಳ ಬಗ್ಗೆ ಅಲ್ಲಾಹನು ಚೆನ್ನಾಗಿ ಬಲ್ಲವನಾಗಿರುವನು.

17

ಸತ್ಯನಿಷೇಧಕ್ಕೆ ಸ್ವಯಂ ಸಾಕ್ಷ್ಯವಹಿಸಿರುವ ಬಹುದೇವವಿಶ್ವಾಸಿಗಳಿಗೆ ಅಲ್ಲಾಹುವಿನ ಮಸೀದಿಗಳ ಪರಿಪಾಲನೆಗೆ ಅವಕಾಶ ಇರುವುದಿಲ್ಲ. ಅವರ ಸತ್ಕರ್ಮಗಳೆಲ್ಲ ವ್ಯರ್ಥವಾದುವು. ಅವರು ನರಕದಲ್ಲಿ ಶಾಶ್ವತರು.

18

ನಿಜವಾಗಿಯೂ ಅಲ್ಲಾಹು ಮತ್ತು ಪರಲೋಕದಲ್ಲಿ ವಿಶ್ವಾಸವಿರುವವರು ಹಾಗೂ ನಮಾಝ್ ಸ್ಥಿರಗೊಳಿಸುವವರು, ಝಕಾತ್ ಕೊಡುವವರು ಹಾಗೂ ಅಲ್ಲಾಹನ ಹೊರತು ಇನ್ನಾರನ್ನೂ ಭಯಪಡದವರು ಮಾತ್ರವೇ ಅಲ್ಲಾಹನ ಮಸ್ಜಿದ್‍ಗಳನ್ನು ಪರಿಪಾಲಿಸಬಲ್ಲರು. ಅಂತಹವರೇ ಸತ್ಪಥ ಪ್ರಾಪ್ತಿಗೆ ಸಾಧ್ಯತೆಯುಳ್ಳವರು .

19

ಹಜ್ಜ್ ಯಾತ್ರಿಕರಿಗೆ ಜಲಪಾನ ಮಾಡಿಸುವುದನ್ನು ಮತ್ತು ಮಸ್ಜಿದುಲ್ ಹರಾಮ್‍ನ ಸೇವೆಯನ್ನು ನೀವು ಅಲ್ಲಾಹು ಮತ್ತು ಪರಲೋಕದಲ್ಲಿ ವಿಶ್ವಾಸವಿಟ್ಟು ಅಲ್ಲಾಹನ ಮಾರ್ಗದಲ್ಲಿ ಹೋರಾಟ ನಡೆಸಿದವನ ಕರ್ಮಕ್ಕೆ ಸರಿಸಮಾನವೆಂದು ಪರಿಗಣಿಸಿದಿರಾ? ಅವರು ಅಲ್ಲಾಹುವಿನ ಬಳಿ ಸಮಾನರಾಗುವುದಿಲ್ಲ. ಅಧರ್ಮಿಗಳಾದ ಜನರನ್ನು ಅಲ್ಲಾಹನು ಸನ್ಮಾರ್ಗಕ್ಕೆ ತರುವುದಿಲ್ಲ.

20

ಸತ್ಯವಿಶ್ವಾಸವನ್ನು ಕೈಕೊಂಡ, ಅಲ್ಲಾಹನ ಮಾರ್ಗದಲ್ಲಿ ಮನೆ ಮಾರುಗಳನ್ನು ಬಿಟ್ಟ ಮತ್ತು ತನುಧನಗಳಿಂದ ಧರ್ಮಯುದ್ಧ ಮಾಡಿದವರು ಅಲ್ಲಾಹುವಿನ ಬಳಿ ಅತಿ ಮಹತ್ವವಾದ ಪದವಿಯು ಳ್ಳವರಾಗಿರುವರು. ಅವರೇ ವಿಜಯಿಗಳು.

21

ಅವರ ಪ್ರಭು ಅವರಿಗೆ ತನ್ನ ಕೃಪೆ, ಸಂಪ್ರೀತಿ ಮತ್ತು ಸ್ವರ್ಗಗಳ ಸುವಾರ್ತೆ ನೀಡುತ್ತಾನೆ. ಆ ಸ್ವರ್ಗದಲ್ಲಿ ಅವರಿಗೆ ಚಿರ ಸೌಭಾಗ್ಯವಿದೆ.

22

ಅದರಲ್ಲಿ ಅವರು ಎಂದೆಂದಿಗೂ ಚಿರವಾಸಿಗಳು. ನಿಶ್ಚಯವಾಗಿಯೂ ಅಲ್ಲಾಹುವಿನ ಬಳಿ ಮಹತ್ತರ ವಾದ ಪ್ರತಿಫಲವಿದೆ.

23

ಓ ಸತ್ಯವಿಶ್ವಾಸಿಗಳೇ! ನಿಮ್ಮ ತಾಯಿ ತಂದೆ ಯರು ಹಾಗೂ ನಿಮ್ಮ ಸಹೋದರರು ಸತ್ಯ ವಿಶ್ವಾಸದ ಬದಲಿಗೆ ಸತ್ಯನಿಷೇಧವನ್ನು ಇಷ್ಟ ಪಟ್ಟರೆ ಅವರನ್ನು ನೀವು ಬಂಧುಗಳೆಂದು ಪರಿಗಣಿಸಬೇಡಿರಿ. ನಿಮ್ಮ ಪೈಕಿ ಯಾರಾದರೂ ಅವರನ್ನು ಬಂಧುಗಳನ್ನಾಗಿ ಮಾಡಿಕೊಂಡರೆ ಅವರು ಖಂಡಿತ ಅಕ್ರಮಿಗಳು.

24

(ಓ ಪೈಗಂಬರರೇ,) ಹೇಳಿರಿ - ನಿಮ್ಮ ತಾಯಿ ತಂದೆಯರು, ನಿಮ್ಮ ಮಕ್ಕಳು, ನಿಮ್ಮ ಸಹೋ ದರರು, ನಿಮ್ಮ ಸಂಗಾತಿಗಳು, ನಿಮ್ಮ ಇತರ ಬಂಧುಗಳು, ನೀವು ಸಂಪಾದಿಸಿದ ಸೊತ್ತುಗಳು ಬಿಕರಿಯಾಗದೆ ಉಳಿಯುವುದೆಂದು ನೀವು ಹೆದರುತ್ತಿರುವ ನಿಮ್ಮ ವ್ಯಾಪಾರ ಸರಕುಗಳು, ನೀವು ತೃಪ್ತಿಪಡುತ್ತಿರುವ ಮನೆಗಳು ನಿಮ್ಮ ಪಾಲಿಗೆ ಅಲ್ಲಾಹನಿಗಿಂತ, ಅವನ ರಸೂಲ್ ಹಾಗೂ ಅಲ್ಲಾಹನ ಮಾರ್ಗದಲ್ಲಿ ಧರ್ಮಯುದ್ಧಕ್ಕಿಂತ ನಿಮಗೆ ಹೆಚ್ಚು ಪ್ರಿಯವಾಗಿದ್ದಲ್ಲಿ ಅಲ್ಲಾಹನು ತನ್ನ ನಿರ್ಣಯವನ್ನು ಜಾರಿಗೆ ತರುವವರೆಗೂ ನೀವು ಕಾದುಕೊಳ್ಳಿರಿ. ಅಧರ್ಮಿಗಳಾದ ಜನತೆಯನ್ನು ಅಲ್ಲಾಹನು ಸನ್ಮಾರ್ಗಕ್ಕೆ ಸೇರಿಸುವುದಿಲ್ಲ.

25

ಅಲ್ಲಾಹನು ನಿಮಗೆ ಅನೇಕ ಕಡೆಗಳಲ್ಲಿ ಖಂಡಿತ ನೆರವಾಗಿರುತ್ತಾನೆ. ಹುನೈನ್ ಯುದ್ಧದ ದಿನ ಅಂ ದರೆ ನಿಮ್ಮ ಸಂಖ್ಯಾಬಲವು ನಿಮ್ಮನ್ನು ಹೆಮ್ಮೆ ಗೀಡು ಮಾಡಿದ ಸಂದರ್ಭ(ವನ್ನು ಜ್ಞಾಪಿಸಿ ಕೊಳ್ಳಿ). ಆದರೆ ಆ ಸಂಖ್ಯಾಬಲವು ನಿಮಗೆ ಯಾವ ಪ್ರಯೋಜನಕ್ಕೂ ಬರಲಿಲ್ಲ. ಭೂಮಿ ವಿಶಾ ಲವಾಗಿದ್ದು ಕೂಡ ನಿಮಗದು ಇಕ್ಕಟ್ಟಾಗಿ ಅನು ಭವಕ್ಕೆ ಬಂದಿತು. ತರುವಾಯ ನೀವು ಹಿಂಜರಿದು ಪಲಾಯನ ಮಾಡಿದಿರಿ .

26

ಅನಂತರ ಅಲ್ಲಾಹನು ತನ್ನ ರಸೂಲ್ ಹಾಗೂ ಸತ್ಯವಿಶ್ವಾಸಿಗಳಿಗೆ ಶಾಂತಿಯನ್ನು ಇಳಿಸಿದನು. ನೀವು ಕಂಡಿರದ ಒಂದು ಸೈನ್ಯವನ್ನು ಇಳಿಸಿದನು. ಸತ್ಯನಿಷೇಧಿಗಳನ್ನು ಶಿಕ್ಷಿಸಿದನು . ಸತ್ಯವನ್ನು ನಿಷೇಧಿಸುವವರಿಗೆ ಇದೇ ಪ್ರತಿಫಲ.

27

ತರುವಾಯ ಅಲ್ಲಾಹನು ತಾನಿಚ್ಛಿಸಿದವರ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಅಲ್ಲಾಹನು ಬಹಳ ಹೆಚ್ಚು ಕ್ಷಮಾದಾನಿಯೂ ಪರಮದಯಾಳುವೂ ಆಗಿರುವನು.

28

ಓ ಸತ್ಯವಿಶ್ವಾಸಿಗಳೇ! ಮುಶ್ರಿಕರು ನಿಜವಾಗಿಯೂ ಅಶುದ್ಧರು. ಆದ್ದರಿಂದ ಈ ವರ್ಷದ ಬಳಿಕ ಅವರು ಮಸ್ಜಿದುಲ್ ಹರಾಮಿನತ್ತ ಸುಳಿಯಬಾರದು. ನಿಮಗೆ ದಾರಿದ್ರ್ಯದ ಭಯವಿದ್ದರೆ ಅಲ್ಲಾಹ ನಿಚ್ಛಿಸಿದರೆ ಮುಂದೆ ಅಲ್ಲಾಹನು ತನ್ನ ಔದಾರ್ಯದಿಂದ ನಿಮ್ಮನ್ನು ಅನುಕೂಲಸ್ಥರನ್ನಾಗಿ ಮಾಡುವನು. ನಿಜವಾಗಿಯೂ ಅಲ್ಲಾಹನು ಸರ್ವಜ್ಞನೂ ಪರಮ ತಂತ್ರಜ್ಞನೂ ಆಗಿರುವನು.

29

ವೇದ ನೀಡಲ್ಪಟ್ಟವರ ಪೈಕಿ ಅಲ್ಲಾಹು ಹಾಗೂ ಪರಲೋಕದಲ್ಲಿ ವಿಶ್ವಾಸವಿರಿಸದ, ಅಲ್ಲಾಹು ಹಾಗೂ ಅವನ ರಸೂಲರು ನಿಷೇಧಿಸಿದ್ದನ್ನು ನಿಷಿದ್ಧಗೊಳಿಸದ ಮತ್ತು ಸತ್ಯಧರ್ಮವನ್ನು ತಮ್ಮ ಧರ್ಮವನ್ನಾಗಿ ಮಾಡಿಕೊಳ್ಳದ ಜನರು ಯಾರೋ ಅವರು ಇಸ್ಲಾಮೀ ಆಡಳಿತಕ್ಕೆ ಬದ್ಧರಾಗಿ ತಮ್ಮ ಕೈಯಿಂದಲೇ ತಲೆಗಂದಾಯ ಕೊಡುವವರೆಗೂ ಯುದ್ಧ ಮಾಡಿರಿ.

30

ಉಝೈರ್ ಅಲ್ಲಾಹನ ಪುತ್ರ ಎಂದು ಯಹೂದಿ ಗಳು ಹೇಳಿದರು. ಅಲ್-ಮಸೀಹ್ (ಯೇಸು) ಅಲ್ಲಾಹುವಿನ ಪುತ್ರ ಎಂದು ಕ್ರೈಸ್ತರೂ ಹೇಳಿದರು. ಹಿಂದಿನ ಸತ್ಯನಿಷೇಧಿಗಳ ಮಾತನ್ನು ಅನುಕರಿಸಿ ತಮ್ಮ ಬಾಯಿಗಳಿಂದ ಹೇಳುತ್ತಿರುವ ಮಾತುಗಳಿವು . ಅಲ್ಲಾಹು ಅವರನ್ನು ಶಪಿಸಿರುತ್ತಾನೆ. (ಸತ್ಯವನ್ನು ಬಿಟ್ಟು) ಅವರು ಹೇಗೆ ತಿರುಗಿಸಲ್ಪಡುತ್ತಿದ್ದಾರೆ ?

31

ಅವರು ಅಲ್ಲಾಹನನ್ನು ಹೊರತು ತಮ್ಮ ವಿದ್ವಾಂಸರನ್ನೂ ಸನ್ಯಾಸಿಗಳನ್ನೂ ಹಾಗೂ ಮರ್ಯಮಳ ಪುತ್ರ ಅಲ್-ಮಸೀಹರನ್ನೂ ಪ್ರಭುಗಳನ್ನಾಗಿ ಮಾಡಿಕೊಂಡಿದ್ದಾರೆ . ಒಬ್ಬನೇ ಒಬ್ಬ ದೇವನಿಗೆ ಆರಾಧಿಸಲು ಮಾತ್ರವೇ ಅವರ ಮೇಲೆ ಆದೇಶಿಸಲಾಗಿತ್ತು. ಅವನಲ್ಲದೆ ಬೇರೆ ಆರಾಧ್ಯನಿಲ್ಲ. ಅವರು ಮಾಡುತ್ತಿರುವ ದೇವ ಸಹಭಾಗಿತ್ವದಿಂದ ಅಲ್ಲಾಹು ಪರಮ ಪರಿಶುದ್ಧ ನಾಗಿರುವನು.

32

ಅವರು ಅಲ್ಲಾಹನ ಪ್ರಕಾಶವನ್ನು ಬಾಯಲ್ಲಿ ಊದಿ ನಂದಿಸಲು ಇಚ್ಛಿಸುತ್ತಾರೆ. ಆದರೆ ಅಲ್ಲಾ ಹನು ತನ್ನ ಪ್ರಕಾಶವನ್ನು ಪರಿಪೂರ್ಣಗೊಳಿಸದೆ ಬಿಡುವವನಲ್ಲ. ಸತ್ಯನಿಷೇಧಿಗಳಿಗೆ ಅಸಹನೀಯವಾದರೂ ಸರಿ .

33

ಸನ್ಮಾರ್ಗ ಹಾಗೂ ಸತ್ಯಧರ್ಮದೊಂದಿಗೆ ತನ್ನ ದೂತನನ್ನು ಕಳುಹಿಸಿದ್ದು ಅವನೇ ಆಗಿರುವನು. ಅದನ್ನು ಸಕಲ ಧರ್ಮಗಳ ಮೇಲೆ ಉತ್ಥಾನ ಗೊಳಿಸಲಿಕ್ಕಾಗಿ. ಬಹುದೇವಾರಾಧಕರು ಅನಿಷ್ಟಪಟ್ಟರೂ ಸರಿ.

34

ಓ ಸತ್ಯವಿಶ್ವಾಸಿಗಳೇ, ಗ್ರಂಥದವರ ಅಧಿಕಾಂಶ ವಿದ್ವಾಂಸರೂ ಪುರೋಹಿತರೂ ಜನರ ಸಂಪತ್ತನ್ನು ಅನುಚಿತ ವಿಧಾನಗಳಿಂದ ಕಬಳಿಸುತ್ತಾರೆ ಮತ್ತು ಅವರನ್ನು ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೆ. ಚಿನ್ನವನ್ನೂ ಬೆಳ್ಳಿಯನ್ನೂ ನಿಧಿಯಾಗಿ ಸಂಗ್ರಹಿಸಿಟ್ಟು ಅವುಗಳನ್ನು ದೇವಮಾರ್ಗದಲ್ಲಿ ಖರ್ಚು ಮಾಡದವರಿಗೆ ಯಾತನಾಮಯ ಶಿಕ್ಷೆಯ ಸುವಾರ್ತೆ ಕೊಡಿರಿ.

35

ಅಂದು ಅದನ್ನು ನರಕದಲ್ಲಿ ಕಾಯಿಸಿ ಅವರ ಹಣೆಗಳು ಹಾಗೂ ಪಾಶ್ರ್ವಗಳಿಗೆ ಮತ್ತು ಅವರ ಬೆನ್ನುಗಳಿಗೆ ಬರೆಹಾಕಲಾಗುವುದು. ‘ನೀವು ನಿಮಗಾಗಿ ಕೂಡಿಟ್ಟ ಸಂಪತ್ತು ಇದುವೇ, ನೀವು ಕೂಡಿಹಾಕಿದ್ದ ಸಂಪತ್ತನ್ನು ಈಗ ಸವಿಯಿರಿ' ಎನ್ನಲಾಗುವುದು.

36

ನಿಶ್ಚಯವಾಗಿಯೂ ಅಲ್ಲಾಹನ ಬಳಿ ಮಾಸಗಳ ಲೆಕ್ಕವು ಭೂಮ್ಯಾಕಾಶಗಳನ್ನು ಸೃಷ್ಟಿಸಿದ ದಿನ ತಾನು ವಿಧಿಸಿದ ಕ್ರಮದಲ್ಲಿ ಹನ್ನೆರಡಾಗಿರುತ್ತದೆ. ಅವುಗಳ ಪೈಕಿ ನಾಲ್ಕು ತಿಂಗಳುಗಳು ನಿಷಿದ್ಧವಾಗಿವೆ. ಇದೇ ಸರಿಯಾದ ನಿಯಮ. ಆದುದರಿಂದ ಈ ನಾಲ್ಕು ತಿಂಗಳುಗಳಲ್ಲಿ ನಿಮ್ಮ ಮೇಲೆ ದ್ರೋಹ ಮಾಡಿಕೊಳ್ಳಬೇಡಿರಿ. ಬಹುದೈವ ವಿಶ್ವಾಸಿಗಳು ಎಲ್ಲರೂ ನಿಮ್ಮ ವಿರುದ್ಧ ಯುದ್ಧ ಮಾಡುವಂತೆ ನೀವು ಎಲ್ಲರೂ ಅವರ ವಿರುದ್ಧ ಯುದ್ಧ ಮಾಡಿರಿ . ಅಲ್ಲಾಹನು ಜಾಗ್ರತೆ ಪಾಲಿ ಸುವವರ ಜೊತೆಗಿರುವನು ಅನ್ನುವುದು ನಿಮಗೆ ತಿಳಿದಿರಲಿ.

37

ನಿಜವಾಗಿಯೂ ‘ನಸೀಅï’ (ಅಂದರೆ ಒಂದು ತಿಂಗಳಿನ ಪವಿತ್ರತೆಯನ್ನು ಇನ್ನೊಂದು ತಿಂಗ ಳಿಗೆ ಬದಲಾಯಿಸುವುದು) ಸತ್ಯನಿಷೇಧದಲ್ಲಿ ವರ್ಧನೆಯಾಗಿರುತ್ತದೆ. ಆ ಸತ್ಯನಿಷೇಧಿಗಳು ಆ ಮೂಲಕ ದಾರಿಗೇಡಿಗೀಡಾಗುತ್ತಾರೆ. ಅಲ್ಲಾಹನು ನಿಷಿದ್ಧಗೊಳಿಸಿದ ಮಾಸಗಳ ಎಣಿಕೆಯನ್ನು ಹೊಂದಿಸಿಕೊಳ್ಳುವ ಸಲುವಾಗಿಯೂ ಹಾಗೂ ಅಲ್ಲಾಹನು ಹರಾಮ್‍ಗೊಳಿಸಿದುದನ್ನು ಹಲಾಲನ್ನಾಗಿ ಮಾಡಿಕೊಳ್ಳಲಿಕ್ಕಾಗಿಯೂ ಒಂದು ವರ್ಷ, ಒಂದು ತಿಂಗಳನ್ನು ಹಲಾಲ್ (ಧರ್ಮ ಬದ್ಧ) ಗೊಳಿಸಿಕೊಳ್ಳುತ್ತಾರೆ ಮತ್ತು ಇನ್ನೊಂದು ವರ್ಷ ಅದನ್ನು ಹರಾಮ್‍ಗೊಳಿಸಿಕೊಳ್ಳುತ್ತಾರೆ . ಅವರ ದುಷ್ಕರ್ಮಗಳನ್ನು ಅವರಿಗೆ ಮನೋಹರ ಗೊಳಿಸಲಾಗಿದೆ. ಸತ್ಯನಿಷೇಧಿಗಳನ್ನು ಅಲ್ಲಾ ಹನು ಸತ್ಪಥಕ್ಕೆ ಸೇರಿಸುವುದಿಲ್ಲ.

38

ಓ ಸತ್ಯವಿಶ್ವಾಸಿಗಳೇ, ನಿಮಗೆ ಏನಾಗಿದೆ? ಅಲ್ಲಾಹನ ಮಾರ್ಗದಲ್ಲಿ ಹೊರಡಲು ನಿಮ್ಮೊಡನೆ ಹೇಳಿದಾಗ ನೀವು ಭೂಮಿಗೆ ಅಮರಿಕೊಂಡ ದ್ದೇಕೆ? ನೀವು ಪರಲೋಕಕ್ಕೆ ಪ್ರತಿಯಾಗಿ ಐಹಿಕ ಜೀವನವನ್ನು ಮೆಚ್ಚಿಕೊಂಡಿರಾ? ಆದರೆ ಪರಲೋಕಕ್ಕೆ ಹೋಲಿಸಿದರೆ ಇಹದ ಜೀವನ ಸುಖ ಬಹಳ ತುಚ್ಛವಾದುದು.

39

ನೀವು ಹೊರಡದಿದ್ದರೆ ಅಲ್ಲಾಹನು ನಿಮಗೆ ವೇದನಾತ್ಮಕ ಶಿಕ್ಷೆ ಕೊಡುವನು ಮತ್ತು ನಿಮ್ಮ ಬದಲಿಗೆ ತಾನೊಂದು ಜನಾಂಗವನ್ನು ಸ್ಥಾಪಿಸುವನು . ಅವನಿಗೆ ಯಾವುದೇ ದೋಷ ವನ್ನು ನೀವು ತರಲಾರಿರಿ. ಅಲ್ಲಾಹನು ಸರ್ವ ಸಮರ್ಥನಾಗಿರುವನು.

40

ನೀವು ಪ್ರವಾದಿಯವರಿಗೆ ಸಹಾಯ ಮಾಡದಿದ್ದರೆ ಚಿಂತಿಲ್ಲ. (ಅಲ್ಲಾಹನು ನೆರವಾಗುವನು). ಸತ್ಯ ನಿಷೇಧಿಗಳು ಅವರನ್ನು ಹೊರ ಹಾಕಿದಾಗ, ಅವರು ಇಬ್ಬರ ಪೈಕಿ ಎರಡನೆಯವರಾಗಿದ್ದಾಗ, ಅವರಿಬ್ಬರೂ ಗುಹೆಯೊಳಗಿದ್ದಾಗ, ಅವರು ತಮ್ಮ ಸಂಗಡಿಗನೊಂದಿಗೆ, `ವ್ಯಥೆಪಡಬೇಡಿ. ಖಂಡಿತವಾಗಿಯೂ ಅಲ್ಲಾಹನು ನಮ್ಮೊಡ ನಿದ್ದಾನೆ’ ಎಂದು ಹೇಳಿದ್ದಾಗ ನಿಜವಾಗಿಯೂ ಅಲ್ಲಾಹನು ನೆರವಾಗಿದ್ದಾನೆ . ಹಾಗೆ ಅಲ್ಲಾಹನು ತನ್ನ ಕಡೆಯಿಂದ ಅವರಿಗೆ ಶಾಂತಿಯನ್ನು ಇಳಿಸಿದನು . ನೀವು ಕಂಡಿರದ ಸೇನೆಗಳಿಂದ ಅವರಿಗೆ ಬಲ ಕೊಟ್ಟನು. ಸತ್ಯನಿಷೇಧಿಗಳ ವಚನವನ್ನು ಕೆಳಮಟ್ಟಕ್ಕಿಳಿಸಿದನು. ಅಲ್ಲಾಹನ ವಚನವೇ ಉನ್ನತವಾದುದು. ಅಲ್ಲಾಹನು ಪ್ರತಾಪಶಾಲಿಯೂ ಮಹಾತಂತ್ರಜ್ಞನೂ ಆಗಿರುವನು.

41

ಹಗುರವಾದ ಸ್ಥಿತಿಯಲ್ಲಾಗಲಿ ಭಾರವಾದ ಸ್ಥಿತಿಯಲ್ಲಾಗಲಿ ಹೊರಡಿರಿ . ನಿಮ್ಮ ಸೊತ್ತುಗಳು ಹಾಗೂ ದೇಹಗಳಿಂದ ಅಲ್ಲಾಹನ ಮಾರ್ಗದಲಿ ಯುದ್ಧ ಮಾಡಿರಿ. ಅದು ನಿಮಗೆ ಶ್ರೇಷ್ಟ. ನೀವು ಅರಿವುಳ್ಳವರಾಗಿದ್ದರೆ.

42

(ಓ ಪೈಗಂಬರರೇ,) ಲಾಭವು ಸುಲಭವಾಗಿ ಸಿಗುತ್ತಿದ್ದರೆ ಮತ್ತು ಪ್ರಯಾಣವು ಸುಗಮವಾಗಿರುತ್ತಿ ದ್ದರೆ ಅವರು ನಿಶ್ಚಯವಾಗಿಯೂ ನಿಮ್ಮನ್ನು ಅನು ಸರಿಸುತ್ತಿದ್ದರು. ಆದರೆ ಮಾರ್ಗವು ಅವರಿಗೆ ದೂರ ವಾಗಿಬಿಟ್ಟಿತು. `ಸಾಧ್ಯವಿರುತ್ತಿದ್ದರೆ ನಾವು ನಿಮ್ಮ ಜೊತೆ ಹೊರಟು ಬರುತ್ತಿದ್ದೆವು’ ಎಂದವರು ಅಲ್ಲಾಹ ನಾಣೆ ಹಾಕುತ್ತ ಹೇಳಲಿರುವರು. ಅವರು ತಮ್ಮ ನ್ನು ತಾವೇ ವಿನಾಶಕ್ಕೊಡ್ಡುತ್ತಿರುವರು. ಅವರು ಸುಳ್ಳುಗಾರರೆಂದು ಅಲ್ಲಾಹು ಚೆನ್ನಾಗಿ ಬಲ್ಲನು.

43

(ಓ ಪೈಗಂಬರರೇ,) ಅಲ್ಲಾಹು ನಿಮ್ಮನ್ನು ಕ್ಷಮಿಸಿದ್ದಾನೆ. ನೀವು ಅವರಿಗೇಕೆ ಅನುಮತಿ ನೀಡಿದಿರಿ? ಸತ್ಯ ಹೇಳಿದವರು ಯಾರೆಲ್ಲವೆಂದು ತಮಗೆ ಸ್ಪಷ್ಟವಾಗುವವರೆಗೆ ಹಾಗೂ ಸುಳ್ಳು ಹೇಳುವವರನ್ನು ಸರಿಯಾಗಿ ನೀವು ತಿಳಿದುಕೊಳ್ಳುವವರೆಗೆ (ಯಾಕೆ ತಾವು ಕಾಯಲಿಲ್ಲ ?).

44

ಅಲ್ಲಾಹು ಮತ್ತು ಪರಲೋಕದಲ್ಲಿ ನಂಬಿಕೆ ಇರುವವರು ತಮ್ಮ ಸೊತ್ತುಗಳು ಹಾಗೂ ದೇಹಗಳ ಮೂಲಕ ಧರ್ಮಯುದ್ಧ ಮಾಡುವುದರಿಂದ ತಪ್ಪಿಸಿಕೊಳ್ಳಲು ನಿಮ್ಮಲ್ಲಿ ಅನುಮತಿ ಕೇಳಲಾರರು. ಅಲ್ಲಾಹು ಧರ್ಮನಿಷ್ಠರನ್ನು ಚೆನ್ನಾಗಿ ಬಲ್ಲವನಾಗಿರುತ್ತಾನೆ

45

ಅಲ್ಲಾಹು ಮತ್ತು ಅಂತಿಮ ದಿನದ ಮೇಲೆ ವಿಶ್ವಾಸವಿರಿಸದವರು ಮಾತ್ರ ಇಂತಹ ನಿವೇದನೆಗಳನ್ನು ಮಾಡುತ್ತಾರೆ. ಅವರ ಹೃದಯಗಳು ಸಂಶಯಗ್ರಸ್ತವಾಗಿವೆ. ಅವರು ತಮ್ಮ ಸಂಶಯಗಳಲ್ಲೇ ಅಂಡೆಲೆಯುತ್ತಿದ್ದಾರೆ.

46

ಯುದ್ಧಕ್ಕೆ ಹೊರಡಲು ಉದ್ದೇಶವಿದ್ದಿದ್ದರೆ ಅದಕ್ಕಾಗಿ ಕೆಲವು ಉಪಕರಣಗಳನ್ನು ಅವರು ಸಿದ್ಧಪಡಿಸಿಕೊಳ್ಳುತ್ತಿದ್ದರು. ಆದರೆ ಯುದ್ದಕ್ಕಾಗಿ ಅವರು ಹೊರಡುವುದನ್ನು ಅಲ್ಲಾಹು ಅನಿಷ್ಟಪ ಟ್ಟನು. ಹಾಗಾಗಿ ಅವರಿಗೆ ಅವನು ಉದಾಸೀನ ವನ್ನುಂಟು ಮಾಡಿದನು. (ಯುದ್ದಕ್ಕೆ ಹೊರಡದೆ) ಕೂತು ಕೊಳ್ಳುವವರ ಜೊತೆಗೆ ನೀವೂ ಕೂತು ಕೊಳ್ಳಿರಿ ಎಂದು ಅವರಲ್ಲಿ ಹೇಳಲಾಯಿತು.

47

ಅವರು ನಿಮ್ಮ ಜೊತೆ ಹೊರಟಿದ್ದರೆ ನಿಮಗೆ ಕೇಡನ್ನಲ್ಲದೆ ಮತ್ತೇನನ್ನೂ ಅವರು ಹೆಚ್ಚಿಸುತ್ತಿರಲಿಲ್ಲ. ಅವರು ನಿಮ್ಮ ನಡುವೆ ಪಿತೂರಿಯ ಇಚ್ಛೆಯಿಂದ ಓಡಾಡುತ್ತಿದ್ದರು. ಅವರ ಮಾತು ಕೇಳುವ ಕೆಲವರು ನಿಮ್ಮ ಕೂಟದಲ್ಲಿದ್ದಾರೆ . ಅಂತಹ ಅಕ್ರಮಿಗಳ ಬಗ್ಗೆ ಅಲ್ಲಾಹನು ಚೆನ್ನಾಗಿ ಬಲ್ಲನು.

48

ನಿಜವಾಗಿಯೂ ಅವರು ಇದಕ್ಕೆ ಮೊದಲು ಕ್ಷೋಭೆಯುಂಟು ಮಾಡಲು ಪ್ರಯತ್ನಿಸಿದ್ದರು. ಅವರ ಇಚ್ಛೆಗೆದುರಾಗಿ ಸತ್ಯವು ಪ್ರಕಟಗೊಂಡು ಅಲ್ಲಾಹನ ಕಾರ್ಯ ಜಯಪ್ರದವಾಗುವವರೆಗೂ ಅವರು ನಿಮ್ಮನ್ನು ಸೋಲಿಸಲಿಕ್ಕಾಗಿ ಅನೇಕ ವಿಧದ ಕುತಂತ್ರಗಳನ್ನು ನಡೆಸಿದ್ದರು

49

`ನನಗೆ ಅನುಮತಿ ಕೊಡಿ, ನನ್ನನ್ನು `ಫಿತ್ನಾ’ ದಲ್ಲಿ ಸಿಲುಕಿಸಬೇಡಿ’ ಎಂದು ತಮ್ಮಲ್ಲಿ ಹೇಳು ವ ಕೆಲವರು ಅವರ (ಕಪಟಿಗಳ) ಕೂಟದಲ್ಲಿ ಇದ್ದಾರೆ. ತಿಳಿಯಿರಿ, ಅವರು ಫಿತ್ನಾದಲ್ಲೇ ಬಿದ್ದು ಬಿಟ್ಟಿದ್ದಾರೆ, ನರಕವು ಸತ್ಯನಿಷೇಧಿಗಳನ್ನು ನಿಜವಾಗಿಯೂ ಆವರಿಸಿದೆ.

50

ನಿಮಗೆ ಹಿತವಾದರೆ ಅವರಿಗೆ ಖೇದವಾಗುತ್ತದೆ. ನಿಮಗೆ ಕಷ್ಟ ಬಂದರೆ `ನಮ್ಮ ಜಾಗ್ರತೆಯನ್ನು ನಾವು ಮೊದಲೇ ಮಾಡಿಕೊಂಡಿದ್ದೇವೆ’ ಎನ್ನುತ್ತಾ ಆನಂದಪಟ್ಟುಕೊಂಡು ಅವರು ತಪ್ಪಿಸಿ ಕೊಳ್ಳುತ್ತಾರೆ.

51

ಹೇಳಿರಿ-ಅಲ್ಲಾಹನು ನಮಗಾಗಿ ಲಿಖಿತಗೊಳಿಸಿ ದುದರ ಹೊರತು ಬೇರೇನೂ ನಮಗೆ ಬಾಧಿಸದು. ಅವನು ನಮ್ಮ ರಕ್ಷಾಧಿಕಾರಿ. ಸತ್ಯ ವಿಶ್ವಾಸಿಗಳು ಅಲ್ಲಾಹುವಿನಲ್ಲಿ ಭಾರವರ್ಪಿಸಿಕೊಳ್ಳಲಿ.

52

ಹೇಳಿರಿ. ಅತ್ಯಂತ ಶ್ರೇಷ್ಟವಾದ ಎರಡು ಕಾರ್ಯಗಳಲ್ಲಿ ಒಂದನ್ನಲ್ಲದೆ ಮತ್ತೇನನ್ನು ನೀವು ನಮ್ಮಲ್ಲಿ ನಿರೀಕ್ಷಿಸುತ್ತಿರುವಿರಿ? ನಾವಾದರೋ ಅಲ್ಲಾಹನು ನಿಮ್ಮನ್ನು ಸ್ವತಃ ತನ್ನ ಕಡೆಯಿಂದ ಅಥವಾ ನಮ್ಮ ಕೈಯ್ಯಾರೆ ಶಿಕ್ಷೆ ಕೊಡುವುದನ್ನೇ ನಿಮ್ಮ ಬಗ್ಗೆ ನಿರೀಕ್ಷಿಸುತ್ತಿದ್ದೇವೆ. ಆದ್ದರಿಂದ ನಿರೀಕ್ಷಿಸುತ್ತಲಿರಿ, ನಾವೂ ನಿಮ್ಮೊಂದಿಗೆ ನಿರೀಕ್ಷಿ ಸುತ್ತಿರುತ್ತೇವೆ.

53

ಅವರೊಡನೆ ಹೇಳಿರಿ. ನೀವು ಸ್ವಇಚ್ಚೆಯಿಂದ ಇಲ್ಲವೇ ಬಲವಂತದಿಂದ ಖರ್ಚು ಮಾಡಿರಿ. ಹೇಗಿದ್ದರೂ ಅದು ನಿಮ್ಮಿಂದ ಸ್ವೀಕರಿಸಲ್ಪಡಲಾರದು. ಏಕೆಂದರೆ ನೀವು ಕರ್ಮಭ್ರಷ್ಟ ಜನಾಂಗವಾಗಿರುತ್ತೀರಿ.

54

ಅವರು ಅಲ್ಲಾಹು ಮತ್ತು ಅವನ ರಸೂಲರನ್ನು ನಿಷೇಧಿಸಿದರು. ಅವರು ನಮಾಝಿಗೆ ಆಲಸ್ಯ ದೊಂದಿಗೆ ಬರುತ್ತಾರೆ. ಮತ್ತು ದೇವ ಮಾರ್ಗದಲ್ಲಿ ಒಲ್ಲದ ಮನಸ್ಸಿನಿಂದ ಖರ್ಚು ಮಾಡುತ್ತಾರೆ ಎಂಬುದರ ಹೊರತು ಅವರ ಸಂಪತ್ತು ಸ್ವೀಕರಿ ಸಲ್ಪಡದಿರಲು ಇನ್ನಾವ ಕಾರಣವೂ ಇಲ್ಲ.

55

ಇವರ ಸಂಪತ್ತು ಮತ್ತು ಸಂತತಿಗಳು ತಮ್ಮನ್ನು ಪರವಶಗೊಳಿಸದಿರಲಿ. ಅಲ್ಲಾಹು ಇವುಗಳ ಮೂಲಕ ಅವರಿಗೆ ಇಹಜೀವನದಲ್ಲೇ ಶಿಕ್ಷೆ ಕೊಡ ಬೇಕೆಂದೂ ಸತ್ಯನಿಷೇಧಿಗಳಾಗಿಯೇ ಇವರು ಪ್ರಾಣ ಬಿಡಬೇಕೆಂದೂ ಇಚ್ಛಿಸುತ್ತಾನೆ.

56

ನಾವು ನಿಮ್ಮವರೇ ಆಗಿರುತ್ತೇವೆಂದು ಅಲ್ಲಾಹ ನಾಣೆ ಹಾಕುತ್ತ ಅವರು ಹೇಳುತ್ತಾರೆ. ವಾಸ್ತವದಲ್ಲಿ ಅವರು ಎಷ್ಟು ಮಾತ್ರಕ್ಕೂ ನಿಮ್ಮ ಕೂಟದವರಲ್ಲ. ನಿಜಕ್ಕೂ ಅವರು ಅಂಜಿ ತತ್ತರಿಸುವ ಜನಾಂಗ.

57

ಅವರೆಲ್ಲಾದರೂ ಅಭಯಸ್ಥಾನ ಅಥವಾ ಗುಹೆಗಳು ಅಥವಾ ಅಡಗು ತಾಣವನ್ನು ಕಂಡುಕೊಂಡಿದ್ದರೆ, ಓಡಿ ಹೋಗಿ ಅದರೊಳಗೆ ಅವಿತುಕೊಳ್ಳುತ್ತಿದ್ದರು.

58

ಓ ಪೈಗಂಬರರೇ, ಅವರಲ್ಲಿ ಕೆಲವರು ದಾನ ವಿತರಣಾ ಕಾರ್ಯದ ಬಗ್ಗೆ ನಿಮ್ಮನ್ನು ಆಕ್ಷೇ ಪಿಸುತ್ತಾರೆ. ಆ ಸೊತ್ತಿನಿಂದ ಅವರಿಗೇನಾದರೂ ಕೊಟ್ಟು ಬಿಟ್ಟರೆ ತೃಪ್ತರಾಗುತ್ತಾರೆ. ಕೊಡದಿದ್ದರೆ ಸಿಟ್ಟಾಗುತ್ತಾರೆ.

59

ಅಲ್ಲಾಹ್ ಮತ್ತು ರಸೂಲರು ಅವರಿಗೆ ಕೊಟ್ಟು ದರಲ್ಲಿ ಅವರು ತೃಪ್ತಿಪಟ್ಟು, ‘ಅಲ್ಲಾಹು ನಮಗೆ ಸಾಕು. ಅಲ್ಲಾಹನು ತನ್ನ ಅನುಗ್ರಹದಿಂದ ಕೊಡ ಲಿರುವನು ಮತ್ತು ಅವನ ರಸೂಲರೂ ನಮಗೆ ದಯಪಾಲಿಸುವರು. ನಾವು ಅಲ್ಲಾಹನ ಕಡೆಗೇ ಆಗ್ರಹಿಸಿಕೊಂಡವರು’ ಎನ್ನುತ್ತಿದ್ದರೆ ಅದೆಷ್ಟು ಉತ್ತಮವಾಗುತ್ತಿತ್ತು.

60

ವಾಸ್ತವದಲ್ಲಿ ಝಕಾತಿನ ಧನ ಕಡು ಬಡವರಿಗೆ, ಬಡವರಿಗೆ, ಝಕಾತ್ ಸಂಬಂಧಿತ ಕಾರ್ಮಿ ಕರಿಗೆ, ಮನವೊಲಿಸಬೇಕಾದವರಿಗೆ, ದಾಸ್ಯ ಮುಕ್ತಿಗೆ, ಸಾಲಗಾರರಿಗೆ, ಸನ್ನದ್ಧ ಧರ್ಮ ಯೋಧರಿಗೆ ಹಾಗೂ ಯಾತ್ರಿಕರಿಗೆ ಮಾತ್ರ ಹಕ್ಕು ಳ್ಳದ್ದಾಗಿರುತ್ತದೆ. ಇದು ಅಲ್ಲಾಹನಿಂದ ವಿಧಿಸಲಾದ ನಿಮಯ. ಅಲ್ಲಾಹು ಸರ್ವಜ್ಞನೂ ಮಹಾ ಧೀಮಂತನೂ ಆಗಿರುತ್ತಾನೆ

61

ಇವರಲ್ಲಿ ಕೆಲವರು ತಮ್ಮ ಮಾತುಗಳಿಂದ ಪ್ರವಾದಿವರ್ಯರಿಗೆ ಕೀಟಲೆ ಕೊಡುತ್ತಾರೆ. ಮತ್ತು ‘ಇವನೊಬ್ಬ ಕಿವಿ ಸೋಲುವ ವ್ಯಕ್ತಿ’ ಎನ್ನುತ್ತಾರೆ. ಹೇಳಿರಿ; `ಹೌದು, ಅವರು ನಿಮಗೆ ಹಿತವಾದುದನ್ನು ಕೇಳಿಸಿಕೊಳ್ಳುವವರು’ (ನೀವು ಹೇಳುವಂತೆ ಎಲ್ಲವನ್ನೂ ಕೇಳುವಹಿತ್ತಾಳೆ ಕಿವಿಯವರಲ್ಲ). ಅವರು ಅಲ್ಲಾಹುವನ್ನೂ ಸತ್ಯ ವಿಶ್ವಾಸಿಗಳನ್ನೂ ನಂಬುತ್ತಾರೆ. ನಿಮ್ಮ ಪೈಕಿ ಸತ್ಯ ವಿಶ್ವಾಸವಿಟ್ಟವರಿಗೆ ಅವರು ವರದಾನವಾಗಿರುವರು. ಅಲ್ಲಾಹನ ರಸೂಲರಿಗೆ ಕೀಟಲೆ ಕೊಡು ವವರಿಗೆ ವೇದನಾಯುಕ್ತ ಶಿಕ್ಷೆಯಿದೆ.

62

ನಿಮ್ಮನ್ನು ತೃಪ್ತಿ ಪಡಿಸುವ ಸಲುವಾಗಿ ಅವರು ನಿಮ್ಮಲ್ಲಿ ಅಲ್ಲಾಹುವಿನ ಮೇಲೆ ಆಣೆ ಹಾಕುತ್ತಾರೆ. ಅವರು ಸತ್ಯವಿಶ್ವಾಸಿಗಳಾಗಿದ್ದಲ್ಲಿ ಅಲ್ಲಾಹು ಮತ್ತು ಅವನ ರಸೂಲರನ್ನು ತೃಪ್ತಿಪಡಿಸುವುದು ಹೆಚ್ಚಿನ ಬಾಧ್ಯತೆಯಾಗಿರುತ್ತದೆ.

63

ಅಲ್ಲಾಹು ಮತ್ತು ರಸೂಲರನ್ನು ವಿರೋಧಿಸುವ ವನಿಗೆ ನರಕಾಗ್ನಿ ಕಾದಿದ್ದು ಅದರಲ್ಲಿ ಅವನು ಶಾಶ್ವತನೆಂದೂ ಅವರು ತಿಳಿಯಲಿಲ್ಲವೇ? ಅದು ಅತಿ ದೊಡ್ಡ ಅಪಮಾನವಾಗಿರುತ್ತದೆ

64

ತಮ್ಮ ಮನಸ್ಸಲ್ಲಿರುವುದನ್ನು ಸ್ಪಷ್ಟಪಡಿಸುವಂತಹ ಖುರ್‍ಆನ್ ಅಧ್ಯಾಯ ಇಳಿದುಬರುವ ಬಗ್ಗೆ ಕಪಟಿಗಳು ಹೆದರುತ್ತಾರೆ. (ಓ ಪೈಗಂಬರರೇ, ಅವರೊಡನೆ) ಹೇಳಿರಿ, ನೀವು ಅಪಹಾಸ್ಯ ಮಾಡಿರಿ. ನಿಶ್ಚಯವಾಗಿಯೂ ನೀವು ಭಯಪಡು ವುದನ್ನು ಅಲ್ಲಾಹು ಖಂಡಿತ ಹೊರತರುವನು.

65

ನೀವು ಅವರಲ್ಲಿ ವಿಚಾರಿಸಿದರೆ; `ನಾವು ಬರೇ ಒಂದು ಆಟ, ವಿನೋದದ ಮಾತನ್ನಾಡುತ್ತಿದ್ದೆವು’ ಎಂದವರು ಹೇಳುತ್ತಾರೆ. ಅವರೊಡನೆ ಹೇಳಿರಿ; ಅಲ್ಲಾಹು, ಅವನ ವಚನಗಳು ಮತ್ತು ಅವನ ರಸೂಲರೊಂದಿಗೇ ನೀವು ಹಾಸ್ಯ ಮಾಡುತ್ತಿರುವಿರಾ?

66

ನೀವು ನೆಪಗಳನ್ನು ಹೇಳಬೇಡಿ. ನೀವು ವಿಶ್ವಾಸ ವಿಟ್ಟ ಬಳಿಕ ನಿಷೇಧಿಸಿರುತ್ತೀರಿ . ನಿಮ್ಮ ಪೈಕಿ ಒಂದು ವಿಭಾಗಕ್ಕೆ ನಾವು ಕ್ಷಮೆ ನೀಡಿದರೆ ಮತ್ತೊಂದು ವಿಭಾಗಕ್ಕೆ ಶಿಕ್ಷೆ ಕೊಡುತ್ತೇವೆ. ಯಾಕೆಂದರೆ ಅವರು ಅಪರಾಧಿಗಳಾಗಿದ್ದರು.

67

ಕಪಟ ಪುರುಷರೂ ಕಪಟಿ ಸ್ತ್ರೀಯರೂ ಪರಸ್ಪರ ಅನ್ಯೋನರು. ಅವರು ಕೆಡುಕಿನ ಆಜ್ಞೆ ಕೊಡುತ್ತಾರೆ. ಒಳಿತುಗಳಿಂದ ತಡೆಯುತ್ತಾರೆ ಮತ್ತು ತಮ್ಮ ಕೈಗಳನ್ನು ಸತ್ಕಾರ್ಯಗಳಿಂದ ತಡೆದಿಡು ತ್ತಾರೆ. ಅವರು ಅಲ್ಲಾಹನನ್ನು ಉಪೇಕ್ಷಿಸಿದರು. ಆಗ ಅಲ್ಲಾಹನೂ ಅವರನ್ನು ಉಪೇಕ್ಷಿಸಿದನು. ನಿಜವಾಗಿಯೂ ಕಪಟಿಗಳು ಧರ್ಮ ಧಿಕ್ಕಾರಿಗಳು.

68

ಕಪಟ ವಿಶ್ವಾಸಿಗಳು, ಕಪಟಿ ವಿಶ್ವಾಸಿನಿಗಳು ಹಾಗೂ ಕಾಫಿರರಿಗೆ ನರಕಾಗ್ನಿಯನ್ನು ಅಲ್ಲಾಹನು ವಾಗ್ದಾನ ಮಾಡಿರುವನು. ಅವರದರಲ್ಲಿ ಶಾಶ್ವತರು. ಅದೇ ಅವರಿಗೆ ತಕ್ಕುದಾದುದು. ಅಲ್ಲಾಹು ಅವರನ್ನು ಶಪಿಸಿರುವನು. ಅವರಿಗೆ ಸ್ಥಿರವಾದ ಶಿಕ್ಷೆಯಿದೆ

69

(ಕಪಟಿಗಳೇ!) ನೀವು ನಿಮ್ಮ ಹಿಂದಿನವರಂತೆಯೇ ಇದ್ದೀರಿ. ಅವರು ನಿಮಗಿಂತ ಶಕ್ತರೂ ಸೊತ್ತು- ಸಂತಾನಗಳಲ್ಲಿ ನಿಮಗಿಂತ ಸಮೃದ್ಧರೂ ಆಗಿದ್ದರು. ಅವರು ತಮ್ಮ ಹಿಸೆಯಿಂದ ಸುಖ ಅನುಭವಿಸಿದರು. ನಿಮ್ಮ ಹಿಂದಿನವರು ಅವರ ಹಿಸೆಯಿಂದ ಸುಖ ಅನುಭವಿಸಿದಂತೆ ನೀವು ಕೂಡಾ ನಿಮ್ಮ ಪಾಲಿನಿಂದ ಸುಖ ಅನುಭವಿಸಿದಿರಿ. ಅವರು ವಿನೋದಗಳಲ್ಲಿ ಪ್ರವೇಶಿಸಿದಂತೆ ನೀವೂ ವಿನೋದಗಳಲ್ಲಿ ಪ್ರವೇಶಿಸಿದಿರಿ. ಅವರ ಕರ್ಮಗಳೆಲ್ಲ ಇಹದಲ್ಲೂ ಪರದಲ್ಲೂ ನಿಷ್ಫಲವಾದುವು. ಅವರೇ ನಷ್ಟವಂತರು.

70

ಅವರಿಗೆ ಹಿಂದೆ ಗತಿಸಿ ಹೋದ ನೂಹರ ಜನಾಂಗ, ಆದ್, ಸಮೂದ್, ಇಬ್‍ರಾಹೀಮರ ಜನಾಂಗ, ಮದ್‍ಯನದವರು ಹಾಗೂ ಕವುಚಿ ಹಾಕಲ್ಪಟ್ಟ ನಾಡಿನವರ ಚರಿತ್ರೆ ತಲುಪಿಲ್ಲವೇ? ಅವರ ರಸೂಲರು ಅವರ ಬಳಿ ಪ್ರತ್ಯಕ್ಷ ಪ್ರಮಾಣಗಳನ್ನು ತೆಗೆದುಕೊಂಡು ಬಂದರು. ಅಲ್ಲಾಹನು ಅವರಿಗೆ ಅನ್ಯಾಯ ಮಾಡಿಲ್ಲ. ಅವರು ಸ್ವತಃ ತಮ್ಮ ಮೇಲೆ ಅನ್ಯಾಯ ಮಾಡಿಕೊಂಡರು.

71

ಸತ್ಯವಿಶ್ವಾಸಿಗಳು ಹಾಗೂ ಸತ್ಯವಿಶ್ವಾಸಿನಿಯರು ಪರಸ್ಪರ ಬಂಧುಗಳು. ಅವರು ಒಳಿತುಗಳ ಅಪ್ಪಣೆ ಕೊಡುತ್ತಾರೆ. ಮತ್ತು ಕೆಡುಕುಗಳಿಂದ ತಡೆಯು ತ್ತಾರೆ. ನಮಾಝ್ ಸಂಸ್ಥಾಪಿಸುತ್ತಾರೆ, ಝಕಾತ್ ಕೊಡುತ್ತಾರೆ ಮತ್ತು ಅಲ್ಲಾಹು ಹಾಗೂ ಅವನ ರಸೂಲರ ಅನುಸರಣೆ ಮಾಡುತ್ತಾರೆ. ಅವರಿಗೆ ಅಲ್ಲಾಹು ದಯೆ ತೋರಲಿರುವನು. ಖಂಡಿತ ಅಲ್ಲಾಹನು ಮಹಾಪ್ರತಾಪಿಯೂ ಯುಕ್ತಿ ಪೂರ್ಣ ನೂ ಆಗಿರುತ್ತಾನೆ.

72

ಸತ್ಯವಿಶ್ವಾಸಿಗಳು ಹಾಗೂ ಸತ್ಯವಿಶ್ವಾಸಿನಿಗಳಿಗೆ ಅಲ್ಲಾಹನು ಸ್ವರ್ಗೋದ್ಯಾನಗಳನ್ನು ವಾಗ್ದಾನ ಮಾಡಿರುತ್ತಾನೆ. ಅವುಗಳ ತಳಭಾಗದಲ್ಲಿ ನದಿಗಳು ಹರಿಯುತ್ತವೆ. ಅವರದರಲ್ಲಿ ಸ್ಥಿರವಾಸಿಗಳು ಶಾಶ್ವತ ವಾಸದ ಸ್ವರ್ಗಗಳಲ್ಲಿ ಉತ್ಕøಷ್ಟ ಭವನ ಗಳನ್ನು (ಅಲ್ಲಾಹು ವಾಗ್ದಾನ ಮಾಡಿರುತ್ತಾನೆ). ಅಲ್ಲಾಹುವಿನ ತೃಪ್ತಿ ಅತ್ಯಂತ ಹಿರಿದು. ಅದುವೇ ಮಹಾವಿಜಯ.

73

ಓ ನಬಿಯವರೇ! ಸತ್ಯ ನಿಷೇಧಿಗಳು ಹಾಗೂ ಕಪಟಿಗಳ ವಿರುದ್ಧ ಯುದ್ಧ ಮಾಡಿರಿ. ಅವರೊಂದಿಗೆ ಕಠಿಣವಾಗಿ ವರ್ತಿಸಿರಿ. ಅವರ ನಿವಾಸ ನರಕವಾಗಿದೆ ಮತ್ತು ಆ ಆಶ್ರಯ ತಾಣವು ಬಹಳ ನಿಕೃಷ್ಟ.

74

ನಾವು ಆ ಮಾತನ್ನು ಹೇಳಲಿಲ್ಲವೆಂದು ಅವರು ಅಲ್ಲಾಹುವಿನ ಮೇಲೆ ಆಣೆ ಹಾಕುತ್ತಿದ್ದಾರೆ . ನಿಜವಾಗಿಯೂ ಅವರು ಸತ್ಯನಿಷೇಧದ ಮಾತನ್ನು ಹೇಳಿದ್ದಾರೆ. ವಿಧೇಯತೆ ಪ್ರದರ್ಶಿಸಿದ ನಂತರ ಸತ್ಯನಿಷೇಧ ಹೊಂದಿದ್ದಾರೆ. ಅವರಿಗೆ ಸಾಧ್ಯ ವಾಗದಂತಹ ಕಾರ್ಯವನ್ನು ಮಾಡಲು ನಿರ್ಧರಿಸಿಯೂ ಇದ್ದಾರೆ. ಅಲ್ಲಾಹು ಮತ್ತು ಅವನ ರಸೂಲರು ಅಲ್ಲಾಹುವಿನ ಔದಾರ್ಯದಿಂದ ಅವರನ್ನು ಸಂಪನ್ನಗೊಳಿಸಿದ್ದಲ್ಲದೆ ಅವರ ವಿರೋಧಕ್ಕೆ ಬೇರೆ ಕಾರಣವಿಲ್ಲ. ಅವರು ಪಶ್ವಾತ್ತಾಪಪಟ್ಟರೆ ಅದು ಅವರಿಗೇ ಉತ್ತಮವಾದುದು. ವಿಮುಖರಾಗಿ ಹಿಂಜರಿದರೆ ಅಲ್ಲಾಹು ಅವರಿಗೆ ಇಹಪರದಲ್ಲಿ ವೇದನಾಜನಕ ಶಿಕ್ಷೆ ಕೊಡುವನು. ಭೂಮಿಯಲ್ಲಿ ಯಾವುದೇ ರಕ್ಷಕನೋ ಸಹಾಯಕನೋ ಅವರಿಗಿಲ್ಲ.

75

ಅಲ್ಲಾಹನು ತನ್ನ ಅನುಗ್ರಹದಿಂದ ಏನಾದರೂ ಕೊಟ್ಟರೆ ನಾವು ನಿಜವಾಗಿಯೂ ದಾನಧರ್ಮ ಮಾಡುವೆವು, ಸಚ್ಚರಿತರ ಕೂಟಕ್ಕೆ ಸೇರುವೆವು ಎಂದು ಅಲ್ಲಾಹುವಿನಲ್ಲಿ ವಾಗ್ದಾನ ಮಾಡಿ ದವರು ಅವರ (ಕಪಟಿಗಳ) ಕೂಟದಲ್ಲಿದ್ದಾರೆ.

76

ಆದರೆ, ಅಲ್ಲಾಹನು ಅವರಿಗೆ ತನ್ನ ಕೃಪೆಯಿಂದ ಕೊಟ್ಟಾಗ ಅವರು ಅದರಲ್ಲಿ ಲೋಭ ತೋರಿದರು. ಕರಾರಿನ ಗೊಡವೆಯಿಂದ ವಿಮುಖರಾದರು. ನಗಣ್ಯಗೊಳಿಸಿ ಹಿಂತಿರುಗಿದರು.

77

ಪರಿಣಾಮವಾಗಿ ಅವರು ಅಲ್ಲಾಹನೊಡನೆ ಮಾಡಿದ ಕರಾರುಭಂಗಕ್ಕಾಗಿಯೂ ಅವರು ಸುಳ್ಳು ಹೇಳಿದುದಕ್ಕಾಗಿಯೂ ಅಲ್ಲಾಹನನ್ನು ಅವರು ಅಭಿಮುಖೀಕರಿಸುವ ದಿನದವರೆಗೆ ಅವನು ಅವರ ಹೃದಯದಲ್ಲಿ (ಊರಿನಿಂತ) ಕಾಪಟ್ಯ ವನ್ನು ಅವರ ಪರ್ಯವಸಾನವಾಗಿ ಮಾಡಿದನು.

78

ಅವರ ರಹಸ್ಯಗಳು ಹಾಗೂ ಗೂಢಾಲೋಚನೆ ಗಳನ್ನು ಅಲ್ಲಾಹು ಅರಿಯುವನೆಂದೂ ನಿಜವಾಗಿಯೂ ಅಲ್ಲಾಹನು ಅದೃಶ್ಯಗಳನ್ನು ಚೆನ್ನಾಗಿ ಬಲ್ಲವನೆಂದೂ ಅವರು ಗ್ರಹಿಸಿಕೊಳ್ಳಲಿಲ್ಲವೇ?

79

ಧಾರಾಳವಾಗಿ ಐಚ್ಚಿಕದಾನ ಮಾಡುತ್ತಿರುವ ಸತ್ಯ ವಿಶ್ವಾಸಿಗಳ ಕೂಟದ ಕೆಲವರನ್ನೂ ಕಷ್ಟಪಟ್ಟು ದುಡಿದ ಸ್ವಲ್ಪ ಸಂಪಾದನೆಯಿಂದ ದಾನ ಮಾಡುವವರನ್ನೂ ಅಣಕಿಸುವ ಹಾಗೂ ಪರಿಹಾಸ ಮಾಡುವವರಿಗೆ ಅವರ ಪರಿಹಾಸಕ್ಕೆ ತಕ್ಕುದಾದ ಶಿಕ್ಷೆಯನ್ನು ಅಲ್ಲಾಹು ಕೊಡುತ್ತಾನೆ. ಅವರಿಗೆ ಯಾತನಾಮಯ ಶಿಕ್ಷೆ ಕಾದಿದೆ.

80

(ಓ ಪೈಗಂಬರರೇ,) ನೀವು ಅವರಿಗಾಗಿ ನನ್ನಲ್ಲಿ ಕ್ಷಮಾಯಾಚನೆ ಮಾಡಿರಿ ಅಥವಾ ಕ್ಷಮಾ ಯಾಚನೆ ಮಾಡದಿರಿ. ಆದರೆ ಅವರಿಗಾಗಿ ನೀವು ಎಪ್ಪತ್ತು ಸಲ ಕ್ಷಮಾಯಾಚನೆ ಮಾಡಿದರೂ ಅಲ್ಲಾಹು ಅವರಿಗೆ ಖಂಡಿತ ಕ್ಷಮಿಸಲಾರನು. ಏಕೆಂದರೆ ಅವರು ಅಲ್ಲಾಹು ಹಾಗೂ ಅವರ ರಸೂಲರನ್ನು ನಿಷೇಧಿಸಿದ್ದಾರೆ. ಧರ್ಮಧಿಕ್ಕಾರಿ ಜನತೆಯನ್ನು ಅಲ್ಲಾಹು ಸರಿದಾರಿಗೆ ತರುವುದಿಲ್ಲ.

81

(ತಬೂಕ್ ಯುದ್ಧದಿಂದ ಗೈರು ಹಾಜರಾತಿಗೆ) ಹಿಂದೆ ಉಳಿದಿರಲು ವಿನಾಯಿತಿ ನೀಡಲ್ಪಟ್ಟವರು ಅಲ್ಲಾಹು ಹಾಗೂ ಅವನ ರಸೂಲರ ಆದೇಶಕ್ಕೆ ವಿರುದ್ಧವಾಗಿ ತಾವು ಕುಳಿತಿರುವ ಬಗ್ಗೆ ಸಂತ ಸಪಟ್ಟರು. ಧನ ಮತ್ತು ತನುಗಳಿಂದ ಅಲ್ಲಾಹನ ಮಾರ್ಗದಲ್ಲಿ ಹೋರಾಟ ನಡೆಸುವುದನ್ನು ಅವರು ಅನಿಷ್ಟಪಟ್ಟರು. ಅವರು ಜನರೊಡನೆ ‘ಸೆಖೆ ಕಾಲ ದಲ್ಲಿ ಯುದ್ದಕ್ಕೆ ಹೊರಡಬೇಡಿರಿ’ ಎಂದು ಹೇಳಿ ದರು. ಹೇಳಿರಿ, ನರಕಾಗ್ನಿಯು ಇದಕ್ಕಿಂತಲೂ ಕಠಿಣ ಸೆಖೆಯುಳ್ಳದ್ದು. ಅದನ್ನವರು ಗ್ರಹಿಸಿ ಕೊಂಡಿದ್ದರೆ, (ಯುದ್ದಕ್ಕೆ ಹೊರಡುತ್ತಿದ್ದರು)

82

ಅವರು ಸ್ವಲ್ಪ ನಗಾಡಲಿ. ಹೆಚ್ಚು ಅಳಲಿ. ಅವರು ಸಂಪಾದಿಸಿದುದರ ಪ್ರತಿಫಲವಾಗಿ.

83

ಅಲ್ಲಾಹು ನಿಮ್ಮನ್ನು ಅವರ ಒಂದು ವಿಭಾಗದ ಬಳಿಗೆ ಮರಳಿಸಿದರೆ ಹಾಗೂ (ಇನ್ನೊಂದು ಯುದ್ಧಕ್ಕೆ) ಹೊರಡಲು ಅವರು ತಮ್ಮಲ್ಲಿ ಅನು ಮತಿ ಕೇಳಿದರೆ; `ನೀವು ನನ್ನ ಜೊತೆ ಯಾವತೂ ಹೊರಡಬೇಡಿ. ನನ್ನ ಜೊತೆ ಯಾವ ಶತ್ರುವಿನ ವಿರುದ್ಧವೂ ನೀವು ಯುದ್ಧ ಮಾಡಬೇಡಿರಿ, ನೀವು ಮೊದಲ ಸಲವೇ ಕುಳಿತಿರುವುದನ್ನೇ ತೃಪ್ತಿಪಟ್ಟಿದ್ದೀರಿ, ಆದ್ದರಿಂದ ಹಿಂದುಳಿದವರ ಜೊತೆಗೇ ನೀವೂ ಕೂತುಕೊಳ್ಳಿರಿ’ ಎಂದು ಹೇಳಿರಿ.

84

ಅವರ ಪೈಕಿ ಯಾವನು ಮರಣ ಹೊಂದಿದರೂ ಅವನಿಗೆ ತಾವು (ಮಯ್ಯಿತ್) ನಮಾಜು ಮಾಡ ಬೇಡಿರಿ. ಅವನ ಸಮಾಧಿ ಪಕ್ಕದಲ್ಲಿ ನಿಲ್ಲಬೇಡಿರಿ . ಏಕೆಂದರೆ ಅವರು ಅಲ್ಲಾಹು ಮತ್ತು ಅವನ ರಸೂಲರನ್ನು ನಿಷೇಧಿಸಿದರು. ಅವರು ಕರ್ಮಭ್ರಷ್ಟರಾಗಿರುವ ಸ್ಥಿತಿಯಲ್ಲಿ ಸತ್ತಿದ್ದಾರೆ

85

ಅವರ ಸೊತ್ತುಗಳೂ ಸಂತಾನಗಳೂ ನಿಮ್ಮನ್ನು ವಿಸ್ಮಯಗೊಳಿಸದಿರಲಿ. ನಿಜವಾಗಿಯೂ ಅಲ್ಲಾಹು ಅವುಗಳ ಮೂಲಕ ಅವರನ್ನು ಇಹ ಲೋಕದಲ್ಲಿ ಶಿಕ್ಷಿಸಲಿಕ್ಕೂ ಅವರ ಪ್ರಾಣಗಳು ಸತ್ಯನಿಷೇಧಾ ವಸ್ಥೆಯಲ್ಲಿ ಹೊರಟು ಹೋಗುವಂತಾಗಲಿಕ್ಕೂ ನಿರ್ಧರಿಸಿದ್ದಾನೆ.

86

ಅಲ್ಲಾಹನ ಮೇಲೆ ವಿಶ್ವಾಸವಿಡಿರಿ ಮತ್ತು ಅವನ ರಸೂಲರ ಜೊತೆಗೆ ಯುದ್ಧ ಮಾಡಿರಿ ಎಂಬ ಆದೇಶದ ಒಂದು ಅಧ್ಯಾಯ ಅವತೀರ್ಣಗೊಂಡಾಗ ಅವರಲ್ಲಿದ್ದ ಸ್ಥಿತಿವಂತರೇ ನಿಮ್ಮೊಡನೆ ಯುದ್ಧಕ್ಕೆ ಗೈರು ಹಾಜರಾತಿಗೆ ತಮ್ಮಲ್ಲಿ ಅನುಮತಿ ಕೇಳಿದರು. ನಮ್ಮನ್ನು ಬಿಟ್ಟು ಬಿಡಿರಿ. (ಯುದ್ಧಕ್ಕೆ ಬಾರದೆ) ಕುಳಿತಿರುವವರೊಂದಿಗೆ ನಾವಿರುತ್ತೇವೆ ಎಂದವರು ಹೇಳುತ್ತಾರೆ.

87

ಅವರು ಮನೆಯಲ್ಲಿ ಕುಳಿತುಕೊಂಡಿರುವ ಮಹಿಳೆಯರೊಂದಿಗೆ ಸೇರುವುದನ್ನು ಅವರು ತೃಪ್ತಿಪಟ್ಟರು. ಅವರ ಹೃದಯಗಳಿಗೆ ಮುದ್ರೆಯೊತ ಲ್ಪಟ್ಟಿದೆ. ಆದ್ದರಿಂದ ಅವರು ಗ್ರಹಿಸಿಕೊಳ್ಳುವುದಿಲ್ಲ.

88

ಆದರೆ ಅಲ್ಲಾಹನ ರಸೂಲರು ಹಾಗೂ ಅವರ ಜೊತೆಗೆ ಸತ್ಯವಿಶ್ವಾಸವಿಟ್ಟವರು ತಮ್ಮ ಸೊತ್ತು ಗಳನ್ನೂ ದೇಹಗಳನ್ನೂ ಬಳಸಿ ಯುದ್ಧ ಮಾಡಿದರು. ಅವರಿಗೆ ಹಲವು ವಿಧ ಗುಣಫಲಗಳಿವೆ. ಅವರೇ ಜಯಶಾಲಿಗಳು.

89

ಅಲ್ಲಾಹನು ಅವರಿಗಾಗಿ ಸ್ವರ್ಗೋದ್ಯಾನಗಳನ್ನು ಸಿದ್ಧಮಾಡಿಟ್ಟಿದ್ದಾನೆ. ಅದರ ತಳಭಾಗದಲ್ಲಿ ನದಿಗಳು ಹರಿಯುತ್ತಿವೆ. ಅವರು ಅದರಲ್ಲಿ ಶಾಶ್ವತ ನೆಲೆಸುವರು. ಇದುವೇ ಮಹತ್ತಾದ ವಿಜಯ.

90

ನಿಜವಾದ ನೆವ ಇರುವ ಗ್ರಾಮೀಣರು (ಯುದ್ಧಕ್ಕೆ ಗೈರುಹಾಜರಿಗೆ) ಸಮ್ಮತಿಗಾಗಿ ಬಂದರು. ಅಲ್ಲಾಹು ಹಾಗೂ ಅವನ ರಸೂಲರಲ್ಲಿ ಸುಳ್ಳು ಹೇಳಿದವರು ಕೂತುಬಿಟ್ಟರು. ಅವರ ಪೈಕಿ ಸತ್ಯನಿಷೇಧಿಗಳಿಗೆ ವೇದನಾಜನಕ ಶಿಕ್ಷೆ ಬಾಧಿಸಲಿದೆ.

91

ಬಲಹೀನರು, ರೋಗಿಗಳು ಹಾಗೂ ವೆಚ್ಚಕ್ಕೆ ಗತಿ ಯಿಲ್ಲದವರಿಗೆ ಯಾವುದೇ ಪಾಪವಿಲ್ಲ. ಅವರು ಅಲ್ಲಾಹು ಹಾಗೂ ಅವನ ರಸೂಲರಿಗೆ ನಿಷ್ಠರಾಗಿದ್ದರೆ (ಇಂತಹ) ಸುಕೃತರ ಮೇಲೆ (ಆರೋಪಕ್ಕೆ) ಯಾವ ದಾರಿಯೂ ಇಲ್ಲ, ಅಲ್ಲಾಹನು ಪರಮ ಕ್ಷಮಾ ದಾನಿಯೂ ಪರಮ ದಯಾಳುವೂ ಆಗಿರುವನು.

92

ವಾಹನದಲ್ಲಿ ಕೂರಿಸಿಕೊಂಡು ಹೋಗಲು ನಿಮ್ಮ ಬಳಿಗೆ ಬಂದ ಸಂದರ್ಭದಲ್ಲಿ; `ನಿಮ್ಮನ್ನು ಹತ್ತಿಸಿ ಒಯ್ಯಲು ತಕ್ಕ ವಾಹನ ನನ್ನ ಬಳಿ ಇಲ್ಲ’ ಎಂದು ತಾವು ಹೇಳಿದಾಗ ವಿವಶರಾಗಿ ಹೊರಟು ಹೋದ ವರಿಗೂ ಪಾಪವಿಲ್ಲ. ವೆಚ್ಚಕ್ಕೆ ಏನೂ ಒದಗದೇ ಹೋಯಿತಲ್ಲ ಎಂಬ ದುಃಖದಿಂದ ಅವರ ಕಣ್ಣುಗಳಿಂದ ಅಶ್ರುಧಾರೆ ಇಳಿಯುತ್ತಿತ್ತು.

93

ಆದರೆ ಧನಿಕರಾಗಿರುವ ಸ್ಥಿತಿಯಲ್ಲೂ (ಧರ್ಮ ಯುದ್ಧದಲ್ಲಿ ಭಾಗವಹಿಸುವುದರಿಂದ) ತಮ್ಮಲ್ಲಿ ವಿನಾಯಿತಿಗೆ ಅನುಮತಿ ಕೇಳಿದವರ ಮೇಲೆ ಯೇ ಆಕ್ಷೇಪಕ್ಕೆ ದಾರಿ ಇರುವುದು. ಹಿಂದುಳಿದ ವರ ಜೊತೆಯಾಗುವುದರಲ್ಲಿ ಅವರು ತೃಪ್ತಿಪಟ್ಟರು. ಅವರ ಹೃದಯಗಳಿಗೆ ಅಲ್ಲಾಹು ಮುದ್ರೆಯೊತ್ತಿರುವನು. ಆದುದರಿಂದ ಅವರಿಗೆ ತಿಳಿಯುವುದಿಲ್ಲ

94

ನೀವು ಹಿಂದಿರುಗಿ ಅವರ ಬಳಿಗೆ ಬಂದಾಗ ನಿಮ್ಮ ಬಳಿ ಅವರು ನೆಪಗಳನ್ನು ಹೇಳುವರು. ಹೇಳಿರಿ; `ನೆಪ ಹೇಳಬೇಡಿ. ನಿಮ್ಮನ್ನು ನಾವು ಖಂಡಿತ ನಂಬುವುದಿಲ್ಲ. ನಿಮ್ಮ ಕೆಲವು ವಾರ್ತೆಗಳನ್ನು ಅಲ್ಲಾಹು ನಮಗೆ ತಲುಪಿಸಿರುತ್ತಾನೆ. ಇನ್ನು ಅಲ್ಲಾಹು ಮತ್ತು ಅವನ ರಸೂಲರು ನಿಮ್ಮ ವರ್ತನೆಯನ್ನು ನೋಡುವರು. ನಂತರ ದೃಶ್ಯಾದೃಶ್ಯಗಳನ್ನು ಬಲ್ಲವನ ಬಳಿಗೆ ನಿಮ್ಮನ್ನು ಮರಳಿಸಲಾಗುವುದು. ಆಗ ಅವನು ನಿಮ್ಮ ಇಲ್ಲಿನ ಪ್ರವರ್ತಿಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿರುವನು.

95

ಅವರ ಬಳಿಗೆ ನೀವು ವಾಪಾಸಾದರೆ ಅವರನ್ನು ನೀವು ನಿರ್ಲಕ್ಷಿಸಬೇಕೆಂದು ಅಲ್ಲಾಹುವಿನ ಮೇಲೆ ಆಣೆ ಹಾಕಿ ನಿಮ್ಮಲ್ಲಿ ಕೇಳಿಕೊಳ್ಳುವರು. ನೀವು ಅವರನ್ನು ನಿರ್ಲಕ್ಷಿಸಿರಿ. ನಿಶ್ಚಯ ಅವರು ಅಶುದ್ಧರು. ಅವರ ಅಂತಿಮ ಗಮ್ಯವು ನರಕವಾಗಿರು ವುದು ಅವರು ಮಾಡಿದುದರ ಫಲವಾಗಿ.

96

ವಸ್ತುತಃ ನೀವು ಅವರ ಬಗ್ಗೆ ತೃಪ್ತಿ ಹೊಂದುವ ಸಲುವಾಗಿ ನಿಮ್ಮಲ್ಲಿ ಅವರು ಆಣೆ ಹಾಕುವರು. ಆದರೆ ನೀವು ಅವರ ಬಗ್ಗೆ ಸಂತೃಪ್ತರಾದರೂ ಕೂಡಾ ಆ ಭ್ರಷ್ಟ ಜನತೆಯನ್ನು ಅಲ್ಲಾಹು ತೃಪ್ತಿಪಡಲಾರನು.

97

ಗ್ರಾಮೀಣ ಅರಬರು ಸತ್ಯನಿಷೇಧ ಹಾಗೂ ಕಾಪಟ್ಯದಲ್ಲಿ ಹೆಚ್ಚು ಕಠಿಣರು. ಅಲ್ಲಾಹನು ತನ್ನ ರಸೂಲರ ಮೇಲೆ ಅವತೀರ್ಣಗೊಳಿಸಿದ ಧರ್ಮದ ಮೇರೆಗಳ ಬಗೆಗೆ ಅಜ್ಞರಾಗಿರುವುದಕ್ಕೆ ಹೆಚ್ಚು ಯೋಗ್ಯತೆಯುಳ್ಳವರು. ಅಲ್ಲಾಹನು ಸರ್ವಜ್ಞನೂ ಪರಮ ತಂತ್ರಜ್ಞಾನಿಯೂ ಆಗಿರುವನು.

98

ಅಲ್ಲಾಹನ ಮಾರ್ಗದಲ್ಲಿ ವೆಚ್ಚ ಮಾಡುವುದನ್ನು ನಷ್ಟವಾಗಿ ಕಾಣುವ ಹಾಗೂ ನಿಮಗೆ ಕಾಲ ಚಕ್ರದ ಉರುಳಾಟವನ್ನು (ಏನಾದರೊಂದು ಅನಾಹುತ ಬರುವುದನ್ನು) ನಿರೀಕ್ಷಿಸುವ ಕೆಲವು ಗ್ರಾಮೀಣರಿದ್ದಾರೆ. ವಾಸ್ತವದಲ್ಲಿ ಕೆಡುಕಿನ ಚಕ್ರವು ಅವರ ಮೇಲೆಯೇ ಉರುಳಲಿದೆ. ಅಲ್ಲಾಹನು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.

99

ಅಲ್ಲಾಹು ಮತ್ತು ಪರಲೋಕದಲ್ಲಿ ನಂಬಿಕೆ ಇರುವ ಹಾಗೂ ಧರ್ಮಕಾರ್ಯಕ್ಕೆ ಮಾಡಿದ ವೆಚ್ಚವನ್ನು ಅಲ್ಲಾಹನ ಸಾಮಿಪ್ಯ ಮತ್ತು ರಸೂಲರ ಕಡೆಯಿಂದ ಕೃಪಾಶೀರ್ವಾದ ಪಡೆ ಯುವ ಮಾರ್ಗವನ್ನಾಗಿ ಪರಿಗಣಿಸುವವರೂ ಗ್ರಾಮೀಣರ ಕೂಟದಲ್ಲಿದ್ದಾರೆ. ತಿಳಿಯಿರಿ. ಅದು ನಿಜಕ್ಕೂ ಪುಣ್ಯ ಕಾರ್ಯ . ನಿಶ್ಚಯವಾಗಿಯೂ ಅಲ್ಲಾಹು ಅವರನ್ನು ತನ್ನ ಕರುಣೆಯೊಳಗೆ ಪ್ರವೇಶ ಗೊಳಿಸುವನು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಾಶೀಲನೂ ಪರಮ ದಯಾಳುವೂ ಆಗಿರುವನು.

100

ಮುಹಾಜಿರ್ ಮತ್ತು ಅನ್ಸಾರರಲ್ಲಿ ಪ್ರಥಮವಾಗಿ ಮುಂದೆ ಬಂದವರಿಂದಲೂ ನಿಷ್ಕಳಂಕವಾಗಿ ಸುಕೃತದ ಮೂಲಕ ಅವರನ್ನು ಅನುಸರಿಸಿದವರಿಂದಲೂ ಅಲ್ಲಾಹು ಪ್ರಸನ್ನನಾದನು. ಅಲ್ಲಾಹನ (ಪ್ರತಿಫಲದ) ಬಗ್ಗೆ ಅವರೂ ಪ್ರಸನ್ನರಾದರು. ಅಲ್ಲಾಹು ಅವರಿಗಾಗಿ ತಳಭಾಗ ದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳನ್ನು ಸಿದ್ಧಪಡಿಸಿಟ್ಟಿರುವನು. ಅವರು ಅದರಲ್ಲಿ ಶಾಶ್ವತ ನೆಲೆಸುವರು. ಅದುವೇ ಮಹತ್ತರವಾದ ವಿಜಯ.

101

ನಿಮ್ಮ ಪರಿಸರದ ಗ್ರಾಮೀಣರಲ್ಲಿ ಹಾಗೂ ಮದೀನಾ ನಿವಾಸಿಗಳಲ್ಲೂ ಕಪಟಿಗಳಿದ್ದಾರೆ. ಅವರು ಕಾಪಟ್ಯದಲ್ಲಿ ಪಳಗಿದವರು. ನೀವು ಅವರನ್ನು ಅರಿತಿಲ್ಲ. ನಾವು ಅವರನ್ನು ಅರಿತಿದ್ದೇವೆ. ನಾವು ಅವರಿಗೆ ಎರಡು ಸಲಂ ಶಿಕ್ಷೆ ಕೊಡಲಿದ್ದೇವೆ. ನಂತರ ಅವರು ಅತ್ಯಂತ ಕಠಿಣ ಶಿಕ್ಷೆಗೆ ತಳ್ಳಲ್ಪಡುತ್ತಾರೆ.

102

ತಮ್ಮ ಅಪರಾಧಗಳನ್ನು ಒಪ್ಪಿಕೊಂಡ ಬೇರೆ ಕೆಲವರಿದ್ದಾರೆ. ಅವರು ಸುಕೃತಗಳನ್ನೂ ದುಷ್ಕøತಗಳನ್ನೂ ಬೆರೆಸಿಕೊಂಡಿದ್ದಾರೆಃ. ಅಲ್ಲಾಹು ಅವರ ತಪ್ಪೊಪ್ಪಿಗೆಯನ್ನು ಮನ್ನಿಸುವ ಸಾಧ್ಯತೆ ಇದೆ. ಅಲ್ಲಾಹನು ಪರಮ ಕ್ಷಮಾಶೀಲನೂ ಪರಮ ದಯಾಳುವೂ ಆಗಿರುತ್ತಾನೆ.

103

(ಓ ಪೈಗಂಬರರೇ,) ನೀವು ಅವರ ಸೊತ್ತು ಗಳಿಂದ ದಾನವನ್ನು ಸ್ವೀಕರಿಸಿರಿ. ಆ ಮೂಲಕ ತಾವು ಅವರನ್ನು ಶುದ್ಧೀಕರಿಸಿರಿ ಹಾಗೂ ಅವ ರನ್ನು ಅಭಿವೃದ್ಧಿಪಡಿಸಿರಿ. ಮತ್ತು ಅವರಿಗಾಗಿ ಪ್ರಾರ್ಥಿಸಿರಿ. ಏಕೆಂದರೆ, ನಿಮ್ಮ ಪ್ರಾರ್ಥನೆಯು ಅವರ ಮನಶ್ಶಾಂತಿಗೆ ಕಾರಣವಾಗುವುದು. ಅಲ್ಲಾಹು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.

104

ಅಲ್ಲಾಹನೇ ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ ಮತ್ತು ಅವರ ದಾನಗಳನ್ನು ಪಡೆಯುತ್ತಾನೆ ಎಂದೂ ಖಂಡಿತ ಅಲ್ಲಾಹನೇ ಅತ್ಯಧಿಕ ಕ್ಷಮಿಸುವವನೂ, ಪರಮ ದಯಾಳುವೂ ಆಗಿರುತ್ತಾನೆಂದೂ ಅವರಿಗೆ ತಿಳಿದಿಲ್ಲವೇ?

105

(ಓ ಪೈಗಂಬರರೇ,) ಅವರೊಡನೆ ಹೇಳಿರಿ, `ನೀವು ಕಾರ್ಯವೆಸಗಿರಿ. ಅಲ್ಲಾಹು ಮತ್ತು ಅವನ ರಸೂಲ್ ಹಾಗೂ ಸತ್ಯವಿಶ್ವಾಸಿಗಳು ನಿಮ್ಮ ಪ್ರವರ್ತಿಯನ್ನು ಕಾಣುವರು. ನಂತರ ನಿಮ್ಮನ್ನು ದೃಶ್ಯಾದೃಶ್ಯಗಳನ್ನು ಬಲ್ಲವನ ಕಡೆಗೆ ಮರಳಿಸಲಾಗುವುದು. ಆಗ ನಿಮ್ಮ (ಇಲ್ಲಿನ) ಪ್ರವರ್ತಿಗಳ ಬಗ್ಗೆ ಆತನು ನಿಮಗೆ ವಿವರ ನೀಡುವನು’ ಎಂದು.

106

ಅಲ್ಲಾಹುವಿನ ಆದೇಶಕ್ಕೆ ಕಾದಿರಿಸಲಾದ ಬೇರೊಂದು ವಿಭಾಗದವರಿದ್ದಾರೆ. ಒಂದೋ ಅಲ್ಲಾಹು ಅವರಿಗೆ ಶಿಕ್ಷೆ ಕೊಡಬಹುದು. ಅಥವಾ ಅವರ ತೌಬಾವನ್ನು ಸ್ವೀಕರಿಸಬಹುದು. ಅಲ್ಲಾಹನು ಸರ್ವಜ್ಞನೂ ಪರಮ ಯುಕ್ತಿವಂತನೂ ಆಗಿರುವನು

107

ಕಪಟಿಗಳಲ್ಲಿ ಒಂದು ವಿಭಾಗದವರು ಸತ್ಯ ವಿಶ್ವಾಸಿಗಳಿಗೆ ಪೀಡನೆ ಕೊಡುವ ಉದ್ದೇಶದಿಂದ ಹಾಗೂ ಸತ್ಯನಿಷೇಧಕ್ಕಾಗಿ ಮತ್ತು ಸತ್ಯ ವಿಶ್ವಾಸಿಗಳ ನಡುವೆ ಬಿಕ್ಕಟ್ಟು ಸೃಷ್ಟಿಸಲು ಹಾಗೂ ಈ ಮೊದಲು ಅಲ್ಲಾಹು ಮತ್ತು ಅವನ ರಸೂಲರ ವಿರುದ್ಧ ಸಮರ ಹೂಡಿದವರಿಗೆ ಅಡಗು ದಾಣವನ್ನು ಒದಗಿಸುವ ಸಲುವಾಗಿ ಒಂದು ಮಸೀದಿಯನ್ನು ನಿರ್ಮಿಸಿದ್ದಾರೆ. ‘ನಾವು ಒಳ್ಳೆಯದ್ದನ್ನಲ್ಲದೆ ಬೇರೇನನ್ನೂ ಬಯಸಲಿಲ್ಲ’ ಎಂದವರು ಪ್ರಮಾಣ ಮಾಡುತ್ತ ಹೇಳುವರು. ಆದರೆ ಅವರು ಸುಳ್ಳುಗಾರರೆಂಬುದಕ್ಕೆ ಅಲ್ಲಾ ಹನು ಸಾಕ್ಷಿಯಾಗಿದ್ದಾನೆ .

108

ತಾವು ಅದರಲ್ಲಿ ಒಮ್ಮೆಯೂ ನಮಾಜು ಮಾಡ ಬಾರದು. ಮೊದಲ ದಿನವೇ ಭಕ್ತಿಯ ಮೇಲೆ ಅಸ್ಥಿವಾರ ಹಾಕಲಾದ ಮಸೀದಿಯೇ ತಾವು ನಮಾಜು ಮಾಡಲು ಯೋಗ್ಯವಾದುದು. ಪರಿಶುದ್ಧತೆಯನ್ನು ಇಷ್ಟಪಡುವ ಪುರುಷರು ಆ ಮಸೀದಿಯಲ್ಲಿದ್ದಾರೆ. ಪರಿಶುದ್ಧರನ್ನು ಅಲ್ಲಾಹನು ಇಷ್ಟಪಡುತ್ತಾನೆ .

109

ತನ್ನ ಕಟ್ಟಡದ ಬುನಾದಿಯನ್ನು ಅಲ್ಲಾಹನ ಭಯ ಮತ್ತು ಅವನ ಸಂಪ್ರೀತಿಯ ಮೇ ಲಿರಿಸಿದವನು ಉತ್ತಮನೋ ಅಥವಾ ತನ್ನ ಕಟ್ಟಡದ ಬುನಾದಿಯನ್ನು ಕುಸಿದು ಬೀಳಲು ಸಿದ್ಧವಾಗಿರುವ ಒಂದು ಅಸ್ಥಿರ ಅಂಚಿನಲ್ಲಿ ಕಟ್ಟಿಸಿದ್ದು ಅದರ ಸಮೇತ ನರಕದ ಅಗ್ನಿಗೆ ಹರಿದು ಬಿದ್ದವನೋ ಯಾರು ಉತ್ತಮನು? ಅಲ್ಲಾಹನು ಅಕ್ರಮಿಗಳಾದ ಜನತೆಗೆ ನೇರ್ಮಾರ್ಗ ಕೊಡುವುದಿಲ್ಲ.

110

ಅವರು ನಿರ್ಮಿಸಿದ ಕಟ್ಟಡವು ಅವರ ಹೃದಯದಲ್ಲಿ ಸದಾ ಸಂದೇಹದ ಮೂಲವಾಗಿ ಉಳಿಯುವುದು. ಅವರ ಹೃದಯಗಳು ಚೂರು ಚೂರಾಗಬೇಕೇ ವಿನಹ (ಅವರಿಗೆ ಪಾರಾಗುವ ಯಾವ ದಾರಿಯೂ ಇಲ್ಲ). ಅಲ್ಲಾಹನು ಸರ್ವಜ್ಞನೂ ಯುಕ್ತಿ ಪÀÇರ್ಣನೂ ಆಗಿರುತ್ತಾನೆ.

111

ನಿಜವಾಗಿಯೂ ಅಲ್ಲಾಹನು ಸತ್ಯವಿಶ್ವಾಸಿ ಗಳಿಂದ ಅವರ ತನು-ಧನಗಳನ್ನು ಸ್ವರ್ಗದ ಬದಲಿಗೆ ಖರೀದಿ ಮಾಡಿರುತ್ತಾನೆ. ಅವರು ಅಲ್ಲಾಹನ ಮಾರ್ಗದಲ್ಲಿ ಹೋರಾಡುತ್ತಾರೆ. ವಧಿಸುತ್ತಾರೆ ಮತ್ತು ವಧಿಸಲ್ಪಡುತ್ತಾರೆ. ತೌರಾತ್, ಇಂಜೀಲ್ ಹಾಗೂ ಖುರ್‍ಆನಿನಲ್ಲಿ ಅಲ್ಲಾಹು ಮಾಡಿದ (ಸ್ವರ್ಗದ) ವಾಗ್ದಾನವು ಅಲ್ಲಾಹನ ಹೊಣೆಯಲ್ಲಿ ದೃಢವಾಗಿಯೇ ಇದೆ. ಅಲ್ಲಾಹನಿಗಿಂತ ಮಿಗಿಲಾಗಿ ವಾಗ್ದಾನ ಪೂರೈ ಸುವವರು ಯಾರಿದ್ದಾರೆ? ಆದುದರಿಂದ ನೀವು ಆತನೊಂದಿಗೆ ಮಾಡಿದ ಈ ವ್ಯವಹಾರಕ್ಕಾಗಿ ಸಂತೋಷಪಡಿರಿ. ಅತ್ಯಂತ ಘನವೆತ್ತ ವಿಜಯ ವೆಂದರೆ ಇದುವೇ.

112

ಅವರು ಅಲ್ಲಾಹನ ಕಡೆಗೆ ಪಶ್ಚಾತ್ತಾಪಪಟು ಮರಳುವವರು, ಅವನ ಆರಾಧನೆ ಮಾಡುವವರು, ಅವನ ಗುಣಗಾನ ಮಾಡುವವರು, ಅವನಿಗಾಗಿ ವ್ರತ ಕೈಗೊಳ್ಳುವವರು, ಅವನಿಗೆ ರುಕೂಅï ಮತ್ತು ಸುಜೂದ್ ಮಾಡುವವರು (ನಮಾಜು ಮಾಡುವವರು), ಒಳಿತಿನ ಆಜ್ಞೆ ನೀಡುವವರು, ಕೆಡುಕನ್ನು ವಿರೋಧಿಸುವವರು ಮತ್ತು ಅಲ್ಲಾಹನ ಮೇರೆಗಳನ್ನು ಪಾಲಿಸುವವರೂ ಆಗಿರುವರು. (ಓ ಪೈಗಂಬರರೇ,) ಸತ್ಯವಿಶ್ವಾಸಿಗಳಿಗೆ ಶುಭ ಸುದ್ದಿ ನೀಡಿರಿ.

113

ಪ್ರವಾದಿಗೂ ಸತ್ಯವಿಶ್ವಾಸಿಗಳಿಗೂ ಮುಶ್ರಿಕರು ನರಕಕ್ಕೆ ಅರ್ಹರೆಂಬ ವಿಷಯ ವ್ಯಕ್ತವಾದ ಬಳಿಕ ಅವರು ಆಪ್ತ ಬಂಧುಗಳೇ ಆಗಿದ್ದರೂ ಅವರ ಕ್ಷಮೆಗಾಗಿ ಪ್ರಾರ್ಥಿಸುವುದು ಅನುವದನೀಯವಲ್ಲ.

114

ಆದರೆ ಇಬ್‍ರಾಹೀಮರು ತನ್ನ ತಂದೆಯವರ ಪರವಾಗಿ ಕ್ಷಮಾಯಾಚನೆ ಮಾಡಿದ್ದು ತಂದೆಯವರೊಂದಿಗೆ ಅವರು ಮಾಡಿದ್ದ ಒಂದು ವಾಗ್ದಾನದ ಕಾರಣದಿಂದಾಗಿತ್ತು. ತಂದೆಯು ಅಲ್ಲಾಹುವಿನ ಶತ್ರುವೆಂದು ಖಚಿತವಾದಾಗ ಅವರು ಆತನಿಂದ ಸಂಬಂಧ ಕಳಚಿಕೊಂಡರು. (ಕ್ಷಮಾಯಾಚನೆ ಬಿಟ್ಟು ಬಿಟ್ಟರು) . ನಿಜವಾಗಿಯೂ ಇಬ್ರಾಹೀಮರು ಬಹಳ ಉದಾರಚಿತ್ತರೂ ಸಂಯಮಿಯೂ ಆಗಿದ್ದರು.

115

ಪಾಲಿಸ ಬೇಕಾದುದನ್ನು ಸ್ಪಷ್ಟಪಡಿಸುವವರೆಗೆ ಅವರನ್ನು ದಾರಿ ತಪ್ಪಿಸುವ ರೂಢಿ ಅಲ್ಲಾಹುವಿಗೆ ಇಲ್ಲ . ನಿಜವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳನ್ನು ಚೆನ್ನಾಗಿ ಬಲ್ಲವನಾಗಿರುತ್ತಾನೆ.

116

ಭೂಮಿ-ಆಕಾಶಗಳ ಪ್ರಭುತ್ವವು ಅಲ್ಲಾಹನದ್ದು. ಅವನು ಬದುಕಿಸುತ್ತಾನೆ, ಸಾಯಿಸುತ್ತಾನೆ. ಅಲ್ಲಾಹನ ಹೊರತು ನಿಮಗೆ ಯಾವುದೇ ರಕ್ಷಕನಾಗಲಿ, ಮಿತ್ರನಾಗಲಿ ಖಂಡಿತ ಇಲ್ಲ.

117

ಅಲ್ಲಾಹನು ಪ್ರವಾದಿಯವರಿಗೂ ಕಷ್ಟ ಕಾಲದಲ್ಲಿ ಅವರಿಗೆ ಅನುಸರಿಸಿದ ಮುಹಾಜಿರ್ ಮತ್ತು ಅನ್ಸಾರರಿಗೂ ಒಲಿದಿರುತ್ತಾನೆ. ಅವರ ಪೈಕಿ ಕೆಲವರ ಹೃದಯಗಳು ಚಂಚಲಗೊಳ್ಳುವಂತಿದ್ದರೂ (ಅವರು ಪ್ರವಾದಿ ಯವರನ್ನು ಅನುಸರಿಸಿದರು). ಆಮೇಲೆ ಅಲ್ಲಾಹನು ಅವರನ್ನು ಕ್ಷಮಿಸಿದನು . ಅಲ್ಲಾಹು ಅವರ ಪಾಲಿಗೆ ಅತ್ಯಧಿಕ ದಯೆಯುಳ್ಳವನೂ ಬಹಳ ಕರುಣೆಯುಳ್ಳವನೂ ಆಗಿರುವನು.

118

ಕ್ಷಮಾಪಣೆ ಮುಂದೂಡಲ್ಪಟ್ಟಿದ್ದ ಆ ಮೂವ ರನ್ನೂ ಅವನು ಕ್ಷಮಿಸಿದನು. ಭೂಮಿಯು ವಿಶಾಲವಾಗಿದ್ದರೂ ಅದು ಅವರ ಪಾಲಿಗೆ ಇಕ್ಕ ಟ್ಟಾಯಿತು. ಅವರ ಮನಸ್ಸುಗಳೇ ಸಂಕುಚಿ ತವಾದವು. ಅಲ್ಲಾಹುವಿನ ಕೋಪದಿಂದ ಪಾರಾಗಲು ಅಲ್ಲಾಹುವಿನ ಕಡೆಗೆ ಶರಣಾಗುವುದಲ್ಲದೆ ಬೇರೆ ದಾರಿಯಿಲ್ಲವೆಂದು ಅವರು ಅರಿತು ಕೊಂಡರು. ಆಗ ಅವರು ತನ್ನ ಕಡೆಗೆ ಖೇದ ಪಟ್ಟು ಮರಳಿಬರಲೆಂದು ಮರುಗುವ ಯೋಗ ವನ್ನು ಅಲ್ಲಾಹನು ಅವರಿಗೆ ಕರುಣಿಸಿದನು. ಖಂಡಿತವಾಗಿಯೂ ಅಲ್ಲಾಹು ತೌಬಾವನ್ನು ಅತ್ಯಂತ ಹೆಚ್ಚು ಸ್ವೀಕರಿಸುವವನೂ , ಪರಮದಯಾಳುವೂ ಆಗಿರುವನು.

119

ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವನ್ನು ಭಯಪಡಿರಿ. ಹಾಗೂ ಸತ್ಯನಿಷ್ಠರ ಜೊತೆ ಕೂಡಿ ಕೊಳ್ಳಿರಿ.

120

ಮದೀನಾದವರು ಹಾಗೂ ಅದರ ಸುತ್ತು ಮುತ್ತಲ ನಿವಾಸಿಗಳಾದ ಹಳ್ಳಿಗರು ಅಲ್ಲಾಹನ ರಸೂಲರನ್ನು ತೊರೆದು ನಿಲ್ಲುವ ಹಾಗೂ ರಸೂಲರ ಜೀವಕ್ಕಿಂತ ತಮ್ಮ ಜೀವದಲ್ಲಿ ಆಗ್ರಹ ಹೊಂದಲು ಯಾವತ್ತೂ ನ್ಯಾಯವಿಲ್ಲ. ಇದು ಯಾಕೆಂದರೆ ಅಲ್ಲಾಹುವಿನ ಮಾರ್ಗದಲ್ಲವರು ಅನುಭವಿಸುವ ದಾಹ, ಕ್ಲೇಶ, ಹಸಿವು ಹಾಗೂ ಸತ್ಯನಿಷೇಧಿಗಳಿಗೆ ದೋಷವುಂಟಾಗುವ ವಿಧ ದಲ್ಲಿ ಯಾವುದೇ ನೆಲದಲ್ಲಿ ಅವರಿಡುವ ಹೆಜ್ಜೆ, ಯಾವುದೇ ಶತ್ರುವಿ ನಿಂದ ಅವರು ಅನುಭ ವಿಸುವ ತೊಂದರೆ ಅವರ ಪಾಲಿಗೆ ಸುಕೃತವಾಗಿ ದಾಖಲಾಗುತ್ತದೆ. ನಿಜ ವಾಗಿಯೂ ಅಲ್ಲಾಹನು ಸುಕೃತರ ಪುಣ್ಯಫಲವನ್ನು ಯಾವತ್ತೂ ವಿಫಲಗೊಳಿಸಲಾರನು .

121

ಅವರು ಯಾವುದೇ ಸಣ್ಣ ಪುಟ್ಟ ಅಥವಾ ದೊಡ್ಡ ದಾದ ವೆಚ್ಚ ಮಾಡಿದರೂ (ನೀಡುವ ಎಷ್ಟೇ ಕನಿಷ್ಠ-ಗರಿಷ್ಠ ಸಂಭಾವನೆಗಳಿರಲಿ) ಯಾವುದೇ ಪರ್ವತ ಕಣಿವೆಯನ್ನು ನಡೆದು ದಾಟಿದರೂ ಅವರಿಗಾಗಿ ಅದನ್ನೆಲ್ಲ ಬರೆಯದೆ ಇರುವುದಿಲ್ಲ. ಅವರು ಮಾಡುವ ಸುಕೃತಗಳಿಗೆ ಅತ್ಯಂತ ಶ್ರೇಷ್ಠ ಮಟ್ಟದಲ್ಲಿ ಅಲ್ಲಾಹು ಪ್ರತಿಫಲ ನೀಡುವಸಲುವಾಗಿ.

122

ಸತ್ಯವಿಶ್ವಾಸಿಗಳು ಸರ್ವರೂ ಯುದ್ಧಕ್ಕೆ ಹೋಗ ಬೇಕಾಗಿಲ್ಲ. ಅವರ ಪೈಕಿ ಪ್ರತಿಯೊಂದು ವರ್ಗದವರಿಂದ ಒಂದೊಂದು ವಿಭಾಗ ಮಾತ್ರ ಯಾಕೆ ಹೋಗಬಾರದು? ಉಳಿದವರು ಧರ್ಮಜ್ಞಾನ ಕಲಿತುಕೊಂಡು ಯುದ್ಧದಿಂದ ವಾಪಾಸು ಬಂದ ವರಿಗೆ ಎಚ್ಚರಿಕೆ ನೀಡುವ ಸಲುವಾಗಿ, ತನ್ಮೂಲಕ ಅವರು ಜಾಗ್ರತೆ ಪಾಲಿಸಲಿಕ್ಕಾಗಿ.

123

ಓ ಸತ್ಯವಿಶ್ವಾಸಿಗಳೇ, ನಿಮ್ಮ ಸ್ವಂತದವರಾದ ಸತ್ಯನಿಷೇಧಿಗಳೊಂದಿಗೆ ಯುದ್ಧ ಮಾಡಿರಿ. ಅವರು ನಿಮ್ಮಲ್ಲಿ ಕಾಠಿಣ್ಯವನ್ನು ಕಾಣಬೇಕು. ಅಲ್ಲಾಹು ಸೂಕ್ಷ್ಮತೆ ಪಾಲಿಸುವವರ ಜೊತೆಗೆ ಇದ್ದಾನೆಂಬುದನ್ನು ತಿಳಿದುಕೊಳ್ಳಿರಿ.

124

ಒಂದು ಹೊಸ ಅಧ್ಯಾಯ ಅವತೀರ್ಣಗೊಳ್ಳು ವಾಗ ಅವರಲ್ಲಿ ಕೆಲವರು ಕೇಳುವರು; ಇದು ನಿಮ್ಮ ಪೈಕಿ ಯಾರ ವಿಶ್ವಾಸವನ್ನು ಹೆಚ್ಚಿಸಿತು? ಎಂದು. ಆದರೆ ಸತ್ಯವಿಶ್ವಾಸಿಗಳಿಗಂತೂ, ಅದವರ ವಿಶ್ವಾಸವನ್ನೇ ಹೆಚ್ಚಿಸಿತು. ಮತ್ತು ಅವರು ಅದರಿಂದ ಸಂತುಷ್ಟರಾಗಿದ್ದಾರೆ.

125

ಆದರೆ ಹೃದಯಗಳಲ್ಲಿ ರೋಗವಿದ್ದವರು, ಅವರ ಹಿಂದಿನ ಮಾಲಿನ್ಯದ ಮೇಲೆ ಇನ್ನೊಂದು ಮಾಲಿನ್ಯವನ್ನು ವೃದ್ಧಿಸಿತು ಮತ್ತು ಅವರು ಸತ್ಯನಿಷೇಧಿಗಳಾಗಿಯೇ ಸತ್ತು ಹೋದರು.

126

ಇವರನ್ನು ಪ್ರತಿವರ್ಷವೂ ಒಂದೆರಡು ಸಲ ಪರೀಕ್ಷೆಗೆ ಗುರಿಪಡಿಸಲಾಗುತ್ತಿರುವುದನ್ನು ಇವರು ಕಾಣುವುದಿಲ್ಲವೇ? ಆದರೆ ಇಷ್ಟಾಗಿಯೂ ಅವರು ಪಶ್ಚಾತ್ತಾಪಪಡುವುದೂ ಇಲ್ಲ. ಪಾಠ ಕಲಿಯುವುದೂ ಇಲ್ಲ.

127

ಯಾವುದಾದರೂ ಅಧ್ಯಾಯ ಅವತೀರ್ಣಗೊಳ್ಳು ವಾಗ ನಿಮ್ಮನ್ನಾರಾದರೂ ನೋಡುತ್ತಿಲ್ಲವಷ್ಟೇ ಎಂದು ಇವರು (ಪರಸ್ಪರ ಕಣ್ಣುಸನ್ನೆಗಳಿಂದಲೇ ಕೇಳುತ್ತ) ಪರಸ್ಪರ ನೋಡುವರು. ಅನಂತರ ತಿರುಗಿ ಹೋಗುವರು. ಅಲ್ಲಾಹನು ಇವರ ಹೃದಯಗಳನ್ನು (ಸತ್ಯದಿಂದ) ತಿರುಗಿಸಿ ಬಿಟ್ಟಿರು ತ್ತಾನೆ. ಏಕೆಂದರೆ ಇವರು ಏನನ್ನೂ ಗ್ರಹಿಸಿ ಕೊಳ್ಳದ ಜನಾಂಗ.

128

ನಿಮ್ಮ ಬಳಿಗೆ ನಿಮ್ಮ ಸ್ವಂತದಿಂದಲೇ ಇರುವ ಓರ್ವ ದೂತರು ಬಂದಿರುತ್ತಾರೆ. ಅವರು ನಿಮ್ಮ ಕಷ್ಟಕ್ಕೆ ಬಹಳ ನೊಂದುಕೊಳ್ಳುವವರು ಮತ್ತು ನಿಮ್ಮ ಸತ್ಪಥ ಪ್ರಾಪ್ತಿಗೆ ಹಂಬಲಿಸುವವರು. ಅವರು ಸತ್ಯವಿಶ್ವಾಸಿಗಳಿಗೆ ವತ್ಸಲರೂ ಕರುಣಾಳುವೂ ಆಗಿರುತ್ತಾರೆ.

129

(ಓ ಪೈಗಂಬರರೇ,) ಇನ್ನವರು ನಿಮ್ಮಿಂದ ವಿಮು ಖರಾಗುತ್ತಾರಾದರೆ ಇವರೊಡನೆ ಹೀಗೆ ಹೇಳಿಬಿಡಿರಿ. ನನಗೆ ಅಲ್ಲಾಹನೇ ಸಾಕು. ಅವನ ಹೊರತು ಅನ್ಯ ಆರಾಧ್ಯನಿಲ್ಲ. ನಾನು ಅವನ ಮೇಲೆಯೇ ಭರವಸೆಯನ್ನಿರಿಸಿದ್ದೇನೆ ಮತ್ತು ಅವನು ಘನವೆತ್ತ ಅರ್ಶ್‍ನ ಪ್ರಭುವು.