ಭೂಮಿ-ಆಕಾಶಗಳಲ್ಲಿರುವ ಪ್ರತಿಯೊಂದು ವಸ್ತುವೂ ಅಲ್ಲಾಹನ ಪರಿಶುದ್ಧತೆಯನ್ನು ಪ್ರಕೀ ರ್ತಿಸುತ್ತಿದೆ. (ಅವನು) ರಾಜಾಧಿಪತಿಯೂ ಅತ್ಯಂತ ಪರಿಶುದ್ಧನೂ ಅಜೇಯನೂ ಯುಕ್ತಿಪೂರ್ಣನೂ ಆಗಿರುವನು.
ಅವನೇ ನಿರಕ್ಷರಿಗಳ ನಡುವೆ ಅವರಿಂದಲೇ ಒಬ್ಬ ಸಂದೇಶವಾಹಕರನ್ನು ನಿಯೋಗಿಸಿದವನು. ಅವರು ಅವರಿಗೆ ಅವನ ಸೂಕ್ತಗಳನ್ನು ಓದಿ ಹೇಳು ತ್ತಾರೆ, ಅವರನ್ನು ಸಂಸ್ಕರಿಸುತ್ತಾರೆ ಮತ್ತು ಅವರಿಗೆ ಗ್ರಂಥ ಹಾಗೂ ತತ್ವಜ್ಞಾನವನ್ನು ಕಲಿಸುತ್ತಾರೆ. ಅದಕ್ಕಿಂತ ಮುಂಚೆ ಅವರು ಸ್ಪಷ್ಟ ಪಥಭ್ರಷ್ಟತೆಗೆ ಒಳಗಾಗಿದ್ದರು .
ಅವರಲ್ಲಿ ಒಳಪಟ್ಟವರೂ ಇನ್ನೂ ಅವರ ಬಳಿ ಬಂದು ತಲುಪದಿರುವವರೂ ಆದ ಬೇರೆ ಕೆಲವರ ಬಳಿಗೂ (ಮುಹಮ್ಮದ್ ನಬಿಯನ್ನು ನಿಯೋಗಿಸಲಾಗಿದೆ). ಅಲ್ಲಾಹನು ಪ್ರಬಲನೂ ಯುಕ್ತಿವಂತನೂ ಆಗಿರುತ್ತಾನೆ.
ಅದು ಅಲ್ಲಾಹನ ಅನುಗ್ರಹ. ಅದನ್ನು ತಾನಿಚ್ಚಿಸಿ ದವರಿಗೆ ಅವನು ನೀಡುತ್ತಾನೆ. ಅಲ್ಲಾಹನು ಮಹಾ ಅನುಗ್ರಹದಾತನಾಗಿದ್ದಾನೆ.
ತೌರಾತಿನ (ಅನುಸರಣೆಯ) ಹೊಣೆ ಹೊರಿಸಲ್ಪಟ್ಟು, ತದನಂತರ ಅದರ ಹೊಣೆಗಾರಿಕೆಯನ್ನು ಹೊರದೆ ಇರುವವರ ಉದಾಹರಣೆಯು ಗ್ರಂಥಗಳನ್ನು ಹೊತ್ತುಕೊಂಡ ಕತ್ತೆಯಂತಿದೆ . ಅಲ್ಲಾಹನ ಸೂಕ್ತಗಳನ್ನು ಸುಳ್ಳಾಗಿಸಿದ ಜನತೆಯ ಉಪಮೆ ಬಹಳ ನಿಕೃಷ್ಟ. (ಇಂತಹ) ಅಕ್ರಮಿಗಳಾದ ಜನತೆಗೆ ಅಲ್ಲಾಹನು ಮಾರ್ಗದರ್ಶನ ಮಾಡುವುದಿಲ್ಲ.
ಹೇಳಿರಿ; ಯಹೂದಿಗಳೇ, ಇತರ ಮನುಷ್ಯರನ್ನು ಹೊರತು ನೀವು ಮಾತ್ರ ಅಲ್ಲಾಹನಿಗೆ ನೆಚ್ಚಿನವರೆಂಬವಾದ ನಿಮ್ಮದಾಗಿದ್ದರೆ ಮತ್ತು ಅದರಲ್ಲಿ ನೀವು ಸತ್ಯವಂತರಾಗಿದ್ದರೆ ಮರಣವನ್ನು ನೀವು ಆಶಿಸಿರಿ.
ಆದರೆ ಅವರು ತಮ್ಮ ಕೈಗಳಿಂದ ಮಾಡಿರುವಂತಹ ದುಷ್ಕøತ್ಯಗಳ ಕಾರಣದಿಂದಾಗಿ ಯಾವತ್ತೂ ಮರಣವನ್ನು ಅವರು ಆಶಿಸಲಾರರು. ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲನು.
ತಾವು ಹೇಳಿರಿ - ನೀವು ಯಾವ ಮರಣದಿಂದ ಓಡುತ್ತಿರುವಿರೋ ಅದು ನಿಮಗೆ ಬಂದೇ ತೀರು ವುದು. ಅನಂತರ ನಿಮ್ಮನ್ನು ದೃಶ್ಯಾದೃಶ್ಯಗಳ ಜ್ಞಾನಿಯಾದ ಅಲ್ಲಾಹನೆಡೆಗೆ ಮರಳಿಸಲಾಗುವುದು. ನೀವು ಮಾಡುತ್ತಿದ್ದ ಕರ್ಮಗಳ ಬಗ್ಗೆ ಆಗ ಅವನು ನಿಮಗೆ ತಿಳಿಸುವನು.
ಸತ್ಯವಿಶ್ವಾಸಿಗಳೇ, ಶುಕ್ರವಾರ ದಿನದ ನಮಾಝಿ ಗಾಗಿ ನಿಮ್ಮನ್ನು ಕರೆಯಲಾದರೆ ನೀವು ಅಲ್ಲಾ ಹನ ದಿಕ್ರ್‍ನ ಕಡೆಗೆ ಧಾವಿಸಿರಿ ಮತ್ತು ವ್ಯಾಪಾರ ವನ್ನು ತ್ಯಜಿಸಿರಿ. ನೀವು ಅರಿತವರಾಗಿದ್ದರೆ ಅದು ನಿಮಗೆ ಅತ್ಯುತ್ತಮವಾಗಿದೆ .
ನಮಾಝ್ ನಿರ್ವಹಿಸಲಾದರೆ, ನೀವು ಭೂಮಿ ಯಲ್ಲಿ ಚದುರಿಬಿಡಿರಿ. ಅಲ್ಲಾಹನ ಅನುಗ್ರಹದಿಂದ ಅರಸಿರಿ. ಅಲ್ಲಾಹನನ್ನು ನೀವು ಧಾರಾಳ ಸ್ಮರಿಸಿರಿ. ನೀವು ಯಶಸ್ಸುಗೊಂಡವರಾಗಲಿಕ್ಕಾಗಿ.
ಅವರು ಒಂದು ವ್ಯಾಪಾರವನ್ನೋ, ಮನರಂಜನೆ ಯನ್ನೋ ಕಂಡಾಗ ಅದರೆಡೆಗೆ ಧಾವಿಸಿ ಹೋ ದರು ಮತ್ತು ನಿಮ್ಮನ್ನು ನಿಂತಲ್ಲೇ ಉಪೇಕ್ಷಿಸಿ ಬಿಟ್ಟರು. ತಾವು ಹೇಳಿರಿ, ಅಲ್ಲಾಹನ ಬಳಿ ಇರು ವುದು ವ್ಯಾಪಾರಕ್ಕಿಂತಲೂ ಮನರಂಜನೆಗಿಂ ತಲೂ ಉತ್ತಮವಾಗಿದೆ. ಅಲ್ಲಾಹನು ಅತ್ಯುತ್ತಮ ಅನ್ನದಾತನಾಗಿದ್ದಾನೆ .