ಆಲ್ ಇಸ್ಲಾಂ ಲೈಬ್ರರಿ
1

2

3

4

5

6

ನಿರಂತರ ರವಾನಿಸಲ್ಪಡುವ, ಅನಂತರ ರಭಸದಿಂದ ಬೀಸಿ ಬರುವ, ತದನಂತರ (ಮಳೆಯನ್ನು) ಹರಡುವ ವಾಯುವಿನ ಆಣೆ!. ಬೇರ್ಪಡಿಸಿ ವಿವೇಚಿಸುವ ಹಾಗೂ ನೆಪ ಗಳ ನಿವಾರಣೆಯಾಗಿಯೋ, ಮುನ್ನೆಚ್ಚರಿಕೆಯಾಗಿಯೋ ಸಂದೇಶಗಳನ್ನು ಹಾಕಿಕೊಡುವ (ಮಲಕ್‍ಗಳ) ಆಣೆ!.

7

ನಿಮಗೆ ತಾಕೀತು ನೀಡಲಾದ ಘಟನೆಯು ಖಂಡಿತ ಸಂಭವಿಸಿಯೇ ತೀರುವುದು.

8

ನಕ್ಷತ್ರಗಳು (ಅವುಗಳ ಪ್ರಕಾಶವನ್ನು) ಮಾಸಲ್ಪಟ್ಟಾಗ,

9

ಆಕಾಶವು ಸೀಳಲ್ಪಡುವಾಗ,

10

ಪರ್ವತಗಳು ಧೂಳೀಪಟಗೊಳಿಸಲ್ಪಟ್ಟಾಗ,

11

ಮತ್ತು ಪ್ರವಾದಿಗಳಿಗೆ (ಒಟ್ಟು ಸೇರಲ್ಪಡುವ) ಸಮಯವನ್ನು ನಿಗದಿಗೊಳಿಸಲಾದಾಗ,

12

ಯಾವ ದಿನಕ್ಕಾಗಿ ಅವರಿಗೆ ಅವಧಿ ನಿಶ್ಚಯಿಸಲಾಗಿದೆ?

13

ತೀರ್ಮಾನದ ದಿನಕ್ಕಾಗಿಯೇ !

14

ಆ ತೀರ್ಮಾನದ ದಿನದ ಕುರಿತು ತಮಗೇನು ಗೊತ್ತು?

15

ಅಂದು, ಸುಳ್ಳಾಗಿಸುವವರಿಗೆ ಭೀಕರ ನಾಶವಿದೆ.

16

ನಾವು ಪೂರ್ವಿಕರನ್ನು ನಾಶಗೊಳಿಸಲಿಲ್ಲವೇ?

17

ಬಳಿಕ ಅನಂತರದವರನ್ನೂ ನಾವು ಅವರ ಹಿಂದೆಯೇ ಕಳುಹಿಸುವೆವು.

18

ಅಪರಾಧಿಗಳೊಂದಿಗೆ ನಾವು ಹಾಗೆಯೇ ಮಾಡುವೆವು.

19

ಸುಳ್ಳಾಗಿಸಿದವರಿಗೆ ಅಂದು ಭಯಂಕರ ನಾಶವಿದೆ!

20

ನಾವು ನಿಮ್ಮನ್ನು ಒಂದು ದುರ್ಬಲ ದ್ರವದಿಂದ ಸೃಷ್ಟಿಸಲಿಲ್ಲವೇ?

21

ಆಮೇಲೆ ಅದನ್ನು ನಾವು ಒಂದು ಸುರಕ್ಷಿತ ಸ್ಥಳದಲ್ಲಿ ನಿಕ್ಷೇಪಿಸಲಿಲ್ಲವೇ?

22

ಒಂದು ನಿಶ್ಚಿತ ಕಾಲಾವಧಿಯವರೆಗೆ.

23

24

ನಾವು ಹಾಗೆ (ಎಲ್ಲಾ) ನಿರ್ಣಯಿಸಿದೆವು. (ವ್ಯವಸ್ಥೆ ಗೊಳಿಸಿದೆವು) ಆದುದರಿಂದ ನಾವು ಎಷ್ಟೊಂದು ಒಳ್ಳೆಯ ವ್ಯವಸ್ಥಾಪಕರು. ಸುಳ್ಳಾಗಿಸಿದವರಿಗೆ ಅಂದು ವಿನಾಶ ಕಾದಿದೆ!

25

ನಾವು ಭೂಮಿಯನ್ನು ಒಳಗೊಳ್ಳುವಂತಾಗಿ ಮಾಡಲಿಲ್ಲವೇ?

26

ಜೀವಂತವಿರುವವರನ್ನೂ ಮೃತರನ್ನೂ.

27

ಅದರಲ್ಲಿ ತಳ ಭದ್ರವಾಗಿ ತಲೆಯೆತ್ತಿ ನಿಂತಿರುವ ಪರ್ವತಗಳನ್ನು ನಾವು ಸ್ಥಾಪಿಸಿದೆವು. ಮತ್ತು ನಿಮಗೆ ನಾವು ಸ್ವಚ್ಛವಾದ ನೀರನ್ನು ಕುಡಿಯಲು ಕೊಟ್ಟೆವು.

28

ಸುಳ್ಳಾಗಿಸಿದವರಿಗೆ ಅಂದು ನಾಶವಿದೆ!

29

(ಓ ಸತ್ಯನಿಷೇಧಿಗಳೇ,) ನೀವು ಯಾವೊಂದನ್ನು ಸುಳ್ಳೆಂದು ಹೇಳುತ್ತಿದ್ದಿರೋ ನೀವೀಗ ಅದರೆಡೆಗೇ ನಡೆಯಿರಿ (ಎಂದು ಅವರೊಂದಿಗೆ ಹೇಳಲಾಗು ವುದು)

30

ಅಂದರೆ, ಮೂರು ಕವಲುಗಳುಳ್ಳ ಕರಿ ಧೂಮದ ಇರುಳಿನ ಕಡೆಗೆ ನೀವು ಹೋಗಿ ಬಿಡಿರಿ!

31

ಅದು (ಬಿಸಿಲಿಗೆ) ನೆರಳು ಕೊಡದು. ಅಗ್ನಿ ಜ್ವಾಲೆಯಿಂದ ರಕ್ಷಿಸದು.

32

ಅದು (ನರಕ) ಕಟ್ಟಡದಂತಹ ದೊಡ್ಡ ದೊಡ್ಡ ಕಿಡಿಗಳನ್ನು ತೂರಿ ಬಿಡುತ್ತಿರುವುದು!

33

ಅವು (ಅಗ್ನಿ ಕಿಡಿಗಳು) ಹಳದಿ ಬಣ್ಣದ ಒಂಟೆಗಳಂತೆ ಇರುವುವು.

34

ಸುಳ್ಳಾಗಿಸಿದವರಿಗೆ ಅಂದು ಮಹಾನಾಶವಿದೆ!

35

ಇದು, ಅವರು ಮಾತನಾಡದ ದಿನವಾಗಿರುವುದು.

36

ಅಂದು ಅವರಿಗೆ ಅನುಮತಿಯನ್ನು ನೀಡಲಾಗುವುದಿಲ್ಲ. ಹಾಗಿದ್ದರೆ ಅವರು ನೆಪ - ನೆವನಗಳನ್ನು ಹೇಳುತ್ತಿದ್ದರು.

37

ಸುಳ್ಳಾಗಿಸಿದವರಿಗೆ ಅಂದು ವಿಪರೀತ ನಾಶವಿದೆ !

38

ಇಂದು ತೀರ್ಪಿನ ದಿನ, ನಾವು ನಿಮ್ಮನ್ನೂ ನಿಮ್ಮ ಪೂರ್ವಜರನ್ನೂ (ಇಲ್ಲಿ) ಒಟ್ಟುಗೂಡಿಸಿದ್ದೇವೆ.

39

ಈಗ ನಿಮಗೆ ಏನಾದರೂ ಉಪಾಯ ಸಾಧ್ಯವಿದ್ದರೆ ಅದನ್ನು ನನ್ನ ವಿರುದ್ಧ ಪ್ರಯೋಗಿಸಿ ಕೊಳ್ಳಿರಿ.

40

ಸುಳ್ಳಾಗಿಸಿದವರಿಗೆ ಅಂದು ಬಹು ದೊಡ್ಡ ನಾಶವಿದೆ.!

41

(ಅಂದು) ಧರ್ಮನಿಷ್ಠರು ದಟ್ಟ ವೃಕ್ಷಗಳ ನೆರಳುಗಳಲ್ಲೂ ಚಿಲುಮೆಗಳಲ್ಲೂ ಇರುತ್ತಾರೆ.

42

ಅವರು ಇಷ್ಟಪಡುವ ಹಣ್ಣುಹಂಪಲುಗಳೊಂದಿಗೆ.

43

ನೀವು ನಿರ್ವಹಿಸುತ್ತಿದ್ದ ಕರ್ಮಗಳ ಪ್ರತಿಫಲವಾಗಿ (ಇಂದು) ಸಂತೋಷದಿಂದ ತಿನ್ನಿರಿ ಮತ್ತು ಕುಡಿ ಯಿರಿ. (ಎಂದು ಅವರೊಂದಿಗೆ ಹೇಳಲಾಗುವುದು)

44

ನಾವು ಸದ್ವøತ್ತರಿಗೆ ಹೀಗೆಯೇ ಸತ್ಫಲವನ್ನು ಕೊಡುವುದು.

45

ಸುಳ್ಳಾಗಿಸಿದವರಿಗೆ ಅಂದು ಭಯಾನಕ ನಾಶವಿದೆ!

46

ಸ್ವಲ್ಪ ಕಾಲ ನೀವು ತಿನ್ನಿರಿ ಮತ್ತು ಸುಖಪಡಿರಿ - ವಾಸ್ತವದಲ್ಲಿ ನೀವು ಅಪರಾಧಿಗಳಾಗಿದ್ದೀರಿ.

47

ಸುಳ್ಳಾಗಿಸಿದವರಿಗೆ ಅಂದು ವಿನಾಶವಿದೆ.

48

ಇವರೊಡನೆ ತಲೆಬಾಗಿರಿ ಎಂದಾಗ ಇವರು ತಲೆ ಬಾಗುವುದಿಲ್ಲ.

49

ಸುಳ್ಳಾಗಿಸಿದವರಿಗೆ ಅಂದು ವಿನಾಶವಿದೆ.

50

ಇನ್ನು ಇದರ (ಖುರ್‍ಆನ್) ನಂತರ ಇನ್ನಾವ ವೃತ್ತಾಂತದ ಮೇಲೆ ತಾನೇ ಇವರು ವಿಶ್ವಾಸವಿರಿ ಸುವುದು?