ಆಕಾಶದಾಣೆ ಮತ್ತು ಬಾನಲ್ಲಿ ರಾತ್ರಿ ಪ್ರತ್ಯಕ್ಷ ಗೊಳ್ಳುವ ವಸ್ತುವಿನಾಣೆ!
ಆ ವಸ್ತುವೇನೆಂದು ತಮಗೆ ತಿಳಿಸಿಕೊಟ್ಟದ್ದೇನು?
ಅದು ಪ್ರಖರ ಪ್ರಕಾಶಮಾನ ನಕ್ಷತ್ರ.
ಪ್ರತಿಯೊಂದು ಜೀವಕ್ಕೂ ಕಾವಲುಗಾರನನ್ನು ನಿಯುಕ್ತಿಗೊಳಿಸದೆ ಬಿಡಲಾಗಿಲ್ಲ.
ತನ್ನನ್ನು ಯಾವುದರಿಂದ ಸೃಷ್ಟಿಸಲಾಗಿದೆ ಎಂಬುದನ್ನು ಮನುಷ್ಯನು ನೋಡಲಿ.
ಅವನನ್ನು ಪುಟಿಯುವ ದ್ರವದಿಂದ ಸೃಷ್ಟಿಸಲಾಗಿದೆ.
ಅದು, ಬೆನ್ನೆಲುಬು ಹಾಗೂ ಎದೆಯ ಮೂಳೆಗಳ ನಡುವಿನಿಂದ ಹೊರಡುವುದು.
ಮನುಷ್ಯನನ್ನು ಮರುಜೀವಗೊಳಿಸುವುದರಲ್ಲಿ ಅವನು ಖಂಡಿತ ಸಮರ್ಥನಾಗಿರುವನು
ಎಲ್ಲ ರಹಸ್ಯಗಳು ಬಹಿರಂಗವಾಗುವ ದಿನ.
ಅಲ್ಲಾಹನ ಶಿಕ್ಷೆಯಿಂದ ತಡೆಯುವ ಶಕ್ತಿಯಾಗಲಿ, ಅದರಿಂದ ಪಾರುಮಾಡುವ ಸಹಾಯಕನಾಗಲಿ ಅವನಿಗೆ ಇರಲಾರದು.
ಮಳೆ ಸುರಿಸುವ ಆಕಾಶದಾಣೆ!
ಸೀಳುಗಳಿರುವ ಭೂಮಿಯಾಣೆ!.
ಖಂಡಿತವಾಗಿಯೂ ಖುರ್‍ಆನ್ (ಸತ್ಯಾ ಸತ್ಯಗಳನ್ನು ಬೇರ್ಪಡಿಸುವ) ನಿರ್ಣಾಯಕ ಮಾತು.
ಇದು ತಮಾಷೆಯಲ್ಲ.
ಖಂಡಿತವಾಗಿಯೂ ಅವರು ಹಲವು ರೀತಿಯ ಕುತಂತ್ರಗಳನ್ನು ಹೂಡುತ್ತಿದ್ದಾರೆ.
ನಾನು ಪ್ರತಿತಂತ್ರ ಹೂಡುವೆನು.
ಆದ್ದರಿಂದ ಸ್ವಲ್ಪ ಕಾಲ ಅವರನ್ನು ಬಿಟ್ಟು ಬಿಡಿರಿ.