ಆಲ್ ಇಸ್ಲಾಂ ಲೈಬ್ರರಿ
1

ಪ್ರತಿಫಲ ದಿನವನ್ನು ಸುಳ್ಳಾಗಿಸುವವನನ್ನು ತಾವು ಕಂಡಿಲ್ಲವೇ?

2

ಅವನು ಯಾರೆಂದರೆ, ತಬ್ಬಲಿಯನ್ನು ಹೊರ ದಬ್ಬುವವನು.

3

ಅವನು ಬಡವರಿಗೆ ಆಹಾರ ನೀಡುವುದಕ್ಕೆ ಪ್ರೋತ್ಸಾಹ ನೀಡುವುದಿಲ್ಲ .

4

ನಮಾಜು ಮಾಡುವವರಿಗೆ ವಿನಾಶ ಕಾದಿದೆ.

5

ಅವರು ಯಾರೆಂದರೆ ತಮ್ಮ ನಮಾಝಿನ ಕುರಿತು ಅನಾಸ್ಥೆ ತಾಳುವವರು .

6

ಅವರು ತೋರಿಕೆಗಾಗಿ ನಮಾಝ್ ಮಾಡುತ್ತಾರೆ.

7

ಮತ್ತು ಪುಟ್ಟ ಉಪಯೋಗ ವಸ್ತುಗಳನ್ನು ತಡೆಯುತ್ತಾರೆ.