ಆಲ್ ಇಸ್ಲಾಂ ಲೈಬ್ರರಿ
1

ನಕ್ಷತ್ರದಾಣೆ - ಅದು ಅಸ್ತಮಿಸಿದಾಗ,

2

ನಿಮ್ಮ ಸಂಗಡಿಗ (ಪ್ರವಾದಿ) ದಾರಿಗೆಡಲೂ ಇಲ್ಲ. ದುರ್ಮಾರ್ಗಿಯೂ ಅಲ್ಲ.

3

ಅವರು ತನ್ನಿಚ್ಛೆಯಂತೆ ಮಾತಾಡುವುದಿಲ್ಲ.

4

ಅವರ ನುಡಿ ಅವರಿಗೆ ಅವತೀರ್ಣಗೊಳ್ಳುವ ಸಂದೇಶ ಮಾತ್ರವಾಗಿರುವುದು.

5

ಅವರಿಗೆ ಅದನ್ನು ಮಹಾಶಕ್ತಿಶಾಲಿಯಾದ ಒಬ್ಬನು (ಜಿಬ್‍ರೀಲ್) ಕಲಿಸಿರುತ್ತಾನೆ.

6

(ಅವನು) ಬಹಳ ಸಮರ್ಥನು . ಅವನು ಸರಿಯಾಗಿ ಪ್ರತ್ಯಕ್ಷನಾದನು,

7

ಅವನು ಸಮುನ್ನತ ಕ್ಷಿತಿಜದಲ್ಲಿರುವ ಸ್ಥಿತಿಯಲ್ಲಿ .

8

ಅನಂತರ ಅವನು ಹತ್ತಿರವಾದನು ಹಾಗೂ ಮತ್ತೂ ನಿಕಟವಾದನು.

9

ಎರಡು ಧನುಸ್ಸುಗಳಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ಹತ್ತಿರವಾದನು.

10

ಆಗ, ಅಲ್ಲಾಹನು ತನ್ನ ದಾಸನಿಗೆ ತಾನು ಬೋಧಿಸಬೇಕಾದುದನ್ನು ಬೋಧಿಸಿದನು.

11

ಅವರು ಕಂಡದ್ದನ್ನು ಅವರ ಮನಸ್ಸು ಸುಳ್ಳಾಗಿಸಲಿಲ್ಲ.

12

ಹೀಗಿರಲು, ಅವರು ಕಣ್ಣಾರೆ ಕಂಡುದರ ಬಗ್ಗೆ ನೀವು ಅವರೊಡನೆ ತರ್ಕಿಸುತ್ತಿದ್ದೀರಾ?

13

ಮತ್ತೊಮ್ಮೆ ಅವರು (ಪ್ರವಾದಿ) ಅವನನ್ನು (ಜಿಬ್ರೀಲ್‍ರನ್ನು) ಕಂಡಿದ್ದರು.

14

`ಸಿದ್ರತುಲ್ ಮುಂತಹಾ’ದ ಬಳಿ.

15

`ಜನ್ನತುಲ್ ಮಅïವಾ’ ಅದರ ಹತ್ತಿರದಲ್ಲೇ ಇದೆ.

16

ಸಿದ್‍ರತ್ ವೃಕ್ಷವನ್ನು ಕವಿದುಕೊಂಡಿದ್ದುದು ಕವಿದುಕೊಂಡಾಗ. (ಅವರು ಜಿಬ್‍ರೀಲರನ್ನು ಕಂಡಿದ್ದರು)

17

(ಆದರೆ ಪ್ರವಾದಿಯ) ದೃಷ್ಟಿ ತಪ್ಪಲೂ ಇಲ್ಲ, ಮೇರೆ ಮೀರಲೂ ಇಲ್ಲ.

18

ಅವರು (ಪ್ರವಾದಿ) ತಮ್ಮ ಪ್ರಭುವಿನ ಅತಿ ಮಹತ್ತ ರವಾದ ಕೆಲವು ನಿದರ್ಶನಗಳನ್ನು ಕಂಡರು.

19

20

(ಹೇಳಿರಿ) ನೀವು `ಲಾತ್’, `ಉಝ್ಝಾ’ ಮತ್ತು ಮೂರನೆಯ `ಮನಾತ್’ನ ಕುರಿತು ವಿವೇ ಚಿಸಿ ನೋಡಿದ್ದೀರಾ? (ಅವುಗಳು ಆರಾಧಿಸಲ್ಪಡಲು ಅರ್ಹವೇ?)

21

ಏನು! ನಿಮಗೆ ಗಂಡು ಮತ್ತು ಅಲ್ಲಾಹನಿಗೆ ಹೆಣ್ಣೇ?

22

ಇದಂತೂ ಬರೀ ನೀತಿ ತಪ್ಪಿದ ಹಂಚಿಕೆಯಾಗಿದೆ.

23

ನಿಜವಾಗಿ ಇವೆಲ್ಲ ನೀವು ಮತ್ತು ನಿಮ್ಮ ಪೂರ್ವ ಜರು ನಾಮಕರಣ ಮಾಡಿದ ಕೆಲವು ಹೆಸರುಗಳೇ ಹೊರತು ಇನ್ನೇನೂ ಅಲ್ಲ. ಅಲ್ಲಾಹನು ಇವುಗಳ ಬಗ್ಗೆ ಯಾವ ಆಧಾರವನ್ನೂ ಇಳಿಸಿಲ್ಲ. ವಾಸ್ತವ ದಲ್ಲಿ ಅವರು ಕೇವಲ ಊಹೆಯನ್ನು ಮತ್ತು ದೇಹೇಚ್ಛೆಯನ್ನು ಮಾತ್ರವೇ ಅನುಸರಿಸುತ್ತಿದ್ದಾರೆ. ವಾಸ್ತವದಲ್ಲಿ ಅವರ ಪ್ರಭುವಿನ ಕಡೆಯಿಂದ ಅವರಿಗೆ ಮಾರ್ಗದರ್ಶನ ಬಂದಿದೆ. (ಹೀಗಿದ್ದೂ ಅವರು ಅದನ್ನು ಬಿಟ್ಟು ಬಿಡಲಿಲ್ಲ).

24

ಮನುಷ್ಯನಿಗೆ ತಾನಿಚ್ಛಿಸಿದ್ದು ದಕ್ಕುವುದೇ?

25

ಆದರೆ ಪರಲೋಕ ಮತ್ತು ಇಹಲೋಕ ಅಲ್ಲಾಹ ನಿಗಿರುವುದಾಗಿದೆ.

26

ಆಕಾಶಗಳಲ್ಲಿ ಎಷ್ಟೋ ದೇವಚರರಿದ್ದಾರೆ. ಅಲ್ಲಾಹು ಉದ್ದೇಶಿಸುವ ಮತ್ತು ತೃಪ್ತಿಪಡುವ ವರಿಗೆ (ಶಿಫಾರಸು ಮಾಡಲು) ಅವನು ಅನು ಮತಿ ನೀಡಿದ ಬಳಿಕವಲ್ಲದೆ ಆ ದೇವಚರರ ಶಿಫಾರಸು ಸ್ವಲ್ಪವೂ ಉಪಯುಕ್ತವಾಗಲಾರದು.

27

ಆದರೆ ಪರಲೋಕವನ್ನು ನಂಬದವರು ದೇವಚರರಿಗೆ ಸ್ತ್ರೀ ನಾಮಗಳನ್ನು ಹಾಕುತ್ತಾರೆ.

28

ಅದರ ಕುರಿತಾದ ಯಾವ ಜ್ಞಾನವೂ ಅವರಿಗೆ ಇಲ್ಲ. ಅವರು ಕೇವಲ ಊಹೆಯನ್ನು ಮಾತ್ರವೇ ಅನುಸರಿಸುತ್ತಾರೆ. ಊಹೆಯು ಸತ್ಯದ ಸ್ಥಾನದಲ್ಲಿ ಯಾವ ಪ್ರಯೋಜನಕ್ಕೂ ಬಾರದು.

29

ಆದುದರಿಂದ ನಮ್ಮ ಸ್ಮರಣೆಯಿಂದ ವಿಮುಖನಾಗುವ ಹಾಗೂ ಲೌಕಿಕ ಜೀವನದ ಹೊರತು ಇನ್ನೇನನ್ನೂ ಬಯಸದವರನ್ನು ತಾವು ಅವಗಣಿ ಸಿಬಿಡಿರಿ.

30

ಅದು ಅವರ ಅರಿವಿನ ಪರಾಕಾಷ್ಠೆ ಅಷ್ಟೇ. ಅವನ ಮಾರ್ಗದಿಂದ ಯಾರು ತಪ್ಪಿದ್ದಾರೆ ಮತ್ತು ಯಾರು ಸನ್ಮಾರ್ಗದಲ್ಲಿದ್ದಾರೆ ಎಂಬುದನ್ನು ತಮ್ಮ ಪ್ರಭು ಚೆನ್ನಾಗಿ ಬಲ್ಲನು.

31

ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವು ದೆಲ್ಲವೂ ಅಲ್ಲಾಹನದ್ದಾಗಿದೆ. ದುಷ್ಕರ್ಮಿಗಳಿಗೆ ಅಲ್ಲಾಹನು ಅವರ ಕರ್ಮಗಳ ಪ್ರತಿಫಲ ನೀಡಲಿಕ್ಕಾಗಿ ಮತ್ತು ಸತ್ಕರ್ಮ ನಿರ್ವಹಿಸಿದವರಿಗೆ ಅತಿ ಉತ್ತಮ ಪ್ರತಿಫಲ ನೀಡಲಿಕ್ಕಾಗಿ.

32

ಆ ಸತ್ಕರ್ಮಿಗಳು ಯಾರೆಂದರೆ ದೊಡ್ಡ ಪಾಪ ಕೃತ್ಯಗಳನ್ನು ಮತ್ತು ಅನೈತಿಕ ಕೃತ್ಯಗಳನ್ನು ವರ್ಜಿಸುವವರು. ಸಣ್ಣ ತಪ್ಪುಗಳ ಹೊರತು. ನಿಸ್ಸಂದೇಹವಾಗಿಯೂ ತಮ್ಮ ಪ್ರಭುವಿನ ಕ್ಷಮಾ ಶೀಲತೆಯು ಬಹಳ ವಿಶಾಲವಾಗಿದೆ. ಅವನು ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದ ಸಂದರ್ಭದಲ್ಲೂ ಹಾಗೂ ನೀವು ನಿಮ್ಮ ಮಾತೆಯರ ಉದರಗಳಲ್ಲಿ ಭ್ರೂಣಾವಸ್ಥೆಯಲ್ಲಿದ್ದಾಗಲೂ ಅವನು ನಿಮ್ಮನ್ನು ಚೆನ್ನಾಗಿ ಬಲ್ಲನು. ಆದುದರಿಂದ ನೀವು ನಿಮ್ಮ ಆತ್ಮ ಪ್ರಶಂಸೆ ಮಾಡಿಕೊಳ್ಳದಿರಿ. ನಿಜವಾದ ಧರ್ಮನಿಷ್ಟನು ಯಾರೆಂಬುದನ್ನು ಅವನೇ ಚೆನ್ನಾಗಿ ಬಲ್ಲವನು.

33

(ಸಂದೇಶವಾಹಕರೇ,) ದೇವಮಾರ್ಗದಿಂದ ವಿಮುಖನಾದವನನ್ನು ಕಂಡಿರಾ?

34

ಸ್ವಲ್ಪ ಮಾತ್ರ ಕೊಟ್ಟು ಬಳಿಕ ತಡೆಹಿಡಿದವನು.

35

ಅವನ ಬಳಿ ಅದೃಶ್ಯ ಜ್ಞಾನವೇನಾದರೂ ಇದ್ದು ಆ ಮೂಲಕ ಸತ್ಯವನ್ನು ಕಂಡರಿಯುತ್ತಿರುವನೇ?

36

37

ಅಥವಾ ಮೂಸಾರ ಹಾಗೂ ಆದೇಶಗಳನ್ನು ಪರಿಪೂರ್ಣ ಪಾಲಿಸಿದ ಇಬ್ರಾಹೀಮ್‍ರ ಗ್ರಂಥ ಗಳಲ್ಲಿ ತಿಳಿಸಲಾಗಿರುವ ವಿಷಯಗಳ ಬಗ್ಗೆ ಅವನಿಗೆ ತಿಳಿಸಿಕೊಡಲಾಗಿಲ್ಲವೇ?

38

ಯಾವನೇ (ಪಾಪದ ಹೊರೆ) ಹೊರುವಾತನು ಇನ್ನೊಬ್ಬನ (ಪಾಪದ) ಹೊರೆ ಹೊರಲಾರನು.

39

ಮನುಷ್ಯನಿಗೆ ತಾನೇ ಪರಿಶ್ರಮಿಸಿದುದರ ಹೊರತು ಬೇರೇನೂ ಇಲ್ಲ.

40

ಅವನ ಪರಿಶ್ರಮವನ್ನು ಸದ್ಯವೇ ತೋರಿಸಿ ಕೊಡಲಾಗುವುದು.

41

ಅನಂತರ ಅವನ ಸಂಪೂರ್ಣ ಪ್ರತಿಫಲವನ್ನು ಕೊಡಲಾಗುವುದು.

42

ಅಂತಿಮ ಗುರಿ ನಿಮ್ಮ ಪ್ರಭುವಿನ ಕಡೆಗೇ ಇದೆ.

43

ಅವನೇ ನಗಿಸಿದನು ಮತ್ತು ಅಳುವಂತೆ ಮಾಡಿದನು.

44

ಅವನೇ ಮರಣ ಕೊಟ್ಟನು ಮತ್ತು ಅವನೇ ಜೀವಂತಗೊಳಿಸಿದನು.

45

ಅವನೇ ಗಂಡು ಮತ್ತು ಹೆಣ್ಣುಗಳ ಜೊತೆಯನ್ನು ಸೃಷ್ಟಿ ಮಾಡಿದನು.

46

ಒಂದು ಶುಕ್ಲ ಬಿಂದುವಿನಿಂದ, (ಗರ್ಭಾಶಯ ದಲ್ಲಿ) ಅದು ಸುರಿಸಲ್ಪಟ್ಟಾಗ

47

ಇನ್ನೊಂದು ಜೀವನ (ಪುನರುಜ್ಜೀವನ) ಕೊಡುವುದೂ ಅವನ ವಚನಬದ್ಧತೆಯಾಗಿದೆ.

48

ಅವನೇ ಶ್ರೀಮಂತಗೊಳಿಸಿದನು ಮತ್ತು (ಧನದ) ನಿಕ್ಷೇಪಗಾರನಾಗಿ ಮಾಡಿದನು.

49

ಅವನೇ ಶಿಅïರಾ ನಕ್ಷತ್ರದ (ತ್ರಿಶಂಕು ನಕ್ಷತ್ರದ) ಪ್ರಭು .

50

ಅವನೇ `ಆದ್’ ಎಂಬ ಆದ್ಯ ಜನಾಂಗವನ್ನು ನಾಶಗೊಳಿಸಿದವನು.

51

ಮತ್ತು ಸಮೂದ್ ಜನಾಂಗವನ್ನು ಅವರಲ್ಲಿ ಯಾರೂ ಉಳಿಯದಂತೆ ಅಳಿಸಿಬಿಟ್ಟನು.

52

ಅವರಿಗಿಂತ ಮುಂಚೆ ನೂಹರ ಜನಾಂಗವನ್ನೂ ನಾಶಗೊಳಿಸಿದನು. ಏಕೆಂದರೆ, ಅವರು ಮಹಾ ಅಕ್ರಮಿಗಳೂ ಮತ್ತು ಧಿಕ್ಕಾರಿಗಳೂ ಆಗಿದ್ದರು.

53

ಅಧೋಮುಖವಾಗಿ ಮಗುಚಿಬಿದ್ದ ಆ ನಾಡನ್ನು ಅವನು ಧ್ವಂಸಗೊಳಿಸಿದನು.

54

ತರುವಾಯ ಅದನ್ನು ಆವರಿಸಿದುದೆಲ್ಲವೂ ಆವರಿಸಿ ಬಿಟ್ಟಿತು.

55

ಆದುದರಿಂದ (ಎಲೈ ಮಾನವಾ,) ನಿನ್ನ ಪ್ರಭುವಿನ ಯಾವ ಯಾವ ಅನುಗ್ರಹಗಳ ಬಗ್ಗೆ ನೀನು ತರ್ಕಿಸುತ್ತಿರುವೆ?

56

ಇವರು (ಪ್ರವಾದಿ ಮುಹಮ್ಮದ್) ಈ ಹಿಂದೆ ಬಂದಿದ್ದ ಎಚ್ಚರಿಕೆಗಾರರ ಪೈಕಿ ಒಬ್ಬ ಎಚ್ಚರಿಕೆಗಾರರಾಗಿದ್ದಾರೆ.

57

ಬರಲಿರುವ ಘಳಿಗೆಯು (ಸಂಭವ) ಸನ್ನಿಹಿತವಾಗಿದೆ.

58

ಅಲ್ಲಾಹನ ಹೊರತು ಯಾರೂ ಅದನ್ನು ತಡೆದು ಸರಿಸುವವರಿಲ್ಲ.

59

ನೀವೀಗ ಈ ವಾರ್ತೆಯ (ಖುರ್‍ಆನಿನ) ಬಗ್ಗೆ ಅಚ್ಚರಿಪಡುತ್ತಿರುವುದೇ?

60

ನೀವು ನಗುತ್ತೀರಾ? ಅಳುವುದಿಲ್ಲವೇ?

61

ನೀವು ಹೊಣೆಗಾರಿಕೆಯಿಂದ ನಿರ್ಲಕ್ಷ್ಯರಾಗಿರುವಿರಿ.

62

ಆದುದರಿಂದ ನೀವು ಅಲ್ಲಾಹನ ಮುಂದೆ ಸಾಷ್ಟಾಂಗವೆರಗಿರಿ ಮತ್ತು ಅವನನ್ನು ಆರಾಧಿಸಿರಿ.