1
ಮಾನ ಹರಿಯುವ ಹಾಗೂ ಚುಚ್ಚು ನುಡಿಯುವ ಸರ್ವರಿಗೂ ಕಾದಿದೆ ವಿನಾಶ .
2
ಅವನು ಸಂಪತ್ತನ್ನು ಸಂಗ್ರಹಿಸಿದನು ಮತ್ತು ಅದನ್ನು ಕೂಡಿಟ್ಟನು.
3
ಅವನು ತನ್ನ ಸಂಪತ್ತು ತನ್ನನ್ನಿಲ್ಲಿ ಶಾಶ್ವತಗೊಳಿಸುತ್ತದೆ ಎಂದು ಭಾವಿಸುತ್ತಾನೆ.
4
ಹಾಗೆ ಭಾವಿಸ ಬೇಡ, ಖಂಡಿತ ಅವನನ್ನು ಹುತ್ವಮಃಕ್ಕೆ ಎಸೆಯಲ್ಪಡುವುದು.
5
ಹುತ್ವಮಃ ಎಂದರೆ ಏನೆಂದು ನಿಮಗೆ ಗೊತ್ತಾ?
6
ಅಲ್ಲಾಹನ ಹೊತ್ತಿಜ್ವಲಿಸುವ ಅಗ್ನಿಯದು!
7
ಅದರ ಅಗ್ನಿಯು ಹೃದಯದಾಳಕ್ಕೆ ತಿವಿಯುತ್ತದೆ.
8
ಖಂಡಿತವಾಗಿಯೂ ಅದು ಅವರ ಮೇಲೆ ಮುಗಿ ಬಿದ್ದಿರುವುದು.
9
ಎತ್ತರವಾದ ಸ್ಥಂಭಗಳಲ್ಲಿ .