ಆಲ್ ಇಸ್ಲಾಂ ಲೈಬ್ರರಿ
1

ಮುಕ್ಕುರಿಸುವ (ದುರಂತದ) ಸುದ್ಧಿಯು ತಮಗೆ ತಲುಪಿದೆಯೇ?

2

ಅಂದು ಕೆಲವು ಮುಖಗಳು ನಿಂದ್ಯವಾಗಿವೆ.

3

ದುಡಿದಿರುತ್ತವೆ. ಬಸವಳಿದಿರುತ್ತವೆ.

4

ಉರಿಯುವ ಘೋರ ಅಗ್ನಿಯಲ್ಲಿ ಬೀಳುತ್ತಿವೆ.

5

ಕಠಿಣವಾಗಿ ಕುದಿಯುವ ಮಡುವಿನಿಂದ ಅವರಿಗೆ ಕುಡಿಸಲಾಗುವುದು.

6

ಭೀಕರ ಮುಳ್ಳೇ ಅವರ ಆಹಾರವಾಗಿರುವುದು.

7

ಅದು ಪೋಷಕವೂ ಅಲ್ಲ. ಹಸಿವನ್ನು ನೀಗಿಸುವುದೂ ಇಲ್ಲ.

8

ಅಂದು ಕೆಲವು ಮುಖಗಳು ಅನುಗ್ರಹೀತ.

9

ತಮ್ಮ ಪುಣ್ಯಶ್ರಮದ ಫಲವಾಗಿ ತೃಪ್ತವಾಗಿವೆ.

10

ಎತ್ತರವಾದ ಸ್ವರ್ಗೋದ್ಯಾನದಲ್ಲಿ.

11

ಅಲ್ಲಿ ಅಸಹ್ಯ ಮಾತುಗಳನ್ನು ಕೇಳುವುದಿಲ್ಲ.

12

ಅಲ್ಲಿ ಹರಿಯುವ ಚಿಲುಮೆಗಳಿವೆ.

13

ಅಲ್ಲಿ ಎತ್ತರದ ಮಂಚಗಳಿವೆ.

14

ಅಳವಡಿಸಲಾದ ಪಾನಪಾತ್ರೆಗಳಿವೆ.

15

ಜೋಡಿಸಿಡಲಾದ ದಿಂಬುಗಳಿವೆ.

16

ಹಾಸಲಾದ ರತ್ನಗಂಬಳಿಗಳಿವೆ.

17

ಒಂಟೆಯನ್ನು ಹೇಗೆ ಸೃಷ್ಟಿಸಲಾಗಿದೆಯೆಂದು ಅವರು ಚಿಂತಿಸುವುದಿಲ್ಲವೇ?

18

ಆಕಾಶವನ್ನು ಹೇಗೆ ಎತ್ತರಿಸಲಾಗಿದೆಯೆಂದೂ !

19

ಪರ್ವತಗಳನ್ನು ಹೇಗೆ ನಾಟಲಾಗಿದೆಯೆಂದೂ !

20

ಭೂಮಿಯನ್ನು ಹೇಗೆ ಹಾಸಲಾಗಿದೆಯೆಂದೂ !

21

(ಪ್ರವಾದಿವರ್ಯರೇ) ನೀವು ಉಪದೇಶ ನೀಡಿರಿ, ತಾವು ಓರ್ವ ಉಪದೇಶಕರೇ ಹೌದು.

22

ತಾವು ಅವರ ಮೇಲೆ ಕ್ರಮ ಜರಗಿಸುವವರಲ್ಲ.

23

ಆದರೆ ಯಾರು ವಿಮುಖನಾಗುತ್ತಾನೆ ಹಾಗೂ ನಿಷೇಧಿಸುತ್ತಾನೆ,

24

ಅವನನ್ನು ಅತ್ಯಂತ ಕಠಿಣವಾದ ಶಿಕ್ಷೆಗೆ ಅಲ್ಲಾಹು ಗುರಿಪಡಿಸುವನು.

25

ನನ್ನ ಬಳಿಗಾಗಿದೆ ಖಂಡಿತವಾಗಿಯೂ ಅವರ ನಿರ್ಗಮನ.

26

ನಂತರ ಅವರ ವಿಚಾರಣೆಯೂ ನಮ್ಮ ಬಾಧ್ಯತೆಯಾಗಿದೆ.