ತ್ವೂರ್ ಪರ್ವತದ ಆಣೆ.ಹರಡಿದ ಹಾಳೆ ಯಲ್ಲಿ ಬರೆದ ತೆರೆದಿಟ್ಟ ಗ್ರಂಥದ ಆಣೆ.`ಬೈತುಲ್ ಮಅï ಮೂರ್’ನ ಆಣೆ.`ಬೈತುಲ್ ಮಅï ಮೂರ್’ನ ಆಣೆ.ಎತ್ತರಿಸಲ್ಪಟ್ಟ ಛಾವಣಿಯ ಆಣೆ.
ನಿನ್ನ ಪ್ರಭುವಿನ ಕಡೆಯ ಯಾತನೆ ಖಂಡಿತ ಸಂಭವಿಸಲಿದೆ.
ಅದನ್ನು ತಡೆಯುವವರು ಯಾರೂ ಇಲ್ಲ.
ಆಕಾಶವು ತೀವ್ರವಾಗಿ ನಡುಗುವ ದಿನ
ಹಾಗೂ ಪರ್ವತಗಳು ವೇಗವಾಗಿ ಹಾರಾಡುವ ದಿನ (ಅದು ಸಂಭವಿಸುವುದು.)
ಅಂದು ಸತ್ಯನಿಷೇಧಿಗಳಿಗೆ ವಿನಾಶವಿದೆ.
ಅವರು ಯಾರೆಂದರೆ ಅನಾವಶ್ಯ ಕಾರ್ಯಗಳಲ್ಲಿ ಮಗ್ನರಾಗಿ ಆಟವಾಡುತ್ತಿದ್ದವರು.
ಅವರನ್ನು ನರಕಾಗ್ನಿಗೆ ಬಲವಾಗಿ ತಳ್ಳಿ ಹಾಕಲ್ಪಡುವ ದಿನ.
``ನೀವು ನಿಷೇಧಿಸುತ್ತಲಿದ್ದ ನರಕ ಇದುವೇ ಆಗಿದೆ’’ (ಎಂದು ಅವರೊಂದಿಗೆ ಹೇಳಲ್ಪಡುವುದು)
(ಈಗ ಹೇಳಿರಿ)-`ಇದು ಮಾಟವೇ? ಅಥವಾ ನಿಮಗೆ ಕಾಣುವುದಿಲ್ಲವೇ?
ಇದರೊಳಗೆ ನೀವು ಪ್ರವೇಶಿಸಿರಿ. ನೀವು ಸಹಿಸಿದರೂ ಸಹಿಸದಿದ್ದರೂ ನಿಮ್ಮ ಮಟ್ಟಿಗೆ ಸಮಾನವಾಗಿದೆ. ನಿಜವಾಗಿಯೂ ನೀವು ಎಸಗಿದ್ದುದರ ಪ್ರತಿಪಲವನ್ನೇ ನಿಮಗೆ ನೀಡಲಾಗುತ್ತಿದೆ. (ಎಂದು ಹೇಳಲಾಗುವುದು.)
ಖಂಡಿತ ಧರ್ಮನಿಷ್ಠರು ಸ್ವರ್ಗೋದ್ಯಾನಗಳಲ್ಲಿಯೂ ಸುಖ ಸೌಭಾಗ್ಯಗಳಲ್ಲಿಯೂ ಇರುವರು.
ಅವರ ಪ್ರಭು ಅವರಿಗೆ ದಯಪಾಲಿಸಲಿರುವ ವಸ್ತುಗಳಿಂದ ಸುಖಾನುಭವ ಹೊಂದುವರು. ಮತ್ತು ಅವರ ಪ್ರಭು ಅವರನ್ನು ನರಕ ಶಿಕ್ಷೆಯಿಂದ ರಕ್ಷಿಸಿರುವನು.
ನೀವು ಮಾಡುತ್ತಲಿದ್ದ ಕರ್ಮಗಳ ಪ್ರತಿಫಲವಾಗಿ ಸಂತೋಷದಿಂದ ಭುಜಿಸಿರಿ, ಕುಡಿಯಿರಿ (ಎಂದು ಅವರೊಂದಿಗೆ ಹೇಳಲ್ಪಡುವುದು)
ಅವರು ಸಾಲು ಸಾಲಾಗಿ ಇರಿಸಲಾಗಿರುವ ಪೀಠಗಳಲ್ಲಿ ಒರಗಿ ಕುಳಿತಿರುವರು ಮತ್ತು ವಿಶಾಲಾಕ್ಷಿಗಳಾದ ಸುಂದರಿಯರನ್ನು ಅವರಿಗೆ ನಾವು ವಿವಾಹ ಮಾಡಿಕೊಡುವೆವು.
ಸತ್ಯವಿಶ್ವಾಸಿಗಳನ್ನೂ ಅವರನ್ನು ಸತ್ಯವಿಶ್ವಾಸ ದಲ್ಲಿ ಅನುಸರಿಸಿದ ಅವರ ಸಂತಾನಗಳನ್ನೂ ನಾವು ಅವರೊಂದಿಗೆ ಸ್ವರ್ಗದಲ್ಲಿ ಸೇರಿಸುವೆವು ಮತ್ತು ನಾವು ಅವರ ಕರ್ಮದಲ್ಲೇನೂ ಕಡಿತಗೊಳಿಸಲಾರೆವು. ಪ್ರತಿಯೊಬ್ಬನೂ ತನ್ನ ಸಂಪಾದನೆಗೆ ಅಡವಿಡಲ್ಪಟ್ಟವನಾಗಿದ್ದಾನೆ.
ಅವರು ಇಚ್ಛಿಸುವ ಹಣ್ಣುಗಳನ್ನೂ, ಮಾಂಸವನ್ನೂ ನಾವು ಅವರಿಗೆ ಯಥೇಚ್ಛವಾಗಿ ಒದಗಿಸುವೆವು.
ಅವರು ಪರಸ್ಪರ ಪಾನ ಪಾತ್ರೆಗಳನ್ನು ಬದಲಾಯಿಸಿಕೊಳ್ಳುವರು. ಯಾವುದೇ ಅಸಂಬದ್ಧ ಮಾತಾಗಲಿ, ದುರ್ನಡೆಯಾಗಲಿ ಅಲ್ಲಿರಲಾರದು .
ಅವರಿಗಾಗಿಯೇ ಮೀಸಲಿರುವ ಬಾಲಕರು (ಅವರ ಸೇವೆಗಾಗಿ) ಅವರನ್ನು ಸುತ್ತುತ್ತಲಿರುವರು. ಅವರು ಚಿಪ್ಪಿಯೊಳಗಣ ಮುತ್ತಿನಂತೆ ಸುಂದರರಾಗಿರುವರು.
ಅವರು ಪರಸ್ಪರ ಪ್ರಶ್ನಿಸುತ್ತಾ ಅನ್ಯೋನ್ಯತೆ ಯಿಂದ ಅಭಿಮುಖರಾಗುವರು.
ಅವರು ಹೇಳುವರು; ನಾವು ಇಹದಲ್ಲಿ ನಮ್ಮ ಮನೆಯವರೊಡನಿದ್ದಾಗ (ಅಲ್ಲಾಹನನ್ನು) ಹೆದರುವವರಾಗಿದ್ದೆವು.
ಅದರಿಂದಾಗಿ ಅಲ್ಲಾಹನು ನಮ್ಮ ಮೇಲೆ ಅನು ಗ್ರಹ ತೋರಿದನು ಮತ್ತು ರೋಮಕೂಪದಲ್ಲೂ ತೂರಿಕೊಳ್ಳುವ ಸುಡು ಬೆಂಕಿಯ ಶಿಕ್ಷೆಯಿಂದ ನಮ್ಮನ್ನು ರಕ್ಷಿಸಿಬಿಟ್ಟನು.
ನಾವು ಗತಜೀವನದಲ್ಲಿ ಅವನಿಗೆ ಮಾತ್ರ ಆರಾಧಿಸುತ್ತಿದ್ದೆವು. ಅವನು ನಿಜಕ್ಕೂ ಪರಮೋಪಕಾರಿಯೂ, ಪರಮೋದಾರಿಯೂ ಆಗಿರುವನು.
ಆದುದರಿಂದ (ಸಂದೇಶವಾಹಕರೇ,) ತಾವು ಉಪದೇಶ ಮಾಡುತ್ತಲಿರಿ. ತಮ್ಮ ಪ್ರಭುವಿನ ಅನುಗ್ರಹದಿಂದ, ತಾವು ಜೋತಿಷಿಯೋ ಹುಚ್ಚನೋ ಅಲ್ಲ.
ಅವನು ಕವಿ, ಅವನಿಗೆ ಏನಾದರೂ ಕಾಲ ವಿಪತ್ತು ಬರುವುದನ್ನು ನಾವು ಕಾಯುತ್ತಿದ್ದೇವೆ ಎಂದಾಗಿದೆಯೇ ಅವರು ಹೇಳುತ್ತಿರುವುದು?
ತಾವು ಹೇಳಿರಿ. `ನೀವು ಕಾಯುತ್ತಲೇ ಇರಿ, ನಿಮ್ಮ ಜೊತೆ ನಾನೂ ಕಾಯುವವರಲ್ಲಿ ಒಳ ಪಟ್ಟವನಾಗಿದ್ದೇನೆ.
ಅವರ ಬುದ್ದಿಯು ಅವರಿಗೆ ಇಂತಹುದೇ ಮಾತು ಗಳನ್ನಾಡಲು ಹೇಳುತ್ತಿದೆಯೇ? ಅಥವಾ ಅವರು ಧಿಕ್ಕಾರದಲ್ಲಿ ಮಿತಿಮೀರಿರುವ ಜನರಾಗಿರುವರೇ?
ಅಥವಾ ಇವನು (ಪ್ರವಾದಿ) ಖುರ್‍ಆನನ್ನು ಸ್ವತಃ ಸೃಷ್ಟಿಸಿಕೊಂಡಿರುವನೆಂದು ಅವರು ಹೇಳು ತ್ತಾರೆಯೇ? ವಾಸ್ತವದಲ್ಲಿ ಅವರು ಸತ್ಯವಿಶ್ವಾಸ ವನ್ನು ಸ್ವೀಕರಿಸುವುದಿಲ್ಲ.
ಅವರು ಸತ್ಯ ಹೇಳುವವರಾಗಿದ್ದರೆ ಇದೇ ಮಟ್ಟದ ಒಂದು ಸಂದೇಶವನ್ನು ಅವರು ರಚಿಸಿ ತರಲಿ.
ಅಥವಾ ಅವರು ಒಬ್ಬ ಸೃಷ್ಟಿಕರ್ತನಿಲ್ಲದೆ ಸ್ವಯಂ ಸೃಷ್ಟಿಸಲ್ಪಟ್ಟರೇ? ಅಥವಾ ಅವರು ಸೃಷ್ಟಿಕರ್ತರೇ?
ಅಥವಾ ಆಕಾಶಗಳನ್ನು ಮತ್ತು ಭೂಮಿಯನ್ನು ಅವರು ಸೃಷ್ಟಿಸಿದ್ದಾರೆಯೇ? ವಾಸ್ತವದಲ್ಲಿ ಅವರು ಏನನ್ನೂ ದೃಢವಾಗಿ ನಂಬುವುದಿಲ್ಲ.
ಅಥವಾ ತಮ್ಮ ಪ್ರಭುವಿನ ಭಂಡಾರಗಳು ಅವರ ವಶದಲ್ಲಿವೆಯೇ? ಅಥವಾ ಅವರಾಗಿದ್ದಾರೆಯೇ ಪರಮಾಧಿಕಾರಿಗಳು?
ಅಥವಾ ಏರಿ ಹೋಗಿ (ಆಕಾಶದ) ರಹಸ್ಯಗಳನ್ನು ಕೇಳಲು ಸಾಧ್ಯವಾಗುವಂತಹ ಏಣಿಯೇನಾ ದರೂ ಅವರಲ್ಲಿ ಇದೆಯೇ? (ಹಾಗಿದ್ದಲ್ಲಿ) ಅವರ ಪೈಕಿ ರಹಸ್ಯವನ್ನು (ಕದ್ದು) ಕೇಳಿದವನು ಯಾವುದಾದರೂ ವ್ಯಕ್ತ ಪುರಾವೆಯನ್ನು ತರಲಿ.
ಅಥವಾ ಅಲ್ಲಾಹನಿಗೆ ಪುತ್ರಿಯರು ಮತ್ತು ನಿಮಗೆ ಪುತ್ರರೇನು?
ಅಥವಾ ಅವರು ಋಣಭಾರದಲ್ಲಿ ಮುಳುಗುವಂತಾಗಲು, ತಾವು ಅವರಿಂದೇನಾದರೂ ಪ್ರತಿಫಲ ಕೇಳುತ್ತೀರಾ?
ಅಥವಾ ಅವರ ಬಳಿ ಅಗೋಚರ ಜ್ಞಾನವಿದ್ದು ಅದನ್ನು ಅವರು ಬರೆಯುತ್ತಿರುವರೇ?
ಅಥವಾ ಅವರೇನಾದರೂ ಕುತಂತ್ರವನ್ನು ಹೂಡ ಬಯಸುತ್ತಾರೆಯೇ? ಹಾಗಾದರೆ ಸತ್ಯನಿಷೇಧಿಗಳ ಕುತಂತ್ರವು ಅವರ ಮೇಲೆಯೇ ತಿರುಗಿ ಬೀಳಲಿದೆ.
ಅಥವಾ ಅವರಿಗೆ ಅಲ್ಲಾಹನ ಹೊರತು ಬೇರೆ ದೇವನಿದ್ದಾನೆಯೇ? ಅವರು ಮಾಡುತ್ತಿರುವ ಸಹಭಾಗಿತ್ವದಿಂದ ಅಲ್ಲಾಹನು ಪರಿಶುದ್ಧನು.
ಆಕಾಶದಿಂದ ಒಂದು ತುಂಡು ಉದುರಿ ಬೀಳುತ್ತಿರುವುದನ್ನು ಕಂಡರೂ, ಅದು ದಟ್ಟೈಸಿದ ಮೋಡಗಳು ಎಂದು ಅವರು ಹೇಳುವರು.
ಆದುದರಿಂದ (ಸಂದೇಶವಾಹಕರೇ,) ಅವರು ಸ್ಮøತಿ ತಪ್ಪಿ ಬೀಳುವ ದಿನವನ್ನು ತಲಪುವವರೆಗೂ (ಮರಣ ದವರೆಗೂ) ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿರಿ.
ಅದು ಅವರ ಯಾವ ಕುತಂತ್ರವೂ ಅವರಿಗೆ ಫಲಕಾರಿಯಾಗದ, ಮತ್ತು ಅವರಿಗೆ ನೆರವು ಸಿಗದ ದಿನ.
ಅಕ್ರಮಿಗಳಿಗೆ ಇದಲ್ಲದೆ (ಬೇರೆ) ಶಿಕ್ಷೆಯೂ ಇದೆ. ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.
(ಸಂದೇಶವಾಹಕರೇ,) ತಾವು ತಮ್ಮ ಪ್ರಭುವಿನ ತೀರ್ಮಾನ ಬರುವವರೆಗೆ ತಾಳ್ಮೆ ವಹಿಸಿರಿ. ತಾವು ನಮ್ಮ ಕಣ್ಗಾವಲಿನಲ್ಲೇ ಇದ್ದೀರಿ. ತಾವು ಎದ್ದೇಳುವ ಸಂದರ್ಭದಲ್ಲಿ ತಮ್ಮ ಪ್ರಭುವನ್ನು ಪ್ರಶಂಸೆಯೊಂದಿಗೆ ಕೊಂಡಾಡಿರಿ.
ರಾತ್ರೆಯಲ್ಲಿ ಸ್ವಲ್ಪ ಸಮಯವೂ ಮತ್ತು ನಕ್ಷತ್ರಗಳು ಅಸ್ತಮಿಸುವಾಗಲೂ ಅವನ (ಅಲ್ಲಾಹನ) ಪರಿಶು ದ್ಧತೆಯನ್ನು ಪ್ರಕೀರ್ತಿಸಿರಿ .