ಆಲ್ ಇಸ್ಲಾಂ ಲೈಬ್ರರಿ
1

ಅವರು ಯಾವುದರ ಕುರಿತು ಪರಸ್ಪರ ವಿಚಾರಿಸುತ್ತಿದ್ದಾರೆ?

2

3

ಯಾವ ಘಟನೆಯ ಕುರಿತು ಅವರು ಭಿನ್ನಮತ ಹೊಂದಿದ್ದಾರೋ ಅಂತಹ ಗಂಭೀರ ಘಟನೆಯ ಕುರಿತು.

4

ಖಂಡಿತ ಬೇಡ, ಮುಂದೆ (ಪುನರುತ್ಥಾನದ ದಿನದಲ್ಲಿ) ಅವರು ತಿಳಿಯಲಿದ್ದಾರೆ.

5

ಖಡಾ ಖಂಡಿತಾ ಬೇಡ, ಅವರು ತಿಳಿಯಲಿದ್ದಾರೆ.

6

ಭೂಮಿಯನ್ನು ನಾವು ಹಾಸನ್ನಾಗಿ ಮಾಡಲಿಲ್ಲವೇ?

7

ಪರ್ವತಗಳನ್ನು ಮೊಳೆಗಳನ್ನಾಗಿ ನಾಟಿ ಬಿಟ್ಟಿಲ್ಲವೇ

8

ನಿಮ್ಮನ್ನು (ಗಂಡು-ಹೆಣ್ಣು) ಜೋಡಿಗಳನ್ನಾಗಿ ನಾವು ಸೃಷ್ಟಿಸಲಿಲ್ಲವೇ?

9

ನಿಮ್ಮ ನಿದ್ದೆಯನ್ನು ವಿಶ್ರಾಂತಿಯನ್ನಾಗಿ ನಾವು ಮಾಡಿಲ್ಲವೆ?

10

ರಾತ್ರೆಯನ್ನು ಮುಚ್ಚುವ ವಸ್ತ್ರವನ್ನಾಗಿ ನಾವು ಮಾಡಿಲ್ಲವೆ?

11

ಹಗಲನ್ನು ಉಪಜೀವನ ಅರಸುವ ಸಮಯವ ನ್ನಾಗಿ ನಾವು ಮಾಡಿಲ್ಲವೆ?

12

ನಿಮ್ಮ ಮೇಲೆ ಅತ್ಯಂತ ಬಲಿಷ್ಟವಾದ ಏಳು ಗಗನಗಳನ್ನು ನಾವು ನಿರ್ಮಿಸಿಲ್ಲವೆ?

13

ಜ್ವಾಜಲ್ಯಮಾನ ದೀಪವನ್ನು ನಾವು ಸ್ಥಾಪಿಸಿಲ್ಲವೆ?

14

ಘನೀಕೃತ ಮೇಘಗಳಿಂದ ಧಾರಾಕಾರ ಮಳೆಯನ್ನು ನಾವು ಸುರಿಸುತ್ತಿಲ್ಲವೆ?

15

ಅದರ ಮೂಲಕ ಧಾನ್ಯವನ್ನೂ ಸಸ್ಯಗಳನ್ನೂ ನಾವು ಹೊರಡಿಸಲಿಕ್ಕಾಗಿ.

16

ದಟ್ಟ ತೋಟಗಳನ್ನು ಸೃಷ್ಟಿಸಲಿಕ್ಕಾಗಿ.

17

ಖಂಡಿತವಾಗಿಯೂ (ಸಜ್ಜನರು ಮತ್ತು ದುರ್ಜನರನ್ನು) ಬೇರ್ಪಡಿಸುವ ದಿನವು ಸಮಯ ನಿಗದಿತವಾಗಿರುತ್ತದೆ.

18

ಅಂದರೆ ಕಹಳೆಯಲ್ಲಿ ಊದಲಾಗುವ ದಿನ. ಆಗ ನೀವು ತಂಡೋಪತಂಡವಾಗಿ ಬರುವಿರಿ.

19

ಆಕಾಶವು ಬಿರುಕು ಬೀಳುವುದು. ಆಗ ಅದು ಬಾಗಿಲುಗಳದ್ದಾಗುತ್ತದೆ.

20

ಪರ್ವತಗಳನ್ನು ಚಲಾಯಿಸಲಾಗುವುದು. ಆಗ ಅವು ಮರೀಚಿಕೆಯಾಗುತ್ತವೆ. (ಅನಾಯಾಸ ಚಲನೆಯ ವಿಷಯದಲ್ಲಿ)

21

ಖಂಡಿತವಾಗಿಯೂ ನರಕವು ಕಟ್ಟೆಚ್ಚರದ ನಿರೀಕ್ಷೆಯಲ್ಲಿರುತ್ತದೆ .

22

ಅಕ್ರಮಿಗಳ ಆವಾಸ ಸ್ಥಾನವಾಗಿ.

23

ಅವರು ಆ ನರಕದಲ್ಲಿ ಅನಂತಕಾಲ ಬಿದ್ದು ಕೊಂಡಿರುವರು.

24

ಅಲ್ಲಿ ಅವರು ತಣಿವನ್ನಾಗಲಿ ಯಾವುದೇ ಪಾನೀಯವನ್ನಾಗಲಿ ಸವಿಯಲಾರರು.

25

ಕುದಿಯುವ ಬಿಸಿ ನೀರು ಮತ್ತು ಅತೀ ದುರ್ಗಂಧಮಯ (ನರಕದವರ ದೇಹಗಳಿಂದ ಹೊರ ಬರುವ) ಕೀವಿನ ಹೊರತು.

26

(ಅವರು ಭೂಮಿಯಲ್ಲಿ ಮಾಡಿದ ದುಷ್ಕರ್ಮ ಗಳಿಗೆ) ಇದು ತಕ್ಕುದಾದ ಪ್ರತಿಫಲವಾಗಿದೆ.

27

ಏಕೆಂದರೆ ಅವರು ವಿಚಾರಣಾ ದಿನವನ್ನು ಭಯಪಟ್ಟಿರಲಿಲ್ಲ.

28

ನಮ್ಮ ಎಲ್ಲಾ ದೃಷ್ಟಾಂತಗಳನ್ನು ಅವರು ಸುಳ್ಳಾಗಿಸಿದ್ದರು.

29

ಅವರ ಸಕಲ ಪ್ರವೃತ್ತಿಗಳನ್ನು ದಾಖಲೆ ಸಹಿತ ನಾವು ತಿಳಿದಿದ್ದೇವೆ.

30

ಇಂದು ನೀವು ನರಕ ಶಿಕ್ಷೆಯ ರುಚಿಯನ್ನು ಸವಿಯಿರಿ. ನಿಮಗೆ ಯಾತನೆಯ ಹೊರತು ಬೇರೇನನ್ನೂ ನಾವು ಹೆಚ್ಚಿಸಲಾರೆವು.

31

ಖಂಡಿತವಾಗಿಯೂ ಧರ್ಮನಿಷ್ಠರಿಗೆ ರಕ್ಷಣೆಯ ತಾಣವಿದೆ.

32

ತೋಟಗಳಿವೆ. ದ್ರಾಕ್ಷೆಗಳಿವೆ.

33

ಕುಂಭಕುಚದ, ಸಮವಯಸ್ಕ ತರುಣಿಯರಿದ್ದಾರೆ.

34

ತುಂಬಿ ತುಳುಕುವ ಪಾನಪಾತ್ರೆಗಳಿವೆ.

35

ಅಲ್ಲಿ ಅವರು ಅನಗತ್ಯ ಹಾಗೂ ಅಸತ್ಯ ಮಾತು ಗಳನ್ನು ಕೇಳಲಾರರು.

36

ಇದು ನಿನ್ನ ಪ್ರಭುವಿನ ವತಿಯಿಂದ ಯಥೇಚ್ಛ ಹಾಗೂ ಉದಾರ ಪ್ರತಿಫಲ.

37

ಇದು ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆ ಇರುವ ಸಕಲ ವಸ್ತುಗಳ ರಕ್ಷಕನಾಗಿರುವ ಪರಮ ಕೃಪಾಳುವಾದ ಪ್ರಭುವಿನ ಕಡೆಯಿಂದ. ಅಂದು ಯಾರಿಗೂ ಅವನಲ್ಲಿ ಸಂಭಾಷಣೆಗೆ ಸಾಧ್ಯವಿರದು.

38

ಆತ್ಮ ಮತ್ತು ಮಲಕ್‍ಗಳು ಸಾಲುಸಾಲಾಗಿ ನಿಲ್ಲುವ ಆ ದಿನ! ಕೃಪಾಳುವಾದ ಅಲ್ಲಾಹನು ಸಮ್ಮತಿ ನೀಡಿದ ಹಾಗೂ ಸತ್ಯವನ್ನೇ ನುಡಿದವರಲ್ಲದೆ ಮತ್ತಾರೂ ಅಂದು ಮಾತಾಡಲಾರರು.

39

ಆ ದಿನ ಬರುವುದಂತೂ ನಿಜ. ಆದ್ದರಿಂದ ಇಚ್ಛೆಯುಳ್ಳವನು ತನ್ನ ಪ್ರಭುವಿನ ಕಡೆಗೆ ವಿಧೇಯತೆಯಿಂದ ಮರಳಲಿ.

40

ನಿಮಗೆ ನಾವು ಖಂಡಿತ ಎಚ್ಚರಿಕೆ ನೀಡಿದ್ದೇವೆ. ಸನ್ನಿಹಿತ ಶಿಕ್ಷೆಯ ಬಗ್ಗೆ! ಪ್ರತಿಯೊಬ್ಬನೂ ತಾನೆ ಸಗಿದ ಕರ್ಮ ಫಲವನ್ನು ಕಾಣುವ ಹಾಗೂ ಸತ್ಯ ನಿಷೇಧಿಯು; “ನನ್ನ ನಾಶವೇ, ನಾನು ಮಣ್ಣಾಗಿದ್ದರೆ ಎಷ್ಟು ಚೆನ್ನಾಗಿತ್ತು” ಎಂದು ಪ್ರಲಾಪಿಸುವ ದಿನ!