ಯಾಸೀನ್
ಸತ್ವಪೂರ್ಣವಾದ ಖುರ್‍ಆನಿನಾಣೆ.
ಖಂಡಿತ ತಾವು ಸಂದೇಶವಾಹಕರಲ್ಲಿ ಸೇರಿದವರು.
ತಾವು ನೇರ ಮಾರ್ಗದಲ್ಲೇ ಇರುವಿರಿ.
(ಈ ಖುರ್‍ಆನ್) ಅತ್ಯಂತ ಪ್ರತಾಪಶಾಲಿಯೂ ಪರಮದಯಾಳುವೂ ಆದ ಅಲ್ಲಾಹನಿಂದ ಅವತೀ ರ್ಣಗೊಂಡಿದೆ.
ಇದು ಒಂದು ಜನಾಂಗಕ್ಕೆ ನೀವು ಎಚ್ಚರಿಕೆ ಕೊಡುವಂತಾಗಲು. ಅವರ ಪೂರ್ವಜರಿಗೆ ಮುನ್ನೆಚ್ಚರಿಕೆ ನೀಡಲಾಗಿಲ್ಲ. ಆದ್ದರಿಂದ ಅವರು ನಿರ್ಲಕ್ಷರಾಗಿರುವರು.
ಅವರಲ್ಲಿ ಹೆಚ್ಚಿನವರ ಮೇಲೂ ವಚನವು ನಿಜಗೊಂಡಿದೆ. ಆದುದರಿಂದ ಅವರು ವಿಶ್ವಾಸವಿರಿಸಲಾರರು.
ನಿಜವಾಗಿಯೂ ನಾವು ಅವರ ಕೊರಳುಗಳಿಗೆ ಬೇಡಿ ತೊಡಿಸಿದ್ದೇವೆ. ಅದು ಗಡ್ಡಮೂಳೆಗೆ ಬಿಗಿಯಲ್ಪಟ್ಟಿದೆ. ಅವರು ತಲೆಯನ್ನು ಮೇಲೆತ್ತಿರುತ್ತಾರೆ .
ನಾವು ಒಂದು ತಡೆಯನ್ನು ಅವರ ಹಿಂದೆಯೂ ಇನ್ನೊಂದು ತಡೆಯನ್ನು ಅವರ ಮುಂದೆಯೂ ನಿಲ್ಲಿಸಿದ್ದೇವೆ. ಹೀಗೆ ನಾವು ಅವರನ್ನು ಮುಚ್ಚಿ ಬಿಟ್ಟಿದ್ದೇವೆ. ಅವರಿಗೆ ಈಗ ಏನೂ ಕಾಣುವುದಿಲ್ಲ.
ಅವರಿಗೆ ತಾವು ಎಚ್ಚರಿಕೆ ಕೊಟ್ಟರೂ ಕೊಡದಿದ್ದರೂ ಸರಿಯೇ. ಅವರು ವಿಶ್ವಾಸ ಸ್ವೀಕರಿಸುವವರಲ್ಲ.
ಖುರ್‍ಆನನ್ನು ಅನುಸರಿಸುವವರಿಗೆ ಮತ್ತು ದಯಾಮಯನಾದ ಅಲ್ಲಾಹನನ್ನು ಪ್ರತ್ಯಕ್ಷ ನೋಡದೆಯೇ ಭಯಪಡುವವರಿಗೆ ಮಾತ್ರ ನೀವು ಎಚ್ಚರಿಕೆ ನೀಡಬಲ್ಲಿರಿ. ಅಂಥವರಿಗೆ ಕ್ಷಮಾದಾನ ಮತ್ತು ಸನ್ಮಾನ್ಯ ಪ್ರತಿಫಲದ ಶುಭವಾರ್ತೆ ನೀಡಿರಿ.
ಮೃತರನ್ನು ನಾವು ಖಂಡಿತ ಜೀವಂತ ಗೊಳಿಸಲಿದ್ದೇವೆ. ಅವರು ಮಾಡಿದ ಕರ್ಮಗಳನ್ನೂ ಅವರನ್ನು ಅನುಕರಿಸಿದ ಅವರ ಹಿಂಗಾಮಿಗಳ ಕರ್ಮಗಳನ್ನೂ ನಾವು ಬರೆಯುತ್ತಿದ್ದೇವೆ. ಎಲ್ಲವನ್ನು ನಾವು ಒಂದು ಸ್ಪಷ್ಟವಾದ ಗ್ರಂಥದಲ್ಲಿ ಕ್ಲಪ್ತ ಗೊಳಿಸಿದ್ದೇವೆ.
ಇವರಿಗೆ ಒಂದು ಗ್ರಾಮದವರ ಉದಾಹರಣೆಯನ್ನು ಕೊಡಿರಿ. ಆ ಗ್ರಾಮದವರಿಗೆ ದೂತರು ಬಂದಾಗ.
ನಾವು ಅವರ ಕಡೆಗೆ ಇಬ್ಬರು ಸಂದೇಶವಾಹ ಕರನ್ನು ಕಳುಹಿಸಿದೆವು. ಆಗ ಅವರು ಇಬ್ಬರನ್ನೂ ಸುಳ್ಳಾಗಿಸಿದರು. ಅನಂತರ ನಾವು ಮೂರನೆಯವನನ್ನು ಕಳುಹಿಸಿ ಅವರಿಬ್ಬರನ್ನು ಬಲಪಡಿಸಿದೆವು. ಅವರೆಲ್ಲರೂ `ನಾವು ನಿಮ್ಮ ಕಡೆಗೆ ಸಂದೇಶ ವಾಹಕರಾಗಿ ಕಳುಹಿಸಲ್ಪಟ್ಟವರು’ ಎಂದರು.
ನಾಡಿನವರು `ನೀವು ನಮ್ಮಂತಹ ಮನುಷ್ಯರಲ್ಲದೆ ಇನ್ನೇನೂ ಅಲ್ಲ. ದಯಾಮಯನಾದ ಅಲ್ಲಾಹನು ಏನನ್ನೂ ಇಳಿಸಿಲ್ಲ. ನೀವು ಬರೇ ಸುಳ್ಳರು’ ಎಂದರು.
ಸಂದೇಶವಾಹಕರು ಹೇಳಿದರು, ‘ನಾವು ಖಂಡಿತ ವಾಗಿಯೂ ನಿಮ್ಮ ಕಡೆಗೆ ಕಳುಹಿಸಲಾದ ಸಂದೇಶ ವಾಹಕರೆಂದು ನಮ್ಮ ಪ್ರಭು ತಿಳಿದಿದ್ದಾನೆ.
ಪ್ರಮಾಣಬದ್ಧ ಸಂದೇಶವನ್ನು ತಲುಪಿಸುವ ಹೊರತು ಇನ್ನಾವ ಹೊಣೆಯೂ ನಮ್ಮ ಮೇಲಿಲ್ಲ’.
ಅವರು ಹೇಳಿದರು; ‘ನಿಮ್ಮ ದೆಸೆಯಿಂದ ನಮಗೆ ಅಶುಭವುಂಟಾಗಿದೆ. ನೀವು ಈ ಕಾರ್ಯವನ್ನು ಕೈ ಬಿಡದಿದ್ದರೆ, ನಾವು ನಿಮಗೆ ಕಲ್ಲೆಸೆಯುತ್ತೇವೆ. ಮತ್ತು ನಿಮಗೆ ನಮ್ಮಿಂದ ವೇದನಾಯುಕ್ತ ಶಿಕ್ಷೆ ತಟ್ಟಲಿದೆ!’
ಅದಕ್ಕೆ ಸಂದೇಶವಾಹಕರು “ನಿಮ್ಮ ಅಪಶಕು ನವು ನಿಮ್ಮಲ್ಲೇ ಇದೆ. ನಿಮಗೆ ಉಪದೇಶ ನೀಡಿದ ನಂತರವೂ! (ನೀವು ಹೀಗೆ ಹೇಳುತ್ತಿರುವಿರಾ?) ನಿಜಕ್ಕೂ ನೀವು ಮಿತಿಮೀರಿದವರಾಗಿರುತ್ತೀರಿ” ಎಂದು ಉತ್ತರಿಸಿದರು.
ನಗರದ ಕೊನೆಯ ಅಂಚಿನಿಂದ ಒಬ್ಬನು ಓಡುತ್ತಾ ಬಂದು ಹೀಗೆಂದನು, “ಓ ನನ್ನ ಜನಾಂಗದವರೇ, ನೀವು ಈ ಸಂದೇಶವಾಹಕರನ್ನು ಅನುಸರಿಸಿರಿ.
ನಿಮ್ಮಿಂದ ಯಾವ ಪ್ರತಿಫಲವನ್ನೂ ಕೇಳದ ಹಾಗೂ ಸನ್ಮಾರ್ಗ ಪ್ರಾಪ್ತರಾದ ಇವರನ್ನು ಅನುಸರಿಸಿರಿ.
ಯಾವನು ನನ್ನನ್ನು ಸೃಷ್ಟಿಸಿರುವನೋ ಮತ್ತು ಯಾವನ ಕಡೆಗೆ ನೀವೆಲ್ಲರೂ ಮರಳಿ ಹೋಗಲಿರುವಿರೋ ಅವನನ್ನು ಆರಾಧಿಸದಿರಲು ನನಗೇನು ತಡೆಯಿದೆ?
ನಾನೇನು ಅವನನ್ನು ಬಿಟ್ಟು ಇತರ ಆರಾಧ್ಯರನ್ನು ಸ್ವೀಕರಿಸಿಕೊಳ್ಳಬೇಕೆ? ದಯಾಮಯನಾದ ಅಲ್ಲಾಹನು ನನಗೇನಾದರೂ ಕೇಡನ್ನು ಬಯಸಿದರೆ ಈ ಆರಾಧ್ಯರ ಶಿಫಾರಸು ನನಗೇನೂ ಫಲಕಾರಿಯಾಗದು. ಅವರು ನನ್ನನ್ನು ಪಾರುಗೊಳಿಸಲಾರರು.
ಹಾಗೆ ಮಾಡಿದರೆ ನಾನು ಖಂಡಿತವಾಗಿಯೂ ಸ್ಪಷ್ಟವಾದ ದುರ್ಮಾಗದಲ್ಲೇ ಉಳಿಯುವೆನು.
ನಾನು ನಿಮ್ಮ ಪ್ರಭುವಿನ ಮೇಲೆ ಖಂಡಿತ ವಿಶ್ವಾಸವಿರಿಸಿದ್ದೇನೆ. ಆದ್ದರಿಂದ ನೀವು ನನ್ನ ಮಾತನ್ನು ಕೇಳಿರಿ”.
. ‘ಸ್ವರ್ಗದಲ್ಲಿ ಪ್ರವೇಶಿಸು’ ಎಂದು ಆ ವ್ಯಕ್ತಿಗೆ ಹೇಳಲಾಯಿತು. ಅವನು, “ಹಾ! ನನ್ನ ಪ್ರಭುವು ನನ್ನನ್ನು ಕ್ಷಮಿಸಿದ್ದನ್ನೂ ನನ್ನನ್ನು ಸನ್ಮಾನ್ಯ ಜನರಲ್ಲಿ ಸೇರಿಸಿದ್ದನ್ನೂ ನನ್ನ ಜನಾಂಗ ತಿಳಿದಿರುತ್ತಿದ್ದರೆ ಚೆನ್ನಾಗಿತ್ತು !” ಎಂದನು 6.
ಅವನ ನಂತರ ನಾವು ಅವನ ಜನಾಂಗದ ಮೇಲೆ ಆಕಾಶದಿಂದ ಸೈನ್ಯವನ್ನೇನೂ ಇಳಿಸಲಿಲ್ಲ. ನಾವು ಸೇನೆಯನ್ನು ಕಳುಹಿಸುವುದೂ ಇಲ್ಲ !
ಕೇವಲ ಒಂದು ಅಟ್ಟಹಾಸದ ಹೊರತು ಬೇರೇನೂ ಇರಲಿಲ್ಲ. ಆಗಲೇ ಅವರೆಲ್ಲರೂ ನಂದಿಹೋದರು.
ಅಯ್ಯೋ ಈ ದಾಸರ ವ್ಯಥೆಯೇ! ಅವರ ಬಳಿಗೆ ಯಾವ ಸಂದೇಶವಾಹಕನು ಬಂದರೂ ಅವರು ಅವನನ್ನು ಗೇಲಿ ಮಾಡದೇ ಬಿಡಲಿಲ್ಲ.
ನಾವು ಅವರಿಗಿಂತ ಮುಂಚೆ ಎಷ್ಟೋ ಜನಾಂಗಗಳನ್ನು ಅವರೆಂದೂ ಮುಂದೆ ಇವರ ಕಡೆಗೆ ಮರಳಿ ಬಾರದಂತೆ ನಾಶಗೊಳಿಸಿದ್ದನ್ನು ಅವರು ಕಂಡಿಲ್ಲವೇ?
ಅವರೆಲ್ಲರೂ ಒಂದು ದಿನ ನಮ್ಮ ಮುಂದೆ ಒಟ್ಟಾಗಿ ಹಾಜರಾಗದೆ ಇರುವುದಿಲ್ಲ.
ನಿರ್ಜೀವ ಭೂಮಿಯು ಇವರಿಗೊಂದು ನಿದರ್ಶನವಾಗಿದೆ. ನಾವು ಅದನ್ನು ಸಜೀವಗೊಳಿಸಿದ್ದೇವೆ. ಅದರಿಂದ ಧಾನ್ಯಗಳನ್ನು ಹೊರತಂದಿದ್ದೇವೆ. ಅದರಿಂದಲೇ ಇವರು ಉಣ್ಣುತ್ತಾರೆ.
ನಾವು ಅದರಲ್ಲಿ ಖರ್ಜೂರ ಮತ್ತು ದ್ರಾಕ್ಷಿಗಳ ತೋಟಗಳನ್ನು ಉಂಟು ಮಾಡಿದ್ದೇವೆ ಮತ್ತು ಅದರೊಳಗಿಂದ ಚಿಲುಮೆಗಳನ್ನು ಹೊಮ್ಮಿಸಿದ್ದೇವೆ.
ಅದರ ಫಲಗಳಿಂದ ಇವರು ತಿನ್ನಲಿಕ್ಕಾಗಿ. ಇದನ್ನು ಇವರ ಕೈಗಳು ನಿರ್ಮಿಸಿಲ್ಲ. ಹಾಗಿದ್ದೂ ಇವರು ಕೃತಜ್ಞರಾಗುವುದಿಲ್ಲವೇ?
ಭೂಮಿ ಉತ್ಪಾದಿಸುವ ವಸ್ತುವಿನಿಂದಲೂ ಇವರ ವರ್ಗಗಳಿಂದಲೂ ಮತ್ತು ಇವರಿಗೆ ತಿಳಿಯದಿರುವ ವಸ್ತುವಿನಿಂದಲೂ ಜೋಡಿಗಳನ್ನು ಸೃಷ್ಟಿಸಿದವನು ಪರಮ ಪಾವನನು.
ರಾತ್ರಿಯು ಇವರಿಗೊಂದು ನಿದರ್ಶನವಾಗಿದ್ದು ನಾವು ಅದರಿಂದ ಹಗಲನ್ನು ಅನಾವರಣಗೊಳಿಸುತ್ತೇವೆ. ಆಗ ಇವರ ಮೇಲೆ ಕತ್ತಲು ಕವಿಯುತ್ತದೆ.
ಸೂರ್ಯನು ತನ್ನ ನೆಲೆಗೆ ಚಲಿಸುತ್ತಿದ್ದಾನೆ. ಪ್ರತಾಪನೂ ಸರ್ವಜ್ಞನೂ ಆದವನ ನಿರ್ಣಯವಿದು.
ಚಂದ್ರನಿಗೆ ನಾವು ಸ್ಥಾನಗಳನ್ನು ನಿಶ್ಚಯಿಸಿಕೊಟ್ಟಿದ್ದು ಕೊನೆಗೆ ಅದು ಖರ್ಜೂರದ ಗೊನೆಯ ಹಳೆಯ ದಿಂಡಿನ ಸ್ಥಿತಿಗೆ ಮರಳುತ್ತದೆ.
ಸೂರ್ಯನಿಗೆ ಚಂದ್ರನನ್ನು ತಲುಪಲಾಗದು. ರಾತ್ರಿಯು ಹಗಲನ್ನು ಮೀರಿ ಹೋಗದು. ಎಲ್ಲವೂ ಅವುಗಳ ಭ್ರಮಣ ಪಥದಲ್ಲಿ ತೇಲುತ್ತಿವೆ.
ತುಂಬಿದ ನಾವೆಯಲ್ಲಿ ಇವರ ಸಂತತಿಯನ್ನು ನಾವು ಹೊತ್ತು ತೇಲುವಂತೆ ಮಾಡಿದ್ದು ಇವರಿಗೊಂದು ನಿದರ್ಶನವಾಗಿದೆ.
ಇವರು ಸವಾರಿ ಮಾಡುವ, ಅದೇ ತರದ ವಾಹನಗಳನ್ನು ನಾವು ಇವರಿಗಾಗಿ ಸೃಷ್ಟಿಸಿದೆವು.
ನಾವಿಚ್ಛಿಸಿದರೆ, ಇವರನ್ನು ಮುಳುಗಿಸಬಲ್ಲೆವು. ಆಗ ಇವರಿಗೆ ಸಹಾಯಕರಾರೂ ಇರುತ್ತಿರಲಿಲ್ಲ. ಇವರು ಪಾರಾಗುತ್ತಲೂ ಇರಲಿಲ್ಲ.
ಕೇವಲ ನಮ್ಮ ಕಡೆಯಿಂದಿರುವ ಅನುಗ್ರಹ ಹಾಗೂ ನಿರ್ದಿಷ್ಟ ಅವಧಿಯವರೆಗಿನ ಸುಖ ಭೋಗವಲ್ಲದೆ!
ನಿಮ್ಮ ಎದುರಿಗೇ ಇರುವ (ಇಹಲೋಕದ ಶಿಕ್ಷೆ) ಹಾಗೂ ನಿಮ್ಮ ಬೆನ್ನ ಹಿಂದೆ ಇರುವ (ಪರಲೋಕದ ಶಿಕ್ಷೆಯ) ಬಗ್ಗೆ ಜಾಗೃತರಾಗಿರಿ. ನೀವು ದೇವಾ ನುಗ್ರಹಕ್ಕೆ ಪಾತ್ರರಾಗುವಿರಿ ಎಂದು ಇವರಿಗೆ ಹೇಳಲಾದರೆ! (ಇವರು ಗಮನಹರಿಸುವುದಿಲ್ಲ).
ಇವರ ಮುಂದೆ ಇವರ ಪ್ರಭುವಿನ ನಿದರ್ಶನಗಳ ಪೈಕಿ ಯಾವ ನಿದರ್ಶನ ಬಂದರೂ ಇವರು ಅದರಿಂದ ವಿಮುಖರಾಗುತ್ತಾರೆ.
ಅಲ್ಲಾಹನು ನಿಮಗೆ ನೀಡಿರುವ ಜೀವನಾ ಧಾರದಿಂದ ಒಂದಿಷ್ಟನ್ನು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿರಿ ಎಂದು ಹೇಳಲಾದರೆ, ಈ ಸತ್ಯ ನಿಷೇಧಿಗಳು ಸತ್ಯವಿಶ್ವಾಸಿಗಳೊಡನೆ - “ಅಲ್ಲಾಹು ಇಚ್ಛಿಸುತ್ತಿದ್ದರೆ ಸ್ವತಃ ಅವನೇ ಆಹಾರ ಕೊಡುತ್ತಿರುವಾಗ ನಾವು ಯಾಕೆ ಆಹಾರ ಕೊಡ ಬೇಕು? ನೀವು ಸ್ಪಷ್ಟವಾಗಿ ದಾರಿಗೆಟ್ಟು ಹೋಗಿದ್ದೀರಿ” ಎಂದು ಹೇಳುತ್ತಾರೆ.
“(ಪ್ರಳಯ ದಿನದ) ಈ ತಾಕೀತು ಯಾವಾಗ ಬರುವುದು? ನೀವು ಸತ್ಯವಂತರಾಗಿದ್ದರೆ ತಿಳಿಸಿರಿ” ಎಂದು ಇವರು ಹೇಳುತ್ತಾರೆ.
ಒಂದು ಘೋರ ಅಟ್ಟಹಾಸದ ಹೊರತು ಇವರು ಇನ್ನೇನೂ ನಿರೀಕ್ಷಿಸುತ್ತಿಲ್ಲ. ಇವರು ತರ್ಕ ಮಾಡುತ್ತಿರುವಂತೆಯೇ ಅದು ಇವರನ್ನು ಹಿಡಿಯುವುದು.
ಆಗ ಇವರಿಗೆ ಮರಣಪೂರ್ವ ಹೇಳಿಕೆಗೂ ಸಾಧ್ಯವಾಗದು. ತಮ್ಮ ಮನೆಯವರೆಡೆಗೆ ಮರಳಲಿಕ್ಕೂ ಆಗದು.
ಕಹಳೆಯನ್ನು ಊದಲಾಗುವುದು. ಆಗ ಇವರು ತಮ್ಮ ಪ್ರಭುವಿನ ಕಡೆಗೆ ತಮ್ಮ ಸಮಾಧಿಗಳಿಂದ ಧಾವಿಸಿ ಬರುವರು.
ಇವರು ಕೇಳುವರು; ಅಯ್ಯೋ, ನಮ್ಮ ನಾಶವೇ, ನಮ್ಮನ್ನು ನಮ್ಮ ಶಯನ ಗೃಹದಿಂದ ಎಬ್ಬಿಸಿದವರಾರು?’ ಇದು ದಯಾಮಯನಾದ ಅಲ್ಲಾಹನು ಮಾಡಿದ ವಾಗ್ದಾನವಾಗಿದ್ದು ಸಂದೇಶವಾಹಕರು ಸತ್ಯವನ್ನೇ ಹೇಳಿದ್ದರು.
ಅದು ಒಂದೇ ಒಂದು ಅಟ್ಟಹಾಸವಲ್ಲದೆ ಮತ್ತೇ ನಲ್ಲ. ಆಗ ಅವರೆಲ್ಲರೂ ನಮ್ಮ ಮುಂದೆ ಹಾಜರು ಗೊಳಿಸಲ್ಪಡುವರು.
ಇಂದು ಯಾರ ಮೇಲೂ ಸ್ವಲ್ಪವೂ ಅನ್ಯಾಯವಾಗದು. ನೀವು ಮಾಡುತ್ತಿದ್ದ ಕರ್ಮಗಳಿಗಲ್ಲದೆ ನಿಮಗೆ ಪ್ರತಿಫಲ ನೀಡಲಾಗುವುದಿಲ್ಲ.
ಅಂದು ಸ್ವರ್ಗವಾಸಿಗಳು ಕಾರ್ಯನಿರತರು. ಸುಖಾನುಭವಿಗಳು.
ಅವರೂ ಅವರ ಪತ್ನಿಯರೂ ದಟ್ಟ ನೆರಳುಗಳಲ್ಲಿ ಸುಖಾಸನಗಳ ಮೇಲೆ ಒರಗಿಕೊಂಡಿರುವರು.
ಅವರಿಗಲ್ಲಿ ಹಣ್ಣುಹಂಪಲುಗಳಿವೆ. ಅವರೇನು ಬಯಸುತ್ತಾರೋ ಅದೆಲ್ಲವೂ ಅವರಿಗಾಗಿ ಸಿದ್ಧವಿದೆ.
ದಯಾನಿಧಿ ಪ್ರಭುವಿನ ಕಡೆಯಿಂದ ಅವರಿಗೆ ವಾಚ್ಯ ಸಲಾಮ್!
ಓ ಅಪರಾಧಿಗಳೇ, ಇಂದು ನೀವು ಬೇರ್ಪಟ್ಟು ನಿಲ್ಲಿರಿ.
ಓ ಆದಮರ ಮಕ್ಕಳೇ, ನಿಮಗೆ ನಾನು ಆದೇ ಶಿಸಲಿಲ್ಲವೇ? ‘ನೀವು ಶೈತಾನನಿಗೆ ಆರಾಧಿಸ ಬೇಡಿರಿ, ಅವನು ನಿಮ್ಮ ಪ್ರತ್ಯಕ್ಷ ಶತ್ರುವಾಗಿ ರುವನು.
ನನ್ನನ್ನು ಆರಾಧಿಸಿರಿ, ಇದು ನೇರ ಮಾರ್ಗವಾಗಿರುತ್ತದೆ’ ಎಂದು.
ಆದರೆ, ಅವನು ನಿಮ್ಮ ಪೈಕಿ ಅಧಿಕ ಜನರನ್ನು ದಾರಿ ತಪ್ಪಿಸಿದನು. ನಿಮಗೆ ಯೋಚಿಸುವವ ರಾಗಬಹುದಿತ್ತಲ್ಲ?
ಇದು ನಿಮಗೆ ಎಚ್ಚರಿಕೆ ನೀಡಲಾಗುತ್ತಿದ್ದ ನರಕವಾಗಿದೆ.
ನೀವು (ಭೂಲೋಕದಲ್ಲಿ) ಮಾಡುತ್ತಿದ್ದ ಸತ್ಯನಿಷೇಧದ ಫಲವಾಗಿ ಈಗ ಈ ನರಕದಲ್ಲಿ ಪ್ರವೇಶವಾಗಿರಿ.
ಅಂದು ನಾವು ಇವರ ಬಾಯಿಗಳಿಗೆ ಮುದ್ರೆ ಹಾಕುತ್ತೇವೆ. ಇವರು (ಭೂಲೋಕದಲ್ಲಿ) ಏನು ಸಂಪಾದಿಸುತ್ತಿದ್ದರೆಂದು ಇವರ ಕೈಗಳು ನಮ್ಮೊಡನೆ ಮಾತಾಡಲಿವೆ. ಮತ್ತು ಇವರ ಕಾಲುಗಳು ಸಾಕ್ಷ್ಯ ಹೇಳಲಿವೆ.
ನಾವಿಚ್ಛಿಸಿದರೆ, ಇವರ ಕಣ್ಣುಗಳನ್ನು ಉಜ್ಜಿ ಬಿಡುತ್ತಿದ್ದೆವು. ಆಗ ಇವರು ದಾರಿಯೆಡೆಗೆ ಧಾವಿಸುತ್ತಿದ್ದರು. ಆದರೆ ಇವರು ಹೇಗೆ ಕಾಣುವರು?
ನಾವಿಚ್ಛಿಸಿದರೆ, ಇವರಿದ್ದ ಸ್ಥಳದಲ್ಲೇ ರೂಪಾಂತರಗೊಳಿಸಬಹುದಿತ್ತು. ಆಗ ಇವರಿಗೆ ಮುಂದೆ ನಡೆಯಲಿಕ್ಕೂ ಹಿಂದಕ್ಕೆ ಮರಳಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ.
ನಾವು ಯಾರಿಗೆ ದೀರ್ಘಾಯುಷ್ಯ ನೀಡುತ್ತೇವೋ ಅವನ ಪ್ರಕೃತಿಯನ್ನು ಪೂರ್ವಸ್ಥಿತಿಗೆ ಮರಳಿಸುತ್ತೇವೆ. ಅವರೇಕೆ ಚಿಂತಿಸುವುದಿಲ್ಲ?
ನಾವು ಈ ಪ್ರವಾದಿಗೆ ಕವಿತೆ ಕಲಿಸಿಲ್ಲ. ಕವಿತೆಯು ಅವರಿಗೆ ಭೂಷಣವೂ ಅಲ್ಲ. ಇದೊಂದು ಉಪ ದೇಶ ಹಾಗೂ ಸ್ಪಷ್ಟವಾಗಿ ಓದಲ್ಪಡುವ (ಖುರ್ ಆನ್) ಗ್ರಂಥವಲ್ಲದೆ ಬೇರೇನೂ ಅಲ್ಲ.
ಇದು ಜೀವಂತವಿರುವ ಪ್ರತಿಯೊಬ್ಬನಿಗೆ ಎಚ್ಚ ರಿಕೆ ನೀಡಲಿಕ್ಕಾಗಿ ಮತ್ತು ಸತ್ಯನಿಷೇಧಿಗಳ ಮೇಲೆ ನಿರ್ದಿಷ್ಟ ವಚನವು ನಿಜಗೊಳ್ಳಲಿಕ್ಕಾಗಿ ಬಂದಿದೆ.
ನಾವು ನಮ್ಮ ಶಕ್ತಿಯಿಂದ ಇವರಿಗಾಗಿ ಜಾನುವಾರುಗಳನ್ನು ಸೃಷ್ಟಿಸಿರುವುದು ಗೊತ್ತಿಲ್ಲವೆ? ಈಗ ಇವರು ಅವುಗಳ ಮಾಲಿಕರು.
ನಾವು ಅವುಗಳನ್ನು ಇವರ ಹತೋಟಿಯಲ್ಲಿರಿಸಿದ್ದೇವೆ. ಅವುಗಳಲ್ಲಿ ಕೆಲವುದರ ಮೇಲೆ ಇವರು ಸವಾರಿ ಮಾಡುತ್ತಾರೆ. ಇನ್ನು ಕೆಲವುದರ ಮಾಂಸ ಇವರು ತಿನ್ನುತ್ತಾರೆ.
ಅವುಗಳಲ್ಲಿ ಇವರಿಗಾಗಿ ತರತರದ ಪ್ರಯೋಜನಗಳೂ ಪೇಯಗಳೂ ಇವೆ. ಆದರೂ ಇವರು ಕೃತಜ್ಞರಾಗುವುದಿಲ್ಲವೇ?
ಇವರು ತಮಗೆ ಸಹಾಯ ಲಭಿಸಬಹುದೆಂದು ಅಲ್ಲಾಹನ ಹೊರತು ಇತರರನ್ನು ದೇವರುಗಳಾಗಿ ಮಾಡಿಕೊಂಡರು.
ಆ ದೇವರುಗಳು ಇವರಿಗೆ ನೆರವು ನೀಡಲು ಶಕ್ತರಾಗುವುದಿಲ್ಲ. ಅವರು ಇವರ ಜೊತೆಗೆ (ನರಕ ದಲ್ಲಿ) ಹಾಜರುಗೊಳಿಸಲ್ಪಡುವ ಸೇನೆಯಾಗಿರುತ್ತಾರೆ.
ಆದ್ದರಿಂದ ಇವರ ಮಾತುಗಳು ನಿಮ್ಮನ್ನು ದುಃಖ ಕ್ಕೀಡು ಮಾಡದಿರಲಿ. ಇವರು ಅಡಗಿಸುವ ಮತ್ತು ತೆರೆದಿಡುವ ಎಲ್ಲ ವಿಷಯಗಳನ್ನು ನಾವು ಬಲ್ಲೆವು.
ಮನುಷ್ಯನಿಗೆ ಗೊತ್ತಿಲ್ಲವೆ? ಅವನನ್ನು ನಾವು ವೀರ್ಯದಿಂದ ಸೃಷ್ಟಿಸಿದ್ದೇವೆ ಎಂಬುದನ್ನು. ಇದೀಗ ಅವನು ಸ್ಪಷ್ಟ ಜಗಳಗಂಟನಾಗಿರುವನು.
ಈಗ ಅವನು ನಮಗೆ ಹೋಲಿಕೆ ಕೊಡುತ್ತಾನೆ ಮತ್ತು ತಾನು ಸೃಷ್ಠಿಯಾದುದನ್ನು ಮರೆತು ಬಿಡುತ್ತಾನೆ. ‘ಈ ಎಲುಬುಗಳು ಶಿಥಿಲವಾಗಿ ಹೋದ ಬಳಿಕ ಇವುಗಳನ್ನು ಜೀವಂತಗೊಳಿಸುವವನಾರು?’ ಎಂದು ಕೇಳುತ್ತಾನೆ.
ಹೇಳಿರಿ, ಇವುಗಳನ್ನು ಪ್ರಥಮ ಬಾರಿ ಸೃಷ್ಟಿಸಿದವನೇ ಪುನಃ ಜೀವಂತಗೊಳಿಸುವನು. ಅವನು ಪ್ರತಿಯೊಂದು ಸೃಷ್ಟಿಯ ಬಗ್ಗೆಯೂ ಚೆನ್ನಾಗಿ ಬಲ್ಲನು.
ನಿಮಗಾಗಿ ಹಚ್ಚಹಸಿರಾದ ಮರದಿಂದ ಬೆಂಕಿ ಯನ್ನುಂಟು ಮಾಡಿದವನು ಅವನೇ. ನೀವು ಅದರಿಂದ ಬೆಂಕಿ ಉರಿಸುತ್ತಿರುವಿರಿ.
ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು ಇವರಂಥವರನ್ನು ಸೃಷ್ಟಿಸಲು ಶಕ್ತನಲ್ಲವೇ? ಶಕ್ತನಾಗಿರುವನು. ಅವನು ಮಹಾ ಸೃಷ್ಟಿ ಕರ್ತನೂ ಸರ್ವಜ್ಞಾನಿಯೂ ಆಗಿರುವನು.
ಅವನು ಯಾವುದಾದರೊಂದು ವಿಷಯದ ಸಂಕಲ್ಪ ಮಾಡಿದರೆ, ಅದಕ್ಕೆ `ಆಗು’ ಎನ್ನುವನು. ಆಗಲೇ ಅದು ಆಗಿ ಬಿಡುವುದು.
ಸಕಲ ವಸ್ತುಗಳ ಪ್ರಭುತ್ವವು ಯಾವನ ಅಧೀನ ದಲ್ಲಿದೆಯೋ ಅವನೇ ಪರಮಪಾವನನು. ನೀವು ಅವನ ಕಡೆಗೇ ಮರಳಿಸಲ್ಪಡುವಿರಿ.