All Islam Directory
1

(ನಬಿಯೇ) ಅವರು ನಿಮ್ಮೊಡನೆ ಯುದ್ಧಾಸ್ತಿಯ ಕುರಿತು ಪ್ರಶ್ನಿಸುತ್ತಾರೆ. ಹೇಳಿರಿ; ಯುದ್ಧಾಸ್ತಿಯು ಅಲ್ಲಾಹು ಮತ್ತು ಅವನ ರಸೂಲರದ್ದು. ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಪರಸ್ಪರ ಸಂಬಂಧಗಳನ್ನು ಸರಿಪಡಿಸಿರಿ. ನೀವು ವಿಶ್ವಾಸಿಗಳಾಗಿದ್ದರೆ ಅಲ್ಲಾಹು ಹಾಗೂ ಅವನ ರಸೂಲರನ್ನು ಅನುಸರಿಸಿರಿ.

2

ನಿಜವಾಗಿಯೂ ಸತ್ಯವಿಶ್ವಾಸಿಗಳು ಯಾರೆಂದರೆ ಅಲ್ಲಾಹನ ಬಗ್ಗೆ ಪ್ರಸ್ತಾಪಿಸಲಾದರೆ ಅವರ ಹೃದಯ ನಡುಗುವುದು. ಅವರ ಮುಂದೆ ಅಲ್ಲಾಹನ ನಿದರ್ಶನಗಳನ್ನು ಓದಲ್ಪಟ್ಟಾಗ ಅದು ಅವರ ವಿಶ್ವಾಸವನ್ನು ವೃದ್ಧಿಗೊಳಿಸುವುದು ಮತ್ತು ಅವರು ತಮ್ಮ ಪ್ರಭುವಿನ ಮೇಲೆ ಭರವಸೆಯಿಡುವವರು.

3

ಅವರು ನಮಾಝನ್ನು ಸಂಸ್ಥಾಪಿಸುವವರು ಮತ್ತು ನಾವು ಅವರಿಗೆ ನೀಡಿದುದರಿಂದ ಖರ್ಚು ಮಾಡುವವರು.

4

ಇಂಥವರೇ ನಿಜವಾದ ಸತ್ಯವಿಶ್ವಾಸಿಗಳು. ಅವರಿಗಾಗಿ ಅವರ ಪ್ರಭುವಿನ ಬಳಿ ಉನ್ನತ ಸ್ಥಾನಗಳಿವೆ. ಪಾಪ ಮುಕ್ತಿಯೂ ಅತ್ಯುತ್ತಮ ಜೀವನಾನುಕೂಲವೂ ಇದೆ.

5

ನಿಮ್ಮ ಪ್ರಭು ನಿಮ್ಮನ್ನು ನಿಮ್ಮ ನಿವಾಸದಿಂದ ನ್ಯಾಯೋಚಿತವಾಗಿ ಹೊರ ತಂದಿದ್ದನು. ವಿಶ್ವಾಸಿಗಳ ಪೈಕಿ ಒಂದು ಪಂಗಡಕ್ಕೆ ಇದು ಅಪ್ರಿಯವಾಗಿತ್ತು.

6

ಆ ನ್ಯಾಯವು ಸ್ಪಷ್ಟವಾಗಿದ್ದೂ ಕೂಡ ಅವರು ಅದರ ಔಚಿತ್ಯದ ಕುರಿತು ನಿಮ್ಮೊಂದಿಗೆ ತರ್ಕಿಸುತ್ತಿದ್ದರು. ಅವರನ್ನು ನೋಡುತ್ತಿದ್ದಂತೆಯೇ ಮರಣಕ್ಕೆ ಎಳೆದೊಯ್ಯುತ್ತಿರುವಂತಾಗಿದ್ದರು.

7

ಎರಡು ತಂಡಗಳ ಪೈಕಿ ಒಂದು ನಿಮಗೆ ಸಿಗು ವುದೆಂದು ಅಲ್ಲಾಹು ನಿಮಗೆ ವಾಗ್ದಾನ ಮಾಡು ತ್ತಿದ್ದ ಸಂದರ್ಭವನ್ನು ಸ್ಮರಿಸಿರಿ. ನಿರಾಯುಧ ತಂಡವು ನಿಮಗೆ ಸಿಗಬೇಕೆಂದು ನೀವು ಇಚ್ಛಿಸುತ್ತಿದ್ದಿರಿ. ಆದರೆ ಅಲ್ಲಾಹು ಇಚ್ಛಿಸಿದ್ದು ತನ್ನ ಪೂರ್ವವಚನಗಳಿಂದ ಸತ್ಯವಾದುದನ್ನು ನಿಜ ಮಾಡಿ ತೋರಿಸಬೇಕೆಂದೂ ಸತ್ಯನಿಷೇಧಿಗಳ ಬುಡವನ್ನೇ ಕಿತ್ತು ಹಾಕಬೇಕೆಂದೂ ಆಗಿತ್ತು .

8

ಇದು ಅಪರಾಧಿಗಳಿಗೆ ಎಷ್ಟೇ ಅಪ್ರಿಯವಾಗಿದ್ದರೂ ಸತ್ಯವನ್ನು ಸತ್ಯಗೊಳಿಸಲಿಕ್ಕೂ ಮಿಥ್ಯವನ್ನು ಮಿಥ್ಯಗೊಳಿಸಲಿಕ್ಕೂ ಆಗಿತ್ತು.

9

ನೀವು ನಿಮ್ಮ ಪ್ರಭುವಿನೊಡನೆ ಸಹಾಯ ಬೇಡುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ. ನಾನು ಒಂದು ಸಾವಿರ ದೇವಚರರನ್ನು ಸರದಿ ಪ್ರಕಾರ ಕಳುಹಿಸಿ ಕೊಟ್ಟು ನಿಮಗೆ ಸಹಾಯ ಮಾಡುತ್ತೇನೆಂದು ಅವನು ಉತ್ತರಿಸಿದನು.

10

ಈ ವ್ಯವಸ್ಥೆಯನ್ನು ಮಾಡಿದ್ದು ನಿಮಗೆ ಸುವಾರ್ತೆಗೆ ಹಾಗೂ ಅದರಿಂದ ನಿಮ್ಮ ಮನಸ್ಸಿನ ಶಾಂತಿಗೆ ಮಾತ್ರವಾಗಿತ್ತು. ನಿಜದಲ್ಲಿ ಸಹಾಯವು ಅಲ್ಲಾಹನನಿಂದಲ್ಲದೆ ಬೇರಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಮಹಾ ಪ್ರತಾಪಿಯೂ ಪರಮ ಧೀಮಂತನೂ ಆಗಿರುತ್ತಾನೆ.

11

ಅಲ್ಲಾಹನು ತನ್ನ ಕಡೆಯಿಂದ ನಿಮ್ಮ ನಿರ್ಭ ಯತೆಗಾಗಿ ನಿದ್ರಾ ಮಂಪರನ್ನು ಆವರಣಗೊಳಿಸಿದ್ದ ಹಾಗೂ ನಿಮ್ಮ ಶುಚೀಕರಣ ಮತ್ತು ಶೈತಾನನ ಮಾಲಿನ್ಯವನ್ನು ನಿಮ್ಮಿಂದ ನಿವಾರಿಸಲು ಮತ್ತು ನಿಮ್ಮ ಹೃದಯಗಳಲ್ಲಿ ಧೈರ್ಯ ತುಂಬಲಿಕ್ಕೂ ತನ್ಮೂಲಕ ನಿಮ್ಮ ಪಾದಗಳನ್ನು ನೆಲೆಯೂರಿಸಲಿಕ್ಕೂ ಆಕಾಶದಿಂದ ನಿಮ್ಮ ಮೇಲೆ ಮಳೆ ಸುರಿಸುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ .

12

ನಿಮ್ಮ ಪ್ರಭು ದೇವಚರರಿಗೆ, ನಾನು ನಿಮ್ಮೊಂದಿಗೆ ಇದ್ದೇನೆ. ಆದ್ದರಿಂದ ನೀವು ಸತ್ಯವಿಶ್ವಾಸಿಗಳನ್ನು ಸುಸ್ಥಿರಗೊಳಿಸಿರಿ. ಸತ್ಯನಿಷೇಧಿಗಳ ಹೃದಯ ಗಳಲ್ಲಿ ಭೀತಿಯನ್ನು ಹುಟ್ಟಿಸಲಿದ್ದೇನೆ. ನೀವು ಅವರ ಶಿರಚ್ಛೇದನ ಮಾಡಿರಿ ಮತ್ತು ಅವರ ಕೈಕಾಲುಗಳ ಬೆರಳುಗಳನ್ನು ಕತ್ತರಿಸಿರಿ ಎಂದು ಸೂಚನೆ ಕೊಡುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ.

13

ಇದು ಅಲ್ಲಾಹ್ ಮತ್ತು ಅವನ ಸಂದೇಶವಾ ಹಕರಿಗೆ ಅವರು ಎದುರಾದುದರಿಂದ, ಅಲ್ಲಾಹು ಮತ್ತು ಅವನ ಸಂದೇಶವಾಹಕನನ್ನು ವಿರೋಧಿಸಿದವನನ್ನು ಅಲ್ಲಾಹು ಅತ್ಯಂತ ಕಠಿಣವಾಗಿ ದಂಡಿಸುವವನಾಗಿರುತ್ತಾನೆ.

14

ಇದು ನಿಮಗಿರುವ ಶಿಕ್ಷೆ. ಇದನ್ನು ಸವಿಯಿರಿ. ಸತ್ಯನಿಷೇಧಿಗಳಿಗೆ ನರಕದ ಶಿಕ್ಷೆ ಇದೆ (ಯೆಂಬುದು ನಿಮಗೆ ತಿಳಿದಿರಲಿ.)

15

ಓ ಸತ್ಯವಿಶ್ವಾಸಿಗಳೇ, ಸತ್ಯನಿಷೇಧಿಗಳು ಯುದ್ಧ ಸನ್ನಾಹರಾಗಿ ಜಮಾವಣೆಗೊಂಡ ಸ್ಥಿತಿಯಲ್ಲಿ ಎದುರುಗೊಂಡರೆ ಅವರಿಂದ ಹಿಮ್ಮೆಟ್ಟಬೇಡಿರಿ.

16

ಯುದ್ಧ ತಂತ್ರಕ್ಕಾಗಿ ಅಥವಾ (ಸ್ವಂತ) ಸೈನ್ಯ ದೊಂದಿಗೆ ಹೋಗಿ ಸೇರಿಕೊಳ್ಳಲಿಕ್ಕಾಗಿ ಹೊರತು ಯಾರಾದರೂ (ಶತ್ರುಗಳ ಎದುರಿನಿಂದ) ಹಿಮ್ಮೆಟ್ಟಿದರೆ ಅವನು ಅಲ್ಲಾಹನ ಕ್ರೋಧದೊಂದಿಗೆ ಮರಳಿದನು. ಅವನ ವಾಸಸ್ಥಾನವು ನರಕವಾಗಿ ರುವುದು. ಅದು ಹಿಂತೆರಳುವ ಅತಿ ನಿಕೃಷ್ಟ ತಾಣ.

17

ನೀವು ಅವರನ್ನು ವಧಿಸಲಿಲ್ಲ. ನಿಜವಾಗಿ ಅವರನ್ನು ವಧಿಸಿದ್ದು ಅಲ್ಲಾಹು (ಓ ಪೈಗಂಬರರೇ,) ನೀವು ಎಸೆದಾಗ ನಿಜದಲ್ಲಿ ಎಸೆದದ್ದು ನೀವಲ್ಲ. ನಿಜವಾಗಿ ಅಲ್ಲಾಹನು ಎಸೆದನು. ಇದು ಅಲ್ಲಾಹು ತನ್ನ ಕಡೆಯಿಂದ ಸತ್ಯವಿಶ್ವಾಸಿಗಳನ್ನು ಒಂದು ಅತ್ಯುತ್ತಮ ಪರೀಕ್ಷೆಯಿಂದ ಪರೀಕ್ಷಿಸಲಿಕ್ಕಾಗಿತ್ತು. ನಿಶ್ಚಯವಾಗಿಯೂ ಅಲ್ಲಾಹು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.

18

ಈ ಪರೀಕ್ಷೆಯು ನಿಶ್ಚಯವಾಗಿಯೂ ಸತ್ಯ. ಅಲ್ಲಾಹನು ಸತ್ಯನಿಷೇಧಿಗಳ ಕುತಂತ್ರಗಳನ್ನು ದುರ್ಬಲಗೊಳಿಸುವವನಾಗಿರುವನು.

19

(ಸತ್ಯನಿಷೇಧಿಗಳೇ) ನೀವು ಬಯಸುತ್ತೀರಾದರೆ, ಇದೋ ಸತ್ಯಕ್ಕೆ ವಿಜಯ ಬಂದು ಬಿಟ್ಟಿದೆ. ಇನ್ನಾದರೂ (ಸತ್ಯನಿಷೇಧವನ್ನು) ತೊರೆದರೆ ನಿಮಗೇ ಒಳಿತು. ಮುಂದೆ ಇದನ್ನೇ ಪುನರಾ ವರ್ತಿಸಿದರೆ ನಾವೂ ಇದೇ ಶಿಕ್ಷೆಯನ್ನು ಪುನರಾ ವರ್ತಿಸುವೆವು. ನಿಮ್ಮ ಜನಬಲವು ಅದೆಷ್ಟೇ ದೊಡ್ಡದಿದ್ದರೂ ನಿಮಗೇನೂ ಪ್ರಯೋಜ ನವಾಗದು. ಅಲ್ಲಾಹು ಸತ್ಯವಿಶ್ವಾಸಿಗಳೊಂದಿಗೆ ಇದ್ದಾನೆ .

20

ಓ ಸತ್ಯವಿಶ್ವಾಸಿಗಳೇ, ಅಲ್ಲಾಹು ಮತ್ತು ಅವನ ರಸೂಲರನ್ನು ಅನುಸರಿಸಿರಿ. ನೀವು (ಸತ್ಯ ಸಂದೇಶವನ್ನು) ಕೇಳುತ್ತ ಅವರಿಂದ ವಿಮುಖ ರಾಗಬೇಡಿರಿ.

21

ಆಲಿಸದೆಯೇ ನಾವು ಆಲಿಸಿದೆವು ಎನ್ನುವವರಂತೆ ನೀವಾಗಬೇಡಿರಿ.

22

ಯೋಚಿಸಿ ಅರ್ಥ ಮಾಡಿಕೊಳ್ಳದ ಕಿವುಡ, ಮೂಕ ಜನರೇ ಅಲ್ಲಾಹನ ಬಳಿ ಅತ್ಯಂತ ಕೀಳ್ತರದ ಜಂತುಗಳು.

23

ಅವರಲ್ಲಿ ಕಿಂಚಿತ್ತಾದರೂ ಒಳಿತಿದೆಯೆಂದು ಅಲ್ಲಾಹು ತಿಳಿಯುತ್ತಿದ್ದರೆ ನಿಶ್ಚಯವಾಗಿಯೂ ಅವನು ಅವರಿಗೆ (ಗ್ರಹಿಸುವಂತೆ) ಕೇಳಿಸು ತ್ತಿದ್ದನು. ಅವನು ಅವರಿಗೆ ಕೇಳಿಸುತ್ತಿದ್ದರೂ ಅವರು ಅವಗಣಿಸಿ ತಿರುಗಿ ಬಿಡುತ್ತಿದ್ದರು.

24

ಓ ಸತ್ಯವಿಶ್ವಾಸಿಗಳೇ, ನಿಮಗೆ ಚಿರಂಜೀವ ನೀಡುವಂಥ ವಿಷಯದ ಕಡೆಗೆ ಅಲ್ಲಾಹು ಮತ್ತು ರಸೂಲರು ನಿಮ್ಮನ್ನು ಕರೆದಾಗ ಓಗೊಡಿರಿ. ಅಲ್ಲಾಹು ಮನುಷ್ಯನ ಮತ್ತು ಅವನ ಹೃದಯದ ನಡುವೆ ಮರೆ ಇಡುವನೆಂದೂ ನೀವು ಅವನ ಕಡೆಗೆ ಒಟ್ಟುಗೂಡಿಸಲ್ಪಡುವಿರೆಂದೂ ಅರಿತು ಕೊಳ್ಳಿರಿ.

25

ಯಾವ ಶಿಕ್ಷೆಯು ನಿಮ್ಮ ಪೈಕಿ ಅಕ್ರಮವೆಸಗಿ ದವರಿಗೆ ಮಾತ್ರ ಸೀಮಿತವಾಗಿರಲಾರದೋ ಆ ಪರೀಕ್ಷೆಯನ್ನು ಭಯಪಡಿರಿ. ಅಲ್ಲಾಹು ಉಗ್ರದಂಡಕನೆಂಬುದು ನಿಮಗೆ ತಿಳಿದಿರಲಿ .

26

ನೀವು ಅಲ್ಪ ಸಂಖ್ಯಾತರಾಗಿದ್ದು ಭೂಮಿಯಲ್ಲಿ ನಿಮ್ಮನ್ನು ಬಲಹೀನರೆಂದು ಪರಿಗಣಿಸಲ್ಪಡುತ್ತಿದ್ದ ಸಂದರ್ಭವನ್ನು ಜ್ಞಾಪಿಸಿರಿ. ಜನರು ನಿಮ್ಮನ್ನು ಎಗರಿಸಿ ಬಿಡುತ್ತಾರೆಂದು ಹೆದರುತ್ತಲಿದ್ದೀರಿ. ಅನಂತರ ಅಲ್ಲಾಹನು ನಿಮಗೆ ಆಶ್ರಯವನ್ನು ಒದಗಿಸಿದನು. ತನ್ನ ಸಹಾಯದಿಂದ ನಿಮ್ಮನ್ನು ಬಲಪಡಿಸಿದನು ಮತ್ತು ನಿಮಗೆ ಉತ್ತಮ ಜೀವನಾನುಕೂಲ ಒದಗಿಸಿದನು. ನೀವು ಕೃತಜ್ಞರಾಗಬಹುದೆಂದು.

27

ಓ ಸತ್ಯವಿಶ್ವಾಸಿಗಳೇ, ಅಲ್ಲಾಹು ಮತ್ತು ರಸೂಲರನ್ನು ವಂಚಿಸಬೇಡಿರಿ ಮತ್ತು ನಿಮ್ಮ ಅಮಾನತ್ತುಗಳಲ್ಲಿ ತಿಳಿದುಕೊಂಡೇ ವಿದ್ರೋಹ ವೆಸಗಬೇಡಿರಿ .

28

ನಿಮ್ಮ ಸೊತ್ತುಗಳು ಮತ್ತು ನಿಮ್ಮ ಸಂತತಿಗಳು ಪರೀಕ್ಷಾಸಾಧನಗಳೆಂದೂ ಘನವೆತ್ತ ಪ್ರತಿಫಲವು ಅಲ್ಲಾಹನ ಬಳಿಯೆಂದೂ ತಿಳಿದುಕೊಳ್ಳಿರಿ.

29

ಓ ಸತ್ಯವಿಶ್ವಾಸಿಗಳೇ, ನೀವು ದೇವಭಯ ವನ್ನಿರಿಸಿಕೊಂಡರೆ ಅಲ್ಲಾಹು ನಿಮಗೊಂದು ವಿವೇಚನೆಯ ಮಾರ್ಗವನ್ನು ಒದಗಿಸುವನು. ನಿಮ್ಮ ದೋಷಗಳನ್ನು ನಿಮ್ಮಿಂದ ಪರಿಹರಿ ಸುವನು. ಮತ್ತು ನಿಮಗೆ ಕ್ಷಮಿಸುವನು. ಅಲ್ಲಾ ಹನು ಪರಮಗಣ್ಯ ಪರಮೋಧಾರಿ.

30

ಸತ್ಯನಿಷೇಧಿಗಳು ನಿಮ್ಮನ್ನು ಸೆರೆಹಿಡಿಯಲಿಕ್ಕೆ ಅಥವಾ ವಧಿಸಲಿಕ್ಕೆ ಅಥವಾ ಹೊರಹಾಕಲಿಕ್ಕೆ ಗೂಢಾಲೋಚನೆ ನಡೆಸುತ್ತಿದ್ದ ಸಂದರ್ಭವೂ ಸ್ಮರಣೀಯವಾಗಿದೆ . ಅವರು ತಮ್ಮ ಕುತಂತ್ರ ಗಳನ್ನು ಹೂಡುತ್ತಿದ್ದರು. ಅಲ್ಲಾಹು ಪ್ರತಿತಂತ್ರ ಹೂಡುತ್ತಿದ್ದನು ಪ್ರತಿತಂತ್ರದಲ್ಲಿ ಅಲ್ಲಾಹನು ಪರಮ ನಿಪುಣನು.

31

ಅವರಿಗೆ ನಮ್ಮ ವಚನಗಳನ್ನು ಓದಿ ಕೇಳಿಸಿ ದಾಗ ಅವರು, ಹೌದು ನಾವು ಕೇಳಿದೆವು. ನಾವು ಇಚ್ಛಿಸಿದರೆ ಇದೇ ರೀತಿ ನಾವೂ ಸೃಷ್ಟಿಸಿ ಹೇಳ ಬಲ್ಲೆವು. ಇವು ಪೂರ್ವಿಕರ ಕಟ್ಟುಕಥೆಗಳಲ್ಲದೆ ಇನ್ನೇನೂ ಅಲ್ಲ ಎನ್ನುತ್ತಿದ್ದರು .

32

ಓ ಅಲ್ಲಾಹ್, ಇದು ನಿಜವಾಗಿಯೂ ನಿನ್ನ ಕಡೆ ಯಿಂದ ಬಂದ ಸತ್ಯವಾಗಿದ್ದರೆ ನಮ್ಮ ಮೇಲೆ ಆಕಾಶದಿಂದ ಕಲ್ಲಿನ ಮಳೆಗರೆಸು ಅಥವಾ ನಮಗೆ ಇನ್ನಾವುದೇ ವೇದನಾತ್ಮಕ ಶಿಕ್ಷೆಯನ್ನು ತಾ ಎಂದು ಅವರು (ಅವಿಶ್ವಾಸಿಗಳು) ಹೇಳಿದ್ದ ಮಾತೂ ಜ್ಞಾಪಕದಲ್ಲಿದೆ.

33

ನೀವು ಅವರಲ್ಲಿ ಇರುವಾಗ ಅಲ್ಲಾಹು ಅವರನ್ನು ಶಿಕ್ಷಿಸಲಾರ. ಅವರು ಕ್ಷಮಾಯಾಚನೆ ಮಾಡುತ್ತಿರುವಾಗಲೂ ಅಲ್ಲಾಹು ಅವರನ್ನು ಶಿಕ್ಷಿಸಲಾರ.

34

ಮಸ್ಜಿದುಲ್ ಹರಾಮ್'ನ ದಾರಿಯನ್ನು ಜನರಿಗೆ ತಡೆಯುತ್ತಿರುವ ಇವರನ್ನು ಅಲ್ಲಾಹು ಶಿಕ್ಷೆಗೊಳಪಡಿಸದಿರಲು ಕಾರಣವಿಲ್ಲ. ವಸ್ತುತಃ ಅವರು ಆ ಮಸ್ಜಿದ್‍ನ ಅರ್ಹ ಉಸ್ತುವಾರಿದಾ ರರಲ್ಲ. ಅದರ ಅರ್ಹ ಉಸ್ತುವಾರಿದಾರರು ಧರ್ಮನಿಷ್ಠರು ಮಾತ್ರವೇ ಆಗಬಲ್ಲರು. ಆದರೆ ಹೆಚ್ಚಿನವರು ಇದನ್ನು ತಿಳಿದು ಕೊಳ್ಳುವುದಿಲ್ಲ.

35

ಕಅïಬಾ ಭವನದ ಬಳಿ ಅವರ ಪ್ರಾರ್ಥನೆ ಕೇವಲ ಸಿಳ್ಳು ಹೊಡೆಯುವುದು, ಚಪ್ಪಾಳೆ ಹೊಡೆಯು ವುದು ಹೊರತು ಇನ್ನೇನೂ ಆಗಿರಲಿಲ್ಲ. ಆದುದರಿಂದ ಇದೋ ನೀವು ಸತ್ಯವನ್ನು ನಿಷೇಧಿಸಿದುದರ ಫಲವಾಗಿ ಶಿಕ್ಷೆಯನ್ನು ಸವಿಯಿರಿ.

36

ಸತ್ಯನಿಷೇಧಿಗಳು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯಲಿಕ್ಕಾಗಿ ತಮ್ಮ ಸಂಪತ್ತನ್ನು ವಿನಿಯೋಗಿಸುತ್ತಾರೆ. ಇನ್ನೂ ವಿನಿಯೋಗಿಸಲಿದ್ದಾರೆ. ಕೊನೆಗೆ ಅದು ಅವರಿಗೆ ವಿಷಾದಕ್ಕೆ ಕಾರಣವಾಗುವುದು. ಅನಂತರ ಅವರು ಪರಾಜಿತರಾಗುವರು. ಸತ್ಯನಿಷೇಧಿಗಳು ನರಕದ ಕಡೆಗೆ ಅಟ್ಟಲ್ಪಡುವರು.

37

ಇದು ಅಲ್ಲಾಹು ಮಾಲಿನ್ಯವನ್ನು ನೈರ್ಮಲ್ಯದಿಂದ ಬೇರ್ಪಡಿಸಲೂ ಎಲ್ಲಾ ವಿಧದ ಮಾಲಿನ್ಯಗಳನ್ನು ಪೇರಿಸಿಟ್ಟು ರಾಶಿ ಮಾಡಿ ನರಕಕ್ಕೆ ತಳ್ಳಿ ಬಿಡಲೂ ಆಗಿರುತ್ತದೆ. ನಿಜವಾಗಿ ನಷ್ಟ ಹೊಂದಿದವರು ಇವರೇ.

38

(ಓ ಪೈಗಂಬರರೇ,) ಈ ಸತ್ಯನಿಷೇಧಿಗಳಿಗೆ ಹೇಳಿರಿ:- ಅವರು (ವೈರತ್ವದಿಂದ) ವಿರಮಿಸಿದರೆ ಅವರಿಂದ ಕಳೆದು ಹೋದ ಪಾಪಗಳನ್ನು ಕ್ಷಮಿಸಿ ಬಿಡಲಾಗುವುದು. ಆದರೆ ಇವರು ಹಿಂ ದಿನ ಅವಸ್ಥೆಗೆ ಮರಳಿದರೆ ಪೂರ್ವಿಕರ ಮೇಲಿನ ನಮ್ಮ ಕಾರ್ಯಾಚರಣೆ ಗತಿಸಿ ಹೋಗಿದೆ ತಾನೇ?

39

ಓ ಸತ್ಯವಿಶ್ವಾಸಿಗಳೇ, ಕ್ಷೋಭೆ ಅಳಿದು ಹೋಗು ವವರೆಗೂ ಧರ್ಮವು ಸಂಪೂರ್ಣವಾಗಿ ಅಲ್ಲಾಹನಿ ಗಾಗಿ ಆಗುವವರೆಗೂ ಸತ್ಯನಿಷೇಧಿಗಳ ವಿರುದ್ಧ ಹೋರಾಡಿರಿ. ಇನ್ನು ಅವರು ವಿರಮಿಸಿದರೆ ಅಲ್ಲಾಹು ಅವರ ಕರ್ಮಗಳನ್ನು ವೀಕ್ಷಿಸುವವ ನಾಗಿರುತ್ತಾನೆ .

40

ಅವರು (ಸತ್ಯದಿಂದ) ಹಿಂಜರಿದರೆ ಅಲ್ಲಾಹು ನಿಮ್ಮ ಸಂರಕ್ಷಕನೆಂದೂ ಅವನು ಅತ್ಯಂತ ಶ್ರೇಷ್ಟ ರಕ್ಷಕನೂ ಸಹಾಯಕನೂ ಆಗಿರುತ್ತಾನೆಂದೂ ತಿಳಿದುಕೊಳ್ಳಿರಿ .

41

ತಿಳಿಯಿರಿ! ನೀವು ಗಳಿಸಿದ ಸಮರಾರ್ಜಿತ ಸೊತ್ತಿನ ಐದನೇ ಒಂದಂಶವು ಅಲ್ಲಾಹನಿಗೆ, ಅವನ ಸಂದೇಶವಾಹಕರಿಗೆ, (ಅವರ) ಸಂಬಂಧಿಕರಿಗೆ, ಅನಾಥರಿಗೆ, ನಿರ್ಗತಿಕರಿಗೆ ಮತ್ತು ಪ್ರಯಾಣಿಕರಿಗಾಗಿರುತ್ತದೆ. ನೀವು ಅಲ್ಲಾಹನ ಮೇಲೆ ಮತ್ತು ಸತ್ಯಾಸತ್ಯದ ಇತ್ಯರ್ಥದ ದಿನ ಅರ್ಥಾತ್ ಎರಡು ಪಕ್ಷಗಳು ಎದುರ್ಗೊಂಡ ದಿನ (ಬದ್‍ರ್‍ದಿನ) ನಾವು ನಮ್ಮ ದಾಸನ ಮೇಲೆ ಅವತೀರ್ಣಗೊಳಿಸಿದುದರ ಮೇಲೆ ವಿಶ್ವಾಸವಿಟ್ಟಿದ್ದರೆ. ಅಲ್ಲಾಹು ಪ್ರತಿಯೊಂದು ವಿಷಯದಲ್ಲಿ ಸಾಮಥ್ರ್ಯವುಳ್ಳವನು.

42

ನೀವು ಹತ್ತಿರದ ಕಣಿವೆಯಲ್ಲೂ ಅವರು ದೂರದ ಕಣಿವೆಯಲ್ಲೂ ಮತ್ತು ವರ್ತಕರು ನಿಮಗಿಂತ ಕೆಳಗಡೆ ಇದ್ದ ಸಂದರ್ಭವನ್ನು ಸ್ಮರಿಸಿರಿ. (ನಿಮ್ಮ ಮತ್ತು ಅವರ ನಡುವೆ) (ಯುದ್ಧದ) ನಿಶ್ಚ ಯವಾಗಿರುತ್ತಿದ್ದರೆ, ನೀವು ಆ ನಿಶ್ಚಯಕ್ಕೆ ಎದುರಾಗುತ್ತಿದ್ದಿರಿ. ಆದರೆ ಉಂಟಾಗಬೇಕಾದ ಕಾರ್ಯ ವನ್ನು ಅಲ್ಲಾಹು ವಿಧಿಸಲಿಕ್ಕಾಗಿತ್ತು ಇದು. ನಾಶ ವಾದವರು ಪ್ರತ್ಯಕ್ಷ ಪ್ರಮಾಣದೊಂದಿಗೆ ನಾಶ ಹೊಂದಲೂ ಬದುಕಿದವರು ಪ್ರತ್ಯಕ್ಷ ಪ್ರಮಾಣದೊಂದಿಗೆ ಬದುಕಲೂಬೇಕಾಗಿ. (ಇದೆಲ್ಲ ಸಂಭವಿಸಿತು.) ನಿಶ್ಚಯವಾಗಿಯೂ ಅಲ್ಲಾಹು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ .

43

(ಓ ಸಂದೇಶವಾಹಕರೇ,) ಅಲ್ಲಾಹನು ಅವರನ್ನು ನಿಮಗೆ ಸ್ವಪ್ನದಲ್ಲಿ ಕಡಿಮೆ ಸಂಖ್ಯೆಯಲ್ಲಿ ತೋರಿಸುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ. ಅವನು ನಿಮಗೆ ಅವರ ಸಂಖ್ಯೆಯನ್ನು ಅಧಿಕವಾಗಿ ತೋರಿಸುತ್ತಿದ್ದರೆ, ಖಂಡಿತ ನೀವು ಧೈರ್ಯಗೆಡುತ್ತಿದ್ದಿರಿ ಮತ್ತು (ಯುದ್ಧದ) ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದುತ್ತಿದ್ದೀರಿ. ಆದರೆ ಅಲ್ಲಾಹನೇ (ನಿಮ್ಮನ್ನು ಇದರಿಂದ) ರಕ್ಷಿಸಿದನು. ನಿಶ್ಚಯವಾಗಿಯೂ ಅವನು ಹೃದ್ಗತವನ್ನು ಅರಿಯುವವನಾಗಿರುತ್ತಾನೆ.

44

ಸಂಗ್ರಾಮದ ವೇಳೆ ನಿಮ್ಮ ದೃಷ್ಟಿಯಲ್ಲಿ ಅವರನ್ನು (ಶತ್ರುಗಳನ್ನು) ಕಡಿಮೆಯಾಗಿಯೂ ಅವರ ದೃಷ್ಟಿಯಲ್ಲಿ ನಿಮ್ಮನ್ನು ಕಡಿಮೆಯಾಗಿಯೂ ಅಲ್ಲಾಹನು ತೋರಿಸಿಕೊಟ್ಟ ಸಂದರ್ಭವನ್ನು ಸ್ಮರಿಸಿರಿ. ಸಂಭವಿಸಬೇಕಾದ ಕಾರ್ಯವನ್ನು ಅಲ್ಲಾಹನು ನೆರವೇರಿಸಲಿಕ್ಕಾಗಿ, ಸಕಲ ಕಾರ್ಯಗಳೂ ಅಲ್ಲಾಹನ ಕಡೆಗೆ ಮರಳುತ್ತವೆ.

45

ಓ ಸತ್ಯವಿಶ್ವಾಸಿಗಳೇ, ನೀವು ಯಾವುದೇ (ಸೈನ್ಯ) ತಂಡವನ್ನು ಎದುರುಗೊಂಡರೆ ನೀವು ಸುಸ್ಥಿರರಾಗಿರಿ ಮತ್ತು ಅಲ್ಲಾಹನನ್ನು ಅತಿ ಹೆಚ್ಚಾಗಿ ಸ್ಮರಿಸಿರಿ. ಹಾಗಾದರೆ ನಿಮಗೆ ಜಯದ ನಿರೀಕ್ಷೆಯಿಡಬಹುದು.

46

ಅಲ್ಲಾಹು ಮತ್ತು ಅವನ ರಸೂಲರನ್ನು ಅನು ಸರಿಸಿರಿ. ಪರಸ್ಪರ ಜಗಳಾಡಬೇಡಿರಿ. ಅನ್ಯಥಾ ನಿಮ್ಮಲ್ಲಿ ಅಂಜಿಕೆ ಹುಟ್ಟುವುದು. ನಿಮ್ಮ ಕೆಚ್ಚು ಕೊಚ್ಚಿ ಹೋಗುವುದು. ಸಹನೆಯಿಂದ ವರ್ತಿಸಿರಿ. ನಿಜವಾಗಿಯೂ ಅಲ್ಲಾಹನಿರುವುದು ಸಹನಶೀಲರೊಂದಿಗೆ.

47

ಅಹಂಭಾವದಿಂದಲೂ ಜನರಿಗೆ ತಮ್ಮ ಠೀವಿಯನ್ನು ತೋರಿಸುತ್ತಲೂ ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುತ್ತಲೂ ತಮ್ಮ ನಿವಾಸಗಳಿಂದ ಹೊರಟು ಬಂದವರಂತೆ ನೀವಾಗಬಾರದು. ಅವರ ಕೃತ್ಯಗಳನ್ನು ಅಲ್ಲಾಹನು ಆವರಿಸಿ ಅರಿತಿರುವನು.

48

ಇಂದು ನಿಮ್ಮನ್ನು ಸೋಲಿಸುವ ಜನರೇ ಇಲ್ಲ, ಖಂಡಿತ ನಾನು ನಿಮ್ಮ ಜೊತೆಗೆ ಇದ್ದೇನೆ. ಎನ್ನುತ್ತಾ ಶೈತಾನನು ಅವರಿಗೆ ತಮ್ಮ ಕುಕೃತ್ಯ ಗಳನ್ನು ಚಂದಗಾಣಿಸಿ ಕೊಟ್ಟ ಸಂದರ್ಭವನ್ನು ಸ್ಮರಿಸಿರಿ.ಆದರೆ ಇತ್ತಂಡಗಳು ಪರಸ್ಪರ ಎದುರುಗೊಂಡಾಗ ಅವನು ಹಿಮ್ಮೆಟ್ಟಿ ಓಡಿದನು ಮತ್ತು ‘ನನ್ನ ಮತ್ತು ನಿಮ್ಮ ನಡುವೆ ಒಡನಾಟವಿಲ್ಲ. ನೀವು ಕಾಣ ದ್ದನ್ನು ನಾನು ಕಾಣುತ್ತಿದ್ದೇನೆ. ನನಗೆ ಅಲ್ಲಾಹನ ಭಯವಾಗುತ್ತದೆ. ಮತ್ತು ಅಲ್ಲಾಹು ಅತ್ಯಂತ ಕಠಿಣವಾಗಿ ಶಿಕ್ಷಿಸುವವನು’ ಎಂದು ಹೇಳಿದನು.

49

ಇವರನ್ನು (ಮುಸ್ಲಿಮರನ್ನು) ಇವರ ಧರ್ಮವು ವಂಚಿಸಿದೆ ಎಂದು ಕಪಟಿಗಳೂ ಹೃದಯಗಳಲ್ಲಿ ರೋಗ ತಗಲಿದವರೂ ಹೇಳುತ್ತಿದ್ದ ಸಂದರ್ಭ ವನ್ನು ಸ್ಮರಿಸಿರಿ. ವಸ್ತುತಃ ಯಾರಾದರೂ ಅಲ್ಲಾಹನ ಮೇಲೆ ಭರವಸೆಯನ್ನಿಟ್ಟರೆ (ಅವನು ಸೋಲ ಲಾರನು) ಅಲ್ಲಾಹು ಮಹಾಪ್ರತಾಪಿಯೂ ಯುಕ್ತಿಪೂರ್ಣನೂ ಆಗಿರುತ್ತಾನೆ.

50

ಸತ್ಯನಿಷೇಧಿಗಳನ್ನು ಅವರ ಮುಖಗಳು ಹಾಗೂ ನಿತಂಬಗಳಿಗೆ ಹೊಡೆಯುತ್ತಾ ಮಲಕ್‍ಗಳು ಸಾಯಿಸುತ್ತಿದ್ದ ಅವಸ್ಥೆಯನ್ನು ನೀವು ಕಾಣಬೇಕಿತ್ತು. ಇದೋ ಈಗ ಸುಡುವ ಶಿಕ್ಷೆಯನ್ನು ಸವಿಯಿರಿ . (ಎನ್ನುತ್ತಾ!)

51

ನಿಮ್ಮ ಕೈಗಳು ಈ ಮೊದಲು ಎಸಗಿದ ಪಾಪಗಳ ಪ್ರತಿಫಲವಿದು. ಅಲ್ಲಾಹು ತನ್ನ ದಾಸರ ಮೇಲೆ ಅಕ್ರ ಮವೆಸಗುವವನಲ್ಲ ಎಂಬ ಕಾರಣಕ್ಕಾಗಿದೆ ಇದು.

52

ಇದು ಫಿರ್‍ಔನನ ಜನಾಂಗ ಮತ್ತು ಅವರ ಪೂರ್ವಿಕರ ರೂಡಿಯಂತೆ. ಅವರು ಅಲ್ಲಾಹನ ನಿದರ್ಶನಗಳನ್ನು ನಿರಾಕರಿಸಿದರು. ಆಗ ಅಲ್ಲಾ ಹನು ಅವರ ಪಾಪಗಳಿಗಾಗಿ ಅವರನ್ನು ಶಿಕ್ಷಿಸಿದನು. ಅಲ್ಲಾಹನು ಪರಮ ಬಲಿಷ್ಟನೂ ಉಗ್ರವಾಗಿ ದಂಡಿಸುವವನೂ ಆಗಿರುವನು.

53

ಇದೇಕೆಂದರೆ ಅಲ್ಲಾಹನು ಯಾವುದೇ ಜನಾಂಗಕ್ಕೆ ಕೊಡಮಾಡಿದ ಅನುಕೂಲವನ್ನು ಆ ಜನಾಂಗ ಸ್ವತಃ ಬದಲಾಯಿಸಿಕೊಳ್ಳುವವರೆಗೂ ಅಲ್ಲಾಹನು ಬದಲಾಯಿಸುವವನಾಗಿರಲಿಲ್ಲ. (ಅಂತಹ ರೂಢಿ ಇರುವುದಿಲ್ಲ). ಅಲ್ಲಾಹು ಸರ್ವ ಶ್ರುತನೂ ಸರ್ವಜ್ಞನೂ ಆಗಿರುತ್ತಾನೆ .

54

ಫಿರ್‍ಔನನ ಜನಾಂಗ ಮತ್ತು ಅವರ ಪೂರ್ವ ಜನಾಂಗದವರ ಸಂಪ್ರದಾಯದಂತೆ ಅವರು ತಮ್ಮ ಪ್ರಭುವಿನ ನಿದರ್ಶನಗಳನ್ನು ಸುಳ್ಳಾಗಿಸಿದರು. ಆಗ ಅವರ ಪಾಪಗಳ ಫಲವಾಗಿ ಅವರನ್ನು ನಾಶಗೊಳಿಸಿದೆವು. ಫಿರ್‍ಔನನ ಜನಾಂಗವನ್ನು ಮುಳುಗಿಸಿದೆವು. ಅವರೆಲ್ಲ ದುಷ್ಕರ್ಮಿಗಳಾಗಿದ್ದರು.

55

ಸತ್ಯವನ್ನು ಧಿಕ್ಕರಿಸಿದ ಹಾಗೂ ಎಂದಿಗೂ ಸತ್ಯ ಪ್ರಾಪ್ತರಾಗದವರು ಅಲ್ಲಾಹನ ಬಳಿ ಅತ್ಯಂತ ನೀಚ ಜಂತುಗಳು.

56

ಅವರ ಪೈಕಿ ನಿಮ್ಮೊಡನೆ ಒಪ್ಪಂದ ಮಾಡಿಕೊಂಡ ವರು. ಅವರು ಪ್ರತಿ ಸಲವೂ ಅದನ್ನು ಮುರಿಯು ತ್ತಾರೆ ಅವರು ಅಲ್ಲಾಹನ ಬಗ್ಗೆ ಜಾಗೃತೆ ವಹಿಸುವುದಿಲ್ಲ.

57

ಅವರು ಯುದ್ಧದಲ್ಲಿ ನಿಮಗೆ ಮುಖಾಮುಖಿ ಯಾದಾಗ ಅವರ ಬೆನ್ನಹಿಂದಿನವರಿಂದ ಅವರನ್ನು ಬೇರ್ಪಡಿಸಿ (ಬೆನ್ನ ಹಿಂದಿನವರಿಗೆ) ಒಂದು ಪಾಠವಾಗತಕ್ಕ ರೀತಿಯಲ್ಲಿ ಶಿಕ್ಷೆ ನೀಡಿರಿ.

58

ನಿಮಗೆ ಯಾವುದೇ ಜನಾಂಗದಿಂದ ವಂಚನೆಯ ಆಶಂಕೆಯಿದ್ದರೆ ಅವರೊಂದಿಗಿನ ಕರಾರನ್ನು ಅವರೆಡೆಗೇ ತತ್ಸಮಾನ ರೀತಿಯಲ್ಲಿ ಎಸೆದು ಬಿಡಿರಿ. ನಿಶ್ಚಯವಾಗಿಯೂ ಅಲ್ಲಾಹು ವಂಚಕರನ್ನು ಮೆಚ್ಚುವುದಿಲ್ಲ .

59

ಸತ್ಯನಿಷೇಧಿಗಳು ಅಲ್ಲಾಹನನ್ನು ಹಿಂದಿಕ್ಕುವರೆಂದು ಖಂಡಿತ ಭಾವಿಸಬಾರದು. ಖಂಡಿತವಾಗಿಯೂ ಅವರು ಅವನನ್ನು ಸೋಲಿಸಲಾರರು.

60

ನೀವು ನಿಮ್ಮಿಂದ ಸಾಧ್ಯವಾದಷ್ಟು ಹೆಚ್ಚು ಶಕ್ತಿಯನ್ನು ಹಾಗೂ ಕಟ್ಟಿ ಅಣಿಗೊಳಿಸಿದ ಪಡೆ ಕುದುರೆಗಳನ್ನು ಅವರೊಡನೆ ಹೋರಾಟ ನಡೆಸಲಿಕ್ಕಾಗಿ ಸಜ್ಜುಗೊಳಿಸಿರಿ. ಇದರ ಮೂಲಕ ಅಲ್ಲಾಹನ ಶತ್ರು, ನಿಮ್ಮ ಶತ್ರು ಮತ್ತು ನಿಮಗೆ ಅರಿವಿಲ್ಲದ ಹಾಗೂ ಅಲ್ಲಾಹನಿಗೆ ಅರಿವಿರುವ ಇತರ ಶತ್ರುಗಳನ್ನು ಭೀತಿಗೊಳಿಸಲಿಕ್ಕಾಗಿ, ಅಲ್ಲಾಹನ ಮಾರ್ಗದಲ್ಲಿ ನೀವು ಏನೇ ಖರ್ಚು ಮಾಡಿದರೂ ಅದರ ಸಂಪೂರ್ಣ ಪ್ರತಿಫಲವನ್ನು ನಿಮಗೆ ಕೊಡಲಾಗುವುದು. ನಿಮ್ಮೊಂದಿಗೆ ಎಷ್ಟು ಮಾತ್ರ ಕ್ಕೂ ಅನ್ಯಾಯ ಮಾಡಲಾಗದು.

61

(ಓ ಪೈಗಂಬರರೇ,) ಅವರು ಶಾಂತಿ ಸಂಧಾನ ಗಳ ಕಡೆಗೆ ವಾಲಿದರೆ ನೀವೂ ಅದಕ್ಕೆ ವಾಲಿರಿ ಮತ್ತು ಅಲ್ಲಾಹನ ಮೇಲೆ ಭರವಸೆಯನ್ನಿರಿಸಿರಿ. ನಿಶ್ಚಯವಾಗಿಯೂ ಅವನೇ ಸರ್ವ ಶ್ರುತನೂ ಸರ್ವಜ್ಞನೂ ಆಗಿರುತ್ತಾನೆ .

62

ಅವರು ನಿಮ್ಮನ್ನು ವಂಚಿಸಲು ಬಯಸಿದರೆ ನಿಮಗೆ ಅಲ್ಲಾಹು ಸಾಕು. ಅವನು ತನ್ನ ಸಹಾ ಯದಿಂದಲೂ ಸತ್ಯವಿಶ್ವಾಸಿಗಳ ಮೂಲಕವೂ ನಿಮಗೆ ಬಲ ನೀಡಿರುವನು.

63

ಅವರ (ಸತ್ಯವಿಶ್ವಾಸಿಗಳ) ಹೃದಯಗಳನ್ನು ಅವನು ಪರಸ್ಪರ ಜೋಡಿಸಿದವನು. ನೀವು ಭೂಮಿಯಲ್ಲಿರುವ ಸಕಲ ಸಂಪತ್ತನ್ನು ಖರ್ಚು ಮಾಡಿದರೂ ಇವರ ಹೃದಯಗಳನ್ನು ಜೋಡಿಸ ಲಾಗುತ್ತಿರಲಿಲ್ಲ. ಆದರೆ ಅವರೆಡೆಯಲ್ಲಿ ಅಲ್ಲಾಹನು ಅನ್ಯೋನ್ಯತೆ ನೆಲೆಗೊಳಿಸಿದನು. ನಿಶ್ಚಯವಾಗಿಯೂ ಅವನು ಮಹಾಪ್ರತಾಪಿಯೂ ಪರಮ ತಂತ್ರಜ್ಞನೂ ಆಗಿರುತ್ತಾನೆ .

64

ಓ ಪೈಗಂಬರರೇ, ನಿಮಗೆ ಅಲ್ಲಾಹು ಮತ್ತು ನಿಮ್ಮನ್ನು ಅನುಸರಿಸಿದ ಸತ್ಯವಿಶ್ವಾಸಿಗಳು ಸಾಕು .

65

ಓ ಪೈಗಂಬರರೇ, ಸತ್ಯವಿಶ್ವಾಸಿಗಳನ್ನು ಯುದ್ದಕ್ಕೆ ಪ್ರೇರೇಪಿಸಿರಿ. ನಿಮ್ಮಲ್ಲಿ ಇಪ್ಪತ್ತು ಮಂದಿ ಸಹನ ಶೀಲರಿದ್ದರೆ ಅವರು ಇನ್ನೂರು ಮಂದಿಯ ವಿರುದ್ಧ ಜಯಗಳಿಸುವರು ಮತ್ತು ನಿಮ್ಮಲ್ಲಿ (ಇಂತಹ) ನೂರು ಮಂದಿ ಇದ್ದರೆ ಸತ್ಯನಿಷೇಧಿಗಳ ಸಾವಿರ ಮಂದಿಯನ್ನು ಜೈಸಬಲ್ಲರು. ಏಕೆಂದರೆ ಅವರು ತಿಳಿಗೇಡಿಗಳು.

66

ಈಗ ಅಲ್ಲಾಹನು ನಿಮ್ಮ ಭಾರವನ್ನು ಹಗುರ ಗೊಳಿಸಿದನು. ನಿಮ್ಮ ದೌರ್ಬಲ್ಯವನ್ನೂ ಅರಿತನು. ಆದುದರಿಂದ ನಿಮ್ಮಲ್ಲಿ ನೂರು ಮಂದಿ ಸಹನಶೀಲರಿದ್ದರೆ ಅವರು ಇನ್ನೂರರ ಮೇಲೂ ಸಾವಿರ ಮಂದಿ ಇಂಥವರಿದ್ದರೆ ಎರಡು ಸಾವಿರದ ಮೇಲೂ ಅಲ್ಲಾಹನ ನೆರವಿನಿಂದ ವಿಜಯಿಗಳಾಗುವರು. ಅಲ್ಲಾಹು ಸಹನಶೀಲರ ಜೊತೆಗಿದ್ದಾನೆ.

67

ಭೂಮಿಯಲ್ಲಿ ಪ್ರಾಬಲ್ಯ ಸಾಧಿಸುವವರೆಗೂ ತನ್ನ ಬಳಿ ಯುದ್ದ ಸೆರೆಯಾಳುಗಳಿರುವುದು ಓರ್ವ ಪ್ರವಾದಿಗೆ ಶೋಭಿಸುವುದಿಲ್ಲ. ನೀವು ಐಹಿಕ ಲಾಭಗಳನ್ನು ಬಯಸುತ್ತೀರಿ. ಅಲ್ಲಾಹನು ಪರಲೋಕವನ್ನು ಬಯಸುತ್ತಾನೆ. ಅಲ್ಲಾಹು ಮಹಾಪ್ರತಾಪಿಯೂ ಯುಕ್ತಿವಂತನೂ ಆಗಿರುತ್ತಾನೆ.

68

ಅಲ್ಲಾಹನಿಂದ ಮೊದಲೇ ಲಿಖಿತಗೊಂಡಿಲ್ಲದಿರುತ್ತಿದ್ದರೆ, ನೀವು ಪಡೆದುದರ ಫಲವಾಗಿ ನಿಮಗೆ ಘೋರ ಶಿಕ್ಷೆ ಸಿಗುತ್ತಿತ್ತು .

69

ಆದುದರಿಂದ ನೀವು ಗಳಿಸಿರುವ ಧರ್ಮಬದ್ಧವೂ ಶುದ್ಧವೂ ಆಗಿರುವ ಸೊತ್ತನ್ನು ಭುಜಿಸಿರಿ. ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹ್ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.

70

ಓ ಪೈಗಂಬರರೇ, ನಿಮ್ಮ ವಶದಲ್ಲಿರುವ ಸೆರೆಯಾಳುಗಳಿಗೆ ಹೇಳಿರಿ; ನಿಮ್ಮ ಹೃದಯಗಳಲ್ಲೇ ನಾದರೂ ಒಳಿತು ಇರುವುದೆಂದು ಅಲ್ಲಾಹು ತಿಳಿದರೆ ಅವನು ನಿಮ್ಮಿಂದ ಪಡೆದುದಕ್ಕಿಂತಲೂ ಉತ್ತಮವಾದುದನ್ನು ನಿಮಗೆ ನೀಡುವನು ಮತ್ತು ನಿಮ್ಮ ಅಪರಾಧಗಳನ್ನು ಕ್ಷಮಿಸುವನು. ಅಲ್ಲಾಹು ಕ್ಷಮಾಶೀಲನೂ ಕೃಪಾನಿಧಿಯೂ ಆಗಿರುತ್ತಾನೆ .

71

ಆದರೆ ನಿಮ್ಮನ್ನು ವಂಚಿಸುವ ಇರಾದೆ ಅವರಿಗಿದ್ದರೆ (ಚಿಂತೆ ಬೇಡ). ಅವರು ಇದಕ್ಕಿಂತ ಮುಂಚೆ ಅಲ್ಲಾಹನನ್ನು ವಂಚಿಸಿದ್ದಾರೆ. ಇದರ ಫಲವಾಗಿಯೇ ಅವರನ್ನು ನಿಮ್ಮ ವಶಕ್ಕೆ ಒಪ್ಪಿಸಿದನು. ಅಲ್ಲಾಹು ಸರ್ವಜ್ಞನೂ ಯುಕ್ತಿವಂತನೂ ಆಗಿರುತ್ತಾನೆ .

72

ಸತ್ಯವಿಶ್ವಾಸ ಸ್ವೀಕರಿಸಿದವರೂ, ದೇಶತ್ಯಾಗ ಮಾಡಿದವರೂ ಅಲ್ಲಾಹನ ಮಾರ್ಗದಲ್ಲಿ ತಮ್ಮ ಸೊತ್ತು ಹಾಗೂ ದೇಹಗಳಿಂದ ಹೋರಾಡಿದವರೂ (ಹಿಜ್ರತ್ ಮಾಡಿದವರಿಗೆ) ಆಶ್ರಯ ಮತ್ತು ಸಹಾಯವನ್ನು ಕೊಟ್ಟವರೂ ವಾಸ್ತವದಲ್ಲಿ ಅವರು ಪರಸ್ಪರ ಬಂಧುಮಿತ್ರರು. ವಿಶ್ವಾಸವಿರಿಸಿದರೂ ದೇಶತ್ಯಾಗ ಮಾಡದೆ ಇದ್ದವರು ದೇಶ ತ್ಯಾಗ ಮಾಡಿ ಬರುವವರೆಗೂ ಅವರನ್ನು ರಕ್ಷಿಸುವ ಯಾ ವುದೇ ಹೊಣೆ ನಿಮಗಿಲ್ಲ. ಅವರು ಧರ್ಮ ಕಾರ್ಯದಲ್ಲಿ ನಿಮ್ಮಿಂದ ಸಹಾಯ ಕೋರಿದರೆ ಅವರಿಗೆ ಸಹಾಯ ಮಾಡಬೇಕಾದುದು ನಿಮ್ಮ ಹೊಣೆಯಾಗಿರುತ್ತದೆ. ಆದರೆ, ಇದು (ಸಹಾಯವು) ನಿಮ್ಮೊಂದಿಗೆ ಒಪ್ಪಂದ ಮಾಡಿಕೊಂಡವರ ವಿರುದ್ಧವಾಗಿರಬಾರದು. ನೀವು ಮಾಡುತ್ತಿರುವುದನ್ನು ಅಲ್ಲಾಹು ವೀಕ್ಷಿಸುತ್ತಾನೆ

73

ಸತ್ಯನಿಷೇಧಿಗಳು ಪರಸ್ಪರ ಬಂಧುಗಳು. ನೀವು ಹಾಗೆ ಮಾಡದಿದ್ದರೆ ಭೂಮಿಯಲ್ಲಿ ಕ್ಷೋಭೆಯೂ ಗಂಭೀರ ನಾಶವೂ ಉಂಟಾದೀತು.

74

ಸತ್ಯವಿಶ್ವಾಸವನ್ನು ಅವಲಂಬಿಸಿದ, ದೇಶತ್ಯಾಗ ಮಾಡಿದ ಹಾಗೂ ಅಲ್ಲಾಹನ ಮಾರ್ಗದಲ್ಲಿ ಧರ್ಮ ಯುದ್ಧ ಮಾಡಿದವರು ಮತ್ತು ಆಶ್ರಯವನ್ನೂ ಸಹಾಯವನ್ನೂ ನೀಡಿದವರು ಯಾರೋ ಅವರೇ ನಿಜವಾದ ಸತ್ಯವಿಶ್ವಾಸಿಗಳು. ಅವರಿಗೆ ಪಾಪ ಮುಕ್ತಿಯೂ ಗೌರವಪೂರ್ಣ ಆಹಾರವೂ ಇದೆ.

75

ನಂತರ ಸತ್ಯವಿಶ್ವಾಸವಿಟ್ಟವರು, ದೇಶತ್ಯಾಗ ಮಾಡಿ ಬಂದವರು ಮತ್ತು ನಿಮ್ಮ ಜೊತೆಗೆ ಯುದ್ಧ ಮಾಡಿದವರು ನಿಮ್ಮೊಂದಿಗೆ ಸೇರಿದ್ದಾರೆಂ. ಆದರೆ ಅಲ್ಲಾಹನ ಗ್ರಂಥದಲ್ಲಿ ರಕ್ತ ಸಂಬಂಧಿಕರು (ವಾರೀಸು ಹಕ್ಕಿಗೆ) ಪರಸ್ಪರ ಹೆಚ್ಚು ಹಕ್ಕುದಾರರು. ನಿಶ್ಚಯವಾಗಿಯೂ ಅಲ್ಲಾಹು ಸಕಲ ವಸ್ತುಗಳ ಬಗ್ಗೆ ಅಗಾಧ ಜ್ಞಾನಿಯಾಗಿರುತ್ತಾನೆ.