ಆಲ್ ಇಸ್ಲಾಂ ಲೈಬ್ರರಿ
1

ತೂಕ ಮತ್ತು ಅಳತೆಯಲ್ಲಿ ಕಡಿತಗೊಳಿಸುವವರಿಗೆ ಕಠಿಣವಾದ ಶಿಕ್ಷೆಯಿದೆ.

2

ಅವರು ಜನರಿಂದ ಕೊಳ್ಳಲು ಅಳೆಯುವಾಗ ಪೂರ್ತಿಯಾಗಿ ಪಡೆಯುವರು.

3

ಜನರಿಗೆ ಅಳತೆ ಅಥವಾ ತೂಕ ಮಾಡಿಕೊಡುವಾಗ ಕಡಿಮೆಗೊಳಿಸುವರು.

4

ಅವರನ್ನು ಪುನರ್ಜೀವಗೊಳಿಸಲಾಗುತ್ತದೆ ಎಂಬು ದನ್ನು ಅವರು ತಿಳಿದಿಲ್ಲವೇ?

5

ಭಯಾನಕವಾದ ದಿನದಲ್ಲಿ

6

ವಿಶ್ವ ಪ್ರಭು ಅಲ್ಲಾಹನ ಮುಂದೆ ವಿಚಾರಣೆಗಾಗಿ ಜನರು ನಿಲ್ಲುವ ದಿನವದು.

7

ನಿಸ್ಸಂಶಯ! ಖಂಡಿತವಾಗಿಯೂ ದುಷ್ಕರ್ಮಿಗಳ ದಾಖಲೆ ಗ್ರಂಥವು ಸಿಜ್ಜೀನ್‍ನಲ್ಲಿದೆ.

8

ಸಿಜ್ಜೀನ್ ಏನೆಂದು ತಮಗೆ ಗೊತ್ತಾ?

9

ಮುದ್ರೆ ಹಾಕಲಾದ ಗ್ರಂಥವದು.

10

ಸುಳ್ಳಾಗಿಸಿದವರಿಗೆ ಅಂದು ಸರ್ವನಾಶವಿದೆ.

11

ಅಂದರೆ ಅವರು ಪ್ರತಿಫಲ ದಿನವನ್ನು ಸುಳ್ಳಾಗಿಸಿದವರು.

12

ಹದ್ದು ಮೀರಿದ ಮಹಾ ದುಷ್ಕರ್ಮಿಯ ಹೊರತು ಆ ದಿನವನ್ನು ಇನ್ನಾರೂ ಸುಳ್ಳಾಗಿಸಲಾರರು.

13

ನಮ್ಮ ಶ್ಲೋಕಗಳನ್ನು ಅವನಿಗೆ ಓದಿ ಕೇಳಿಸಿದರೆ ಅದು ಪೂರ್ವಿಕರ ಕಟ್ಟುಕಥೆಗಳೆಂದು ಅವನು ಹೇಳುವನು.

14

ಖಂಡಿತ ಹಾಗಲ್ಲ, ನಿಜದಲ್ಲಿ ಅವರು ಮಾಡುವ ದುಷ್ಕøತ್ಯಗಳು ಅವರ ಹೃದಯಗಳಿಗೆ ತಡೆ ಕವಚ ಹಾಕಿವೆ.

15

ಖಂಡಿತ ಹಾಗಲ್ಲ. ಅಂತ್ಯ ದಿನದಲ್ಲಿ ಅವರಿಗೆ ತಮ್ಮ ಪ್ರಭುವಿನ ದರ್ಶನವನ್ನು ತಡೆಯಲಾಗುವುದು.

16

ನಂತರ ಅವರು ಖಂಡಿತ ನರಕಾಗ್ನಿಗೆ ಹೋಗಿ ಸೇರುವರು.

17

ನಂತರ ಅವರಲ್ಲಿ ಹೀಗೆ ಹೇಳಲಾಗುತ್ತದೆ, ಇದು ನೀವು ಸುಳ್ಳಾಗಿಸಿದ ಕಾರ್ಯವಾಗಿದೆ.

18

ಖಂಡಿತ ಹಾಗಲ್ಲ! ಸಜ್ಜನರ ಕರ್ಮಗ್ರಂಥವು ನಿಜವಾಗಿಯೂ ಇಲ್ಲಿಯ್ಯೀನ್‍ನಲ್ಲಿದೆ.

19

ಇಲ್ಲಿಯ್ಯೀನ್ ಎಂದರೆ ಏನೆಂಬುದು ತಮಗೆ ಗೊತ್ತಾ?

20

ಮುದ್ರೆ ಹಾಕಲಾದ ಗ್ರಂಥ.

21

ನಿಕಟರಾದ ದೇವಚರರು ಅದಕ್ಕೆ ಸಾಕ್ಷಿ ನಿಲ್ಲುವರು.

22

ಖಂಡಿತವಾಗಿಯೂ ಸಜ್ಜನರು ಸ್ವರ್ಗ ಸುಖದಲ್ಲಿರುವರು.

23

ಸುಖಾಸನಗಳಲ್ಲಿ ಕೂತು ನೋಡುತ್ತಿರುವರು .

24

ಅವರ ಮುಖದಲ್ಲಿ ಅನುಗ್ರಹದ ಕಾಂತಿಯನ್ನು ಕಾಣುವಿರಿ.

25

ಮುದ್ರೆ ಹಾಕಲಾದ ಸ್ವಚ್ಛ ಮದಿರೆಯಿಂದ ಅವರಿಗೆ ಕುಡಿಸಲಾಗುತ್ತದೆ.

26

ಪಾನದ ಕೊನೆಯಲ್ಲಿ ಕಸ್ತೂರಿಯ ಪರಿಮಳವು ಹೊರಸೂಸುವುದು. ಸ್ಪರ್ಧಾಳುಗಳು ಇದಕ್ಕಾಗಿ ಸ್ಪರ್ಧಿಸಲಿ.

27

ಅದರಲ್ಲಿ ‘ತಸ್‍ನೀಮ್’ ಅನ್ನು ಬೆರೆಸಲಾಗುತ್ತದೆ.

28

ಅಂದರೆ ಚಿಲುಮೆ! ಅದರಿಂದ ಅಲ್ಲಾಹನ ಸಮೀಪಸ್ಥರು ಕುಡಿಯುತ್ತಾರೆ.

29

ಖಂಡಿತ ದುಷ್ಕರ್ಮಿಗಳು ಸತ್ಯವಿಶ್ವಾಸಿಗಳನ್ನು ಕಾಣುವಾಗ ಗೇಲಿ ಮಾಡಿ ನಗುವವರಾಗಿದ್ದರು.

30

ವಿಶ್ವಾಸಿಗಳು ಅವರ ಬಳಿ ಹಾದು ಹೋಗುವಾಗ ಕಣ್ಸನ್ನೆ ಮಾಡುತ್ತಿದ್ದರು.

31

ಅವರು ತಮ್ಮ ಕುಟುಂಬಸ್ಥರಲ್ಲಿಗೆ ಮರಳುವಾಗ ಇದೇ ಹೆಮ್ಮೆಯೊಂದಿಗೆ ಮರಳುತ್ತಿದ್ದರು.

32

ವಿಶ್ವಾಸಿಗಳನ್ನು ಕಂಡರೆ ಇವರು ದಾರಿ ತಪ್ಪಿದವರೆಂದು ಹೇಳುತ್ತಿದ್ದರು.

33

ವಾಸ್ತವದಲ್ಲಿ ಅವರನ್ನು ಇವರ ಮೇಲೆ ವೀಕ್ಷಕ ರಾಗಿ ನೇಮಿಸಲ್ಪಟ್ಟಿರಲಿಲ್ಲ.

34

ಇಂದು ಸತ್ಯವಿಶ್ವಾಸಿಗಳು ಸತ್ಯನಿಷೇಧಿಗಳನ್ನು ಅಣಕಿಸಿ ನಗುವರು.

35

ಸೊಗ ಮಂಟಪಗಳಲ್ಲಿ ಸುಖಾಸೀನರಾಗಿ ಸತ್ಯನಿಷೇಧಿಗಳನ್ನು ನೋಡುವರು.

36

“ಸತ್ಯನಿಷೇಧಿಗಳು ತಾವು ಮಾಡಿದ ತಪ್ಪಿಗೆ ಸೂಕ್ತ ಪ್ರತಿಫಲ ಪಡೆದರೇ” ಎಂದು.