ಆಲ್ ಇಸ್ಲಾಂ ಲೈಬ್ರರಿ
1

ಜನರಿಗೆ ತಮ್ಮ ವಿಚಾರಣೆ ಸಮೀಪಿಸಿದೆ. ಆದರೆ ಅವರು ಅಶ್ರದ್ಧೆಯಿಂದ ವಿಮುಖರಾಗುತ್ತಿದ್ದಾರೆ.

2

ಅವರು, ತಮ್ಮ ಪ್ರಭುವಿನ ಕಡೆಯಿಂದ ತಮಗೆ ಬರುವ ಯಾವುದೇ ಹೊಸ ಉಪದೇಶವನ್ನು ಕೇವಲ ಪರಿಹಾಸ್ಯ ಭಾವದಿಂದ ಕೇಳುತ್ತಾರೆ.

3

ಅವರ ಹೃದಯಗಳು ಪ್ರಜ್ಞಾಹೀನವಾಗಿವೆ. “ಇವನು ನಿಮ್ಮಂತೆಯೇ ಇರುವ ಓರ್ವ ಮನುಷ್ಯನಲ್ಲವೇ? ಹೀಗಿರುವಾಗ ನೀವು ಕಣ್ಣಾರೆ ಕಾಣುತ್ತ ಜಾದುವಿನ ಕಡೆಗೆ ಹೋಗುವಿರಾ?” ಎಂದು ಅಕ್ರಮಿಗಳು ಪರಸ್ಪರ ಪಿಸುಗುಟ್ಟಿದರು.

4

ಪ್ರವಾದಿಯು ಹೇಳಿದರು; “ನನ್ನ ಪ್ರಭು ಆಕಾಶ ಮತ್ತು ಭೂಮಿಯಲ್ಲಿರುವ ಪ್ರತಿಯೊಂದು ಮಾತನ್ನೂ ಅರಿಯುತ್ತಾನೆ. ಅವನು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.”

5

ಆದರೆ ಅಕ್ರಮಿಗಳು; “ಇದು ಕೇವಲ ಕೆಟ್ಟ ಕನ ಸುಗಳು. ಅಲ್ಲ, ಇದನ್ನು ಇವನೇ ಹೆಣೆದಿರುವನು. ಮಾತ್ರವಲ್ಲ, ಇವನೊಬ್ಬ ಕವಿ. ಅನ್ಯಥಾ ಹಿಂದಿನವರು ನಿದರ್ಶನಗಳೊಂದಿಗೆ ಕಳುಹಿಸಲ್ಪಟ್ಟಿರು ವಂತೆ ಇವನೂ ನಮಗೆ ಒಂದು ನಿದರ್ಶನ ತರಲಿ” ಎಂದು ಹೇಳಿದರು .

6

ಆದರೆ ಇವರಿಗಿಂತ ಮುಂಚೆ ನಾವು ನಾಶಗೊಳಿಸಿದ ಯಾವ ನಾಡೂ ನಮ್ಮ ದೃಷ್ಟಾಂತವನ್ನು ನೋಡಿ ವಿಶ್ವಾಸವಿರಿಸಲಿಲ್ಲ. ಹೀಗಿರುವಾಗ ಇವರು ವಿಶ್ವಾಸವಿರಿಸುವರೇ?

7

(ಪೈಗಂಬರರೇ,) ನಿಮಗಿಂತ ಮುಂಚೆ ಪುರುಷರನ್ನು ಮಾತ್ರವೇ ನಾವು ಪ್ರವಾದಿಗಳಾಗಿ ಕಳುಹಿಸಿದ್ದು. ಅವರಿಗೆ ನಾವು ಸಂದೇಶ ಕೊಡುತ್ತಿದ್ದೆವು. ಬೇಕಾದರೆ ನಿಮಗೆ ಗೊತ್ತಿಲ್ಲದಿದ್ದರೆ ಗ್ರಂಥದವರಲ್ಲಿ ಕೇಳಿರಿ.

8

ಅವರನ್ನು (ಸಂದೇಶವಾಹಕರನ್ನು) ನಾವು ಆಹಾರ ಸೇವಿಸದಂತಹ ಶರೀರವನ್ನಾಗಿ ಮಾಡಿರಲಿಲ್ಲ. ಅವರು ಸದಾಕಾಲ ಬದುಕುವವರೂ ಆಗಿರಲಿಲ್ಲ.

9

ನಂತರ ಅವರಿಗೆ ಮಾಡಿದ ನಮ್ಮ ವಾಗ್ದಾನವನ್ನು ನಾವು ಪೂರೈಸಿದ್ದೇವೆ. ಅವರನ್ನೂ ನಾವಿಚ್ಛಿಸಿದ ಇತರರನ್ನೂ ರಕ್ಷಿಸಿದ್ದೇವೆ. ಮೀರಿ ನಡೆದವರನ್ನು ನಾಶ ಮಾಡಿದ್ದೇವೆ .

10

ಜನರೇ, ನಾವು ನಿಮ್ಮದೇ ಉದ್ಭೋದೆಯುಳ್ಳ ಒಂದು ಗ್ರಂಥವನ್ನು ನಿಮ್ಮ ಕಡೆಗೆ ಕಳುಹಿಸಿದ್ದೇವೆ. ನೀವು ಯೋಚಿಸುವುದಿಲ್ಲವೇ?”

11

ಎಷ್ಟೋ ಅಕ್ರಮಿ ನಾಡುಗಳನ್ನು ನಾವು ಧ್ವಂಸ ಮಾಡಿದ್ದೇವೆ. ಅವರ ಬಳಿಕ ಬೇರೊಂದು ಹೊಸ ಜನಾಂಗವನ್ನು ನಿರ್ಮಿಸಿದ್ದೇವೆ.

12

ಅವರಿಗೆ ನಮ್ಮ ಶಿಕ್ಷೆಯ ಸ್ಪರ್ಶವಾದಾಗ ಅಲ್ಲಿಂದ ಓಡ ಹತ್ತಿದರು. .

13

(ಆಗ ಹೇಳಲಾಯಿತು:) “ಓಡಬೇಡಿರಿ, ನೀವು ಸುಖಿಸುತ್ತಿದ್ದ ಭೋಗದ ಕಡೆಗೆ ಮತ್ತು ನಿಮ್ಮ ನಿವಾಸಗಳಿಗೇ ಮರಳಿ ಹೋಗಿರಿ, ನಿಮ್ಮಲ್ಲಿ ಏನಾದರೂ ಪ್ರಶ್ನಿಸಲಾದೀತು”.

14

ಆಗ ಅವರು, “ಅಯ್ಯೋ, ನಮ್ಮ ನಾಶವೇ! ನಿಜ ಕ್ಕೂ ನಾವು ಅಪರಾಧಿಗಳಾಗಿದ್ದೆವು” ಎಂದರು.

15

ಹಾಗೆ ನಾವು ಅವರನ್ನು ಕೊಯ್ದು ತೆಗೆದ ಪೈರಾಗಿ, ಕಿಡಿಯಾರಿದ ಕೆಂಡದ ಬೂದಿಯಾಗಿ ಮಾಡು ವವರೆಗೂ ಅವರು ರೋದಿಸುತ್ತಲೇ ಇದ್ದರು .

16

ಆಕಾಶವನ್ನೂ ಭೂಮಿಯನ್ನೂ ಅವುಗಳ ನಡುವೆ ಇರುವುದನ್ನೂ ಕ್ರೀಡೆಯಾಡಲು ನಾವು ಸೃಷ್ಟಿಸಲಿಲ್ಲ.

17

ನಾವು ವಿನೋದವನ್ನು ಉಂಟು ಮಾಡ ಬಯಸಿದ್ದರೆ ನಾವದನ್ನು ನಮ್ಮ ಕಡೆಯಿಂದಲೇ ಮಾಡಿಕೊಳ್ಳುತ್ತಿದ್ದೆವು. (ಆದರೆ ಹಾಗೆ) ನಾವು ಮಾಡಲಾರೆವು .

18

ಆದರೆ ನಾವು ಮಿಥ್ಯದ ಮೇಲೆ ಸತ್ಯದಿಂದ ಹೊಡೆಯುತ್ತೇವೆ. ಅದು ಮಿಥ್ಯದ ಮರ್ಮಕ್ಕೆ ತಾಗುತ್ತದೆ. ಆಗ ಅದು ಅಳಿದು ಹೋಗುತ್ತದೆ . (ಸತ್ಯನಿಷೇಧಿಗಳೇ,) ನೀವು ಅಲ್ಲಾಹನ ಬಗ್ಗೆ ಸೃಷ್ಟಿಸುವ ಮಾತುಗಳಿಂದ ನಿಮಗೆ ವಿನಾಶ ಕಾದಿದೆ.

19

ಆಕಾಶಗಳಲ್ಲೂ ಭೂಮಿಯಲ್ಲೂ ಇರುವುದೆಲ್ಲವೂ ಅಲ್ಲಾಹನದ್ದು. ಅವನ ಬಳಿಯಲ್ಲಿರುವವರು (ದೇವಚರರು) ಅವನ ಆರಾಧನೆಯನ್ನು ಬಿಟ್ಟು ದರ್ಪ ತೋರುವುದಿಲ್ಲ. ಬಳಲುವುದೂ ಇಲ್ಲ.

20

ಹಗಲು ಇರುಳೂ ಅವನ ಕೀರ್ತನೆ ಮಾಡುತ್ತಾರೆ, ದಣಿಯುವುದಿಲ್ಲ.

21

ಅದಲ್ಲ, ಇವರು ಭೂಮಿಯಿಂದ ನಿರ್ಮಿಸಿದಂತಹ ದೇವರುಗಳು ಸತ್ತವರನ್ನು ಜೀವಂತ ಎಬ್ಬಿಸಬಲ್ಲರೇ?

22

ಭೂಮಿ-ಆಕಾಶಗಳಲ್ಲಿ (ಏಕೈಕ) ಅಲ್ಲಾಹನ ಹೊರತು ಇತರ ದೇವರುಗಳೂ ಇರುತ್ತಿದ್ದರೆ ಅವೆರಡೂ ಹದಗೆಡುತ್ತಿತ್ತು . ಆದುದರಿಂದ ಅರ್ಶ್‍ನ ಪ್ರಭುವಾಗಿರುವ ಅಲ್ಲಾಹನು, ಇವರು ಹೊರಿಸುವ ಆರೋಪಗಳಿಂದ ಅದೆಷ್ಟು ಪರಿಶುದ್ಧನು!.

23

ಅವನು ಮಾಡುವ ಕಾರ್ಯದ ಬಗ್ಗೆ ಆತನಲ್ಲಿ ಪ್ರಶ್ನಿಸಲಾಗುವುದಿಲ್ಲ. ಆದರೆ ಉಳಿದವರೆಲ್ಲರೂ ಪ್ರಶ್ನಿಸಲ್ಪಡುವರು.

24

ಇವರು ಅವನನ್ನು ಬಿಟ್ಟು ಇತರ ದೇವರುಗಳನ್ನು ಮಾಡಿಕೊಂಡರೇ? (ಪೈಗಂಬರರೇ,) ಹೇಳಿರಿ; “ನಿಮ್ಮ ಪುರಾವೆಯನ್ನು ತನ್ನಿರಿ. ಇದೇ ನನ್ನ ಜೊತೆಯಿದ್ದವರ ಗ್ರಂಥ ಮತ್ತು ನನಗಿಂತ ಮುಂಚಿನವರ ಗ್ರಂಥ”. ಆದರೆ ಇವರಲ್ಲಿ ಹೆಚ್ಚಿನ ವರು ನಿಜವನ್ನು ಅರಿತಿಲ್ಲ. ಆದುದರಿಂದ ಅವರು ವಿಮುಖರಾಗಿದ್ದಾರೆ.

25

“ನನ್ನ ಹೊರತು ಬೇರೆ ಆರಾಧ್ಯರಿಲ್ಲ. ಆದ್ದರಿಂದ ನೀವು ನನ್ನನ್ನೇ ಆರಾಧಿಸಿರಿ” ಎಂಬ ಸಂದೇ ಶವನ್ನು ನೀಡದೆ ತಮಗೆ ಮುಂಚೆ ಯಾವುದೇ ದೂತರನ್ನು ನಾವು ಕಳುಹಿಸಿಲ್ಲ .

26

ಕರುಣಾಮಯನಾದ ಅಲ್ಲಾಹನು ಮಕ್ಕಳನ್ನು ಉಂಟು ಮಾಡಿರುವನೆಂದು ಇವರು ಹೇಳುತ್ತಾರೆ. ಅಲ್ಲಾಹು ಪರಮ ಪಾವನನು. ವಾಸ್ತವದಲ್ಲಿ ಅವರು (ದೇವಚರರು) ಆದರಣೀಯ ದಾಸರಾಗಿರುತ್ತಾರೆ.

27

ಅವರು ಅವನ ಮಾತಿನ ನಡುವೆ ಬಾಯಿ ಹಾಕಲಾರರು. ಅವರು ಅವನ ಅಪ್ಪಣೆ ಪ್ರಕಾರ ಮಾತ್ರಕಾರ್ಯವೆಸಗುತ್ತಾರೆ

28

ಅವರ ಮುಂದಿರುವುದನ್ನೂ ಅವರ ಹಿಂದಿರು ವುದನ್ನೂ ಅವನು ಬಲ್ಲನು. ಅಲ್ಲಾಹು ತೃಪ್ತಿಪಟ್ಟವರಿಗಲ್ಲದೆ ಅವರು ಶಿಫಾರಸ್ಸು ಮಾಡುವುದಿಲ್ಲ. ಅವರು ಆತನ ಭಯದಿಂದ ತತ್ತರಿಸುವವರು.

29

ಅಲ್ಲಾಹನ ಹೊರತು ನಾನೂ ಒಬ್ಬ ದೇವನೆಂದು ಅವರ ಪೈಕಿ ಯಾರಾದರೂ ಹೇಳಿದರೆ ಅವನಿಗೆ ನಾವು ನರಕಾಗ್ನಿಯ ಪ್ರತಿಫಲ ಕೊಡುವೆವು. ಅಕ್ರಮಿಗಳಿಗೆ ನಾವು ಇದೇ ರೀತಿಯ ಪ್ರತಿಫಲ ಕೊಡುತ್ತೇವೆ.

30

ಆಕಾಶಗಳೂ ಭೂಮಿಯೂ ಮೊದಲು ಕೂಡಿ ಕೊಂಡಿದ್ದು ಅನಂತರ ನಾವು ಅವುಗಳನ್ನು ಬೇರ್ಪಡಿಸಿದ್ದನ್ನೂ ಪ್ರತಿಯೊಂದು ಜೀವಿಯನ್ನು ನೀರಿನಿಂದ ಸೃಷ್ಟಿಸಿದ್ದನ್ನೂ ಸತ್ಯನಿಷೇಧಿಗಳು ಕಾಣಲಿಲ್ಲವೇ? ಅವರಿನ್ನೂ ವಿಶ್ವಾಸ ವಿರಿಸುವುದಿಲ್ಲವೇ?

31

ಭೂಮಿ ಮನುಷ್ಯರೊಂದಿಗೆ ವಾಲದಂತೆ ಅದರಲ್ಲಿ ನಾವು ಅಚಲವಾದ ಪರ್ವತಗಳನ್ನು ನಾಟಿದ್ದೇವೆ. ಅವರು ತಮ್ಮ ನಿರ್ಧಿಷ್ಟ ಗುರಿಯನ್ನು ತಲುಪುವಂತಾಗಲು ಪರ್ವತಗಳಲ್ಲಿ ವಿಶಾಲ ವಾದ ಮಾರ್ಗಗಳನ್ನು ಮಾಡಿದ್ದೇವೆ .

32

ಆಕಾಶವನ್ನು ಒಂದು ಸುರಕ್ಷಿತವಾದ ಮೇಲು ಛಾವಣೆಯನ್ನಾಗಿ ನಾವು ಮಾಡಿದ್ದೇವೆ. ಆದರೆ ಇವರು ಅದರ ನಿದರ್ಶನಗಳಿಂದ ವಿಮುಖರಾಗುತ್ತಾರೆ .

33

ಅವನು ರಾತ್ರಿ ಹಗಲುಗಳನ್ನು ಉಂಟು ಮಾಡಿದವನು. ಸೂರ್ಯ ಚಂದ್ರನನ್ನು ಸೃಷ್ಟಿಸಿದವನು. ಎಲ್ಲವೂ ಕಕ್ಷೆಯಲ್ಲಿ ತೇಲುತ್ತಿವೆ.

34

(ಪೈಗಂಬರರೇ,) ನಿಮಗೆ ಮುಂಚೆ ಯಾವ ಮನುಷ್ಯನಿಗೂ ನಾವು ಅಮರತ್ವವನ್ನು ನೀಡಲಿಲ್ಲ. ಹೀಗಿದ್ದು ನೀವು ಮರಣ ಹೊಂದಿದರೂ ಕೂಡಾ ಇವರೇನು ಶಾಶ್ವತರೇ?

35

ಪ್ರತಿಯೊಂದು ಜೀವಿಯೂ ಮರಣದ ಸವಿಯು ಣ್ಣಲಿದೆ. ನಿಮ್ಮನ್ನು ನಾವು ಕಷ್ಟ - ಸುಖಗಳಿಂದ ಪರೀಕ್ಷಿಸುತ್ತಿದ್ದೇವೆ, ಕೊನೆಗೆ ನೀವು ನಮ್ಮ ಕಡೆಗೇ ಮರಳಲಿದ್ದೀರಿ.

36

“ನಿಮ್ಮ ದೇವರುಗಳನ್ನು ಪ್ರಸ್ತಾವಿಸುತ್ತಿರುವವನು ಇವನೋ?” ಎನ್ನುತ್ತ ಸತ್ಯನಿಷೇಧಿಗಳು ನಿಮ್ಮನ್ನು ಕಂಡಾಗ ಪರಿಹಾಸ್ಯ ಮಾಡದೇ ಬಿಡುವುದಿಲ್ಲ. ಅವರೇ ಕರುಣಾನಿಧಿಯಾದ ಅಲ್ಲಾಹನ ಉದ್ಭೋದೆಯನ್ನು ತಿರಸ್ಕರಿಸುವವರು.

37

ಮಾನವನನ್ನು ದುಡುಕಿನಿಂದ ಸೃಷ್ಟಿಸಲಾಗಿದೆ. ನನ್ನ ನಿದರ್ಶನಗಳನ್ನು ನಿಮಗೆ ನಾನು ತೋರಿಸಿ ಕೊಡಲಿದ್ದೇನೆ. ಆದ್ದರಿಂದ ನನ್ನೊಡನೆ ದುಡುಕಬೇಡಿರಿ.

38

“ನೀವು ಸತ್ಯವಂತರಾಗಿದ್ದರೆ ಈ ವಾಗ್ದಾನ ಯಾವಾಗ?” ಎಂದು ಇವರು ಕೇಳುತ್ತಾರೆ.

39

ಸತ್ಯನಿಷೇಧಿಗಳು ತಮ್ಮ ಮುಖಗಳಿಂದಾಗಲಿ ತಮ್ಮ ಬೆನ್ನುಗಳಿಂದಾಗಲಿ ನರಕಾಗ್ನಿಯನ್ನು ತಡೆದಿರಿಸಲಾಗದ ಹಾಗೂ ಅವರಿಗೆ ಸಹಾಯ ನೀಡಲಾಗದ ಸಂದರ್ಭದ ಬಗ್ಗೆ ಅರಿಯುತ್ತಿದ್ದರೆ! (ಅವರು ಹೀಗೆ ದುಡುಕುತ್ತಿರಲಿಲ್ಲ).

40

ಆದರೆ ಆ ವಿಪತ್ತು ದಿಢೀರನೆ ಅವರ ಮೇಲೆರಗು ವುದು. ಆಗ ಅವರನ್ನು ಅದು ಕಂಗೆಡಿಸುವುದು. ಅವರಿಗೆ ಅದನ್ನು ತಡೆಯಲು ಸಾಧ್ಯವಾಗದು ಮತ್ತು ಸಮಯಾವಕಾಶವನ್ನೂ ಕೊಡಲಾಗದು.

41

(ನಬಿಯವರೇ) ನಿಮಗಿಂತ ಮುಂಚೆಯೂ ಸಂದೇಶ ವಾಹಕರನ್ನು ಪರಿಹಾಸ್ಯ ಮಾಡಲಾ ಗಿದೆ. ಆದರೆ ಅವರನ್ನು ಗೇಲಿ ಮಾಡಿದವರಿಗೆ ಅವರು ಪರಿಹಾಸ್ಯ ಮಾಡುತ್ತಿದ್ದುದೇ ಬಂದೆರಗಿತು ಂ.

42

(ಪೈಗಂಬರರೇ,) ಕೇಳಿರಿ, ನಿಮ್ಮನ್ನು ಹಗಲೂ ರಾತ್ರಿಯೂ ಕರುಣಾಮಯನಾದ ಅಲ್ಲಾಹನಿಂದ ರಕ್ಷಿಸುವವನು ಯಾರು? ಆದರೆ ಇವರು ತಮ್ಮ ಪ್ರಭುವಿನ ಸ್ಮರಣೆಯಿಂದ ವಿಮುಖರಾಗಿದ್ದಾರೆ.

43

ನಮ್ಮ ವಿರುದ್ಧ ಇವರನ್ನು ತಡೆದು ರಕ್ಷಿಸುವ ದೇವ ರುಗಳು ಇವರಿಗಿದ್ದಾರೆಯೇನು? ಆ ದೇವರುಗಳು ಸ್ವಯಂ ತಮಗೇ ಸಹಾಯ ಮಾಡಿಕೊಳ್ಳಲಾರರು ಮತ್ತು ನಮ್ಮಿಂದ ಅವರು ಸಹಾಯ ಪಡಕೊಳ್ಳಲಾರರು.

44

ವಾಸ್ತವದಲ್ಲಿ ನಾವು ಇವರಿಗೂ ಇವರ ಪೂರ್ವ ಜರಿಗೂ ಜೀವನ ಸವಲತ್ತುಗಳನ್ನು ಕೊಟ್ಟಿದ್ದೆವು. ಹೀಗೆ ಅವರ ಜೀವನಾವಧಿ ದೀರ್ಘವಾಯಿತು. ಆದರೆ ನಾವು ಭೂಮಿಯನ್ನು ಅದರ ವಿವಿಧ ದಿಸೆಗಳಿಂದ ಕಡಿತಗೊಳಿಸುತ್ತ ಬರುತ್ತಿರುವುದು ಇವರು ಕಾಣುವುದಿಲ್ಲವೇ? ಹೀಗಿರುವಾಗ ಇವರು ಮೇಲುಗೈ ಸಾಧಿಸುವರೇ?

45

ನಾನಂತು ಅಲ್ಲಾಹನ ಸಂದೇಶದ ಆಧಾರದಲ್ಲೇ ನಿಮಗೆ ಎಚ್ಚರಿಕೆ ಕೊಡುತ್ತಿದ್ದೇನೆಂದು ಇವರೊಡನೆ ಹೇಳಿರಿ. ಆದರೆ ಕಿವುಡರಿಗೆ ಎಷ್ಟು ಎಚ್ಚರಿಸಿದರೂ ಅವರು ಕರೆಯನ್ನು ಕೇಳುವುದಿಲ್ಲ.

46

ನಿನ್ನ ಪ್ರಭುವಿನ ಶಿಕ್ಷೆಯಿಂದ ಇವರಿಗೆ ಕಿಂಚಿತ್ತಾದರೂ ಸೋಂಕಿ ಬಿಟ್ಟರೆ. “ಅಯ್ಯೋ ನಮ್ಮ ನಾಶವೇ! ನಿಜಕ್ಕೂ ನಾವು ಅಪರಾಧಿಗಳೇ ಆಗಿದ್ದೆವು” ಎಂದು ಖಂಡಿತ ಹೇಳುವರು.

47

ಪುನರುತ್ಥಾನ ದಿನ ನಾವು ನಿಖರವಾಗಿ ತೂಗುವ ನ್ಯಾಯ ತಕ್ಕಡಿಯನ್ನಿಟ್ಟು ಬಿಡುವೆವು. ಆಗ ಯಾರ ಮೇಲೂ ಸ್ವಲ್ಪವೂ ಅಕ್ರಮವಾಗದು. ಮನುಷ್ಯನ ಕರ್ಮವು ಸಾಸಿವೆ ಕಾಳಿನಷ್ಟಾಗಿದ್ದರೂ ನಾವು ಅದನ್ನು ಮುಂದೆ ತರುವೆವು . ಲೆಕ್ಕ ಪರಿಶೋಧಕರಾಗಿ ನಾವೇ ಸಾಕು.

48

ಈ ಮುಂಚೆ ಮೂಸಾ ಮತ್ತು ಹಾರೂನರಿಗೆ ಸತ್ಯ-ಅಸತ್ಯಗಳ ವಿವೇಚನೆ ಹಾಗೂ ಬೆಳಕನ್ನೂ ಧರ್ಮನಿಷ್ಠರಿಗಿರುವ ಉದ್ಬೋಧನೆಯನ್ನೂ ನಾವು ನೀಡಿದ್ದೇವೆ.

49

ತಮ್ಮ ಪ್ರಭುವನ್ನು ಅದೃಶ್ಯದಲ್ಲಿ ಭಯಪಡುವ ಹಾಗೂ (ವಿಚಾರಣೆಯ) ಆ ಘಳಿಗೆಯ ಬಗ್ಗೆ ಸದಾ ಭೀತರಾಗಿರುವ (ಧರ್ಮನಿಷ್ಟರಿಗಾಗಿ).

50

ಇದು (ಖುರ್‍ಆನ್) ನಾವು ಅವತೀರ್ಣಗೊಳಿಸಿದ ಅನುಗ್ರಹೀತ ಉದ್ಬೋಧೆಯಾಗಿದೆ. ನೀವೇನು ಇದನ್ನು ನಿರಾಕರಿಸುವಿರಾ?

51

ಅದಕ್ಕಿಂತಲೂ ಮುಂಚೆ ನಾವು ಇಬ್‍ರಾಹೀಮ ರಿಗೆ ಅವರ ಸನ್ಮಾರ್ಗವನ್ನು ದಯಪಾಲಿಸಿದ್ದೆವು ಮತ್ತು ನಾವು ಅವರನ್ನು ಚೆನ್ನಾಗಿ ಅರಿತಿದ್ದೆವು.

52

ಅವರು ತಮ್ಮ ತಂದೆ ಹಾಗೂ ತಮ್ಮ ಜನಾಂಗ ದೊಡನೆ, “ನೀವು ಭಜನೆ ಕೂರುತ್ತಿರುವ ಈ ವಿಗ್ರಹಗಳು ಎಂತಹವು?” ಎಂದು ಕೇಳಿದ್ದ ಸಂದರ್ಭವನ್ನು ಸ್ಮರಿಸಿರಿ.

53

ಆಗ ಅವರು, ‘`ನಮ್ಮ ಪೂರ್ವಜರು ಇವುಗಳನ್ನು ಪೂಜಿಸುತ್ತಿರುವುದನ್ನು ನಾವು ಕಂಡಿದ್ದೇವೆ” ಎಂದು ಉತ್ತರಕೊಟ್ಟರು.

54

ಇವರು, “ನೀವೂ ನಿಮ್ಮ ಪೂರ್ವಜರೂ ಸ್ಪಷ್ಟ ದುರ್ಮಾರ್ಗದಲ್ಲಿದ್ದೀರಿ” ಎಂದಾಗ

55

ಅವರು, “ನೀನೊಂದು ಸತ್ಯ ವಿಚಾರವನ್ನು ತಂದಿದ್ದೀಯಾ? ಅಥವಾ ಸುಮ್ಮನೆ ಮೋಜು ಮಾಡುತ್ತಿರುವೆಯಾ ?” ಎಂದು ಕೇಳಿದರು.

56

ಆಗ ಇವರು, “ಸುಮ್ಮನೆಯಲ್ಲ, ವಾಸ್ತವದಲ್ಲಿ ಭೂಮಿ-ಆಕಾಶಗಳನ್ನು ಸೃಷ್ಟಿಸಿದ ಪ್ರಭುವೇ ನಿಮ್ಮ ಪ್ರಭುವಾಗಿರುವನು. ಈ ಬಗೆಗೆ ನಾನು ನಿಮ್ಮ ಮುಂದೆ ಸಾಕ್ಷ್ಯ ವಹಿಸುತ್ತೇನೆ.

57

ಅಲ್ಲಾಹನಾಣೆ, ನೀವು ಹಿಂತಿರುಗಿ ಹೋದ ನಂತರ ನಾನು ಖಂಡಿತವಾಗಿಯೂ ನಿಮ್ಮ ವಿಗ್ರಹಗಳನ್ನು ನಾಶ ಮಾಡಲು ಪ್ರಯತ್ನಿಸುವೆನು” ಎಂದರು.

58

ಆ ಪ್ರಕಾರ ಇವರು ಅವರನ್ನು (ವಿಗ್ರಹಗಳನ್ನು) ತುಂಡು ತುಂಡಾಗಿ ಮುರಿದು ಹಾಕಿದರು ಮತ್ತು ಅದರ ಕಡೆಗೆ ಅವರು ಮರಳಿ ಬರಲೆಂದು ಅವರಲ್ಲಿ ದೊಡ್ಡ ವಿಗ್ರಹವನ್ನು ಬಿಟ್ಟುಬಿಟ್ಟರು .

59

ಅವರು “ನಮ್ಮ ದೇವರುಗಳಿಗೆ ಈ ಗತಿ ಮಾಡಿ ದವನಾರು? ಅವನೊಬ್ಬ ಮಹಾ ಅಕ್ರಮಿಯಾಗಿರುವನು” ಎಂದರು.

60

ಕೆಲವರು ಹೀಗೆ ಹೇಳಿದರು; “ಇಬ್‍ರಾಹೀಮ್ ಎಂದು ಕರೆಯಲ್ಪಡುವ ಯುವಕನೊಬ್ಬ ಅವರ ಬಗ್ಗೆ ಹೀಗಳೆಯುತ್ತಿದ್ದುದನ್ನು ನಾವು ಕೇಳಿದ್ದೇವೆ’’.

61

ಆಗ ಅವರು, “ಹಾಗಾದರೆ ಅವನನ್ನು ಹಿಡಿದು ಜನರೆದುರು ಕರೆತನ್ನಿ. ಅವರು ಸಾಕ್ಷಿ ಹೇಳುವವ ರಾಗಲಿ” ಎಂದರು.

62

“ಓ ಇಬ್ರಾಹೀಮ್! ನಮ್ಮ ದೇವರುಗಳನ್ನು ಹೀಗೆ ಮಾಡಿರುವುದು ನೀನೋ?” ಎಂದು ಕೇಳಿದರು.

63

ಅವರು “ಅಲ್ಲ, ಅದನ್ನು ಅವರ ಈ ಹಿರಿಯನು ಮಾಡಿರುತ್ತಾನೆ. ಅವರು ಮಾತಾಡುವುದಿದ್ದರೆ ಅವರನ್ನೇ ಕೇಳಿಕೊಳ್ಳಿರಿ” ಎಂದರು.

64

ಆಗ ಅವರು ತಮ್ಮ ಅಂತಃಕರಣದ ಕಡೆಗೆ ಮರ ಳಿದರು. ಆಮೇಲೆ ತಮ್ಮೊಳಗೆ “ನಿಜಕ್ಕೂ ನೀವೇ ಅಕ್ರಮಿಗಳು” ಎಂದರು.

65

ನಂತರ ಅವರನ್ನು ಪೂರ್ವಸ್ಥಿತಿಗೆ ಮರಳಿಸಲಾಯಿತು. “ಇವರು ಮಾತನಾಡುವುದಿಲ್ಲ ವೆಂದು ನಿನಗೆ ಗೊತ್ತಿದೆ.” ಎಂದರು.

66

ಆಗ ಇಬ್‍ರಾಹೀಮ್, “ಹಾಗಾದರೆ ನೀವು ಅಲ್ಲಾಹನನ್ನು ಬಿಟ್ಟು ನಿಮಗೆ ಯಾವುದೇ ಉಪಕಾರ ಮಾಡದ ಹಾಗೂ ಉಪದ್ರವಿಸದ ವಸ್ತುಗಳನ್ನು ಪೂಜಿಸುತ್ತಿರುವಿರಲ್ಲ?

67

ಛೇ, ನಿಮಗೆ ಮತ್ತು ಅಲ್ಲಾಹನನ್ನು ಬಿಟ್ಟು ನೀವು ಪೂಜಿಸುತ್ತಿರುವ ನಿಮ್ಮ ಆರಾದ್ಯ ವಸ್ತುಗಳಿಗೆ ಧಿಕ್ಕಾರವಿರಲಿ. ನೀವೇನು ಯೋಚಿ ಸುವುದಿಲ್ಲವೇ?”ಎಂದರು.

68

ಆಗ ಅವರು “ಈತನ ಮೇಲೆ ನೀವು ಯಾವುದೇ ಕ್ರಮ ಕೈಗೊಳ್ಳುವುದಾದರೆ, ಇವನನ್ನು ಸುಟ್ಟುಹಾಕಿರಿ. ನಿಮ್ಮ ದೇವರುಗಳಿಗೆ ನೆರವಾಗಿರಿ” ಎಂದರು .

69

ನಾವು ಹೇಳಿದೆವು; “ಓ ಅಗ್ನಿಯೇ, ಇಬ್‍ರಾ ಹೀಮ್‍ರ ಪಾಲಿಗೆ ತಣ್ಣಗಾಗು, ಸುರಕ್ಷೆಯಾಗು”.

70

ಅವರು ಇಬ್‍ರಾಹೀಮರಿಗೆ ಕೇಡು ಮಾಡಲು ಬಯಸಿದ್ದರು. ಆದರೆ ಅವರನ್ನು ಅತ್ಯಂತ ನಷ್ಟ ವಂತರನ್ನಾಗಿ ನಾವು ಮಾಡಿದೆವು.

71

ಅವರನ್ನೂ ಲೂಥರನ್ನೂ ಲೋಕವಾಸಿಗಳಿಗೆ ನಾವು ಸಮೃದ್ಧಿಯನ್ನಿರಿಸಿದ ಪ್ರದೇಶಕ್ಕೆ ಕಳುಹಿಸಿ ನಾವು ರಕ್ಷಿಸಿದೆವು.

72

ಅವರಿಗೆ ನಾವು ಇಸ್‍ಹಾಖರನ್ನು, ಹೆಚ್ಚುವರಿಯಾಗಿ ಯಅïಖೂಬರನ್ನೂ ದಾನ ನೀಡಿದೆವು ಮತ್ತು ಅವರನ್ನೆಲ್ಲ ಸಜ್ಜನರಾಗಿ ಮಾಡಿದೆವು.

73

ಅವರನ್ನು ನಾವು ನಮ್ಮ ಅಪ್ಪಣೆಯಂತೆ ಮಾರ್ಗ ದರ್ಶನ ನೀಡುವ ನಾಯಕರನ್ನಾಗಿ ಮಾಡಿದೆವು. ಸತ್ಕರ್ಮವೆಸಗಲು, ನಮಾಝ್ ಸಂಸ್ಥಾಪಿಸಲು ಮತ್ತು ಝಕಾತ್ ನೀಡಲು ಅವರಿಗೆ ನಾವು ಸಂದೇಶ ನೀಡಿದೆವು. ಅವರು ನಮ್ಮ ಉಪಾಸಕರಾಗಿದ್ದರು.

74

ಲೂಥರಿಗೆ ನಾವು ನ್ಯಾಯವಿಧಿ ಮತ್ತು ಜ್ಞಾನವನ್ನು ದಯಪಾಲಿಸಿದೆವು. ಅವರನ್ನು ಕೆಟ್ಟ ಕೆಲಸ ಮಾಡುತ್ತಿದ್ದ ಆ ನಾಡಿನಿಂದ ಪಾರು ಮಾಡಿದೆವು. ವಾಸ್ತವದಲ್ಲಿ ಅವರು ಅತ್ಯಂತ ದುಷ್ಟರಾದ ದುರ್ವೃತ್ತ ಜನಾಂಗವಾಗಿದ್ದರು.

75

ಲೂಥರನ್ನು ನಾವು ನಮ್ಮ ಕೃಪೆಯಲ್ಲಿ ಪ್ರವೇಶ ಗೊಳಿಸಿದೆವು. ಅವರು ಸಜ್ಜನರಲ್ಲಾಗಿದ್ದರು.

76

ನೂಹರನ್ನು ಸ್ಮರಿಸಿರಿ. ಮುಂಚೆ ಅವರು ಕೂಗಿ ಪ್ರಾರ್ಥಿಸಿದ ಸಂದರ್ಭ. ನಾವು ಅವರಿಗೆ ಉತ್ತರಿಸಿ ದೆವು. ಅವರನ್ನೂ ಅವರ ಮನೆಯವರನ್ನೂ ಮಹಾ ಸಂಕಷ್ಟದಿಂದ ಪಾರುಗೊಳಿಸಿದೆವು.

77

ನಮ್ಮ ನಿದರ್ಶನಗಳನ್ನು ಸುಳ್ಳಾಗಿಸಿದ ಜನಾಂಗದಿಂದ ಅವರನ್ನು ಪಾರುಗೊಳಿಸಿ ಸಹಾಯ ಮಾಡಿದೆವು. ಅವರು ಬಹಳ ಕೆಟ್ಟ ಜನಾಂಗವಾಗಿದ್ದರು. ಆದುದರಿಂದ ನಾವು ಅವೆರಲ್ಲರನ್ನೂ ಮುಳುಗಿಸಿ ಕೊಂದೆವು.

78

ದಾವೂದ್ ಮತ್ತು ಸುಲೈಮಾನರನ್ನು ಸ್ಮರಿಸಿರಿ. ರಾತ್ರಿ ವೇಳೆ ಒಂದು ಜನಾಂಗದ ಆಡುಗಳು ಮೇಯ್ದು ಕೃಷಿ ನಾಶ ಮಾಡಿದ ಒಂದು ಹೊಲದ ಮೊಕದ್ದಮೆಯಲ್ಲಿ (ಅವರಿಬ್ಬರೂ) ತೀರ್ಪು ನೀಡುತ್ತಿದ್ದ ಸಂದರ್ಭ. ಅವರ ನ್ಯಾಯ ತೀರ್ಮಾನಕ್ಕೆ ನಾವು ಸಾಕ್ಷ್ಯ ವಹಿಸುತ್ತಿದ್ದೆವು.

79

ಅದರ ಕುರಿತಾಗಿ ಸುಲೈಮಾನರಿಗೆ ನಾವು ಮನವರಿಕೆ ಮಾಡಿಕೊಟ್ಟೆವು. ನ್ಯಾಯ ವಿಧಿ ಮತ್ತು ಜ್ಞಾನವನ್ನು ನಾವು ಇಬ್ಬರಿಗೂ ದಯ ಪಾಲಿಸಿದ್ದೆವು. ನಾವು ದಾವೂದರ ಜೊತೆಗೆ ಅಲ್ಲಾಹನ ಪಾವಿತ್ರ್ಯವನ್ನು ಕೊಂಡಾಡುವ ಸ್ಥಿತಿಯಲ್ಲಿ ಪರ್ವತಗಳನ್ನೂ ಪಕ್ಷಿಗಳನ್ನೂ ಅಧೀನಗೊಳಿಸಿಕೊಟ್ಟೆವು, ಇದನ್ನು ಮಾಡಿದವರು ನಾವೇ ಆಗಿದ್ದೆವು.

80

ನೀವು ಎದುರಿಸುವ ಯುದ್ಧದ ವಿಪತ್ತುಗಳಿಂದ ನಿಮ್ಮನ್ನು ರಕ್ಷಿಸಲಿಕ್ಕಾಗಿ ಬಳಸುವ ಎದೆಗವಚದ ನಿರ್ಮಾಣವನ್ನು ನಾವು ಅವರಿಗೆ ಕಲಿಸಿದ್ದೆವು . ಹೀಗಿರುವಾಗ ನೀವು ಕೃತಜ್ಞರಾಗುವಿರಾ?

81

ನಾವು ಸುಲೈಮಾನರಿಗೆ ಬಲವಾಗಿ ಬೀಸುವ ಗಾಳಿಯನ್ನು ಅಧೀನಗೊಳಿಸಿಕೊಟ್ಟೆವು. ನಾವು ಅನುಗ್ರಹಿಸಿದ ಪ್ರದೇಶಕ್ಕೆ ಅದು ಅವರ ಅಪ್ಪಣೆ ಪ್ರಕಾರ ಚಲಿಸುತ್ತಿತ್ತು. ನಾವು ಸಕಲ ವಸ್ತುಗಳ ಜ್ಞಾನವುಳ್ಳವರಾಗಿರುತ್ತೇವೆ.

82

ಶೈತಾನರ ಪೈಕಿ ಅವರಿಗಾಗಿ ಮುಳುಗೇಳುವ ಕೆಲವರನ್ನು ನಾವು ಅವರ ನಿಯಂತ್ರಣಕ್ಕೆ ತಂದು ಕೊಟ್ಟಿದ್ದೆವು. ಇದಕ್ಕೆ ಹೊರತಾಗಿ ಇತರ ಕೆಲಸಗಳನ್ನೂ ಅವರು ಮಾಡುತ್ತಿದ್ದರು. ಇವರೆಲ್ಲರ ಸಂರಕ್ಷಕರು ನಾವೇ ಆಗಿದ್ದೆವು .

83

ಅಯ್ಯೂಬರನ್ನು ಸ್ಮರಿಸಿರಿ. ಅವರು, “ನನಗೆ ರೋಗ ಹಿಡಿದಿದೆ, ನೀನು ಕರುಣಾಳುಗಳಲ್ಲಿ ಅತ್ಯಂತ ಕರುಣಾಳು ಆಗಿರುವಿ” ಎಂದು ತಮ್ಮ ಪ್ರಭುವನ್ನು ಕೂಗಿ ಕರೆದ ಸಂದರ್ಭ .

84

ಆಗ ನಾವು ಅವರಿಗೆ ಉತ್ತರಕೊಟ್ಟೆವು. ಅವರಿಗೆ ಬಾಧಿಸಿದ ಸಂಕಷ್ಟವನ್ನು ದೂರೀಕರಿಸಿದೆವು. ಅವರಿಗೆ ಸ್ವಂತ ಮನೆಯವರನ್ನೂ ಅವರೊಂದಿಗೆ ಅಷ್ಟೇ ಮಂದಿ ಬೇರೆಯವರನ್ನೂ ಕೊಟ್ಟೆವು. ನಮ್ಮ ಬಳಿಯಿಂದ ವಿಶೇಷ ಕಾರುಣ್ಯವೂ ಆರಾಧಕರಿಗೆ ಒಂದು ಸ್ಮರಣೆಯೂ ಆಗಲೆಂದು.

85

ಇಸ್ಮಾಈಲ್, ಇದ್ರೀಸ್ ಮತ್ತು ದ್ಸುಲ್‍ಕಿಫ್ಲ್‍ರನ್ನೂ ಸ್ಮರಿಸಿರಿ. ಇವರೆಲ್ಲರೂ ಸಹನಶೀಲರಾಗಿದ್ದರು.

86

ಇವರನ್ನು ನಾವು ನಮ್ಮ ಕೃಪೆಯಲ್ಲಿ ಸೇರಿಸಿಕೊಂಡೆವು. ಖಂಡಿತ ಅವರು ಸಜ್ಜನರಲ್ಲಾಗಿದ್ದರು.

87

ಮತ್ಸ್ಯದವರನ್ನು (ಪ್ರವಾದಿ ಯೂನುಸ್) ಸ್ಮರಿಸಿರಿ. ಅವರು ಕೋಪಗೊಂಡು ಹೊರಟು ಹೋಗಿದ್ದ ಸಂದರ್ಭ. ಅವರನ್ನು ನಾವು ಇಕ್ಕಟ್ಟಿಗೆ ಸಿಲುಕಿಸಲಾರೆವೆಂದು ಅವರು ಭಾವಿಸಿದ್ದರು. ಕೊನೆಗೆ ಅವರು ಅಂಧಕಾರದೊಳಗಿಂದ ಕೂಗಿ ಪ್ರಾರ್ಥಿಸಿದರು, “(ಪ್ರಭು)-ನಿನ್ನ ಹೊರತು ಅನ್ಯ ಆರಾಧ್ಯನಿಲ್ಲ. ನೀನು ಪರಮ ಪಾವನನು. ನಿಶ್ಚಯ, ನಾನು ಅಕ್ರಮಿಗಳ ಗಣಕ್ಕೆ ಸೇರಿ ಹೋದೆ”.

88

ಆಗ ನಾವು ಅವರಿಗೆ ಉತ್ತರ ಕೊಟ್ಟೆವು. ಅವರನ್ನು ದುಃಖದಿಂದ ಪಾರುಗೊಳಿಸಿದೆವು. ಇದೇ ರೀತಿ ನಾವು ಸತ್ಯವಿಶ್ವಾಸಿಗಳನ್ನು ರಕ್ಷಿಸಿಕೊಳ್ಳುತ್ತೇವೆ.

89

`ಝಕರಿಯ್ಯಾರನ್ನು ಸ್ಮರಿಸಿರಿ. ಅವರು, ‘ನನ್ನ ಪ್ರಭೂ, ನನ್ನನ್ನು ಏಕಾಂಗಿಯಾಗಿ ಬಿಟ್ಟು ಬಿಡ ಬೇಡ. ವಾರೀಸುದಾರರ ಪೈಕಿ ನೀನೇ ಉತ್ತಮನಾಗಿರುವಿ’ ಎಂದು ತನ್ನ ಪ್ರಭುವನ್ನು ಕೂಗಿ ಕರೆದ ಸಂದರ್ಭ.

90

ಆಗ ನಾವು ಅವರಿಗೆ ಉತ್ತರಿಸಿದೆವು. ಅವರಿಗೆ (ಪುತ್ರ) ಯಹ್ಯಾರನ್ನು ನೀಡಿದೆವು. ಅವರ ಪತ್ನಿಯನ್ನು ಗರ್ಭ ಧಾರಣೆಗೆ ಪ್ರಾಪ್ತಗೊಳಿಸಿದೆವು. ಇವರು (ಪ್ರವಾದಿ ಗಳು) ಪುಣ್ಯ ಕಾರ್ಯಗಳಲ್ಲಿ ಉತ್ಸುಕರಾಗಿದ್ದರು. ನಮ್ಮನ್ನು ಒಲವು ಹಾಗೂ ಭಯದೊಂದಿಗೆ ಪ್ರಾರ್ಥಿಸುತ್ತಿದ್ದರು. ನಮ್ಮ ಮುಂದೆ ಭಕ್ತಿಯಿಂದ ವಿನಯ ತೋರುತ್ತಿದ್ದರು

91

ತನ್ನ ಗೌಪ್ಯವನ್ನು ಕಾಪಾಡಿದ ಆ ಸ್ತ್ರೀಯನ್ನು (ಮರ್ಯಮರನ್ನು) ಸ್ಮರಿಸಿರಿ. ನಮ್ಮ ಆತ್ಮದ (ಜಿಬ್ರೀಲ) ಮೂಲಕ ಅವಳಲ್ಲಿ ನಾವು ಊದಿದೆವು. ಅವಳನ್ನೂ ಅವಳ ಪುತ್ರನನ್ನೂ (ಈಸಾರನ್ನು) ಜಗತ್ತಿಗೆ ನಿದರ್ಶನವಾಗಿ ಮಾಡಿದೆವು.

92

ಓ ಜನರೇ! ಇದು ನಿಮ್ಮ ಧರ್ಮ. ಏಕೈಕ ಧರ್ಮ. ನಾನು ನಿಮ್ಮ ಪ್ರಭುವಾಗಿದ್ದೇನೆ. ಆದುದರಿಂದ ನೀವು ನನಗೆ ಆರಾಧಿಸಿರಿ.

93

ಆದರೆ ಅವರು ಪರಸ್ಪರ ತಮ್ಮ ಕಾರ್ಯವನ್ನು ಛಿನ್ನಭಿನ್ನ ಮಾಡಿದರು. ಎಲ್ಲರೂ ನಮ್ಮ ಕಡೆಗೇ ಮರಳುವವರು.

94

ಆದ್ದರಿಂದ ಯಾರು ಸತ್ಯವಿಶ್ವಾಸಿಯಾಗಿದ್ದು ಕೊಂಡು ಸತ್ಕರ್ಮವೆಸಗುತ್ತಾರೋ ಅವನ ಪ್ರಯತ್ನ ಫಲವನ್ನು ನಿಷೇಧಿಸಲಾಗದು. ನಾವು ಅದನ್ನು ದಾಖಲಿಸುತ್ತಿದ್ದೇವೆ.

95

ನಾವು ನಾಶ ಮಾಡಿರುವ ಯಾವುದೇ ನಾಡಿನ ಜನರು ಪುನಃ ಮರಳಿ ಬರುವುದು ಸಾಧ್ಯವಿಲ್ಲ ಎಂಬುದು ಖಂಡಿತ .

96

ಹಾಗೆ ಯಅïಜೂಜ, ಮಅïಜೂಜರು ಬಿಡು ಗಡೆ ಗೊಳಿಸಲ್ಪಡುವ ತನಕ - ಅವರು ಎಲ್ಲ ಎತ್ತರದ ಸ್ಥಳಗಳಿಂದ ನುಗ್ಗಿ ಬರುವರು.

97

ಸತ್ಯ ವಾಗ್ದಾನ ಸಮಯ ಸನ್ನಿಹಿತವಾದರೆ, ಸತ್ಯ ನಿಷೇಧಿಗಳ ತೆರೆದ ಕಣ್ಣುಗಳು ಮೇಲಕ್ಕೆ ದಿಟ್ಟಿಸಿ ನಿಲ್ಲುವುದು. ಅವರು ಹೇಳುವರು; “ಅಯ್ಯೋ, ನಮ್ಮ ನಾಶವೇ! ನಾವು ಇದರಿಂದ ಅಲಕ್ಷ್ಯರಾಗಿದ್ದೆವು. ಅಲ್ಲ, ನಿಜವಾಗಿ ನಾವು ಅಕ್ರಮಿಗಳಾಗಿದ್ದೆವು”.

98

ಸತ್ಯ ನಿಷೇಧಿಗಳೇ, ನೀವು ಮತ್ತು ಅಲ್ಲಾಹ ನನ್ನು ಬಿಟ್ಟು ನೀವು ಪೂಜಿಸುವ ಆರಾಧ್ಯ ವಸ್ತುಗಳು ನರಕಾಗ್ನಿಯ ಇಂಧನಗಳು, ನೀವೂ ಅದಕ್ಕೆ ಸೇರಬೇಕಾದವರು.

99

ಅವುಗಳು ನಿಜಕ್ಕೂ ದೇವರಾಗಿರುತ್ತಿದ್ದರೆ ಅವು ನರಕಕ್ಕೆ ಹೋಗುತ್ತಿರಲಿಲ್ಲ. ಎಲ್ಲರೂ ಅದರಲ್ಲಿ ಶಾಶ್ವತರು.

100

ಅಲ್ಲಿ ಅವರು ನಿಡುಸುಯ್ಯುವರು. ಅಲ್ಲಿ ಅವರಿಗೇನೂ ಕೇಳಿಸದು.

101

ಯಾರಿಗೆ ಮೊದಲೇ ನಮ್ಮಿಂದ ಉತ್ತಮ ಸ್ಥಾನ ಪ್ರಾಪ್ತವಾಗಿದೆಯೋ ಅವರು ನರಕದಿಂದ ದೂರವಾಗುವರು.

102

ಅದರ ಮೆಲು ದನಿಯನ್ನೂ ಅವರು ಕೇಳಲಾರರು. ಅವರು ತಮ್ಮ ಮನಮೆಚ್ಚುವ ಅನುಗ್ರಹ ಗಳ ನಡುವೆ ಶಾಶ್ವತವಾಗಿ ನೆಲೆಸುವರು.

103

ಅತಿ ಭಯಂಕರ ಭಯಭೀತಿಯು ಅವರನ್ನು ವ್ಯಥೆಗೊಳಿಸದು. ಇದು ನಿಮಗೆ ವಾಗ್ದಾನ ಮಾಡಲಾಗಿದ್ದ ಅದೇ ನಿಮ್ಮ ದಿನ ಎನ್ನುತ್ತಾ ದೇವಚರರು ಅವರನ್ನು ಇದಿರ್ಗೊಳ್ಳುವರು.

104

ಬರೆಯಲಾದ ಹೊತ್ತಗೆಯ ಹಾಳೆಗಳನ್ನು ಸುತ್ತುವ ಹಾಗೆ ನಾವು ಆಕಾಶವನ್ನು ಸುರುಟು ವ ದಿನವನ್ನು ನೆನೆಸಿರಿ. ಮೊದಲು ಸೃಷ್ಟಿಯ ಆರಂಭ ಮಾಡಿದಂತೆ ಅದನ್ನು ನಾವು ಪುನರ್ ಸೃಷ್ಟಿಸುತ್ತೇವೆ. ಇದು ನಮ್ಮ ಮೇಲಿನ ವಾಗ್ದಾನ ವಾಗಿದ್ದು ಈ ಕಾರ್ಯವನ್ನು ನಾವು ಖಂಡಿತ ಮಾಡುತ್ತೇವೆ.

105

ನಮ್ಮ ಸಜ್ಜನ ದಾಸರು ಭೂಮಿಯನ್ನು ವಾರೀಸು ಪಡೆಯಲಿದ್ದಾರೆಂದು ಮೂಲ ಪ್ರಮಾಣದಲ್ಲಿ ಉಲ್ಲೇಖಿಸಿದ ಬಳಿಕ ನಾವು ವೇದಗ್ರಂಥದಲ್ಲಿ ಬರೆದಿರುತ್ತೇವೆ.

106

ಇದರಲ್ಲಿ ದೇವೋಪಾಸಕರಿಗೆ ಒಂದು ದೊಡ್ಡ ಸಂದೇಶವಿದೆ

107

(ಪೈಗಂಬರರೇ,) ನಾವು ನಿಮ್ಮನ್ನು ಸಕಲ ಜಗತ್ತಿಗೆ ಅನುಗ್ರಹವಾಗಿ ಮಾಡಿ ಕಳುಹಿಸಿರುತ್ತೇವೆ .

108

ಹೇಳಿರಿ. “ನಿಮ್ಮ ದೇವನು ಏಕೈಕ ದೇವನೆಂದು ನನ್ನ ಬಳಿಗೆ ದಿವ್ಯ ಸಂದೇಶ ಬಂದಿದೆ. ಆದ್ದ ರಿಂದ ಅವನನ್ನು ನೀವು ಅನುಸರಿಸುವಿರಾ?”

109

ಇನ್ನು ಅವರು ವಿಮುಖರಾದರೆ ಹೇಳಿರಿ, “ನಾನು ಸರಿಯಾದ ರೀತಿಯಲ್ಲಿ ನಿಮಗೆ ಎಚ್ಚರಿಕೆ ನೀಡಿ ರುತ್ತೇನೆ. ಆದರೆ ನಿಮಗೆ ಮಾಡಲಾದ ವಾಗ್ದಾ ನವು ಹತ್ತಿರವಿದೆಯೋ ಅಥವಾ ದೂರವಿದೆಯೋ ಎಂದು ನಾನರಿಯೆನು.

110

ನೀವು ಜೋರಾಗಿ ಹೇಳುವುದನ್ನೂ ಅವನು ಅರಿಯುತ್ತಾನೆ. ಗುಟ್ಟಾಗಿ ಹೇಳುವುದನ್ನೂ ಅವನು ಅರಿಯುತ್ತಾನೆ.

111

ನಾನು ತಿಳಿದಿಲ್ಲ. ಪ್ರಾಯಶಃ ಈ ವಿಳಂಬವು ನಿಮಗೊಂದು ಪರೀಕ್ಷೆಯಾಗಿದೆ ಮತ್ತು ನಿಮಗೆ ಒಂದು ನಿರ್ದಿಷ್ಟ ಕಾಲದವರೆಗೆ ಸುಖಿಸುವ ಅವಕಾಶ ಕೊಡಲಾಗುತ್ತಿದೆ” .

112

ಸಂದೇಶವಾಹಕರು ಹೇಳಿದರು, “ಓ ನನ್ನ ಪ್ರಭೂ, ಸತ್ಯವಾದ ನೆಲೆಯಲ್ಲಿ ತೀರ್ಪು ಕಲ್ಪಿಸು. ದಯಾಮಯನಾದ ಅಲ್ಲಾಹನೇ ನಮ್ಮ ಪ್ರಭು. ನೀವು (ಸತ್ಯ ನಿಷೇಧಿಗಳು) ವರ್ಣಿಸುತ್ತಿರುವ ಮಾತುಗಳ ವಿರುದ್ಧ ಅವನು ಸಹಾಯ ಕೇಳಲ್ಪಡಬೇಕಾದವನು’’