ಆಕಾಶವು ಒಡೆದು ಛಿದ್ರಗೊಂಡರೆ,
ನಕ್ಷತ್ರಗಳು ಉದುರಿ ಬಿದ್ದರೆ,
ಸಮುದ್ರಗಳು ಅಖಂಡಗೊಳಿಸಲ್ಪಟ್ಟರೆ,
ಸಮಾಧಿಗಳು ಅಗೆಯಲ್ಪಟ್ಟರೆ,
ಪ್ರತಿಯೊಬ್ಬ ವ್ಯಕ್ತಿಯು ತಾನು ಮಾಡಿಟ್ಟ ಕರ್ಮಗಳನ್ನೂ, ಮಾಡದೆ ಬಿಟ್ಟು ಬಿಟ್ಟ ಕಾರ್ಯಗಳನ್ನೂ ತಿಳಿಯುವನು.
ಓ ಮಾನವಾ, ನಿನ್ನ ಸನ್ಮಾನ್ಯ ಪ್ರಭುವಿನ ಮೇಲೆ ಹೇಗೆ ಧೈರ್ಯ ತಾಳಿದ್ದೀಯಾ?
ನಿನ್ನನ್ನು ಅವನು ಸೃಷ್ಟಿಸಿದನು. ನಿನ್ನನ್ನು ಸಮುಚಿ ತಗೊಳಿಸಿದನು. ಹಾಗೂ ನಿನ್ನ ದೇಹವನ್ನು ಸಮರೂಪಗೊಳಿಸಿದನು.
ಅವನು ನಿನಗೆ ಯಾವ ರೂಪು ಕೊಡಲು ಉದ್ದೇಶಿಸಿದನೋ ಆ ರೀತಿ ರೂಪುಗೊಳಿಸಿದನು.
ಖಂಡಿತ ಭಂಡ ಧೈರ್ಯ ಬೇಡ, ಆದರೆ ನೀವು ಕರ್ಮಫಲವುಣ್ಣಲಿರುವುದನ್ನು ಸುಳ್ಳಾಗಿಸುತ್ತೀರಿ.
ಖಂಡಿತ ನಿಮ್ಮ ಮೇಲೆ ನಿಗಾ ಇಡುವವರಿದ್ದಾರೆ!
ಅವರು ಗೌರವಾನ್ವಿತರಾದ ಬರಹಗಾರರು.
ನಿಮ್ಮ ಕೃತ್ಯಗಳನ್ನು ಅವರು ತಿಳಿಯುವರು.
ಸಜ್ಜನರು ಖಂಡಿತವಾಗಿಯೂ ಸ್ವರ್ಗ ಸುಖದಲ್ಲಿರುವರು.
ದುಷ್ಕರ್ಮಿಗಳು ಖಂಡಿತವಾಗಿಯೂ ಹೊತ್ತಿ ಉರಿಯುವ ನರಕದಲ್ಲಾಗಿರುವರು.
ಪ್ರತಿಫಲ ನೀಡುವ ದಿನ ಅವರದರಲ್ಲಿ ಪ್ರವೇಶಿಸಲಿರುವರು.
ಅದರಿಂದ ಅವರು ಹೊರ ಬರುವವರಲ್ಲ.
ಪ್ರತಿಫಲದ ದಿನವೇನೆಂದು ನಿನಗೆ ಗೊತ್ತೆ?
ಆದಾಗ್ಯೂ ಗೊತ್ತೆ ನಿನಗೆ ಪ್ರತಿಫಲದ ದಿನ ವೇನೆಂದು?
ಅದು ಯಾವುದೇ ದೇಹವು ಇನ್ನೊಂದು ದೇಹಕ್ಕೆ ಒಂದಿಷ್ಟೂ ಉಪಕಾರ ಮಾಡಲಾಗದ ದಿನ. ಅಂದು ಎಲ್ಲ ಕಾರ್ಯಗಳ ಒಡೆತನವು ಅಲ್ಲಾಹನಿಗೆ ಮೀಸಲಾಗಿದೆ.