All Islam Directory
1

ನೂನ್-ಲೇಖನಿಯ ಆಣೆ ಹಾಗೂ ಅವರು ಬರೆದಿಡುತ್ತಿರುವುದರಾಣೆ.

2

ತಮ್ಮ ಪ್ರಭುವಿನ ಅನುಗ್ರಹದಿಂದ ತಾವು ಹುಚ್ಚರಲ್ಲ.

3

ಖಂಡಿತವಾಗಿಯೂ ತಮಗೆ ಎಂದಿಗೂ ಮುಗಿದು ಹೋಗದಂತಹ ಸತ್ಫಲವಿದೆ.

4

ನಿಶ್ಚಯವಾಗಿಯೂ ತಾವು ಸತ್‍ಸ್ವಭಾವದ ಅತ್ಯುನ್ನತ ಮಟ್ಟದಲ್ಲಿದ್ದೀರಿ.

5

ಸದ್ಯದಲ್ಲೇ ತಾವೂ ನೋಡಿ ತಿಳಿಯುವಿರಿ ಮತ್ತು ಅವರೂ ಕಂಡರಿಯುವರು.

6

ನಿಮ್ಮ ಪೈಕಿ ಯಾರು ಪೀಡೆಗೊಳಗಾದವರು?’ ಎಂಬುದನ್ನು.

7

ತಮ್ಮ ಪ್ರಭುವು ಅವನ ಮಾರ್ಗದಿಂದ ತಪ್ಪಿ ಹೋದವರ ಬಗ್ಗೆ ಚೆನ್ನಾಗಿ ಅರಿತಿರುತ್ತಾನೆ ಮತ್ತು ಸನ್ಮಾರ್ಗ ಪ್ರಾಪ್ತರ ಬಗೆಗೂ ಅವನು ಚೆನ್ನಾಗಿ ಬಲ್ಲವನಾಗಿದ್ದಾನೆ.

8

ಆದುದರಿಂದ ಸುಳ್ಳಾಗಿಸುವವರನ್ನು ತಾವು ಅನುಸರಿಸಬೇಡಿರಿ.

9

ತಾವು ಸಡಿಲು ತೋರಿದರೆ ಒಳ್ಳೆಯದಿತ್ತೆಂದು ಅವರು ಆಗ್ರಹಿಸುತ್ತಾರೆ. ಆಗ ಅವರು ಕೂಡಾ ಸಡಿಲು ತೋರುವರು.

10

11

12

13

ಅತ್ಯಧಿಕ ಆಣೆ ಹಾಕುವವನೂ, ನೀಚನೂ ಚುಚ್ಚು ಮಾತು ಹೇಳುವವನೂ ಚಾಡಿ ಹೇಳುತ್ತಾ ತಿರುಗುವವನೂ ಸತ್ಕಾರ್ಯಗಳನ್ನು ಮಾಡದಂತೆ ತಡೆಯುವವನೂ ದುಷ್ಕರ್ಮಿಯೂ ಮಹಾಪಾಪಿಯೂ ಕ್ರೂರನೂ ಮತ್ತು ಇದೆಲ್ಲದರ ಜೊತೆಗೆ ಕುಲಗೆಟ್ಟವನೂ ಆಗಿರುವ ಯಾವನನ್ನೂ ತಾವು ಅನುಸರಿಸಬೇಡಿರಿ.

14

ಅವನು ಬಹಳಷ್ಟು ಸಂಪತ್ತು ಮತ್ತು ಸಂತಾನವು ಳ್ಳವನೆಂಬ ನೆಲೆಯಲ್ಲಿ ಹೀಗಾಗಿದ್ದಾನೆ.

15

ಅವನಿಗೆ ನಮ್ಮ ಸೂಕ್ತಗಳನ್ನು ಓದಿ ಕೇಳಿಸಿದಾಗ ಇವೆಲ್ಲ ಪೂರ್ವಿಕರ ಕಟ್ಟುಕತೆಗಳು ಎಂದು ಹೇಳುತ್ತಾನೆ.

16

ಶೀಘ್ರವೇ ನಾವು ಅವನ ಸೊಂಡಿಲಿಗೆ (ನೀಳ ಮೂಗಿಗೆ) ಬರೆ ಗುರುತು ಎಳೆಯಲಿದ್ದೇವೆ.

17

ಒಂದು ತೋಟದವರನ್ನು ನಾವು ಪರೀಕ್ಷೆಗೆ ಒಳಪಡಿಸಿದ್ದಂತೆಯೇ ಇವರನ್ನು ಪರೀಕ್ಷೆ ಗೊಳಪಡಿಸಿರುತ್ತೇವೆ. ಆ ತೋಟದ ಫಲಗಳನ್ನು ನಸುಕಿನ ವೇಳೆ ಕೊಯ್ಯುವುದಾಗಿ ಅವರು ಶಪಥ ಹಾಕಿದ ಸಂದರ್ಭ.

18

ಅವರು ಏನನ್ನೂ ಹೊರತುಪಡಿಸಿ ಹೇಳಿರಲಿಲ್ಲ.

19

ಆಮೇಲೆ ಇರುಳಲ್ಲಿ ಅವರು ನಿದ್ರಿಸುತ್ತಿದ್ದಾಗ ತಮ್ಮ ಪ್ರಭುವಿನ ಕಡೆಯಿಂದ ಆ ತೋಟಕ್ಕೆ ವಿಪತ್ತೊಂದು ಎರಗಿತು.

20

ಆಮೇಲೆ ಇರುಳಲ್ಲಿ ಅವರು ನಿದ್ರಿಸುತ್ತಿದ್ದಾಗ ತಮ್ಮ ಪ್ರಭುವಿನ ಕಡೆಯಿಂದ ಆ ತೋಟಕ್ಕೆ ವಿಪತ್ತೊಂದು ಎರಗಿತು.

21

ಅನಂತರ ಪ್ರಭಾತದಲ್ಲಿ ಅವರು - ಪರಸ್ಪರ ಕೂಗಿ ಹೇಳಿದರು.

22

``ನೀವು ಫಲಗಳನ್ನು ಕೊಯ್ಯಬೇಕೆಂದು ಉದ್ದೇಶಿಸುತ್ತೀರೆಂದಾದರೆ ನಸುಕಿನಲ್ಲೇ ನಿಮ್ಮ ಹೊಲಗಳ ಕಡೆಗೆ ಹೊರಡಿರಿ’’.

23

24

‘ಇಂದು ಬಡವನಾರೂ ನಿಮ್ಮ ಹತ್ತಿರ ತೋಟಕ್ಕೆ ಬಾರದಂತೆ ನೋಡಿಕೊಳ್ಳಬೇಕು’ ಎಂದು ಅವರು ಪರಸ್ಪರ ಪಿಸುಗುಟ್ಟುತ್ತ ತೆರಳಿದರು.

25

(ಬಡವರನ್ನು) ತಡೆಯಲು ನಾವು ಶಕ್ತರು ಅಂದು ಕೊಳ್ಳುತ್ತಾ ನಸುಕಿನಲ್ಲೇ ಅಲ್ಲಿಗೆ ಹೋದರು.

26

ಆದರೆ ತೋಟವನ್ನು ಕಂಡಾಗ ಅವರು ಹೇಳಿ ದರು, ‘ನಾವು ದಾರಿ ತಪ್ಪಿದವರೇ ಆಗಿದ್ದೇವೆ.’

27

ಅಲ್ಲ, ನಿಜವಾಗಿ ನಾವು (ಉಪಜೀವನಮಾರ್ಗ) ತಡೆಯಲ್ಪಟ್ಟವರಾಗಿದ್ದೇವೆ.

28

ಅವರ ಪೈಕಿ ಮಧ್ಯಮ ಧೋರಣೆಯವನು; ‘ನೀವೇಕೆ ಅಲ್ಲಾಹನ ಮಹತ್ವವನ್ನು ಒಪ್ಪದೇ ಹೋದಿರಿ? ಎಂದು ನಾನು ನಿಮ್ಮೊಡನೆ ಹೇಳಿರಲಿ ಲ್ಲವೇ?’ ಎಂದನು.

29

`ಆಗ ಅವರು, ‘ನಮ್ಮ ಪ್ರಭು ಪರಮ ಪಾವನನು, ನಿಜಕ್ಕೂ ನಾವು ಅಕ್ರಮಿಗಳಾಗಿದ್ದೆವು’ ಎಂದರು.

30

ತರುವಾಯ ಅವರಲ್ಲಿ ಪ್ರತಿಯೊಬ್ಬರೂ ಪರಸ್ಪರ ತೆಗಳುತ್ತ ಎದುರುಗೊಂಡರು.

31

ಕೊನೆಗೆ ಅವರು, ‘ಅಯ್ಯೋ ನಮ್ಮ ನಾಶವೇ! ನಿಜಕ್ಕೂ ನಾವು ಅತಿಕ್ರಮಿಗಳಾಗಿಬಿಟ್ಟಿದ್ದೆವು’ ಎಂದರು.

32

ನಮ್ಮ ಪ್ರಭು ಇದಕ್ಕೆ ಬದಲಾಗಿ ಇದಕ್ಕಿಂತಲೂ ಉತ್ತಮ ತೋಟ ದಯಪಾಲಿಸಲೂಬಹುದು. ನಾವು ನಮ್ಮ ಪ್ರಭುವಿನ ಕಡೆಗೆ ಆಗ್ರಹ ಸಮರ್ಪಿ ಸುವವರಾಗಿದ್ದೇವೆ’ ಎಂದರು.

33

ಶಿಕ್ಷೆಯು ಹೀಗಿರುತ್ತದೆ. ಮತ್ತು ಪರಲೋಕದ ಶಿಕ್ಷೆಯು ಇದಕ್ಕಿಂತಲೂ ದೊಡ್ಡದಾಗಿದೆ. ಇದನ್ನು ಅವರು ತಿಳಿದಿರುತ್ತಿದ್ದರೆ!

34

ಖಂಡಿತವಾಗಿಯೂ, ದೇವಭಯವುಳ್ಳವರಿಗೆ ಅವರ ಪ್ರಭುವಿನ ಬಳಿ ಅನುಗ್ರಹೀತ ಸ್ವರ್ಗೋ ದ್ಯಾನಗಳಿವೆ.

35

ಮುಸ್ಲಿಮರನ್ನು ನಾವು ಅಪರಾಧಿಗಳಂತೆ ಮಾಡುವೆವೇನು?

36

ನಿಮಗೇನಾಗಿದೆ? ನೀವು ಹೇಗೆ ತೀರ್ಮಾನ ಮಾಡುತ್ತಿರುವಿರಿ?

37

ಅದಲ್ಲ, ನಿಮ್ಮ ಬಳಿ ಗ್ರಂಥವಿದ್ದು, ನೀವು ಅದರಲ್ಲಿ ಅಧ್ಯಯನ ನಡೆಸುತ್ತಿರುವಿರಾ?

38

ನೀವು (ಯಥೇಷ್ಟ) ಆಯ್ಕೆ ಮಾಡುವ ವಿಷಯಗಳು ನಿಮಗೆ ಆ ಗ್ರಂಥದಲ್ಲಿ ಬಂದಿದೆಯೇನು?

39

ಅಥವಾ ಪುನರುತ್ಥಾನದ ದಿನದ ವರೆಗೆ ದೀರ್ಘಾ ವಧಿಯುಳ್ಳ ವಾಗ್ದಾನವನ್ನು ನಮ್ಮಿಂದ ಪಡೆದಿ ರುವಿರೇನು? ನೀವು ತೀರ್ಮಾನಿಸುವುದೆಲ್ಲವೂ ನಿಮಗಿದೆ ಎಂಬ ಬಗ್ಗೆ!

40

ಅವರ ಪೈಕಿ ಅದರ ಕುರಿತು ಜವಾಬ್ದಾರಿ ವಹಿಸಿ ಕೊಳ್ಳುವವರು ಯಾರು? ಎಂದು ಅವರೊಡನೆ ಕೇಳಿ ನೋಡಿರಿ.

41

ಅಥವಾ ಅವರಿಗೆ ಸಹಭಾಗಿಗಳು ಯಾರಾದರೂ ಇದ್ದಾರೆಯೇ? ಅವರು ಸತ್ಯವಂತರಾಗಿದ್ದರೆ ತಮ್ಮ ಸಹಭಾಗಿಗಳನ್ನು ತರಲಿ.

42

ಕಣೆಗಾಲು ತೆರೆಯಲ್ಪಡುವ (ಭಯಂಕರವಾದ) ಒಂದು ದಿನವನ್ನು (ತಾವು ನೆನೆಯಿರಿ). ಅಂದು ಸಾಷ್ಟಾಂಗವೆರಗಲಿಕ್ಕಾಗಿ ಅವರನ್ನು ಕರೆಯು ವಾಗ ಅವರಿಗೆ ಅದು ಸಾಧ್ಯವಾಗದು.

43

ಅವರ ದೃಷ್ಟಿಗಳು ದೈನ್ಯತೆಯಿಂದ ಕೂಡಿದ್ದು ಅಪಮಾನವು ಅವರನ್ನು ಆವರಿಸಿಕೊಂಡಿ ರುವುದು. ಅವರು ಸುರಕ್ಷಿತರಾಗಿದ್ದಾಗ ಇವರನ್ನು ಸಾಷ್ಟಾಂಗವೆರಗಲಿಕ್ಕಾಗಿ ಕರೆಯಲಾಗುತ್ತಿತ್ತು. (ಆದರೆ ಅವರಂದು ನಿರ್ವಹಿಸಲಿಲ್ಲ)

44

ಆದುದರಿಂದ ಸಂದೇಶವಾಹಕರೇ, ತಾವು ನನ್ನನ್ನು ಮತ್ತು ಈ ವೃತ್ತಾಂತವನ್ನು ತಿರಸ್ಕರಿಸು ವವರನ್ನು ಬಿಟ್ಟುಬಿಡಿರಿ. ಅವರು ಅರಿಯದ ಭಾಗದಿಂದ ನಾವು ಅವರನ್ನು ಹಂತಹಂತವಾಗಿ ಹಿಡಿದು ಕೊಳ್ಳುವೆವು.

45

ನಾನು ಅವರಿಗೆ ಸಾವಕಾಶ ನೀಡುತ್ತೇನೆ. ನನ್ನ ತಂತ್ರವು ಅತ್ಯಂತ ಪ್ರಚಂಡವಾಗಿದೆ.

46

ತಾವು ಅವರಿಂದ ಏನಾದರೂ ಪ್ರತಿಫಲ ಕೇಳು ತ್ತಿರುವಿರಾ? ಅದರ ಭಾರ ಅವರಿಗೆ ಹೊರೆಯಾ ಗುವ ಸ್ಥಿತಿಯಲ್ಲಿ?

47

ಅಥವಾ ಪರೋಕ್ಷವು ಅವರ ಬಳಿ ಇದೆಯೆ? ಅದ ರಿಂದ ಅವರು ಬರೆದುಕೊಳ್ಳುತ್ತಿರುವರೇನು?

48

ಸರಿ, ತಾವು ತಮ್ಮ ಪ್ರಭುವಿನ (ಅವರ ವಿಷಯ ದಲ್ಲಿ) ತೀರ್ಪಿಗಾಗಿ ತಾಳ್ಮೆ ವಹಿಸಿರಿ ಮತ್ತು ಮತ್ಸ್ಯ ದ ವ್ಯಕ್ತಿಯಂತೆ (ಯೂನುಸ್ ನಬಿಯರಂತೆ) ಆಗಬೇಡಿರಿ. ಅವರು ವ್ಯಸನ ಚಿತ್ತರಾಗಿ ಪ್ರಾರ್ಥಿ ಸಿದ ಸಂದರ್ಭ!

49

ಅವರ ಪ್ರಭುವಿನ ಒಂದು ಅನುಗ್ರಹವು ಅವರಿಗೆ ಸಿಗದೆ ಇರುತ್ತಿದ್ದರೆ, ಅವರು ಆಕ್ಷೇಪಾರ್ಹರಾಗಿ ಬಟ್ಟ ಮರುಭೂಮಿಯಲ್ಲಿ ಹೊರ ಎಸೆಯಲ್ಪಡು ತ್ತಿದ್ದರು.

50

ಕೊನೆಗೆ ಅವರ ಪ್ರಭು ಅವರನ್ನು ಆರಿಸಿಕೊಂ ಡನು ಮತ್ತು ಅವರನ್ನು ಸಜ್ಜನರ ಸಾಲಿಗೆ ಸೇರಿ ಸಿಕೊಂಡನು.

51

ಸತ್ಯನಿಷೇಧಿಗಳು, ಈ ಉಪದೇಶವನ್ನು ಕೇಳಿ ದಾಗ ಅವರ ಕಣ್ಣುಗಳಿಂದ ದುರುಗುಟ್ಟಿ ನೋ ಡುತ್ತ ತಮ್ಮನ್ನು ಜಾರಿ ಬೀಳಿಸಲು ಹೆಣಗುತ್ತಾರೆ. ಮತ್ತು ಇವನು ಖಂಡಿತ ಹುಚ್ಚ ಎಂದು ಹೇಳು ತ್ತಾರೆ .

52

ಇದು ಲೋಕದ ಜನತೆಗಿರುವ ಒಂದು ಉದ್ಬೋಧನೆಯಲ್ಲದೆ ಇನ್ನೇನೂ ಅಲ್ಲ.