ಆಲ್ ಇಸ್ಲಾಂ ಲೈಬ್ರರಿ
1

ತಾರಾಪಥಗಳಿರುವ ಗಗನದಾಣೆ

2

ಘೋಷಿತ ದಿನದಾಣೆ

3

ಸಾಕ್ಷಿಯಾಗುವ ಮತ್ತು ಸಾಕ್ಷಿಗೊಳಗಾಗುವುದರ ಆಣೆ.

4

ಅಗ್ನಿ ಗುಂಡಿಗಳ ಜನರು ನಾಶವಾದರು.

5

ಇಂಧನಗಳಿಂದ ಹೊತ್ತಿ ಉರಿಯುತ್ತಿದ್ದ ಅಗ್ನಿ ಕುಂಡಗಳು!

6

ಅವರು ಆ ಅಗ್ನಿ ಕುಂಡಗಳ ಸುತ್ತಲೂ ಕುಳಿತಿದ್ದಾಗ.

7

ಸತ್ಯವಿಶ್ವಾಸಿಗಳ ಮೇಲಿನ ಅಕ್ರಮಕ್ಕೆ ಅವರು ಪ್ರತ್ಯ ಕ್ಷದರ್ಶಿಗಳಾದಾಗ.

8

9

ಪರಮ ಪ್ರತಾಪಿಯೂ ಸರ್ವಸ್ತುತಿಗಳ ಪರಮಗಮ್ಯನೂ ಭೂಮ್ಯಾಕಾಶಗಳ ಸಾಮ್ರಾಜ್ಯದ ಅಧಿಪತಿಯೂ ಆದ ಅಲ್ಲಾಹನನ್ನು ನಂಬಿರುವರು ಎಂಬ ಏಕ ಕಾರಣದ ಹೊರತು ಅವರು ಸತ್ಯ ವಿಶ್ವಾಸಿಗಳನ್ನು ಪೀಡಿಸಿಲ್ಲ. ಅಲ್ಲಾಹು ಎಲ್ಲವನ್ನೂ ವೀಕ್ಷಿಸುವವನಾಗಿರುವನು.

10

ಸತ್ಯವಿಶ್ವಾಸಿಗಳಾದ ಸ್ತ್ರೀ ಪುರುಷರನ್ನು ಉಪದ್ರವಿಸಿದವರು ನಂತರ ಪಶ್ವಾತ್ತಾಪಪಟ್ಟು ಮರಳದಿದ್ದಲ್ಲಿ, ಅವರಿಗೆ ಜಹನ್ನಮ ಎಂಬ ನರಕದ ಶಿಕ್ಷೆಯಿದೆ. ಸುಟ್ಟು ಹಾಕುವ ಘೋರ ಶಿಕ್ಷೆಯೂ ಇದೆ.

11

ಸತ್ಯ ವಿಶ್ವಾಸವನ್ನು ತಾಳಿ ಸತ್ಕರ್ಮವೆಸಗಿದವರಿಗೆ ತಳಭಾಗದಲ್ಲಿ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿವೆ. ಅದು ಪ್ರಚಂಡ ವಿಜಯವಾಗಿದೆ.

12

ನಿಜಕ್ಕೂ ನಿನ್ನ ಪ್ರಭುವಿನ ಶಿಕ್ಷೆಯು ಅತೀ ಕಠಿಣ ವಾಗಿದೆ.

13

ಅವನು ಪ್ರಥಮ ಬಾರಿ ಸೃಷ್ಟಿಸುವವನೂ ನಂತರ ಮರಳಿ ಸೃಷಿಸುವವನೂ ಆಗಿರುವನು.

14

ಅವನು ಪಾಪ ವಿನಾಶಕನೂ ಅತ್ಯಂತ ಪ್ರೀತಿಸುವವನೂ ಆಗಿರುವನು.

15

‘ಅರ್ಶ್’ನ ಒಡೆಯನು, ಪರಮೋನ್ನತನು.

16

ಅವನು ತಾನಿಚ್ಛಿಸಿದ್ದನ್ನು ಮಾಡುವವನು.

17

ಸೇನೆಗಳ ವೃತ್ತಾಂತವು ತಮಗೆ ಬಂದಿಲ್ಲವೇ?

18

ಅಂದರೆ ಫಿರ್‍ಔನ್ ಹಾಗೂ ಸಮೂದ್ ಗೋತ್ರದವರ ಸೇನೆಗಳ ವೃತ್ತಾಂತ,

19

ಆದರೆ ಸತ್ಯನಿಷೇಧಿಗಳು ತಮ್ಮನ್ನು ಸುಳ್ಳಾಗಿಸು ವುದರಲ್ಲೇ ತಲ್ಲೀನರಾಗಿದ್ದಾರೆ.

20

ಅಲ್ಲಾಹನು ಅವರ ಬೆನ್ನ ಹಿಂದೆಯೇ ನಿಗಾದಲ್ಲಿರುವನು.

21

ಅದು ಉನ್ನತವಾದ ಖುರ್‍ಆನ್ ಆಗಿದೆ.

22

ಅದು ಸುರಕ್ಷಿತ ಫಲಕದಲ್ಲಿ ಸುಭದ್ರವಾಗಿದೆ.