ಸಮಸ್ತ ಜಗತ್ತಿನವರಿಗೆ ಎಚ್ಚರಿಕೆಗಾರನಾಗಲಿಕ್ಕಾಗಿ ತನ್ನ ದಾಸನ ಮೇಲೆ ಸತ್ಯಾಸತ್ಯವನ್ನು ಬೇರ್ಪಡಿಸಿ ತೋರಿಸುವ ವೇದಗ್ರಂಥವನ್ನು ಅವತೀರ್ಣಗೊಳಿಸಿದವನು ಪರಮಸುಮಂಗಲನು.
ಅವನಿಗೆ ಭೂಮಿ-ಆಕಾಶಗಳ ಪ್ರಭುತ್ವವಿದೆ. ಅವನು ಪುತ್ರನನ್ನು ಉಂಟುಮಾಡಿಲ್ಲ. ಪ್ರಭುತ್ವದಲ್ಲಿ ಅವನಿಗೆ ಯಾರೂ ಸಹಭಾಗಿ ಇಲ್ಲ. ಅವನು ಪ್ರತಿಯೊಂದು ವಸ್ತುವನ್ನೂ ಸೃಷ್ಟಿಸಿದನು. ನಂತರ ಅದಕ್ಕೊಂದು ವಿಧಿ ನಿಯಮವನ್ನು ನಿಶ್ಚಯಿಸಿದನು.
ಅವರು ಅವನನ್ನು ಬಿಟ್ಟು, ಇತರರನ್ನು ಆರಾಧ್ಯರನ್ನಾಗಿ ಮಾಡಿದರು. ಅವರು ಯಾವ ವಸ್ತುವನ್ನೂ ಸೃಷ್ಟಿಸಲಿಲ್ಲ. ಪರಂತು ಅವರೇ ಸೃಷ್ಟಿಸಲ್ಪಟ್ಟವರು. ಅವರು ಸ್ವತಃ ತಮಗೂ ಯಾವುದೇ ಲಾಭ ಅಥವಾ ಹಾನಿಯನ್ನುಂಟು ಮಾಡುವ ಒಡೆತನ ಹೊಂದಿಲ್ಲ. ಸಾವನ್ನಾಗಲಿ, ಬದುಕನ್ನಾಗಲಿ ಪುನರ್ಜೀವನವನ್ನಾಗಲಿ ಅವರು ಅಧೀನಗೊಳಿಸಿಲ್ಲ .
ಸತ್ಯನಿಷೇಧಿಗಳು “ಇದು (ಖುರ್‍ಆನ್) ಇವನೇ ಸ್ವಂತವಾಗಿ ನಿರ್ಮಿಸಿದ ಸುಳ್ಳು ಸೃಷ್ಟಿಯಾಗಿದ್ದು, ಬೇರೆ ಕೆಲವರು ಈ ಕಾರ್ಯದಲ್ಲಿ ಇವನಿಗೆ ಸಹಾ ಯ ಮಾಡಿದ್ದಾರೆ” ಎಂದರು. ಇವರು ದೊಡ್ಡ ಅಕ್ರಮ ಹಾಗೂ ಹಸಿ ಸುಳ್ಳನ್ನೇ ತಂದಿದ್ದಾರೆ.
“ಇವು ಹಳೆಯ ಕಾಲದವರ ಕಟ್ಟು ಕಥೆಗಳು. ಅದನ್ನು ಇವನು ಬರೆಯಿಸಿಕೊಳ್ಳುತ್ತಿದ್ದು ಬೆಳಗು ಬೈಗುಗಳಲ್ಲಿ ಅವನಿಗೆ ಅದನ್ನು ಓದಿ ಕೇಳಿಸಲಾ ಗುತ್ತದೆ” ಎಂದೂ ಅವರು ಹೇಳಿದರು.
(ಪೈಗಂಬರರೇ) ಹೇಳಿರಿ, “ಭೂಮಿ-ಆಕಾಶಗಳ ರಹಸ್ಯವನ್ನು ಅರಿಯುವವನೇ ಇದನ್ನು (ಖುರ್ ಆನನ್ನು) ಅವತೀರ್ಣಗೊಳಿಸಿದ್ದಾನೆ” ಖಂಡಿತ ಅವನು ಅತ್ಯಂತ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.
ಅವರು ಹೇಳಿದರು, “ಆಹಾರ ಸೇವಿಸುವ ಮತ್ತು ಪೇಟೆಗಳಲ್ಲಿ ಸಂಚರಿಸುವ ಈ ಪ್ರವಾದಿಗೆ ಏನಾಗಿದೆ? ಇವನ ಜೊತೆಗೆ ಒಬ್ಬ ತಾಕೀತುಗಾರನಾಗ ಬಲ್ಲ ಒಬ್ಬ ದೇವಚರನನ್ನೇಕೆ ಇವನ ಬಳಿಗೆ ಕಳುಹಿಸಲಾಗಿಲ್ಲ?
ಅಥವಾ ಈತನ ಬಳಿಗೆ ಒಂದು ನಿಧಿಯನ್ನೇಕೆ ಇಡಲಾಗಿಲ್ಲ. ತನಗೆ ತಿನ್ನಲಿಕ್ಕಾಗಿ ಒಂದು ತೋಟವಾದರೂ ಏಕಿಲ್ಲ? “ಈ ಅಕ್ರಮಿಗಳು “ನೀವು ಬುದ್ಧಿಗೆ ಮಂಕು ಬಡಿದ ಕೇವಲ ಒಬ್ಬ ವ್ಯಕ್ತಿಯನ್ನು ಹಿಂಬಾಲಿಸುತ್ತಿರುವಿರಿ” ಎಂದೂ ಹೇಳಿದರು.
ನೋಡಿರಿ, ಇವರು ಎಂತಹ ಉಪಮೆಗಳನ್ನು ನಿಮ್ಮ ಮುಂದಿಟ್ಟರು? ಹೀಗೆ ಅವರು ಸತ್ಯ ದಾರಿಯಿಂದ ತಪ್ಪಿ ನಡೆದರು. ಸರಿಯಾದ ದಾರಿಯನ್ನು ಸೇರಲು ಅವರಿಗೆ ಸಾಧ್ಯವಾಗುತ್ತಿಲ್ಲ.
ಅವನು ಅನುಗ್ರಹಪೂರ್ಣನು. ಅವನಿಚ್ಚಿಸಿದರೆ, ಇವರು ಹೇಳುವುದಕ್ಕಿಂತ ಉತ್ತಮವಾದುದನ್ನೂ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಉದ್ಯಾನಗಳನ್ನೂ ನಿಮಗೆ ಮಾಡಿಕೊಡುವನು. ದೊಡ್ಡ ದೊಡ್ಡ ಅರಮನೆಗಳನ್ನೂ ದಯಪಾಲಿಸುವನು.
ಆದರೆ ಇವರು, `ಅಂತಿಮ ಘಳಿಗೆಯನ್ನು ನಿಷೇಧಿಸಿದ್ದಾರೆ. ಅಂತ್ಯದಿನವನ್ನು ನಿಷೇಧಿಸಿ ತಳ್ಳಿ ಹಾಕಿದವನಿಗಾಗಿ ಹೊತ್ತಿ ಉರಿಯುವ ಬೆಂಕಿಯನ್ನು ನಾವು ಸಿದ್ಧಗೊಳಿಸಿದ್ದೇವೆ.
ಅದು ಇವರನ್ನು ದೂರ ಸ್ಥಳದಿಂದ ಕಂಡಾಗಲೇ ಇವರು ಅದರ ಕೋಪದ ಕಿಡಿಯನ್ನು ಮತ್ತು ಕಿರುಚುವ ಚೀತ್ಕಾರವನ್ನು ಕೇಳುವರು.
ಇವರು ಸಂಕೋಲೆಗಳಲ್ಲಿ ಬಿಗಿಯಲ್ಪಟ್ಟ ಸ್ಥಿತಿಯಲ್ಲಿ ಅದರ ಒಂದು ಇಕ್ಕಟ್ಟಾದ ಜಾಗಕ್ಕೆ ಎಸೆಯಲ್ಪಟ್ಟರೆ ಅಲ್ಲಿ ಅವರು, ಅಯ್ಯೋ, ನಮ್ಮ ನಾಶವೆಂದು ಕೂಗಾಡುವರು.
“ಇಂದು ಒಂದು ನಾಶವನ್ನಲ್ಲ, ಅನೇಕ ನಾಶಗಳಿಗಾಗಿ ಕೂಗಿರಿ” ಎನ್ನಲಾಗುವುದು.
ಹೇಳಿರಿ, “ಅದು ಉತ್ತಮವೋ? ಅಥವಾ ಧರ್ಮ ನಿಷ್ಟರಿಗೆ ವಾಗ್ದಾನ ಮಾಡಲಾಗಿರುವ, ಅವರ ಪ್ರತಿಫಲವೂ ನಿರ್ಗಮನ ಸ್ಥಾನವೂ ಆಗಿರುವ ಶಾಶ್ವತ ಸ್ವರ್ಗ ಉತ್ತಮವೋ?”
ಸ್ವರ್ಗದಲ್ಲಿ ಸದಾಕಾಲ ವಾಸಿಸುವ ಅವರು ತಾವೇನು ಇಚ್ಛಿಸುವರೋ ಅವೆಲ್ಲ ಅವರಿಗಲ್ಲಿ ಸಿಗುವುದು. ನಿಮ್ಮ ಪ್ರಭುವಿನ ಮೇಲೆ ಅಪೇಕ್ಷಿ ಸಲ್ಪಡುವ ಒಂದು ವಾಗ್ದಾನವಾಗಿತ್ತದು.
ಇವರನ್ನೂ ಇವರು ಅಲ್ಲಾಹನನ್ನು ಬಿಟ್ಟು ಪೂಜಿ ಸುತ್ತಿರುವ ವಸ್ತುಗಳನ್ನೂ ಅವನು ಒಟ್ಟು ಸೇರಿ ಸುವ ದಿನವನ್ನು ನೆನಪಿಸಿರಿ. ಆಗ ಅವನು ಕೇಳುವನು. “ನಮ್ಮ ಈ ದಾಸರನ್ನು ದಾರಿತಪ್ಪಿಸಿದ್ದು ನೀವೋ ಅಥವಾ ಇವರು ಸ್ವತಃ ದಾರಿ ತಪ್ಪಿದರೋ?”
ಆಗ ಅವರು ಹೇಳುವರು, “ನೀನು ಪರಮ ಪಾವ ನನು, ನಿನ್ನ ಹೊರತು ಇತರರನ್ನು ಆರಾಧ್ಯರ ನ್ನಾಗಿ ಮಾಡುವುದು ನಮಗೆ ಭೂಷಣವಾಗಿರಲಿಲ್ಲ. ಆದರೆ ನೀನು ಇವರಿಗೂ ಇವರ ಪೂರ್ವಿಕರಿಗೂ ಸಾಕಷ್ಟು ಸುಖ-ಭೋಗಗಳನ್ನು ನೀಡಿದೆ. ಕೊನೆಗೆ ಇವರು ನಿನ್ನ ಉಪದೇಶವನ್ನು ಮರೆತರು. ನಾಶವಾದ ಜನಾಂಗವಾದರು”.
(ಆಗ ಅಲ್ಲಾಹನು ಬಹುದೇವಾರಾಧಕರಲ್ಲಿ ಹೇಳುವನು) “ನೀವು ಹೇಳುತ್ತಿರುವ ಮಾತು ಗಳನ್ನು ಇವರು ಸುಳ್ಳಾಗಿಸಿದ್ದಾರೆ. (ಇವರು ಆರಾಧ್ಯರು ಎಂಬ ವಾದವನ್ನು ನಿಷೇಧಿಸಿದ್ದಾರೆ.) ಇನ್ನು ನೀವು ಶಿಕ್ಷೆಯನ್ನು ನಿವಾರಿಸಲಿಕ್ಕಾಗಲಿ ಸಹಾಯವನ್ನು ಪಡೆಯಲಿಕ್ಕಾಗಿ ಶಕ್ತರಲ್ಲ. ನಿಮ್ಮಲ್ಲಿ ಯಾರೇ ಅಕ್ರಮವೆಸಗಿದರೂ ಅವನಿಗೆ ನಾವು ಮಹಾ ಶಿಕ್ಷೆಯನ್ನು ಉಣಿಸುತ್ತೇವೆ.
(ಪೈಗಂಬರರೇ,) ಸಂದೇಶವಾಹಕರ ಪೈಕಿ ಆಹಾರ ಸೇವಿಸುವ ಮತ್ತು ಪೇಟೆಗಳಲ್ಲಿ ಸಂಚರಿಸುವವರನ್ನೇ ಹೊರತು ನಿಮಗೆ ಮುನ್ನ ನಾವು ನಿಯೋಗಿಸಿಲ್ಲ. ನಾವು ನಿಮ್ಮನ್ನು ಪರಸ್ಪರರ ಪಾಲಿಗೆ ಪರೀಕ್ಷಾ ಸಾಧನವನ್ನಾಗಿ ಮಾಡಿರುತ್ತೇವೆ. ನೀವು ತಾಳ್ಮೆ ವಹಿಸುವಿರಾ? ನಿಮ್ಮ ಪ್ರಭು ಸರ್ವ ವೀಕ್ಷಕನಾಗಿರುವನು.
ನಮ್ಮನ್ನು ಭೇಟಿಯಾಗಲಿಕ್ಕಿದೆಯೆಂಬ ಆಗ್ರಹ ವನ್ನಿರಿಸಿಕೊಳ್ಳದವರು, “ನಮ್ಮ ಮೇಲೆ ದೇವಚ ರರನ್ನೇಕೆ ಇಳಿಸಲಾಗಿಲ್ಲ? ಅಥವಾ ನಾವು ನಮ್ಮ ಪ್ರಭುವನ್ನು ಏಕೆ ಕಣ್ಣಾರೆ ಕಾಣುತ್ತಿಲ್ಲ?” ಎನ್ನುತ್ತಾರೆ. ಇವರು ತಮ್ಮ ಮನಸ್ಸಿನಲ್ಲಿ ದೊಡ್ಡ ಗರ್ವ ತೋರಿದ್ದಾರೆ ಮತ್ತು ಅತಿ ದೊಡ್ಡ ದಿಕ್ಕಾರ ವನ್ನು ತೋರ್ಪಡಿಸಿದ್ದಾರೆ .
ಇವರು ದೇವಚರರನ್ನು ಕಾಣುವ ದಿನವನ್ನು ನೆನೆಸಿರಿ. ಅಪರಾಧಿಗಳ ಪಾಲಿಗೆ ಅಂದು ಯಾವುದೇ ಸಂತಸದ ವಾರ್ತೆ ಇರಲಾರದು. `ಬಲವಾದ ತಡೆ’ ಎಂದು ಮಲಕ್‍ಗಳು ಹೇಳುವರು.
ಅವರು ಮಾಡಿಟ್ಟಿರುವ ಎಲ್ಲಾ ಕರ್ಮಗಳತ್ತ ನಾವು ಗಮನಹರಿಸುವೆವು. ನಂತರ ಅದನ್ನು ನಾವು ಧೂಳಿನಂತೆ ಹಾರಿಸಿಬಿಡುವೆವು.
ಸ್ವರ್ಗದವರು ಆ ದಿನ ಒಳ್ಳೆಯ ಜಾಗದಲ್ಲಿ ತಂಗುವರು ಮತ್ತು ಉತ್ತಮ ವಿಶ್ರಾಂತಿಯ ಸ್ಥಳವನ್ನು ಪಡೆಯುವರು.
ಮೋಡದೊಂದಿಗೆ ಆಕಾಶವು ಸೀಳುವ ಮತ್ತು ದೇವಚರರು ತಂಡ ತಂಡವಾಗಿ ಇಳಿಸಲ್ಪಡುವ ದಿನ.
ಅಂದು ನಿಜವಾದ ಸಾರ್ವಭೌಮತೆಯು ದಯಾನಿಧಿಯಾದ ಅಲ್ಲಾಹನಿಗಾಗಿರುವುದು. ಅದು ಸತ್ಯನಿಷೇಧಿಗಳಿಗೆ ಬಹಳ ಕಠಿಣ ದಿನವಾಗಿರುವುದು.
ಅಕ್ರಮಿಯು ತನ್ನ ಕೈಗಳನ್ನು ಕಚ್ಚಿಕೊಳ್ಳುವ ದಿನ. ಅವನು ಹೇಳುವನು, “ಅಯ್ಯೋ, ನಾನು ಪ್ರವಾದಿಯೊಂದಿಗೆ ಸನ್ಮಾರ್ಗವನ್ನು ಸ್ವೀಕರಿಸುತ್ತಿದ್ದರೆ ಎಷ್ಟು ಚೆನ್ನಾಗಿತ್ತು!
ಅಯ್ಯೋ ನನ್ನ ಕಷ್ಟವೇ, ನಾನು ಆ ವ್ಯಕ್ತಿಯನ್ನು ಮಿತ್ರನಾಗಿ ಮಾಡಿಕೊಳ್ಳದಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!
ನನ್ನ ಬಳಿಗೆ (ಖುರ್‍ಆನಿನ) ಸದ್ಭೋಧನೆ ಬಂದ ಬಳಿಕ ಅವನು ಅದರಿಂದ ನನ್ನನ್ನು ದಾರಿ ತಪ್ಪಿಸಿದನು. ಶೈತಾನನು ಮನುಷ್ಯನಿಗೆ ಮಹಾ ವಂಚಕನಾಗಿರುವನು.
ಸಂದೇಶವಾಹಕರು, “ನನ್ನ ಪ್ರಭೂ, ನನ್ನ ಜನಾಂಗದವರು ಈ ಖುರ್‍ಆನನ್ನು ತ್ಯಾಜ ವಸ್ತುವನ್ನಾಗಿ ಮಾಡಿದರು” ಎನ್ನುವರು .
(ಪೈಗಂಬರರೇ,) ಇದೇ ರೀತಿಯಲ್ಲಿ ಪ್ರತಿಯೊಬ್ಬ ಪ್ರವಾದಿಗೆ ಶತ್ರುವನ್ನು ನಾವು ಮಾಡಿರುತ್ತೇವೆ. ಮಾರ್ಗದರ್ಶಕನೂ, ಸಹಾಯಕನೂ ಆಗಿ ನಿಮ್ಮ ಪ್ರಭುವೇ ಸಾಕು.
ಸತ್ಯನಿಷೇಧಿಗಳು, “ಇವನ ಮೇಲೆ ಇಡೀ ಖುರ್ ಅನ್ ಒಮ್ಮೆಲೆ ಒಟ್ಟಾಗಿ ಏಕೆ ಅವತೀರ್ಣ ಗೊಂಡಿಲ್ಲ?” ಎಂದು ಕೇಳುತ್ತಾರೆ. ತಮ್ಮ ಹೃದಯ ವನ್ನು ಇದರ ಮೂಲಕ ಬಲಪಡಿಸುವುದಕ್ಕಾಗಿ ಹೀಗೆ ಮಾಡಲಾಗಿದೆ. ಆದ್ದರಿಂದ ಸಾವಧಾನ ಕ್ರಮದಲ್ಲಿ ಅದನ್ನು ನಾವು ಓದಿ ಕೊಡುತ್ತಿದ್ದೇವೆ.
ಅವರು ನಿಮ್ಮ ಮುಂದೆ ಸತ್ಯವನ್ನು ವಿರೋಧಿಸಲು ಯಾವ ಮಾತನ್ನು ಬಳಸಿದರೂ ನಾವು ಅದಕ್ಕೆ ಸಮರ್ಪಕವಾದ ಉತ್ತರವನ್ನೂ ಅತ್ಯುತ್ತಮ ವಿವರಣೆಯನ್ನೂ ಕೊಡದೆ ಇರುವುದಿಲ್ಲ.
ಅಧೋಮುಖರಾಗಿ ನರಕದ ಕಡೆಗೆ ಒಯ್ಯಲ್ಪಡು ವವರು ಬಹಳ ಕೆಟ್ಟ ನೆಲೆಯವರು ಮತ್ತು ತೀರಾ ತಪ್ಪು ದಾರಿ ತುಳಿದವರು.
ಮೂಸಾರಿಗೆ ನಾವು ವೇದ ಗ್ರಂಥ ನೀಡಿದೆವು. ಅವರ ಜೊತೆಗೆ ಅವರ ಸಹೋದರ ಹಾರೂನರನ್ನು ಸಹಾಯಕನಾಗಿ ನೇಮಿಸಿದೆವು.
ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದ ಆ ಜನಾಂಗದ ಕಡೆಗೆ ನೀವಿಬ್ಬರೂ ಹೋಗಿರೆಂದು ಅವರಿಗೆ ಹೇಳಿದೆವು. (ಆ ಜನತೆ ಅವರಿಬ್ಬರನ್ನೂ ನಿಷೇಧಿಸಿತು). ಕೊನೆಗೆ ನಾವು ಅವರನ್ನು ಸಮೂಲ ನಾಶಗೊಳಿಸಿದೆವು.
ನೂಹರ ಜನಾಂಗವು ಪ್ರವಾದಿಗಳನ್ನು ಸುಳ್ಳಾಗಿ ಸಿದಾಗ ನಾವು ಅವರನ್ನು ನೀರಿನಲ್ಲಿ ಮುಳುಗಿ ಸಿನಾಶ ಮಾಡಿದೆವು. ಅದನ್ನು ಜನರಿಗೆ ಒಂದು ದೃಷ್ಟಾಂತವಾಗಿ ಮಾಡಿದೆವು. ಅಕ್ರಮಿಗಳಿಗೆ ನಾವು ವೇದನಾಯುಕ್ತ ಶಿಕ್ಷೆಯನ್ನು (ಪರ ಲೋಕದಲ್ಲಿ) ಸಿದ್ಧಗೊಳಿಸಿದ್ದೇವೆ.
ಇದೇ ರೀತಿ ಆದ್, ಸಮೂದ್ ಮತ್ತು ರಸ್ಸ್‍ನವರ ಹಾಗೂ ಅವರ ಮಧ್ಯದ ಶತಮಾನಗಳ ಅನೇಕರನ್ನು ನೆನಪಿಸಿರಿ.
ಎಲ್ಲರಿಗೂ ನಾವು ಉದಾಹರಣೆಗಳನ್ನು ವಿವರಿಸಿ ಕೊಟ್ಟೆವು. ಕೊನೆಗೆ ಎಲ್ಲರನ್ನೂ ಸರ್ವ ನಾಶಗೊಳಿಸಿದೆವು.
ಕೆಟ್ಟ ಮಳೆಗೆರೆಯಲಾಗಿದ್ದ ಆ ನಾಡನ್ನು ಅವರು ಹಾದು ಹೋಗಿದ್ದಾರೆ. ಆಗ ಅವರದನ್ನು ಕಾಣಲಿಲ್ಲವೇ? ಆದರೆ ಅವರು ಪುನರುತ್ಥಾನದ ನಿರೀಕ್ಷೆಯನ್ನೇ ಇಟ್ಟುಕೊಂಡಿಲ್ಲ.
(ಪೈಗಂಬರರೇ,) “ಅವರು ನಿಮ್ಮನ್ನು ಕಂಡಾಗಲೆಲ್ಲಾ ನಿಮ್ಮನ್ನು ಗೇಲಿಯ ವಸ್ತುವನ್ನಾಗಿ ಮಾಡುತ್ತಾರೆ. `ಅಲ್ಲಾಹನು ಸಂದೇಶವಾಹಕನಾಗಿ ಮಾಡಿ ಕಳುಹಿಸಿದ್ದು ಇವನನ್ನೇ?.
ನಮ್ಮ ಆರಾಧ್ಯರ ಪೂಜೆಯಲ್ಲಿ ನಾವು ಅಚಲ ರಾಗದೆ ನಿಂತಿದ್ದರೆ ಇವನು ನಮ್ಮನ್ನು ದಾರಿ ತಪ್ಪಿಸುತ್ತಿದ್ದನು” ಎಂದು. ಶಿಕ್ಷೆಯನ್ನು ಕಾಣುವ ವೇಳೆ ತೀರಾ ತಪ್ಪು ದಾರಿ ತುಳಿದವನು ಯಾರೆಂದು ಸ್ವತಃ ಅವರಿಗೇ ತಿಳಿದು ಬರುವುದು.
ತನ್ನ ದೇಹೇಚ್ಚೆಯನ್ನು ತನ್ನ ದೇವನಾಗಿ ಮಾಡಿದವನನ್ನು ತಾವು ಕಂಡಿರಾ? ನೀವು ಈತನ ಮೇಲೆ ಹೊಣೆ ವಹಿಸಿಕೊಳ್ಳುವಿರಾ?
ಅದಲ್ಲ, ಇವರಲ್ಲಿ ಹೆಚ್ಚಿನವರು ಆಲಿಸುತ್ತಾರೆ, ಇಲ್ಲವೇ ಯೋಚಿಸುತ್ತಾರೆ ಎಂದು ನೀವು ಭಾವಿ ಸುತ್ತೀರಾ? ಇವರು ಪ್ರಾಣಿಗಳಂತಿದ್ದಾರೆ. ಅಲ್ಲ, ಅವಕ್ಕಿಂತಲೂ ಪಥಭ್ರಷ್ಟರು.
ನಿಮ್ಮ ಪ್ರಭು ನೆರಳನ್ನು ಹೇಗೆ ಹರಡಿಸುತ್ತಾ ನೆಂಬುದನ್ನು ನೀವು ಕಂಡಿಲ್ಲವೇ? ಅವನು ಇಚ್ಛಿಸಿದ್ದರೆ ಅದನ್ನು ನಿಶ್ಚಲಗೊಳಿಸುತ್ತಿದ್ದನು. ನಂತರ ನಾವು ಸೂರ್ಯನನ್ನು ಆ ನೆರಳಿಗೆ ಸಂಕೇತವನ್ನಾಗಿ ಮಾಡಿದ್ದೇವೆ .
ಅನಂತರ ನಾವು ಆ ನೆರಳನ್ನು ಕ್ರಮೇಣ ನಮ್ಮ ಕಡೆಗೆ ಕುಗ್ಗಿಸುತ್ತ ಹೋಗುತ್ತೇವೆ .
ರಾತ್ರಿಯನ್ನು ನಿಮಗೆ ಉಡುಪಾಗಿಯೂ ನಿದ್ದೆಯನ್ನು ವಿಶ್ರಾಂತಿಯಾಗಿಯೂ ಹಗಲನ್ನು ಎಚ್ಚೆತ್ತುಕೊಂಡು ಸಂಚರಿಸುವ ಸಮಯವಾಗಿಯೂ ಮಾಡಿದವನು ಅಲ್ಲಾಹನೇ ಆಗಿರುತ್ತಾನೆ.
ಅವನು ತನ್ನ ಕೃಪೆಗೆ (ಮಳೆಗೆ) ಮುಂಚಿತವಾಗಿ ಮಾರುತಗಳನ್ನು ಸುವಾರ್ತೆಯಾಗಿ ಕಳುಹಿಸು ವವನು. ಅನಂತರ ನಾವು ಆಕಾಶದಿಂದ ಶುದ್ಧ ತಿಳಿನೀರನ್ನು ಇಳಿಸುತ್ತೇವೆ.
ಒಂದು ನಿರ್ಜೀವ ಪ್ರದೇಶಕ್ಕೆ ಇದರಿಂದ ಜೀವ ದಾನ ಮಾಡಲಿಕ್ಕಾಗಿ ಮತ್ತು ತನ್ನ ಸೃಷ್ಟಿಯ ಪೈಕಿ ಅನೇಕ ಜಾನುವಾರುಗಳಿಗೂ ಮನುಷ್ಯರಿಗೂ ಅದನ್ನು ಕುಡಿಸಲಿಕ್ಕಾಗಿ.
ಅವರು ಯೋಚಿಸಲಿಕ್ಕಾಗಿ ನಾವು ಅದನ್ನು ನಿರೂಪಿಸಿದ್ದೇವೆ. ಆದರೆ ಹೆಚ್ಚಿನವರು ಕೃತಘ್ನತೆಯ ಹೊರತು ಬೇರೇನನ್ನೂ ಅಂಗೀಕರಿಸುತ್ತಿಲ್ಲ.
ನಾವಿಚ್ಛಿಸುತ್ತಿದ್ದರೆ ಪ್ರತಿಯೊಂದು ನಾಡಿಗೂ ಎಚ್ಚರಿಕೆದಾರನನ್ನು ನಿಯೋಗಿಸುತ್ತಿದ್ದೆವು.
ಆದುದರಿಂದ (ಪೈಗಂಬರರೇ,) ಸತ್ಯನಿಷೇಧಿಗಳನ್ನು ಅನುಸರಿಸಬೇಡಿರಿ. ಈ ಖುರ್‍ಆನಿನ ಮೂಲಕ ಅವರ ವಿರುದ್ಧ ಉಗ್ರ ಹೋರಾಟ ನಡೆಸಿರಿ .
ಅವನು ಎರಡು ಸಮುದ್ರಗಳನ್ನು ಸೇರಿಸಿಟ್ಟಿರು ವವನು. ಒಂದು ರುಚಿಕರವಾದ ಸಿಹಿ ನೀರು. ಇನ್ನೊಂದು ಕಹಿಯಾದ ಉಪ್ಪು ನೀರು. ಇವೆರಡರ ಮಧ್ಯೆ ಒಂದು ಬಲವಾದ ತೆರೆಯನ್ನು ನಿರ್ಮಿಸಿರುವನು. (ಅವು ಪರಸ್ಪರ ಬೆರೆಯದಂತೆ ಮಾಡುವ) ಒಂದು ಗಟ್ಟಿಯಾದ ತಡೆಯನ್ನೂ ನಿರ್ಮಿಸಿರುವನು .
ಅವನೇ ನೀರಿನಿಂದ ಮಾನವನನ್ನು ಸೃಷ್ಟಿಸಿದವನು. ತರುವಾಯ ಅವನು ಮನುಷ್ಯನಿಂದ ವಂಶೀಯ ಮತ್ತು ವೈವಾಹಿಕ ಸಂಬಂಧವನ್ನು ಉಂಟು ಮಾಡಿದನು. ನಿನ್ನ ಪ್ರಭು ಸರ್ವ ಸಮರ್ಥನಾಗಿರುವನು.
ಅವರು ಅಲ್ಲಾಹನನ್ನು ಬಿಟ್ಟು ಅವರಿಗೆ ಲಾಭವಾಗಲಿ ನಷ್ಟವಾಗಲಿ ಉಂಟು ಮಾಡಲಾರದ ಕೆಲವು ವಸ್ತುಗಳನ್ನು ಆರಾಧಿಸುತ್ತಾರೆ. ಸತ್ಯ ನಿಷೇಧಿಯು ತನ್ನ ಪ್ರಭುವಿನ ವಿರುದ್ಧ (ಪಿಶಾಚಿಯ ಮಾರ್ಗದ) ಸಹಾಯಕನಾಗಿರುವನು.
(ಪೈಗಂಬರರೇ,) ನಾವು ನಿಮ್ಮನ್ನು ಓರ್ವ ಶುಭ ವಾರ್ತೆ ಹಾಗೂ ಎಚ್ಚರಿಕೆ ನೀಡುವವರಾಗಿ ಮಾತ್ರ ಕಳುಹಿಸಿರುತ್ತೇವೆ.
ಇವರಿಗೆ “ನಾನು ಈ ದೌತ್ಯ ನಿರ್ವಹಣೆಗಾಗಿ ನಿಮ್ಮಿಂದ ಯಾವುದೇ ಪ್ರತಿಫಲ ಕೇಳುವುದಿಲ್ಲ. ಆದರೆ ಯಾರಾದರೂ ತನ್ನ ಪ್ರಭುವಿನೆಡೆಗೆ ಉತ್ತಮ ಮಾರ್ಗವನ್ನು ಸ್ಥಾಪಿಸಲು (ಅಲ್ಲಾಹನ ಮಾರ್ಗದಲ್ಲಿ ದಾನ ಮಾಡಲು) ಉದ್ದೇಶಿಸಿದರೆ ಹಾಗೆ ಮಾಡಲಿ” ಎಂದು ಹೇಳಿರಿ.
(ಪೈಗಂಬರರೇ,) ಎಂದೂ ಮರಣ ಹೊಂದದ, ಅಮರನಾಗಿರುವ ಅಲ್ಲಾಹನ ಮೇಲೆ ಭರವಸೆ ಯಿಡಿರಿ. ಅವನ ಸ್ತುತಿಯೊಂದಿಗೆ ಅವನ ಪರಿಶುದ್ಧ ತೆಯನ್ನು ಕೊಂಡಾಡಿರಿ. ತನ್ನ ದಾಸರ ಪಾಪಗಳ ಬಗ್ಗೆ ಸೂಕ್ಷ್ಮಜ್ಞಾನಿಯಾಗಿ ಅವನು ಮಾತ್ರ ಸಾಕು.
ಅವನು ಭೂಮಿ-ಆಕಾಶಗಳನ್ನೂ ಅವುಗಳ ನಡುವೆ ಇರುವುದನ್ನೂ ಆರು ದಿನಗಳಲ್ಲಿ ಸೃಷ್ಟಿಸಿ ದನು. ತರುವಾಯ ಅವುಗಳ ತರುವಾಯ ಅವನಿ ಗೆ ಸಂಗತವಾದ ರೀತಿಯಲ್ಲಿ ಅರ್ಶ್‍ನ ಮೇಲೆ ಇಸ್ತಿವಾ ಹೊಂದಿದನುಂ. ಪರಮ ದಯಾಮಯ, ಅವನ ಘನತೆಯನ್ನು ಸೂಕ್ಷ್ಮವಾಗಿ ಬಲ್ಲವರೊಡನೆ ಕೇಳಿರಿ.
‘ರಹ್ಮಾನನಿಗೆ ಸಾಷ್ಟಾಂಗವೆರಗಿರಿ’ ಎಂದು ಅವರಿಗೆ ಹೇಳಿದರೆ, “ರಹ್ಮಾನ್ ಎಂದರೇನು? ನೀನು ಆಜ್ಞಾಪಿಸುವ ವಸ್ತುವಿಗೆ ನಾವು ಸಾಷ್ಟಾಂ ಗವೆರಗಬೇಕೆ?” ಎಂದು ಕೇಳುತ್ತಾರೆ. ಈ ಉಪದೇಶವು ಅವರ ತಿರಸ್ಕಾರವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಆಕಾಶದಲ್ಲಿ ನಕ್ಷತ್ರ ರಾಶಿಗಳನ್ನು ಮಾಡಿದವನು ಮತ್ತು ಅದರಲ್ಲಿ ಒಂದು ಸೂರ್ಯ ಮತ್ತು ಹೊಳೆಯುವ ಚಂದ್ರನನ್ನು ಬೆಳಗಿದವನು ಪರಮ ಮಂಗಳನು.
ಯೋಚಿಸಲು ಅಥವಾ ಕೃತಜ್ಞನಾಗಲು ಬಯಸುವ ಪ್ರತಿಯೊಬ್ಬನಿಗಾಗಿ ರಾತ್ರಿ ಹಗಲುಗಳನ್ನು ಪದೇ ಪದೇ ಮರಳಿ ಬರುವ ವಸ್ತುವನ್ನಾಗಿ ಮಾಡಿದವನು ಅವನೇ.
ಪರಮ ದಯಾಳುವಾದ ಅಲ್ಲಾಹನ ನಿಜವಾದ ದಾಸರು ಭೂಮಿಯ ಮೇಲೆ ವಿನಯದಿಂದ ನಡೆಯುತ್ತಾರೆ. ತಿಳಿಗೇಡಿಗಳು ಎದುರುಗೊಂಡು ಮಾತನಾಡಿದರೆ, ರಕ್ಷಣೆಯ ಮಾತನ್ನು ಹೇಳುತ್ತಾರೆ.
ಅವರು ತಮ್ಮ ಪ್ರಭುವಿಗೆ ಸಾಷ್ಟಾಂಗವೆರಗುತ್ತಲೂ ನಿಂತು ಪ್ರಾರ್ಥಿಸುತ್ತಲೂ ರಾತ್ರಿಗಳನ್ನು ಕಳೆಯುತ್ತಾರೆ.
ಅವರು ಹೀಗೆ ಪ್ರಾರ್ಥಿಸುತ್ತಾರೆ, “ನಮ್ಮ ಪ್ರಭೂ, ನಮ್ಮನ್ನು ನರಕದ ಶಿಕ್ಷೆಯಿಂದ ರಕ್ಷಿಸು. ನಿಜಕ್ಕೂ ಅದರ ಶಿಕ್ಷೆಯು ನಿತ್ಯ ದುರಂತವಾಗಿದೆ .
ಅದು ಅತ್ಯಂತ ನಿಕೃಷ್ಟ ನೆಲೆ ಮತ್ತು ಸ್ಥಾನವಾಗಿರುತ್ತದೆ’’.
ಅವರು ಖರ್ಚು ಮಾಡುವಾಗ ದುಂದುವೆಚ್ಚ ವನ್ನೂ ಮಾಡುವುದಿಲ್ಲ. ಜಿಪುಣತೆಯನ್ನೂ ತೋರುವುದಿಲ್ಲ. ಅವರ ಖರ್ಚು ಇವೆರಡರ ಮಧ್ಯೆ ನೆಲೆಯಲ್ಲಾಗಿರುವುದು.
ಅವರು ಅಲ್ಲಾಹನ ಹೊರತು ಬೇರೆ ಯಾವ ಆರಾಧ್ಯನನ್ನೂ ಆರಾಧಿಸುವುದಿಲ್ಲ. ಅಲ್ಲಾಹನು ವಿರೋಧಿಸಿದ ಯಾವ ಜೀವವನ್ನೂ ಅನ್ಯಾಯವಾಗಿ ಕೊಲೆ ಮಾಡುವುದಿಲ್ಲ. ವ್ಯಭಿಚಾರವೆಸಗುವುದಿಲ್ಲ. ಈ ಕಾರ್ಯಗಳನ್ನು ಯಾರಾದರೂ ಮಾಡಿದರೆ ಅದರ ಶಿಕ್ಷೆಯನ್ನು ಪಡೆಯುವನು.
ಅಂತ್ಯ ದಿನದಂದು ಅವನಿಗೆ ಇಮ್ಮಡಿ ಶಿಕ್ಷೆ ನೀಡಲಾಗುವುದು. ಅವನು ಅದರಲ್ಲೇ ನಿಂದ್ಯನಾಗಿ ಸದಾ ಬಿದ್ದುಕೊಂಡಿರುವನು.
ಆದರೆ ಪಶ್ಚಾತ್ತಾಪಪಟ್ಟು, ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಮಾಡಿದರೆ ಅಲ್ಲಾಹನು ಅವರ ಪಾಪಗಳನ್ನು ಪುಣ್ಯಗಳಾಗಿ ಪರಿವರ್ತಿಸುವನು, ಅಲ್ಲಾಹು ಅತ್ಯಂತ ಕ್ಷಮಾಶೀಲನೂ ದಯಾ ನಿಧಿಯೂ ಆಗಿರುತ್ತಾನೆ.
ಯಾರು ಪಾಪದಿಂದ ಪಶ್ಚಾತ್ತಾಪಪಟ್ಟು ಸತ್ಕರ್ಮಗಳನ್ನು ಮಾಡುತ್ತಾರೆ, ಅವರು ಅಲ್ಲಾಹನ ಕಡೆಗೆ ತೃಪ್ತಿಕರವಾದ ರೀತಿಯಲ್ಲಿ ಮರಳುತ್ತಾರೆ.
ಅವರು ಸುಳ್ಳಿಗೆ ಸಾಕ್ಷಿಗಳಾಗುವುದಿಲ್ಲ. ಅವರು ವ್ಯರ್ಥ ವಿಷಯಗಳ ಸಮೀಪದಿಂದ ಹಾದು ಹೋಗುವುದಾದರೆ, ಮಾನ್ಯರಾಗಿ ಹಾದು ಹೋಗುತ್ತಾರೆ.
ತಮ್ಮ ಪ್ರಭುವಿನ (ಖುರ್‍ಆನ್) ವಚನಗಳನ್ನು ಹೇಳಿ ಉಪದೇಶ ಮಾಡಿದರೆ, ಅವರು ಅದರ ಬಗ್ಗೆ ಕುರುಡರೂ ಕಿವುಡರೂ ಆಗಿ ಬಿದ್ದುಕೊಂಡಿ ರುವುದಿಲ್ಲ.
ಅವರು, `ನಮ್ಮ ಪ್ರಭೂ, ನಮ್ಮ ಪತ್ನಿಯರಿಂದಲೂ ಮಕ್ಕಳಿಂದಲೂ ನಮ್ಮ ಕಣ್ಣುಗಳನ್ನು ತಣಿಸು ವವರನ್ನು ನಮಗೆ ದಯಪಾಲಿಸು. ನಮ್ಮನ್ನು ಧರ್ಮನಿಷ್ಟರ ಪಾಲಿಗೆ ಆದರ್ಶ ನಾಯಕರಾಗಿ ಮಾಡು’ ಎಂದು ಪ್ರಾರ್ಥಿಸುತ್ತಾರೆ .
ತಮ್ಮ ಸಹನೆಯ ಕಾರಣದಿಂದ ಅವರಿಗೆ (ಪರಲೋಕದಲ್ಲಿ) ಉನ್ನತ ಅಂತಸ್ತಿನ ಸ್ವರ್ಗವನ್ನು ಪ್ರತಿಫಲ ನೀಡಲಾಗುವುದು. ಅವರನ್ನು ಗೌರವ ಪೂರ್ಣ ಅಭಿನಂದನೆ ಹಾಗೂ ಶಾಂತಿ ಸಂದೇಶಗಳೊಂದಿಗೆ ಸ್ವಾಗತಿಸಲಾಗುವುದು.
ಅವರು ಅದರಲ್ಲಿ ಶಾಶ್ವತವಾಗಿ ನೆಲೆಸುವರು. ಆ ನೆಲೆ ಮತ್ತು ಆ ಸ್ಥಾನ ಎಷ್ಟು ಉತ್ತಮವಾದುದು!
(ಪೈಗಂಬರರೇ,) ಹೇಳಿರಿ. ನೀವು ನನ್ನ ಪ್ರಭು ವನ್ನು ಆರಾಧಿಸದಿದ್ದರೆ ಅವನು ನಿಮ್ಮನ್ನು ಲೆಕ್ಕಿಸ ಲಾರನು. ಆದರೆ ನೀವು ಸತ್ಯವನ್ನು ಸುಳ್ಳಾಗಿಸಿದ್ದೀರಿ, ಆದ್ದರಿಂದ ನಂತರ ಅದರ ಶಿಕ್ಷೆ ಅನಿವಾರ್ಯ ವಾಗುವುದು.