ಆಲ್ ಇಸ್ಲಾಂ ಲೈಬ್ರರಿ
1

ನಿನ್ನ ಸರ್ವೋನ್ನತ ಪ್ರಭುವಿನ ಪರಿಶುದ್ಧತೆಯನ್ನು ಕೊಂಡಾಡು.

2

ಅವನು ಸೃಷ್ಟಿಸಿದನು. ಸಮುಚಿತಗೊಳಿಸಿದನು.

3

ನಿರ್ಣಯಿಸಿದನು. ತರುವಾಯ ಮಾರ್ಗದರ್ಶನ ನೀಡಿದನು.

4

ಹುಲ್ಲು-ಸಸ್ಯಗಳನ್ನು ಹೊರಡಿಸಿದನು.

5

ನಂತರ ಅದನ್ನು ಒಣಗಲು ಕರಿಯನ್ನಾಗಿ ಮಾಡುವನು.

6

ತಮಗೆ ನಾವು ಖುರ್‍ಆನನ್ನು ಓದಿ ಕೊಡುತ್ತೇವೆ. ನಂತರ ತಾವು ಅದನ್ನು ಒಮ್ಮೆಯೂ ಮರೆಯಲಾರಿರಿ.

7

ಅಲ್ಲಾಹು ಇಚ್ಚಿಸಿದ್ದನ್ನು ಹೊರತುಪಡಿಸಿ, ಖಂಡಿತವಾಗಿಯೂ ಅವನು ಗೋಚರ ಮತ್ತು ಅಗೋಚರವನ್ನೂ ಬಲ್ಲನು.

8

ತಮಗೆ ನಾವು ಸುಲಭ ಮಾರ್ಗವನ್ನು ಒದಗಿಸುತ್ತೇವೆ.

9

ಉಪದೇಶವು ಫಲಪ್ರದವಾಗುವುದಾದರೆ ತಾವು ಉಪದೇಶ ನೀಡಿರಿ .

10

ಭಯಭಕ್ತಿಯುಳ್ಳವನು ಉಪದೇಶವನ್ನು ಸ್ವೀಕರಿಸುವನು.

11

ಹತಭಾಗ್ಯನು ಅದರಿಂದ ದೂರ ಉಳಿಯುವನು.

12

ಅವನು ಭೀಕರವಾದ ನರಕಾಗ್ನಿಗೆ ಹೋಗಿ ಸೇರುವನು.

13

ನಂತರ ಅವನು ಅದರಲ್ಲಿ ಸಾಯುವುದಿಲ,್ಲ ಬದುಕುವುದೂ ಇಲ್ಲ.

14

(ಸತ್ಯವಿಶ್ವಾಸದಿಂದ) ಪರಿಶುದ್ಧನಾದವನು ಖಂಡಿತ ಜಯಶಾಲಿಯಾದನು.

15

ತನ್ನ ಪ್ರಭುವಿನ ನಾಮವನ್ನು ಉಚ್ಚರಿಸಿ ನಮಾಝ್ ಮಾಡಿದವನು.

16

ಆದರೆ ನೀವು ಭೌತಿಕ ಜೀವನವನ್ನು ಆಯ್ಕೆ ಮಾಡುತ್ತೀರಿ.

17

ಪಾರತ್ರಿಕ ಜೀವನವು ಅತ್ಯಂತ ಉತ್ತಮವೂ, ಶಾಶ್ವತವೂ ಆಗಿದೆ.

18

ಈ ವಿಚಾರಗಳನ್ನು ಪೂರ್ವ ಗ್ರಂಥಗಳಲ್ಲಿ

19

(ಅರ್ಥಾತ್) ಇಬ್‍ರಾಹೀಮ್ ಹಾಗೂ ಮೂಸಾರ ಗ್ರಂಥಗಳಲ್ಲಿ ಪ್ರಸ್ತಾಪಿಸಲಾಗಿದೆ.