ಆಲ್ ಇಸ್ಲಾಂ ಲೈಬ್ರರಿ
1

ಆಕಾಶವು ಸಿಡಿದು ಸೀಳಾದಾಗ.

2

ಅದು ತನ್ನ ಪ್ರಭುವಿನ ಆಜ್ಞೆಗೆ ವಿಧೇಯವಾದಾಗ. ವಿಧೇಯತೆ ಅದರ ಭಾಧ್ಯತೆ ಕೂಡಾ.

3

ಭೂಮಿಯನ್ನು ಹರಡಿ ಸಮತಲಗೊಳಿಸಲ್ಪಟ್ಟಾಗ.

4

ಭೂಮಿಯು ತನ್ನೊಳಗಿರುವ ಸರ್ವವನ್ನೂ ಹೊರಗೆಸೆದು ಬರಿದಾದಾಗ.

5

ಅದು ತನ್ನ ಪ್ರಭುವಿನ ಆಜ್ಞೆಗೆ ವಿಧೇಯವಾದಾಗ, ವಿಧೇಯತೆ ಅದರ ಬಾಧ್ಯತೆ ಕೂಡಾ. (ಮನುಷ್ಯ ತನ್ನ ಕರ್ಮಫಲವನ್ನು ಉಣ್ಣುತ್ತಾನೆ.)

6

ಓ ಮನುಜ! ನಿನ್ನ ಪರಿಶ್ರಮವು ನಿನ್ನ ಪ್ರಭುವಿನ ಭೇಟಿಯತ್ತ ಮುಟ್ಟಿಸುತ್ತದೆ. ಆಗ ಪರಿಶ್ರಮದ ಫಲವನ್ನು ಕಾಣುವೆ!

7

ಆಗ ಯಾರಿಗೆ ತನ್ನ ಬಲಗೈಯಲ್ಲಿ ತನ್ನ ದಾಖಲೆ ಗ್ರಂಥವನ್ನು ನೀಡಲಾಗುವುದೋ.

8

ಅವನನ್ನು ಲಘುವಾಗಿ ವಿಚಾರಣೆ ಮಾಡಲಾಗುವುದು.

9

ಅವನು ತನ್ನವರ ಕಡೆಗೆ ಸಂತೋಷಭರಿತನಾಗಿ ಮರಳುವನು .

10

ಯಾರಿಗೆ ತನ್ನ ದಾಖಲೆ ಗ್ರಂಥವನ್ನು ಬೆನ್ನ ಹಿಂದೆ ನೀಡಲಾಗುವುದೋ

11

ಅವನು ‘ನನ್ನ ನಾಶವೇ’ ಎಂದು ಅರಚುವನು.

12

ಆತನು ಧಗಧಗಿಸುವ ನರಕಾಗ್ನಿಗೆ ಪ್ರವೇಶಿಸುವನು.

13

ಅವನು ತನ್ನ ಕುಟುಂಬಸ್ಥರೊಂದಿಗೆ ವಿಘ್ನ ಸಂತೋಷದಲ್ಲಿದ್ದನು.

14

ಅವನು ತನ್ನ ರಕ್ಷಕನ ಬಳಿಗೆ ಮರಳಲಿಕ್ಕಿಲ್ಲವೆಂದು ಭಾವಿಸಿದ್ದನು.

15

ಆದರೆ ವಸ್ತು ಸ್ಥಿತಿ ಹಾಗಲ್ಲ. ಖಂಡಿತವಾಗಿಯೂ ಅವನ ಪ್ರಭು ಅವನನ್ನು ವೀಕ್ಷಿಸುವವನಾಗಿದ್ದನು.

16

ನಾನು ಸಂಧ್ಯಾರಾಗದ ಮೇಲೆ ಆಣೆ ಹಾಕುತ್ತಿದ್ದೇನೆ!

17

ನಿಶೆ ಮತ್ತು ಅದು ಒಳಗೊಂಡಿರುವುದರ ಆಣೆ!

18

ಚಂದಿರನಾಣೆ ! ಅದು ಪೂರ್ಣದೆಸೆಗೆ ತಲುಪಿದಾಗ

19

ನೀವು ಹಂತದಿಂದ ಹಂತಕ್ಕೆ ಖಂಡಿತ ದಾಟಲಿರುವಿರಿ.

20

ಹೀಗಿರುವಾಗ ಆ ಪುನರುತ್ಥಾನವನ್ನು ನಂಬದಿರಲು ಅವರಿಗೆ ಏನು ಕಾರಣವಿದೆ?

21

ಅವರಿಗೆ ಖುರ್‍ಆನನ್ನು ಓದಿ ಕೇಳಿಸಿದರೆ ಅವರು ಸಾಷ್ಟಾಂಗವೆರಗುವುದಿಲ್ಲ.

22

ಆದರೆ ಸತ್ಯನಿಷೇಧಿಗಳು ಸುಳ್ಳಾಗಿಸುತ್ತಾರೆ.

23

ಅವರು ಜಮೆ ಮಾಡುತ್ತಿರುವುದನ್ನು ಬಲ್ಲವನಾಗಿರುವನು ಅಲ್ಲಾಹು.

24

ಆದ್ದರಿಂದ (ಪ್ರವಾದಿಯವರೇ) ಅವರಿಗೆ ವೇದನಾಯುಕ್ತ ಶಿಕ್ಷೆಯ ಸುವಾರ್ತೆಯನ್ನು ಅರುಹಿರಿ.

25

ಸತ್ಯವಿಶ್ವಾಸವನ್ನು ಸ್ವೀಕರಿಸಿ ಸತ್ಕರ್ಮಗಳನ್ನು ಮಾಡಿದವರ ಹೊರತು. ಅವರಿಗೆ ಎಂದೆಂದಿಗೂ ಅಬಾಧಿತವಾದ ಪ್ರತಿಫಲವಿದೆ.