ಸೂರ್ಯನು ಸುರುಟಿ ನಂದಿಸಲ್ಪಟ್ಟರೆ,
ನಕ್ಷತ್ರಗಳು ಉದುರಿ ಬಿದ್ದರೆ,
ಪರ್ವತಗಳು ಧೂಳೀಪಟವಾಗಿ ತೇಲಾಡಿದರೆ,
ತುಂಬು ಗರ್ಭಿಣಿ ಒಂಟೆಗಳು (ನೋಡುವವನಿ ಲ್ಲದೆ) ನಿರ್ಲಕ್ಷ್ಯಕ್ಕೀಡಾದರೆ,
ವನ್ಯ ಮೃಗಗಳನ್ನು ಒಂದೆಡೆ ಸೇರಿಸಲಾದರೆ,
ಸಮುದ್ರಗಳು ಹೊತ್ತಿ ಉರಿಯಲ್ಪಟ್ಟರೆ,
ಆತ್ಮಗಳು ದೇಹಕ್ಕೆ ಬೆಸೆಯಲ್ಪಟ್ಟರೆ,
ಜೀವಂತ ಹೂಳಲ್ಪಟ್ಟ ಹೆಣ್ಣು ಹಸುಳೆಯೊಂದಿಗೆ ಕೇಳಲ್ಪಟ್ಟರೆ,
ಯಾವ ತಪ್ಪಿಗಾಗಿ ನಿನ್ನನ್ನು ಕೊಲ್ಲಲಾಯಿತೆಂದು.
ದಾಖಲು ಗ್ರಂಥಗಳು ತೆರೆಯಲ್ಪಟ್ಟರೆ,
ಆಕಾಶವು ಕಿತ್ತು ಹಾಕಲ್ಪಟ್ಟರೆ,
ನರಕವು ಭುಗಿಲೆದ್ದು ಉರಿದರೆ,
ಸ್ವರ್ಗವು ನಿಕಟಗೊಳಿಸಲ್ಪಟ್ಟರೆ,
ತಾನು ಏನನ್ನು ತಂದಿರುವೆನೆಂದು ಪ್ರತಿಯೊಬ್ಬನೂ ತಿಳಿಯುವನು.
ಹಗಲು ಸಮಯದಲ್ಲಿ ಮರೆಯಾಗುವ ಮತ್ತು ರಾತ್ರಿಯಲ್ಲಿ ಮಿನುಗುವ ನಕ್ಷತ್ರಗಳ ಮೇಲೆ ನಾನು ಆಣೆ ಹಾಕುತ್ತೇನೆ!
ಚಲಿಸುವ ಹಾಗೂ ಅಸ್ತಮಾನ ವೇಳೆ ಮರೆಯಾಗುವ ನಕ್ಷತ್ರಗಳು.
ರಾತ್ರಿಯ ಮೇಲೆ ನಾನು ಆಣೆ ಹಾಕುತ್ತೇನೆ, ಅದು ಕತ್ತಲನ್ನು ತಂದರೆ,
ಪ್ರಭಾತದ ಮೇಲೆ ನಾನು ಆಣೆ ಹಾಕುತ್ತೇನೆ, ಅದು ಬೆಳಕನ್ನು ಹರಡಿದರೆ,
ಖಂಡಿತವಾಗಿಯೂ ಇದು (ಖುರ್‍ಆನ್) ಸನ್ಮಾನ್ಯ ದೂತರು ಬಿತ್ತರಿಸಿದ ಮಾತಾಗಿದೆ5.
ಆ ದೂತರು, ಪ್ರಚಂಡ ಶಕ್ತಿಯನ್ನು ಪಡೆದವರು, ಅರ್ಶ್‍ನ ಅಧಿಪತಿಯಾದ ಅಲ್ಲಾಹನ ಬಳಿ ಉನ್ನತ ಸ್ಥಾನೀಯರು ಆಗಿರುತ್ತಾರೆ.
ಬಾನ ಲೋಕದಲ್ಲಿ ಅನುಸರಿಸಲ್ಪಡುವವರು, ಪ್ರಾಮಾಣಿಕರು.
ನಿಮ್ಮ ಒಡನಾಡಿ ಒಬ್ಬ ಹುಚ್ಚನಲ್ಲ.
ಅವರು ಆ ದೂತರನ್ನು (ಜಿಬ್‍ರೀಲರನ್ನು) ಸುವ್ಯಕ್ತ ದಿಗಂತದಲ್ಲಿ ಕಂಡಿರುತ್ತಾರೆ.
ಅವರು (ಅಲ್ಲಾಹನಿಂದ ಲಭಿಸುವ) ಪರೋಕ್ಷ ಜ್ಞಾನವನ್ನು ತಲುಪಿಸುವುದರಲ್ಲಿ ಜಿಪುಣರಲ್ಲ.
ಇದು ದೇವಕೃಪೆಯಿಂದ ಬಹಿಷ್ಕøತನಾದ ಪಿಶಾಚಿಯ ನುಡಿಯಲ್ಲ.
ಇದು ದೇವಕೃಪೆಯಿಂದ ಬಹಿಷ್ಕøತನಾದ ಪಿಶಾಚಿಯ ನುಡಿಯಲ್ಲ.
ಇದು ಸಮಸ್ತ ಜಗತ್ತಿಗೂ ಅನ್ವಯವಾಗುವ ಉಪದೇಶವಾಗಿದೆ.
ಅಂದರೆ ನಿಮ್ಮ ಪೈಕಿ ಧರ್ಮ ಬದ್ಧತೆಯನ್ನು ಇಚ್ಚಿಸುವವರಿಗೆ.
ಜಗದೊಡೆಯನಾದ ಅಲ್ಲಾಹನು ಇಚ್ಚಿಸದ ಹೊರತು ನೀವು ಇಚ್ಛಿಸಲಾರಿರಿ.