All Islam Directory
1

ಹಾಮೀಮ್.

2

ಸುವ್ಯಕ್ತವಾದ ಈ ಗ್ರಂಥದಾಣೆ.

3

ನೀವು ಗ್ರಹಿಸಿಕೊಳ್ಳಲಿಕ್ಕಾಗಿ ನಾವು ಇದನ್ನು ಅರಬಿ ಭಾಷೆಯ ಖುರ್‍ಆನ್ (ಗ್ರಂಥ) ಆಗಿ ಮಾಡಿರುತ್ತೇವೆ.

4

ವಾಸ್ತವದಲ್ಲಿ ಅದು ಮೂಲಗ್ರಂಥದಲ್ಲಿ ಲಿಖಿತವಿದ್ದು ನಮ್ಮ ಬಳಿ ಅತ್ಯುನ್ನತ ಸ್ಥಾನ ಹೊಂದಿರುವ ತತ್ವ ಪೂರ್ಣ ಗ್ರಂಥ.

5

ಹೀಗಿರುವಾಗ ಇದನ್ನು ನಿಮಗೆ ರವಾನಿಸದೆ ನಾವು ತಡೆದಿರಿಸಬೇಕೆ? ನೀವು ಹದ್ದುಮೀರಿದ ಜನತೆ ಎಂಬ ಕಾರಣಕ್ಕೆ?

6

ಪೂರ್ವಿಕರಲ್ಲೂ ನಾವು ಎಷ್ಟೆಷ್ಟೋ ಪ್ರವಾದಿಗಳನ್ನು ಕಳುಹಿಸಿದ್ದೇವೆ.

7

ಅವರ ಬಳಿಗೆ ಬಂದ ಯಾವೊಬ್ಬ ಪ್ರವಾದಿಯನ್ನೂ ಅವರು ಪರಿಹಾಸ ಮಾಡದೇ ಬಿಟ್ಟಿರಲಿಲ್ಲ.

8

ಆಗ ಇವರಿಗಿಂತ ಅದೆಷ್ಟೋ ಸಮರ್ಥ ಬಲಶಾಲಿಗಳಾಗಿದ್ದವರನ್ನು ನಾವು ನಾಶ ಗೊಳಿಸಿದ್ದೇವೆ. ಪೂರ್ವಿಕರ ಉದಾಹರಣೆ (ಖುರ್‍ಆನಿನಲ್ಲಿ) ಪ್ರಸ್ತಾಪಿಸಲಾಗಿದೆ.

9

ಆಕಾಶಗಳನ್ನೂ, ಭೂಮಿಯನ್ನೂ ಸೃಷ್ಟಿಸಿದ್ದು ಯಾರೆಂದು ತಾವು ಅವರೊಂದಿಗೆ ಕೇಳಿದರೆ, ಅವುಗಳನ್ನು ಪ್ರಬಲನೂ ಅಭಿಜ್ಞನೂ ಆದವನು (ಅಲ್ಲಾಹು) ಸೃಷ್ಟಿಸಿದನೆಂದು ಅವರು ಹೇಳುವರು .

10

(ಹೌದು) ನಿಮಗಾಗಿ ಈ ಭೂಮಿಯನ್ನು ಒಂದು ಹಾಸನ್ನಾಗಿಯೂ ಗುರಿ ತಲುಪುವಂತಾಗಲು ಅದರಲ್ಲಿ ನಿಮಗೆ ದಾರಿಗಳನ್ನೂ ಮಾಡಿಕೊಟ್ಟವನು ಅವನೇ.

11

ಅವನು ಆಕಾಶದಿಂದ ಒಂದು ನಿಶ್ಚಿತ ಪ್ರಮಾಣದಲ್ಲಿ ನೀರನ್ನು ಸುರಿಸಿಕೊಟ್ಟನು. ಹಾಗೆ ನಾವು ಅದರ ಮೂಲಕ ನಿರ್ಜೀವಗೊಂಡಿದ್ದ ಭೂಪ್ರದೇ ಶವನ್ನು ಜೀವಂತಗೊಳಿಸಿದೆವು. ಅಂತೆಯೇ ನೀವು (ಒಂದು ದಿನ ಸಮಾಧಿಯಿಂದ) ಹೊರ ತರಲ್ಪಡುವಿರಿ.

12

ಎಲ್ಲಾ ಜೋಡಿಗಳನ್ನು ಸೃಷ್ಟಿಸಿದವನು ಅವನೇ. ಅವನು ನಿಮಗೆ ಯಾತ್ರೆಗಿರುವ ನೌಕೆಗಳನ್ನು ಮತ್ತು ಪ್ರಾಣಿಗಳನ್ನು (ವಾಹನಗಳಾಗಿ) ಮಾಡಿ ಕೊಟ್ಟಿರುವನು.

13

ನೀವು ಅವುಗಳ ಬೆನ್ನೇರಿ ಕುಳಿತುಕೊಳ್ಳಲು ಆಮೇಲೆ ನೀವು ಅವುಗಳ ಮೇಲೆ ಕುಳಿತಾಗ ನಿಮ್ಮ ಪ್ರಭುವಿನ ಅನುಗ್ರಹವನ್ನು ನೀವು ಸ್ಮರಿಸಿಕೊಳ್ಳಲು ಹಾಗೂ ನೀವು ಹೀಗೆ ಹೇಳಲಿಕ್ಕಾಗಿ: ``ನಮಗೆ ಇದನ್ನು ಅಧೀನಪಡಿಸಿಕೊಟ್ಟವನು ಪರಮ ಪರಿಶುದ್ಧನು. ನಾವು ಸ್ವಂತವಾಗಿ ಇದನ್ನು ಅಧೀನಪಡಿಸಲು ಶಕ್ತರಾಗಿಲ್ಲ.

14

ಖಂಡಿತ. ನಾವು ನಮ್ಮ ಪ್ರಭುವಿನ ಕಡೆಗೇ ಮರಳಿ ಹೋಗಲಿಕ್ಕಿದೆ”.

15

ಅವರು ಅವನ (ಅಲ್ಲಾಹನ) ದಾಸರುಗಳಲ್ಲಿ ಕೆಲವರನ್ನು ಅವನ ಅಂಶವನ್ನಾಗಿ (ಸಂತಾನವಾಗಿ) ಮಾಡಿಬಿಟ್ಟರು. ಖಂಡಿತ, ಮನುಷ್ಯನು ಪ್ರತ್ಯಕ್ಷ ಕೃತಘ್ನನಾಗಿರುತ್ತಾನೆ.

16

ಅದಲ್ಲ, ತಾನು ಸೃಷ್ಟಿಸುವುದರಲ್ಲಿ ಕೆಲವರನ್ನು ಅವನು ಪುತ್ರಿಯರಾಗಿ ಮಾಡಿ ಪುತ್ರರನ್ನು ನಿಮಗೆ ಪ್ರತ್ಯೇಕಗೊಳಿಸಿಕೊಟ್ಟಿರುವನೇ?

17

ಅವರಲ್ಲಿ ಒಬ್ಬನಿಗೆ- ಅವನು ಕರುಣಾನಿಧಿಯಾದ ಅಲ್ಲಾಹನಿಗೆ ಉಪಮೆಗೊಳಿಸಿದ್ದನ್ನು (ಹೆಣ್ಮಕ್ಕಳನ್ನು)- ಸುವಾರ್ತೆಯಾಗಿ ನೀಡಲ್ಪಟ್ಟರೆ ಅವನು ಮಹಾ ದುಃಖಿತನಾಗಿ, ಅವನ ಮುಖ ಕಪ್ಪಾಗಿ ಬಿಡುತ್ತದೆ.

18

ಆಭರಣಾಲಂಕಾರಗಳಿಂದ ಬೆಳೆಸಲ್ಪಡುವವರ ನ್ನೋ (ನೀವು ಅಲ್ಲಾಹನಿಗೆ ಸಂತಾನಗಳಾಗಿ ಮಾಡಿ ಬಿಡುವುದು?) ವಾಸ್ತವದಲ್ಲಿ ಅವರು ವಾಗ್ವಾದದಲ್ಲಿ ತಮ್ಮ ಮನದಿಂಗಿತವನ್ನು ಕೂಡ ವ್ಯಕ್ತಪಡಿಸಲು ಸಾಧ್ಯವಾಗದವರಾಗಿದ್ದಾರೆ .

19

ಮಹಾ ಕಾರುಣಿಕನಾದ ಅಲ್ಲಾಹನ ದಾಸರಾಗಿ ರುವ ದೇವಚರರನ್ನು ಅವರು ಸ್ತ್ರೀಯರೆಂದು ವಾದಿಸಿಕೊಂಡರು. ಅವರನ್ನು ಸೃಷ್ಟಿಸುವಾಗ ಇವರು ಅಲ್ಲಿ ಸನ್ನಿಹಿತರಾಗಿದ್ದರೇ? ಅವರ ಸಾಕ್ಷಿ ಯನ್ನು ಬರೆದಿರಿಸಿಕೊಳ್ಳಲಾಗುವುದು ಮತ್ತು ಅವರು ಅದರ ಕುರಿತು ವಿಚಾರಿಸಲ್ಪಡುವರು.

20

``ಕಾರುಣ್ಯವಂತನಾದ ಅಲ್ಲಾಹು ಇಚ್ಛಿಸುತ್ತಿದ್ದರೆ ನಾವು ದೇವಚರರನ್ನು ಆರಾಧಿಸುತ್ತಿರಲಿಲ್ಲ’’ ಎಂದು ಅವರು ಹೇಳುತ್ತಾರೆ . ಅದರ ಕುರಿತು ಅವರಿಗೆ ಯಾವುದೇ ಅರಿವಿಲ್ಲ. ಅವರು ಕೇವಲ ಊಹೆಯಿಂದ ಹೇಳುತ್ತಿದ್ದಾರಷ್ಟೆ.

21

ಅದಲ್ಲ, (ಈ ವಿಷಯದಲ್ಲಿ) ಇದಕ್ಕೆ ಮೊದಲು ನಾವು ಯಾವುದಾದರೂ ವೇದಗ್ರಂಥವನ್ನು ಅವರಿಗೆ ನೀಡಿದ್ದು, ಅದನ್ನವರು ಬಲವಾಗಿ ಹಿಡಿದಿದ್ದರೇನು? (ಇಲ್ಲ)

22

ಆದರೆ, ಅವರು ಹೇಳುತ್ತಾರೆ; ``ನಮ್ಮ ಪೂರ್ವಜರನ್ನು ಒಂದು ಮಾರ್ಗದಲ್ಲಿದ್ದುದಾಗಿ ನಾವು ಕಂಡಿದ್ದೇವೆ. ನಾವು ಅವರ ಹೆಜ್ಜೆ ಗುರುತುಗಳ ಮೇಲೆ ಸನ್ಮಾರ್ಗ ಗಳಿಸಿಕೊಂಡವರಾಗಿದ್ದೇವೆ.’’

23

(ಪ್ರವಾದಿಯರೇ) ಇದೇ ರೀತಿಯಲ್ಲಿ ತಮಗಿಂತ ಮುಂಚೆ ನಾವು ಪ್ರತಿಯೊಂದು ನಾಡಲ್ಲೂ ಒಬ್ಬ ಮುನ್ನೆಚ್ಚರಿಕೆಗಾರನನ್ನು ಕಳುಹಿಸಿದಾಗ ಅಲ್ಲಿ ಸುಖಲೋಲುಪರು (ಈ ರೀತಿ) ಹೇಳದೆ ಬಿಟ್ಟಿಲ್ಲ; ``ನಮ್ಮ ಪೂರ್ವಜರನ್ನು ಒಂದು ಮಾರ್ಗದಲ್ಲಿ ನಾವು ಕಂಡರಿತೆವು. ನಾವು ಕೂಡಾ ಅವರ ಹೆಜ್ಜೆ ಗುರುತುಗಳನ್ನು ಅನುಕರಿಸುತ್ತೇವೆ .

24

ಅವರು (ಪ್ರವಾದಿ) ಕೇಳಿದರು; ನೀವು ನಿಮ್ಮ ಪೂರ್ವಿಕರನ್ನು ಕಂಡರಿತ ಮಾರ್ಗಕ್ಕಿಂತ ಸಂಶುದ್ಧ ಮಾರ್ಗವನ್ನು ನಾನು ನಿಮಗೆ ತಂದು ಕೊಟ್ಟರೆ? (ನೀವು ಅದೇ ಮಾರ್ಗದಲ್ಲಿ ಚಲಿ ಸುವಿರಾ?) ಅವರು (ಆ ಜನತೆ) ಹೇಳಿದರು; ``ನೀವು ಯಾವ ಮಾರ್ಗ ದೆಡೆಗೆ ಅಹ್ವಾನಿಸಲು ನಿಯೋಗಿಸಲ್ಪಟ್ಟಿರುವಿರೋ ಅದನ್ನು ನಾವು ನಿಷೇಧಿಸುವವರಾಗಿದ್ದೇವೆ”.

25

(ಕೊನೆಗೆ) ಅವರನ್ನು ನಾವು ಶಿಕ್ಷಿಸಿದೆವು. ಆ ಸತ್ಯ ನಿಷೇಧಿಗಳ ಅಂತಿಮ ಸ್ಥಿತಿ ಏನಾಯಿತೆಂಬು ದನ್ನು ಕಂಡುಕೊಳ್ಳಿರಿ.

26

(ಪ್ರವಾದಿ) ಇಬ್‍ರಾಹೀಮರು ತನ್ನ ತಂದೆ ಯೊಂದಿಗೆ ಮತ್ತು ಜನತೆಯೊಂದಿಗೆ ಹೀಗೆ ಹೇಳಿದ ಸಂದರ್ಭ ವನ್ನು ಸ್ಮರಿಸಿರಿ. `ನೀವು ಯಾವುದನ್ನು ಆರಾಧಿಸುತ್ತೀರೋ ಅದರಿಂದ ನಾನು ಮುಕ್ತನಾಗಿದ್ದೇನೆ.

27

ತನ್ನನ್ನು ಸೃಷ್ಟಿಸಿದ (ಅಲ್ಲಾಹನ) ಹೊರತು. ಅವನೇ ನನಗೆ ಸನ್ಮಾರ್ಗದರ್ಶನ ಮಾಡುವನು.

28

ಅವರು (ಇಬ್‍ರಾಹೀಮ್) ಅದನ್ನು (ಆ ಘೋಷಣೆಯನ್ನು) ತನ್ನ ಸಂತತಿಗಳಲ್ಲಿ ಬಿಟ್ಟು ಹೋದ ಒಂದು ವಚನವನ್ನಾಗಿ ಮಾಡಿದರು. ಅವರು (ಅನುಯಾಯಿಗಳು ಸತ್ಯದ ಕಡೆಗೆ) ಮರಳು ವಂತಾಗಲು.

29

ಇಷ್ಟಾಗಿಯೂ ಇವರಿಗೆ ಮತ್ತು ಇವರ ಪೂರ್ವ ಜರಿಗೆ ಸತ್ಯ (ಖುರ್‍ಆನ್) ಮತ್ತು ಸುವ್ಯಕ್ತ ವಿವರಣೆ ನೀಡುವ ಪ್ರವಾದಿ ಆಗಮಿಸುವ ತನಕ ನಾನು ಜೀವನ ಸಾಧನ ಕೊಡುತ್ತಲೇ ಇದ್ದೆನು.

30

ಹಾಗೆ, ಅವರ ಬಳಿಗೆ ಸತ್ಯವು ಬಂದು ತಲುಪಿದಾಗ ``ಇದು ಮಾರಣ (ಸಿಹ್‍ರ್) ಆಗಿರುತ್ತದೆ. ನಾವಿದನ್ನು ನಿಷೇಧಿಸುತ್ತೇವೆ” ಎಂದವರು ಹೇಳಿ ಬಿಟ್ಟರು.

31

ಅವರು ಕೇಳಿದರು; ``ಈ ಖುರ್‍ಆನನ್ನು ಈ ಎರಡು ನಾಡುಗಳಲ್ಲಿರುವ ಮಹಾನ್ ವ್ಯಕ್ತಿಯೊ ಬ್ಬರ ಮೇಲೆ ಅವತೀರ್ಣಗೊಳಿಸಲ್ಪಟ್ಟಿಲ್ಲವೇಕೆ?”

32

(ಪ್ರವಾದಿಯರೇ) ತಮ್ಮ ಪ್ರಭುವಿನ ಕೃಪೆಯನ್ನು ಹಂಚಿಕೊಡುವವರು ಅವರಾಗಿರುವರೇ? ಐಹಿಕ ಜೀವನದಲ್ಲಿ ಅವರ ಉಪಜೀವನ ಸಾಧನಗಳನ್ನು ಅವರ ಮಧ್ಯೆ ನಾವು ಭಾಗಿಸಿಕೊಟ್ಟಿದ್ದೇವೆ. ಅವರಲ್ಲಿ ಕೆಲವರು ಇನ್ನು ಕೆಲವರನ್ನು ಅಧೀನದಲ್ಲಿಟ್ಟು ಕೊಳ್ಳಲಿಕ್ಕಾಗಿ ಅವರ ಪೈಕಿ ಕೆಲವರನ್ನು ಇನ್ನು ಕೆಲವರಿಗಿಂತ ನಾವು ಮೇಲೇರಿಸಿರುವೆವು. ತಮ್ಮ ಪ್ರಭುವಿನ ಕೃಪೆಯು ಅವರು ಸಂಗ್ರಹಿಸುತ್ತಿರುವ ಸಂಪತ್ತಿಗಿಂತ ಅದೆಷ್ಟೋ ಉತ್ತಮವಾಗಿದೆ.

33

ಮನುಷ್ಯರು ಸತ್ಯನಿಷೇಧದಲ್ಲಿ ಏಕ ಸಮುದಾ ಯವಾಗುವ ಸಂಭವ ಇಲ್ಲದಿರುತ್ತಿದ್ದರೆ ಕಾರುಣ್ಯ ವಂತನಾದ ಅಲ್ಲಾಹನನ್ನು ನಿಷೇಧಿಸುವವರ ಮನೆಗಳಿಗೆ ಬೆಳ್ಳಿಯ ಛಾವಣಿಗಳನ್ನೂ ಅವರು ತಮ್ಮ ಮಾಳಿಗೆಗೇರಲು (ಬೆಳ್ಳಿಯ) ಮೆಟ್ಟಲು ಗಳನ್ನೂ

34

35

ಅವರ ಮನೆಗಳಿಗೆ (ಬೆಳ್ಳಿಯ) ಬಾಗಿಲು ಗಳನ್ನೂ ಅವರಿಗೆ ಒರಗಿ ಕುಳಿತುಕೊಳ್ಳಲು (ಬೆಳ್ಳಿಯ) ಮಂಚಗಳನ್ನೂ ಚಿನ್ನದ ಅಲಂಕಾರ ವನ್ನೂ ನಾವು ಮಾಡಿಕೊಡುತ್ತಿದ್ದೆವು. (ವಾಸ್ತವ ದಲ್ಲಿ) ಅವೆಲ್ಲವೂ ಐಹಿಕ ಜೀವನದ ಸರಕು (ದೊಡ್ಡಸ್ತಿಕೆ)ಗಳಾಗಿವೆ . ಪರಲೋಕವು ತಮ್ಮ ಪ್ರಭುವಿನ ಬಳಿ ಭಯ-ಭಕ್ತಿಯುಳ್ಳವರಿಗೆ ಮಾತ್ರ ಇರುವುದಾಗಿದೆ.

36

ಕಾರುಣ್ಯವಂತನಾದ ಅಲ್ಲಾಹನ ಸ್ಮರಣೆಯಿಂದ ಯಾವನಾದರೂ ಹಿಂದೆ ಸರಿದರೆ ನಾವು ಅವನಿಗೆ ಒಂದು ಪಿಶಾಚಿಯನ್ನು ಏರ್ಪಡಿಸಿ ಕೊಡುವೆವು. ಆಗ ಆ ಪಿಶಾಚಿ ಅವನ ಆಪ್ತ ಸಂಗಾತಿಯಾಗಿ ಬಿಡುವನು.

37

ಆ ಪಿಶಾಚಿಗಳು ಅವರನ್ನು ಸನ್ಮಾರ್ಗದಿಂದ ತಡೆಯುತ್ತಾರೆ. ಅವರಾದರೆ, ನಾವು ಸನ್ಮಾರ್ಗ ಪ್ರಾಪ್ತಿಸಿಕೊಂಡಿದ್ದೇವೆಂದು ತಮ್ಮಷ್ಟಕ್ಕೆ ತಿಳಿದು ಕೊಂಡಿರುತ್ತಾರೆ.

38

ಕೊನೆಗೆ, ನಮ್ಮ ಬಳಿ ಬಂದಾಗ ಅವರು (ತಮ್ಮ ಸಂಗಾತಿಯೊಂದಿಗೆ) ಹೇಳುತ್ತಾರೆ; ``ಅಯ್ಯೋ, ನನ್ನ ಮತ್ತು ನಿನ್ನ ಮಧ್ಯೆ ಪೂರ್ವ ಪಶ್ಚಿಮಗಳ ಅಂತರವಿರುತ್ತಿದ್ದರೆ ಬಹಳ ಉತ್ತಮವಿತ್ತು’’. ಹಾಗಾದರೆ ಆ ಸಂಗಾತಿ ಎಷ್ಟು ನಿಕೃಷ್ಟ !

39

ಇಂದು ಅದು (ನಿಮ್ಮ ಆಗ್ರಹ ಪ್ರಕಟನೆ) ನೀವೆಸಗಿದ ಅಕ್ರಮವು ಬಹಿರಂಗಗೊಂಡ ಸಂದರ್ಭದಲ್ಲಿ ನಿಮಗೆ ಫಲಕಾರಿಯಾಗದು. ನೀವು ಶಿಕ್ಷೆಯಲ್ಲಿ ಎರಡು ವಿಭಾಗದವರೂ ಪಾಲುದಾರರೇ ಆಗಿರುವಿರಿ.

40

(ಪ್ರವಾದಿಯರೇ) ತಾವು ಕಿವುಡರಿಗೆ ಕೇಳಿಸ ಬಲ್ಲಿರಾ? ಅಥವಾ ಅಂಧರನ್ನು ಮತ್ತು ಸುವ್ಯಕ್ತ ಪಥಭೃಷ್ಟತೆಯಲ್ಲಿ ಬಿದ್ದಿರುವವರನ್ನು ಸನ್ಮಾರ್ಗದಲ್ಲಿ ಮಾಡುವಿರಾ?

41

ಇನ್ನು (ಇಲ್ಲಿಂದ ವಫಾತ್ ಮುಖಾಂತರ) ತಮ್ಮ ನ್ನು ನಾವು ಎತ್ತಿಕೊಂಡು ಹೋದರೂ ಅವರನ್ನು ನಾವು ಶಿಕ್ಷಿಸಿಯೇ ಬಿಡುವೆವು.

42

ಅಲ್ಲದಿದ್ದಲ್ಲಿ, ಅವರಿಗೆ ನಾವು ವಾಗ್ದಾನ ನೀಡಿರುವ ಶಿಕ್ಷೆಯನ್ನು ತಮಗೆ ಕಾಣಿಸಿಕೊಡಲಾಗುವುದು. ಅವರ ಮೇಲೆ ನಾವು ಸಂಪೂರ್ಣ ನಿಯಂತ್ರಣವುಳ್ಳವ (ಶಕ್ತ)ರೇ ಆಗಿದ್ದೇವೆ.

43

ಹಾಗಾಗಿ, ತಮಗೆ ನೀಡಲ್ಪಟ್ಟ ಸಂದೇಶವನ್ನು ತಾವು ಬಲವಾಗಿ ಹಿಡಿದುಕೊಳ್ಳಿರಿ. ಖಂಡಿತವಾಗಿಯೂ ತಾವು ನೇರ ಮಾರ್ಗದಲ್ಲಿದ್ದೀರಿ.

44

ಇದು (ಖುರ್‍ಆನ್) ತಮಗೂ ತಮ್ಮ ಜನತೆಗೂ ಒಂದು ಉದ್ಬೋಧನೆಯಾಗಿದೆ. ಕೊನೆಯಲ್ಲಿ ನೀವೆಲ್ಲರೂ ಪ್ರಶ್ನಿಸಲ್ಪಡುವಿರಿ.

45

ನಾವು ತಮಗಿಂತ ಮುಂಚೆ ಕಳುಹಿಸಿದ್ದ ನಮ್ಮ ಸಂದೇಶವಾಹಕರುಗಳೊಂದಿಗೆ ತಾವು ಕೇಳಿ ನೋಡಿರಿ. “ಕಾರುಣ್ಯವಂತನಾದ ಅಲ್ಲಾ ಹನ ಹೊರತು ಆರಾಧಿಸಲ್ಪಡುವ ಯಾವುದೇ ದೇವರುಗಳನ್ನು ನಾವು ನಿಶ್ಚಯಿಸಿದ್ದೇವೆಯೇ?”

46

ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳೊಂದಿಗೆ ಫಿರ್‍ಔನ್ ಮತ್ತು ಅವನ ಆಸ್ಥಾನಿಕರ ಬಳಿಗೆ ಕಳುಹಿಸಿದೆವು. ಅವರು (ಹೋಗಿ) ``ನಾನು ಸರ್ವಲೋಕ ಪರಿಪಾಲಕನಾದ ಪ್ರಭು ವಿನ ಸಂದೇಶವಾಹಕನಾಗಿದ್ದೇನೆ’’ ಎಂದು ಹೇಳಿದರು.

47

ಹಾಗೆಯೇ ಅವರು ನಮ್ಮ ದೃಷ್ಟಾಂತಗಳೊಂದಿಗೆ ಅವರ ಬಳಿ ಹೋದಾಗ ಅವರು ಅದರ ಕುರಿತು (ಪರಿಹಾಸದಿಂದ) ನಕ್ಕುಬಿಟ್ಟರು.

48

ಅವರಿಗೆ ನಾವು ಕಾಣಿಸಿಕೊಡುತ್ತಿದ್ದ ಪ್ರತಿಯೊಂದು ದೃಷ್ಠಾಂತವು ಒಂದು ಮತ್ತೊಂದಕ್ಕಿಂತ ಮಿಗಿಲಾದುದಾಗಿತ್ತು. (ಹಲವು ತರದ) ಶಿಕ್ಷೆಗಳಿಂದ ಅವರನ್ನು ನಾವು ಬಂಧಿಸಿದೆವು. ಅವರು (ಸತ್ಯದ ಕಡೆ) ಹಿಂತಿರುಗುವಂತಾಗಲಿಕ್ಕಾಗಿ.

49

ಅವರು ಹೇಳಿದರು; “ಓ ಮಾಟಗಾರ! ನಿನ್ನ ಪ್ರಭು ನಿನಗೆ ತಿಳಿಸಿಕೊಟ್ಟ ಆಧಾರದಲ್ಲಿ ನಿನ್ನ ಪ್ರಭುವಿನಲ್ಲಿ ನಮಗಾಗಿ ಪ್ರಾರ್ಥಿಸು. ನಾವು ಖಂಡಿತ ಸನ್ಮಾರ್ಗಕ್ಕೆ ಬರುತ್ತೇವೆ”.

50

ಹಾಗೆಯೇ ನಾವು ಅವರ ಮೇಲಿನ ಶಿಕ್ಷೆಯನ್ನು ತೊಲಗಿಸಿದಾಗ ಅವರು ಕರಾರು ಮುರಿದು ಬಿಡುತ್ತಿದ್ದರು.

51

ಫಿರ್‍ಔನ್ (ಒಮ್ಮೆ) ತನ್ನ ಜನತೆಯನ್ನು ಕರೆದು ಕೇಳಿದನು; ``ನನ್ನ ಜನರೇ, ಈಜಿಪ್ತಿನ ಆಧಿಪತ್ಯ ನನ್ನದಲ್ಲವೇ? ಈ ನದಿಗಳು ಹರಿಯುವುದು ನನ್ನ ಅಧೀನದಲ್ಲಲ್ಲವೇ? ನೀವು ಇವುಗಳನ್ನು ಕಂಡರಿತಿಲ್ಲವೇ?

52

ಅಥವಾ ಅಧಮನೂ ಸ್ಪಷ್ಟವಾಗಿ ಮಾತನಾಡಲಾಗದವನೂ ಆದ ಇವನಿಗಿಂತ (ಮೂಸಾ ಗಿಂತ) ಉತ್ತಮನು ನಾನೇ ಅಲ್ಲವೇ?

53

ಇನ್ನು (ಇವನು ಹೇಳುವುದು ಸತ್ಯವೆಂದಾದರೆ) ಇವನಿಗೆ ಚಿನ್ನದ ಕಂಕಣಗಳೇಕೆ ಧರಿಸಲ್ಪಟ್ಟಿಲ್ಲ? ಅಥವಾ ಇವನೊಂದಿಗೆ ದೇವಚರರ ತುಕಡಿ ಗಳೇಕೆ ಬಂದಿಲ್ಲ?”

54

ಹಾಗೆ, ಅವನು ತನ್ನ ಜನತೆಯನ್ನು ಮೂಢರ ನ್ನಾಗಿ ಮಾಡಿದನು ಮತ್ತು ಅವರು ಅವನನ್ನು ಅನುಸರಿಸಿದರು. ನಿಶ್ಚಯವಾಗಿಯೂ ಅವರು ಧಿಕ್ಕಾರಿಗಳೇ ಆಗಿದ್ದರು.

55

(ಈ ರೀತಿ) ಅವರು ನಮ್ಮನ್ನು ರೇಗಿಸಿದಾಗ ನಾವು ಅವರನ್ನು ಶಿಕ್ಷಿಸಿದೆವು ಮತ್ತು ಅವರೆಲ್ಲರನ್ನೂ ನಾವು ಮುಳುಗಿಸಿ ಕೊಂದೆವು.

56

ಹಾಗೆಯೇ, ಅವರನ್ನು ನಾವು ಅನಂತರದವರಿಗೆ ಒಂದು ಮಾದರಿಯೂ, ಉಪಮೆಯೂ ಆಗಿ ಮಾಡಿದೆವು.

57

(ಪ್ರವಾದಿಯರೇ) ಮರ್ಯಮರ ಪುತ್ರ ಈಸಾರನ್ನು ಒಂದು ಉಪಮೆಯಾಗಿ ಮಾಡಲ್ಪ(ಕಾಣಿ ಸಲ್ಪ)ಟ್ಟಾಗ ತಮ್ಮ ಜನತೆ ಅದರ ಕುರಿತು ಗೋಳಿಟ್ಟರು.

58

‘ನಮ್ಮ ದೇವರುಗಳೋ ಉತ್ತಮ? ಅಥವಾ ಅವರೋ?’ ಎಂದು ಅವರು ಕೇಳುವರು. ಒಂದು ತರ್ಕವಾಗಿ ಮಾತ್ರವೇ ಅವರದನ್ನು ತಮ್ಮ ಮುಂದಿಟ್ಟಿರುವುದು. ಮಾತ್ರವಲ್ಲ ಅವರು ಕಚ್ಚಾಡುವ ಜನತೆಯೇ ಆಗಿರುತ್ತಾರೆ.

59

ಅವರು (ಮರ್ಯಮರ ಪುತ್ರ) ನಾವು ಅನುಗ್ರಹಿಸಿದ ಓರ್ವ ದಾಸನೇ ಹೊರತು ಬೇರೇನೂ ಆಗಿರಲಿಲ್ಲ. ಇಸ್ರಾಈಲ್ ಸಂತತಿಗಳಿಗೆ ಅವರನ್ನು ನಾವು (ಅದ್ಭುತ ದೃಷ್ಟಾಂತಕ್ಕೆ) ಒಂದು ಉಪ ಮೆಯಾಗಿ ಮಾಡಿಬಿಟ್ಟೆವು.

60

ನಾವು ಇಚ್ಛಿಸುತ್ತಿದ್ದರೆ ಭೂಮಿಯಲ್ಲಿ ನಿಮ್ಮ ಉತ್ತರಾಧಿಕಾರಿಯಾಗಲು ನಿಮ್ಮಿಂದಲೇ ನಾವು ದೇವಚರರನ್ನು ಸೃಷ್ಟಿಸಿ ಬಿಡುತ್ತಿದ್ದೆವು.

61

ಅವರು (ಮರ್ಯಮರ ಪುತ್ರ) ಲೋಕಾಂತ್ಯದ ಒಂದು ಅರಿವು (ಕುರುಹು) ಆಗಿದ್ದಾರೆ. ಆದು ದರಿಂದ ನೀವು ಅದರ ಕುರಿತು ಸ್ವಲ್ಪವೂ ಸಂಶಯ ಪಡಬೇಡಿರಿ. ನನ್ನನ್ನು (ನನ್ನ ಮಾರ್ಗವನ್ನು) ಅನುಸರಿಸಿರಿ. ಇದು ನೇರ ಮಾರ್ಗವಾಗಿದೆ.

62

ಪಿಶಾಚಿ ನಿಮ್ಮನ್ನು (ಈ ಮಾರ್ಗದಿಂದ) ತಡೆಯದಿರಲಿ. ಖಂಡಿತ, ಅವನು ನಿಮಗೆ ಪ್ರತ್ಯಕ್ಷ ಶತ್ರುವಾಗಿದ್ದಾನೆ.

63

ಸುವ್ಯಕ್ತ ದೃಷ್ಟಾಂತಗಳೊಂದಿಗೆ ಈಸಾ (ನಬಿ) ಬಂದಾಗ ಹೇಳಿದ್ದರು; ``ನಾನು ನಿಮಗೆ ಜ್ಞಾನ ವನ್ನು (ಹಿಕ್ಮತ್) ತಂದಿರುವೆನು. ಮತ್ತು ನೀವು ಪರಸ್ಪರ ಭಿನ್ನಾಭಿಪ್ರಾಯದಲ್ಲಿರುವ ಕೆಲವು ವಿಚಾರಗಳನ್ನು ನಿಮಗೆ ವಿವರಿಸಿಕೊಡಲು ಬಂದಿರುವೆನು. ಆದುದರಿಂದ ನೀವು ಅಲ್ಲಾಹ ನನ್ನು ಭಯಪಟ್ಟು ನನ್ನನ್ನು ಅನುಸರಿಸಿರಿ.

64

ನನ್ನ ಮತ್ತು ನಿಮ್ಮ ಪ್ರಭು ಅಲ್ಲಾಹುವಾಗಿದ್ದಾನೆ. ಆದುದರಿಂದ ನೀವು ಅವನನ್ನು ಮಾತ್ರ ಆರಾಧಿಸಿರಿ, ಅದುವೇ ನೇರ ಮಾರ್ಗ” .

65

ಆದರೆ ಅವರ ಮಧ್ಯೆ ಪಂಗಡಗಳು ಪರಸ್ಪರ ಭಿನ್ನ ಭೇದಗೊಂಡವು . ಆದುದರಿಂದ (ಆ) ಅಕ್ರಮಿಗಳಿಗೆ ಒಂದು ದಿನದ ವೇದನಾಜನಕವಾದ ಶಿಕ್ಷೆ ಮೂಲಕ ಮಹಾ ನಾಶವಿದೆ.

66

ಸುದ್ದಿಯೇ ಇಲ್ಲದಂತೆ ಅನಿರೀಕ್ಷಿತವಾಗಿ ಇವರ ಮೇಲೆ ಆ ಪುನರುತ್ಥಾನ ದಿನವು ಬಂದೆರಗುವುದರ ಹೊರತು ಬೇರೇನನ್ನಾದರೂ ಅವರು ಕಾಯುತ್ತಿರುವರೇ?

67

ಅಂದು ಭಯಭಕ್ತಿಯುಳ್ಳ ಧರ್ಮನಿಷ್ಠರ ಹೊರತು ಇತರ ಮಿತ್ರರೆಲ್ಲರೂ ಪರಸ್ಪರ ಶತ್ರುಗಳಾಗಿ ಬಿಡುವರು.

68

69

(ಅಂದು) ನಮ್ಮ ವಚನಗಳಲ್ಲಿ ವಿಶ್ವಾಸ ಹೊಂದಿದ ಮತ್ತು ಆಜ್ಞಾಪಾಲಕರಾದ ಮುಸ್ಲಿಮರೊಡನೆ ``ಓ ನನ್ನ ದಾಸರುಗಳೇ, ಇಂದು ನಿಮಗೇನೂ ಭಯವಿಲ್ಲ. ನಿಮಗೆ ದುಃಖವೂ ಉಂಟಾಗದು’’ (ಎಂದು ಹೇಳಲಾಗುವುದು)

70

ನೀವೂ ನಿಮ್ಮ ಪತ್ನಿಯರೂ ಸಂತೋಷಪೂರ್ವಕ ಸ್ವರ್ಗದೊಳಗೆ ಪ್ರವೇಶಿಸಿರಿ.

71

ಸ್ವರ್ಣದ ತಟ್ಟೆಗಳು ಮತ್ತು ಲೋಟೆಗಳೊಂದಿಗೆ ಅವರ ಸುತ್ತ ನಡೆಯಲ್ಪಡುವುದು. ಅದರಲ್ಲಿ ದೇಹಗಳು ಇಚ್ಛಿಸುವ ಮತ್ತು ಕಣ್ಣುಗಳು ರಸಾನುಭವಿಸುವ ಎಲ್ಲವೂ ಸಿದ್ಧವಿರುವುವು. ಇದರಲ್ಲಿ ನೀವು ಸ್ಥಿರವಾಸಿಗಳಾಗಿರುವಿರಿ.

72

ನೀವು (ಭೂಲೋಕದಲ್ಲಿ) ನಿರ್ವಹಿಸುತ್ತಿದ್ದ ಸತ್ಕರ್ಮಗಳ ನಿಮಿತ್ತ ನಿಮಗೆ ವಾರೀಸು ಹಕ್ಕಾಗಿ ಲಭಿಸಲ್ಪಟ್ಟ ಸ್ವರ್ಗವಿದು.

73

ನಿಮಗಿಲ್ಲಿ ಧಾರಾಳ ಹಣ್ಣು ಹಂಪಲುಗಳಿವೆ. ನೀವು ಅವುಗಳಿಂದ ತಿಣ್ಣುವಿರಿ.

74

ಅಪರಾಧಿಗಳು ನರಕ ಶಿಕ್ಷೆಯಲ್ಲಿ ಖಂಡಿತ ಸ್ಥಿರವಾಸಿಗಳಾಗಿರುವರು.

75

ಆ ಶಿಕ್ಷೆಯಲ್ಲಿ ಅವರಿಗೆ ಕಡಿತ ಲಭಿಸದು. ಅವರದರಲ್ಲಿ ನಿರಾಶರಾಗಿರುವರು.

76

ನಾವು ಅವರನ್ನು ಅಕ್ರಮಿಸಿಲ್ಲ. ಬದಲಾಗಿ ಸ್ವತಃ ಅವರೇ ಅಕ್ರಮಿಗಳಾಗಿಬಿಟ್ಟರು.

77

ಅವರು ಕೂಗಿ ಹೇಳುತ್ತಾರೆ; ``ಓ ಮಾಲಿಕ್, ತಮ್ಮ ಪ್ರಭು ನಮ್ಮನ್ನು ಮುಗಿಸಿ ಬಿಡುವಂತಾಗಲಿ! ಆಗ ಅವರು (ಮಾಲಿಕ್) ಹೇಳುತ್ತಾರೆ; ``ನೀವು (ಶಿಕ್ಷೆಯಲ್ಲೇ) ವಾಸಿಸುವವರಾಗಿರುವಿರಿ.

78

ನಿಮಗೆ ನಾವು ಸತ್ಯವನ್ನು ತಂದು ಕೊಟ್ಟೆವು. ಆದರೆ, ನಿಮ್ಮ ಪೈಕಿ ಹೆಚ್ಚಿನವರು ಸತ್ಯವನ್ನು ತಿರಸ್ಕರಿಸುವವರಾದರು”.

79

ಅವರೇನಾದರೂ ತೀರ್ಮಾನಿಸಿಕೊಂಡಿರುವರೋ? ಹಾಗಾದರೆ ನಾವೂ ಕೆಲವೊಂದನ್ನು ತೀರ್ಮಾನಿಸಿ ಕೊಳ್ಳುವವರಾಗಿದ್ದೇವೆ.

80

ಅವರ ರಹಸ್ಯಗಳನ್ನೂ ಗೂಢಾಲೋಚನೆಯನ್ನೂ ನಾವು ಆಲಿಸುವುದಿಲ್ಲವೆಂದು ಅವರು ಗ್ರಹಿಸಿ ಕೊಂಡಿರುವರೇ? ವಾಸ್ತವದಲ್ಲಿ (ನಾವು ಆಲಿಸುತ್ತಿದ್ದೇವೆ). ನಮ್ಮ ದೂತರು (ಮಲಕುಗಳು) ಅವರ ಬಳಿಯಲ್ಲೇ ಬರೆಯುತ್ತಿದ್ದಾರೆ.

81

(ಪ್ರವಾದಿಯರೇ) ತಾವು ಹೇಳಿರಿ; ``ಕಾರುಣ್ಯವಂತನಾದ ಅಲ್ಲಾಹನಿಗೆ ಒಂದು ಸಂತಾನವಿರುತ್ತಿದ್ದರೆ ಅದನ್ನು ಆರಾಧಿಸುವವರಲ್ಲಿ ನಾನು ಮೊದಲಿಗ ನಾಗುತ್ತಿದ್ದೆನು’’. ಂ.

82

ಆಕಾಶಗಳ ಮತ್ತು ಭೂಮಿಯ ಪ್ರಭು ಹಾಗೂ ಅರ್ಶ್‍ನ ಒಡೆಯನಾದವನು, ಅವರು ವರ್ಣಿಸಿ ಹೇಳುವ ಎಲ್ಲಾ ದೋಷಗಳಿಂದ ಪರಿಶುದ್ಧನಾಗಿ ರುತ್ತಾನೆ.

83

ಆದುದರಿಂದ ಅವರನ್ನು ಬಿಟ್ಟು ಬಿಡಿರಿ. ಅವರು ತಾಕೀತು ನೀಡಲಾಗುತ್ತಿರುವ ದಿನವನ್ನು ಕಂಡು ತಲುಪುವವರೆಗೂ ಅವರು (ದುರ್ಮಾರ್ಗದಲ್ಲಿ) ವಿಹರಿಸುತ್ತಾ ವಿನೋದಪಡುತ್ತಾ ಇರಲಿ!

84

ಅವನು (ಅಲ್ಲಾಹು) ಆಕಾಶದಲ್ಲೂ ಅರಾಧ್ಯನು, ಭೂಮಿಯಲ್ಲೂ ಆರಾಧ್ಯನು. ಅವನು ತಂತ್ರಜ್ಞನೂ ಸರ್ವಜ್ಞನೂ ಆಗಿರುತ್ತಾನೆ.

85

ಆಕಾಶಗಳು ಮತ್ತು ಭೂಮಿ ಹಾಗೂ ಅವುಗಳ ಮಧ್ಯೆ ಇರುವ ಪ್ರತಿಯೊಂದು ವಸ್ತುಗಳ ಆಧಿಪತ್ಯ ಯಾವನಿಗಿರುವುದೋ ಅವನು ಮಹೋನ್ನತನು. ಅಂತ್ಯ ಘಳಿಗೆಯ ಕುರಿತುಳ್ಳ ಅರಿವು ಅವನಿಗಿದೆ. ನೀವೆಲ್ಲರೂ ಅವನ ಬಳಿಗೇ ಮರಳಿಸಲ್ಪಡುವಿರಿ.

86

ಅವನನ್ನು ಬಿಟ್ಟು ಅವರು ಯಾರನ್ನು ಆರಾಧಿಸುತ್ತಿರುವರೋ ಅವರು ಶಿಫಾರಸ್ಸಿನ ಅಧಿಕಾರವನ್ನು ಹೊಂದಿಲ್ಲ. ಅರಿವು ಉಳ್ಳವರಾಗಿ ಸತ್ಯದಲ್ಲಿ ಸಾಕ್ಷ್ಯವಹಿಸಿದವರ ಹೊರತು .

87

ಅವನನ್ನು ಸೃಷ್ಟಿಸಿದವನು ಯಾರೆಂದು ತಾವು ಅವರಲ್ಲಿ ಕೇಳಿದರೆ ಅಲ್ಲಾಹನೆಂದು ಅವರು ಹೇಳುವರು. ಮತ್ತೆ ಅವರು (ಸತ್ಯದಿಂದ) ಹೇಗೆ ತಪ್ಪಿ ಹೋಗುತ್ತಿದ್ದಾರೆ?

88

``ನನ್ನ ಪ್ರಭೂ, ಈ ಕೂಟದವರು ವಿಶ್ವಾಸ ಹೊಂದದ ಜನತೆಯಾಗಿರುವರು’’ ಎಂಬ ಅವರ (ನಬಿಯರ) ಮಾತಿನ ಕುರಿತೂ (ಅಲ್ಲಾಹನಿಗೆ ಅರಿವಿದೆ)

89

(ಪ್ರವಾದಿಯರೇ) ತಾವು ಅವರಿಂದ ದೂರ ಸರಿಯಿರಿ ಮತ್ತು ಸಲಾಮ್ ಎಂದು ಹೇಳಿರಿ. ಅವರಿಗೆ ಸದ್ಯದಲ್ಲೆ (ವಾಸ್ತವಿಕತೆ) ತಿಳಿದು ಬರುವುದು.