ಆಲ್ ಇಸ್ಲಾಂ ಲೈಬ್ರರಿ
1

ಅಬೂಲಹಬನ ಎರಡು ಕೈಗಳು ನಾಶವಾಗಲಿ ಹಾಗೂ ಅವನು ನಾಶವಾದನು.

2

ಅವನ ಧನವೂ, ಅವನ ಸಂಪಾದನೆಯೂ ಅವನನ್ನು ಪಾರು ಮಾಡಲಾರದು.

3

ಅಗ್ನಿ ಜ್ವಾಲೆಗಳಿಂದ ಹೊತ್ತಿ ಉರಿಯುವ ನರಕಕ್ಕೆ ಅವನು ಪ್ರವೇಶಿಸುವನು.

4

(ಅವನೊಂದಿಗೆ) ಕಟ್ಟಿಗೆ ಹೊರುವ ಅವನ ಪತ್ನಿಯೂ ಕೂಡ.

5

ಅವಳ ಕೊರಳಲ್ಲಿ ಹೊಸೆದ ಹಗ್ಗವಿರುವ ಸ್ಥಿತಿಯಲ್ಲಿ.