ಆಲ್ ಇಸ್ಲಾಂ ಲೈಬ್ರರಿ
1

ಪರಮ ಕಾರುಣಿಕನು.

2

ಅವನು ಖುರ್‍ಆನನ್ನು ಕಲಿಸಿದನು.

3

ಅವನು ಮಾನವನನ್ನು ಸೃಷ್ಟಿಸಿದನು.

4

ಅವನಿಗೆ ಮಾತಾಡಲು ಕಲಿಸಿದನು.

5

ಸೂರ್ಯ ಮತ್ತು ಚಂದ್ರ ಒಂದು ನಿಶ್ಚಿತ ಗಣನೆ ಪ್ರಕಾರ ಚಲಿಸುತ್ತವೆ.

6

ಮರ-ಬಳ್ಳಿಗಳು ಅವನಿಗೆ ಸಾಷ್ಟಾಂಗವೆರಗುತ್ತವೆ.

7

ಆಕಾಶವನ್ನು ಅವನು ಮೇಲೆತ್ತಿದನು ಮತ್ತು ನೀತಿ ಸ್ಥಾಪಿಸಿದನು.

8

ತೂಕದಲ್ಲಿ ನೀವು ಅನೀತಿ ಕಾಣಿಸದಿರಲಿಕ್ಕಾಗಿ.

9

ಅಂದರೆ ನೀವು ನೀತಿಪೂರ್ವಕ ತೂಕ ಮಾಡಿರಿ, ತೂಕದಲ್ಲಿ ಕಡಿತ ಮಾಡಬೇಡಿರಿ ಎಂಬುದಕ್ಕಾಗಿ.

10

ಅವನು ಭೂಮಿಯನ್ನು ಸಕಲ ಸೃಷ್ಟಿಗಳಿಗಾಗಿ ಇಟ್ಟಿರುವನು.

11

ಅದರಲ್ಲಿ ಹಣ್ಣುಗಳೂ, ಕೋಶಗಳಿರುವ ಖರ್ಜೂರ ಮರಗಳೂ ಇವೆ.

12

ಹುಲ್ಲುಗಳಿಂದ ಕೂಡಿದ ಧಾನ್ಯಗಳಿವೆ. ಸುಗಂಧ ಸಸ್ಯಗಳಿವೆ.

13

ಮತ್ತೆ ನೀವೆರಡು ವಿಭಾಗದವರು ನಿಮ್ಮ ಪ್ರಭುವಿನ ಯಾವ ಉಪಕಾರವನ್ನು ಸುಳ್ಳಾಗಿಸುತ್ತಿರುವಿರಿ?

14

ಸಪ್ಪಳವೆಬ್ಬಿಸುವ ಸುಟ್ಟ ಆವೆಮಣ್ಣಿನಂತಹ ಶುಷ್ಕ ಮಣ್ಣಿನಿಂದ ಅವನು ಮನುಷ್ಯನನ್ನು ಸೃಷ್ಟಿಸಿದನು.

15

ಅವನು ಜಿನ್ನ್‍ಗಳನ್ನು ಅಗ್ನಿಯ ಹೊಗೆರಹಿತ ಜ್ವಾಲೆಯಿಂದ ಸೃಷ್ಟಿಸಿದನು.

16

ಮತ್ತೆ ನೀವೆರಡು ವಿಭಾಗದವರು ನಿಮ್ಮ ಪ್ರಭು ವಿನ ಯಾವ ಅನುಗ್ರಹಗಳನ್ನು ಸುಳ್ಳಾಗಿಸುತ್ತಿರುವಿರಿ?

17

ಅವನು ಎರಡು ಪೂರ್ವಗಳ ಮತ್ತು ಎರಡು ಪಶ್ಚಿಮಗಳ ಪ್ರಭು .

18

ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

19

ಅವನು ಎರಡು ಸಮುದ್ರಗಳನ್ನು (ಶುದ್ಧ ನೀರು ಮತ್ತು ಉಪ್ಪು ನೀರು) ಪರಸ್ಪರ ಸಂಧಿಸುವಂತೆ ಮಾಡುತ್ತಾನೆ.

20

ಆದರೂ ಅವುಗಳ ನಡುವೆ ಒಂದು ಪರದೆ ಅಡ್ಡವಾಗಿದ್ದು ಅವು ಪರಸ್ಪರ ಆಕ್ರಮಿಸಿಕೊಳ್ಳುವುದಿಲ್ಲ.

21

ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

22

ಅವೆರಡು ಸಮುದ್ರಗಳಿಂದ ಮುತ್ತು ಮತ್ತು ಹವಳಗಳು ಹೊರಬರುತ್ತವೆ.

23

ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ನೇಮತ್ತುಗಳನ್ನು ಸುಳ್ಳಾಗಿಸುವಿರಿ?

24

ಸಮುದ್ರದಲ್ಲಿ ಸಂಚರಿಸುವ ಪರ್ವತ ಗಾತ್ರದ ಹಡಗುಗಳು ಅವನದೇ ಆಗಿವೆ.

25

ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

26

ಈ ಭೂಮಿಯಲ್ಲಿರುವ ಪ್ರತಿಯೊಂದು ವಸ್ತುವೂ ನಾಶವಾಗಲಿದೆ.

27

ತಮ್ಮ ಪ್ರಭುವಿನ ಅತ್ಯಮೋಘ, ಪರಮ ಮಾನ್ಯ ಸತ್ತೆಯು ಮಾತ್ರ ಬಾಕಿ ಉಳಿಯಲಿದೆ.

28

(ಜಿನ್ನ್‍ಗಳೇ ಮತ್ತು ಮಾನವರೇ), ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

29

ಆಕಾಶ-ಭೂಮಿಗಳಲ್ಲಿರುವವರೆಲ್ಲರೂ ಅವನಲ್ಲಿ ಬೇಡುತ್ತಾರೆ. ಪ್ರತಿದಿನವೂ ಅಲ್ಲಾಹನು ಕಾರ್ಯ ನಿರ್ವಹಣೆಯಲ್ಲಿರುವನು.

30

(ಜಿನ್ನ್‍ಗಳೇ ಮತ್ತು ಮಾನವರೇ), ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

31

ಓ ಭಾರಪೂರ್ಣವಾದ ಎರಡು ವರ್ಗಗಳೇ! ನಾವು ನಿಮ್ಮ ವಿಚಾರಣೆಗಾಗಿ ಸದ್ಯದಲ್ಲೇ ಸಮಯಾವಕಾಶ ಹೊಂದಲಿದ್ದೇವೆ.

32

ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

33

ಓ ಜಿನ್ನ್ ಮತ್ತು ಮಾನವ ವರ್ಗದವರೇ, ನೀವು ಆಕಾಶ-ಭೂಮಿಗಳ ಸರಹದ್ದುಗಳಿಂದ ಮೀರಿ ಹೋಗಬಲ್ಲಿರಾದರೆ ದಾಟಿ ಹೋಗಿರಿ, ಪ್ರಚಂಡ ಶಕ್ತಿ ಇಲ್ಲದೆ ನೀವು ಹೊರಗೆ ಹೋಗಲಾರಿರಿ.

34

ಆದುದರಿಂದ ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

35

ಎರಡು ವರ್ಗದವರಾದ ನಿಮ್ಮ ನೇರಕ್ಕೆ ಬೆಂಕಿಯ ಜ್ವಾಲೆಯನ್ನೂ ಹೊಗೆಯನ್ನೂ ಕಳುಹಿಸಿ ಬಿಡಲಾಗುವುದು. ಆಗ ಅದನ್ನು ತಡೆದು ನಿಲ್ಲಲು ನಿಮ್ಮಿಂದ ಸಾಧ್ಯವಾಗದು.

36

ನೀವು (ಎರಡು ವರ್ಗದವರು) ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿ ಸುವಿರಿ?

37

ಆಕಾಶವು ಬಿರುಕು ಬಿದ್ದು ಕಾದು ಕೆಂಪೇರಿದ ತೊಗಲಿನಂತಾದಾಗ (ಅವಸ್ಥೆ ಏನಾದೀತು?)

38

ನೀವೆರಡು ವರ್ಗದವರು (ಆಗ) ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

39

ಯಾವನೇ ಮಾನವನೊಂದಿಗೂ ಜಿನ್ನ್‍ನೊಂದಿ ಗೂ ಅವನ ಪಾಪಗಳ ಕುರಿತು ಆ ದಿನ ಪ್ರಶ್ನಿಸಲಾಗುವುದಿಲ್ಲ.

40

ಆಗ, ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿ ಸುವಿರಿ?

41

ಅಪರಾಧಿಗಳು ಅಲ್ಲಿ ತಮ್ಮ ಲಕ್ಷಣಗಳಿಂದಲೇ ಗುರುತಿಸಲ್ಪಡುವರು. ಆಗ ಅವರ ಜುಟ್ಟನ್ನೂ ಕಾಲುಗಳನ್ನೂ ಹಿಡಿಯಲ್ಪಡುವುದು.

42

ಮತ್ತೆ ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

43

ಅಪರಾಧಿಗಳು ಸುಳ್ಳಾಗಿಸಿದಂತಹ ನರಕವಿದು. (ಎಂದು ಅವರೊಂದಿಗೆ ಆಗ ಹೇಳಲಾಗುವುದು)

44

ಆ ನರಕ ಮತ್ತು ಕುದಿಯುತ್ತಿರುವ ನೀರಿನ ನಡುವೆ ಅವರು ಸುತ್ತುತ್ತಿರುವರು.

45

ಈಗ ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

46

ತನ್ನ ಪ್ರಭುವಿನ ಸನ್ನಿಧಿಯನ್ನು ಭಯಪಡುವವನಿಗೆ ಎರಡು ಸ್ವರ್ಗೋದ್ಯಾನಗಳಿವೆ.

47

ನಿಮ್ಮ ಪ್ರಭುವಿನ ಯಾವ ಅನುಗ್ರಹಗಳನ್ನು ನೀವು ಸುಳ್ಳಾಗಿಸುವಿರಿ?

48

ಗೊನೆ ತುಂಬಿದ ರೆಂಬೆಗಳಿಂದ ದಟ್ಟವಾದ ಸ್ವರ್ಗೋದ್ಯಾನ.

49

ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ನೀವು ಸುಳ್ಳಾಗಿಸುವಿರಿ?

50

ಎರಡು ಉದ್ಯಾನಗಳಲ್ಲೂ ಹರಿಯುತ್ತಿರುವ ಎರಡು ಚಿಲುಮೆಗಳಿವೆ.

51

ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಕೊಡುಗೆಗಳನ್ನು ಸುಳ್ಳಾಗಿಸುವಿರಿ?

52

ಅವೆರಡರಲ್ಲಿ ಎಲ್ಲಾ ತರದ ಫಲವರ್ಗಗಳ ಜೋಡಿಗಳಿವೆ.

53

ಈಗ ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

54

ಅವರು ಹಾಸಿಗೆಗಳಲ್ಲಿ ಒರಗಿಕೊಂಡಿರುವರು. ಆ ಹಾಸಿಗೆಗಳ ಒಳ ಭಾಗವು ದಪ್ಪ ರೇಶ್ಮೆಯಿಂದ ತುಂಬಿಸಲ್ಪಟ್ಟಿರುತ್ತವೆ. ಮತ್ತು ಎರಡು ಉದ್ಯಾನಗಳ ಫಲಗಳು (ಕೈಗೆಟಕುವಂತೆ) ಬಾಗುತ್ತಿರುವುವು.

55

ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

56

ಅದರಲ್ಲಿ ನಯನಗಳನ್ನು ನಿಯಂತ್ರಿಸುವ ತರುಣಿ ಯರಿರುವರು . ಇವರಿಗಿಂತ ಮುಂಚೆ ಅವರ ನ್ನು ಮಾನವನಾಗಲಿ ಜಿನ್ನ್ ಆಗಲಿ ಎಂದೂ ಸ್ಪರ್ಶಿಸಿಲ್ಲ.

57

ಈಗ ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

58

ಅವರು ಮಾಣಿಕ್ಯ ಮತ್ತು ಮುತ್ತುಗಳಂತೆ ಇರುವರು.

59

ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

60

ಒಳಿತಿನ ಪ್ರತಿಫಲ ಒಳಿತಲ್ಲದೆ ಇನ್ನೇನು?

61

ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

62

ಆ ಎರಡು ಉದ್ಯಾನಗಳಲ್ಲದೆ ಬೇರೆರಡು ಸ್ವರ್ಗೋದ್ಯಾನಗಳಿವೆ.

63

ಈಗ ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿ ಸುವಿರಿ?

64

ಹಸಿರಿನ ಗಾಢತೆಯಿಂದ ಕಪ್ಪಾಗಿರುವ ಎರಡು ಉದ್ಯಾನಗಳು.

65

ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

66

ಅವೆರಡೂ ಉದ್ಯಾನಗಳಲ್ಲಿ ಚಿಮ್ಮುತ್ತಿರುವ ಎರಡು ನೀರ್ಝರಿಗಳಿವೆ.

67

ಈಗ ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

68

ಅವೆರಡರಲ್ಲೂ ಧಾರಾಳ ಫಲಗಳು, ಖರ್ಜೂರ, ದಾಳಿಂಬೆ ಇರುವುವು.

69

ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

70

ಅವುಗಳಲ್ಲಿ ಸುಗುಣೆಯರಾದ ರೂಪಸಿಗಳಿದ್ದಾರೆ.

71

ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

72

ಮುತ್ತಿನ ಗುಡಾರಗಳಲ್ಲಿ ಕಾದಿರಿಸಲ್ಪಟ್ಟ ಅಭಿ ನೇತ್ರಿಯರು.

73

ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

74

ಇವರಿಗೆ ಮುಂಚೆ ಯಾವನೇ ಮಾನವನಾಗಲಿ, ಜಿನ್ನ್ ಆಗಲಿ ಅವರನ್ನು ಎಂದೂ ಸ್ಪರ್ಶಿಸಿಲ್ಲ.

75

ಆದುದರಿಂದ ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

76

(ಆ ರೂಪಸಿಯರು) ಹಸಿರು ರತ್ನಗಂಬಳಿಗಳ ಹಾಗೂ ನುಣುಪಾದ ಶ್ರೇಷ್ಠ ಹಾಸಿಗೆಗಳಲ್ಲಿ ಸುಖಾಸೀನರಾಗಿರುವರು.

77

ಈಗ ನಿಮ್ಮ ಪ್ರಭುವಿನ ಯಾವ ಯಾವ ಅನು ಗ್ರಹಗಳನ್ನು ನೀವೆರಡು ವರ್ಗದವರು ಸುಳ್ಳಾಗಿಸುವಿರಿ?

78

ಪರಮ ಗಣ್ಯನೂ, ಔದಾರ್ಯಪೂರ್ಣನೂ ಆಗಿರುವ ನಿನ್ನ ಪ್ರಭುವಿನ ನಾಮವು ಅತಿ ಅನುಗ್ರಹೀತವಾಗಿದೆ.