ಆಲ್ ಇಸ್ಲಾಂ ಲೈಬ್ರರಿ
1

ಅಲಿಫ್ ಲಾಮ್ ರಾ, ದೇವಗ್ರಂಥ ಹಾಗೂ ಸುವ್ಯಕ್ತ ಖುರ್‍ಆನಿನ ಸೂಕ್ತಗಳಿವು.

2

‘ನಾವೂ ಮುಸ್ಲಿಮರಾಗಿದ್ದರೆ ಎಷ್ಟು ಚೆನ್ನಾಗಿತ್ತು’ ಎಂದು ಸತ್ಯನಿಷೇಧಿಗಳು ತೀವ್ರ ಆಶೆಪಡುವರು.

3

ತಾವು ಅವರನ್ನು ಬಿಟ್ಟುಬಿಡಿರಿ. ಅವರು ತಿನ್ನಲಿ, ಸುಖಪಡಲಿ, ಹುಸಿ ಭರವಸೆಯಲ್ಲಿ ಮೈಮರೆಯಲಿ. ನಂತರ ಅವರು ತಿಳಿದುಕೊಳ್ಳುವರು.

4

ಒಂದು ನಿರ್ದಿಷ್ಟ ಅವಧಿಯನ್ನು ಲಿಖಿತಗೊಳಿಸದೆ ಯಾವುದೇ ನಾಡನ್ನು ನಾವು ನಾಶಗೊಳಿಸಿಲ್ಲ.

5

ಯಾವ ಜನಾಂಗವೂ ತನಗೆ ನಿಶ್ಚಯಿಸಲ್ಪಟ್ಟ ಕಾಲಕ್ಕಿಂತ ಮುಂದೆ ಹೋಗದು. (ಕಾಲಕ್ಕಿಂತ) ಅವರು ಹಿಂದೆ ಹೋಗರು.

6

ಅವರು (ಅವಿಶ್ವಾಸಿಗಳು) ಹೇಳುತ್ತಾರೆ, ಓ, ಉದ್ಭೋಧೆ ಅವತೀರ್ಣಗೊಂಡವನೇ! ಖಂಡಿತ ನೀನೊಬ್ಬ ಹುಚ್ಚನಾಗಿರುವಿ.

7

ನೀನು ಸತ್ಯವಾದಿಯಾಗಿದ್ದರೆ ನಮ್ಮ ಬಳಿ ದೇವಚ ರರನ್ನೇಕೆ ತರುವುದಿಲ್ಲ ?

8

ನ್ಯಾಯವಾದ ಕಾರಣವಿಲ್ಲದೆ ನಾವು ದೇವಚರರನ್ನು ಇಳಿಸುವುದಿಲ್ಲ. ಮತ್ತು ಆಗ ಅವರಿಗೆ (ಸತ್ಯ ನಿಷೇಧಿಗಳಿಗೆ) ಕಾಲಾವಕಾಶ ನೀಡಲಾಗುವುದಿಲ್ಲ.

9

ನಿಶ್ಚಯವಾಗಿಯೂ ನಾವು ಈ ಉದ್ಭೋ ದನೆಯನ್ನು ಅವತೀರ್ಣಗೊಳಿಸಿರುತ್ತೇವೆ. ಸ್ವತಃ ನಾವೇ ಅದರ ರಕ್ಷಕರೂ ಆಗಿರುತ್ತೇವೆ.

10

(ಓ ಪೈಗಂಬರರೇ), ನಾವು ನಿಮಗಿಂತ ಮುಂಚೆ ಪೂರ್ವಿಕರ ಅನೇಕ ಪಂಗಡಗಳಲ್ಲಿ ಸಂದೇಶವಾ ಹಕರನ್ನು ಕಳುಹಿಸಿದ್ದೇವೆ.

11

ಯಾವುದೇ ಸಂದೇಶವಾಹಕ ಅವರ ಬಳಿ ಬಂದಾಗ ಎಂದೂ ಪರಿಹಾಸ್ಯ ಮಾಡದೆ ಬಿಡಲಿಲ್ಲ.

12

ಅದೇ ರೀತಿಯಲ್ಲಿ ಅಪರಾಧಿಗಳ ಹೃದಯದೊಳಗೆ ಅದನ್ನು (ಪರಿಹಾಸ್ಯವನ್ನು) ನಾವು ಹಾಯಿಸುತ್ತೇವೆ.

13

ಅವರು ಪ್ರವಾದಿಯವರಲ್ಲಿ ವಿಶ್ವಾಸವಿರಿಸುವುದಿಲ್ಲ. ಪೂರ್ವಿಕರಲ್ಲಿ (ಅಲ್ಲಾಹನ) ಕ್ರಮ ಗತಿಸಿ ಹೋಗಿದೆ.

14

ನಾವು ಅವರಿಗೆ ಆಕಾಶದಿಂದ ದ್ವಾರವೊಂದನ್ನು ತೆರೆದು, ಅವರು ಅದರ ಮೂಲಕ ಏರಿ ಹೋಗುತ್ತಿದ್ದರೆ,

15

“ನಮ್ಮ ಕಣ್ಣುಗಳು ಮತ್ತೇರಿವೆ ಅಷ್ಟೆ. ಅಲ್ಲದೆ ನಾವು ಮಾಟಕ್ಕೊಳಗಾಗಿದ್ದೇವೆ” ಎಂದೇ ಅವರು ಹೇಳುತ್ತಿದ್ದರು.

16

ಆಕಾಶದಲ್ಲಿ ನಾವು ಅನೇಕ ಭ್ರಮಣ ಪಥಗಳನ್ನು ಮಾಡಿರುತ್ತೇವೆ. ಅವುಗಳನ್ನು ನೋಡುವವರಿಗಾಗಿ ಅಲಂಕರಿಸಿರುತ್ತೇವೆ.

17

ಮತ್ತು ಬಹಿಷ್ಕøತರಾದ ಎಲ್ಲ ಶೈತಾನರಿಂದ ಅವುಗಳನ್ನು ಕಾಪಾಡಿರುತ್ತೇವೆ.

18

ಒಂದಿಷ್ಟು ಕದ್ದು ಕೇಳುವವನ ಹೊರತು, ಅವನು ಕದ್ದಾಲಿಸಲು ಪ್ರಯತ್ನಿಸುವಾಗ ಪ್ರತ್ಯಕ್ಷವಾದ ಒಂದು ಅಗ್ನಿಜ್ವಾಲೆಯು ಅವನನ್ನು ಬೆನ್ನಟ್ಟುತ್ತದೆ.

19

ನಾವು ಭೂಮಿಯನ್ನು ಹರಡಿದೆವು. ಅದರಲ್ಲಿ ಊರಿನಿಂತ ಪರ್ವತಗಳನ್ನು ನಾಟಿದೆವು. ಸರಿ ಯಾಗಿ ನಿಶ್ಚಿತ ಪ್ರಮಾಣದದಲ್ಲಿ ಬೆಳೆಸಿದೆವು.

20

ಮತ್ತು ಅದರಲ್ಲಿ ನಿಮಗಾಗಿಯೂ ನೀವು ಅನ್ನ ನೀಡದಂತಹ ಅನೇಕ ಸೃಷ್ಟಿಗಳಿಗೂ ಜೀವನ ಸಾಧನಗಳನ್ನು ಒದಗಿಸಿದೆವು.

21

ಯಾವುದೇ ವಸ್ತುವಿನ ಭಂಡಾರ ನಮ್ಮ ಬಳಿ ಇಲ್ಲದಿಲ್ಲ. ಅದನ್ನು ನಾವು ಒಂದು ನಿಗದಿತ ಪ್ರಮಾಣದಲ್ಲಿ ಮಾತ್ರ ಇಳಿಸುತ್ತೇವೆ.

22

ಜಲಾಂಶವನ್ನು ಹೊತ್ತ ಮಾರುತಗಳನ್ನು ನಾವೇ ಕಳುಹಿಸುತ್ತೇವೆ . ಹಾಗೆ ಆಕಾಶದಿಂದ ನೀರನ್ನು ಸುರಿಸುತ್ತೇವೆ. ಮತ್ತು ಅದನ್ನು ನಿಮಗೆ ಕುಡಿಸುತ್ತೇವೆ. ನೀವೇನೂ ಅದರ ಸಂಗ್ರಾಹಕರಾಗಿಲ್ಲ .

23

ನಿಜವಾಗಿಯೂ ನಾವು ಬದುಕಿಸುತ್ತೇವೆ. ಮೃತ ಗೊಳಿಸುತ್ತೇವೆ. ನಾವೇ ಎಲ್ಲರ ವಾರೀಸುದಾರರು.

24

ನಿಮ್ಮ ಪೈಕಿ ಈ ಮುಂಚೆ ಗತಿಸಿ ಹೋದವರನ್ನೂ ನಾವು ಬಲ್ಲೆವು. ಮುಂದೆ ಬರಲಿರುವವರನ್ನೂ ನಾವು ಬಲ್ಲೆವು .

25

ನಿಶ್ಚಯವಾಗಿಯೂ ನಿಮ್ಮ ಪ್ರಭು ಅವರೆಲ್ಲರನ್ನೂ ಒಟ್ಟುಗೂಡಿಸುವನು. ಅವನು ಮಹಾಯುಕ್ತಿವಂತನೂ ಸರ್ವಜ್ಞನೂ ಆಗಿರುತ್ತಾನೆ.

26

ನಾವು ಮಾನವನನ್ನು ಹಳಸಿದ ಕಪ್ಪು ಒಣಗಲು ಕೊಜೆ ಮಣ್ಣಿನಿಂದ ಸೃಷ್ಟಿಸಿದೆವು .

27

ಅದಕ್ಕಿಂತ ಮುಂಚೆ `ಜಿನ್ನ್’ಅನ್ನು ಧೂಮರಹಿತ ಅಗ್ನಿಯ ಜ್ವಾಲೆಯಿಂದ ಸೃಷ್ಟಿಸಿದೆವು .

28

ನಿಮ್ಮ ಪ್ರಭು ದೇವಚರರೊಡನೆ, ಹೀಗೆ ಹೇಳಿದ ಸಂದರ್ಭ; ‘ನಾನು ಹಳಸಿದ ಕಪ್ಪು ಒಣಗಲು ಕೊಜೆ ಮಣ್ಣಿನಿಂದ ಒಬ್ಬ ಮಾನವನನ್ನು ಸೃಷ್ಟಿ ಸುವವನಿದ್ದೇನೆ.

29

ನಾನು ಅವನನ್ನು ಸಂಪೂರ್ಣಗೊಳಿಸಿ ಅವನೊಳಗೆ ನನ್ನ ಆತ್ಮದಿಂದ ಊದಿದರೆ ನೀವೆಲ್ಲರೂ ಅವನಿಗೆ ಸಾಷ್ಟಾಂಗವೆರಗಿರಿ’.

30

ಆ ಪ್ರಕಾರ ಎಲ್ಲ ದೇವಚರರೂ ಸಾಷ್ಟಾಂಗವೆರಗಿದರು.

31

ಇಬ್‍ಲೀಸನ ಹೊರತು. ಸಾಷ್ಟಾಂಗವೆರಗಿದವರ ಜೊತೆ ಸೇರಲು ಅವನು ನಿರಾಕರಿಸಿದನು.

32

ಅಲ್ಲಾಹು ಕೇಳಿದನು, ಓ ಇಬ್‍ಲೀಸ್, ನೀನು ಸಾಷ್ಟಾಂಗವೆರಗಿದವರೊಂದಿಗೆ ಸೇರದಿರಲು ಕಾರಣವೇನು?

33

ಅವನು ಹೇಳಿದನು; ‘ನೀನು ಹಳಸಿದ ಕಪ್ಪು ಒಣಗಲು ಕೊಜೆ ಮಣ್ಣಿನಿಂದ ಸೃಷ್ಟಿಸಿದ ಈ ಮಾನವನಿಗೆ ನಾನು ಸಾಷ್ಟಾಂಗವೆರಗಲಾರೆ’.

34

ಅಲ್ಲಾಹು ಹೇಳಿದನು; ‘ಇಲ್ಲಿಂದ ಹೊರಗೆ ನಡೆ, ನಿಜವಾಗಿಯೂ ನೀನು ಬಹಿಷ್ಕøತನು.

35

ನಿರ್ಣಾಯಕ ದಿನದವರೆಗೂ ನಿನ್ನ ಮೇಲೆ ನನ್ನ ಶಾಪವಿದೆ’.

36

ಅವನು, ಹೇಳಿದನು; ‘ಓ ನನ್ನ ಪ್ರಭೂ, ಹಾಗಿದ್ದರೆ ಅವರು ಎಬ್ಬಿಸಲ್ಪಡುವ ದಿನದವರೆಗೆ ನನಗೆ ಕಾಲಾವಕಾಶ ನೀಡು’.

37

ಆಗ, ಅಲ್ಲಾಹನು ಹೇಳಿದನು ‘ನೀನು ಕಾಲಾವ ಕಾಶವನ್ನು ನೀಡಲಾಗಿರುವವರ ಸಾಲಿಗೆ ಸೇರಿರುವೆ.

38

ಆ ನಿಶ್ಚಿತ ಸಮಯದವರೆಗೆ’.

39

ಅವನೆಂದನು, ‘ಓ ನನ್ನ ಪ್ರಭೂ, ನೀನು ನನ್ನನ್ನು ದಾರಿಗೆಡಿಸಿದಂತೆಯೇ ಭೂಮಿಯಲ್ಲಿ ಅವರಿಗೆ ನಾನು (ದುಷ್ಪøವರ್ತಿಗಳನ್ನು) ಅಲಂಕೃತವಾಗಿ ತೋರಿಸಿಕೊಡುವೆನು ಮತ್ತು ಅವರೆಲ್ಲರನ್ನೂ ನಾನು ದಾರಿಗೆಡಿಸಿಬಿಡುವೆನು ಖಂಡಿತ.

40

ಅವರ ಪೈಕಿ ನಿನ್ನ ನಿಷ್ಕಂಳಕರಾದ ದಾಸರನ್ನು ಹೊರತು’ .

41

ಅವನು (ಅಲ್ಲಾಹು) ಹೇಳಿದನು; ‘ನೇರವಾಗಿ ನನ್ನನ್ನು ತಲಪುವ ಮಾರ್ಗವಿದು .

42

ನಿಶ್ಚಯವಾಗಿಯೂ ನನ್ನ (ನಿಷ್ಟಾವಂತ) ದಾಸರ ಮೇಲೆ ನಿನಗೆ ಅಧಿಕಾರವಿಲ್ಲ. ನಿನ್ನನ್ನು ಅನುಸರಿಸುವ ಪಥಭ್ರಷ್ಟರ ಮೇಲೆಯೇ ಹೊರತು.

43

ನಿಶ್ಚಯವಾಗಿಯೂ ನರಕವು ಅವರೆಲ್ಲರಿಗೂ ನಿಶ್ಚಯಿಸಲಾದ ಸ್ಥಾನವಾಗಿದೆ’.

44

ಅದಕ್ಕೆ (ನರಕಕ್ಕೆ) ಏಳು ದ್ವಾರಗಳಿವೆ. ಪ್ರತಿಯೊಂದು ದ್ವಾರಕ್ಕೆ ನಿಗಧಿಪಡಿಸಲಾದ ಒಂದೊಂದು ವಿಭಾಗವಿದೆ.

45

ಧರ್ಮನಿಷ್ಟರು ಉದ್ಯಾನಗಳಲ್ಲಿಯೂ ಚಿಲುಮೆ ಗಳಲ್ಲಿಯೂ ಇರುವರು.

46

ನಿರ್ಭಯರಾಗಿ ಶಾಂತಿಯಿಂದ ಅದರಲ್ಲಿ ಪ್ರವೇಶಿಸಿರಿ (ಎಂದು ಅವರಿಗೆ ಹೇಳಲಾಗುವುದು.)

47

ಅವರ ಹೃದಯಗಳಿಂದ ವಿದ್ವೇಷವನ್ನು ನಾವು ತೆಗೆದುಬಿಡುವೆವು. ಅವರು ಪರಸ್ಪರ ಸಹೋದ ರರಾಗಿ ಅಭಿಮುಖರಾಗಿ ಆಸನಗಳಲ್ಲಿ ಕುಳಿತು ಕೊಳ್ಳುವರು.

48

ಅವರಿಗೆ ಅಲ್ಲಿ ಯಾವುದೇ ಕ್ಲೇಶ ತಟ್ಟದು. ಮತ್ತು ಅವರು ಅಲ್ಲಿಂದ ಹೊರಹಾಕಲ್ಪಡುವುದೂ ಇಲ್ಲ.

49

(ಓ ಪೈಗಂಬರರೇ,) ನಾನು ಮಹಾ ಕ್ಷಮಾಶೀಲನೂ ಕೃಪಾನಿಧಿಯೂ ಆಗಿರುತ್ತೇನೆಂದು ನನ್ನ ದಾಸರಿಗೆ ತಿಳಿಸಿಬಿಡಿರಿ.

50

ನನ್ನ ಶಿಕ್ಷೆಯೂ ಅತ್ಯಂತ ವೇದನಾಯುಕ್ತ ವಾಗಿದೆ. (ಎಂದೂ ತಿಳಿಸಿಬಿಡಿರಿ).

51

ಅವರಿಗೆ ಇಬ್‍ರಾಹೀಮರ ಅತಿಥಿಗಳ ವೃತ್ತಾಂತವನ್ನೂ ತಿಳಿಸಿರಿ.

52

ಅವರು ಇವರ ಬಳಿ ಬಂದು, ‘ಸಲಾಮ್ (ನಿಮಗೆ ಶಾಂತಿ ಇರಲಿ)’ ಎಂದರು. ಆಗ ಇವರು, ‘ನಾವು ನಿಮ್ಮ ಬಗ್ಗೆ ಹೆದರಿದ್ದೇವೆ’ ಎಂದರು.

53

ಆಗ ಅವರು, ಹೆದರಬೇಡಿರಿ, ನಾವು ನಿಮಗೆ ಓರ್ವ ಜ್ಞಾನಿಯಾದ ಪುತ್ರನ ಸುವಾರ್ತೆ ನೀಡುತ್ತೇವೆ’. ಎಂದರು.

54

‘ನನಗೆ ವೃದ್ಧಾಪ್ಯ ತಟ್ಟಿದ ಮೇಲೆ ನೀವು ನನಗೆ ಸುವಾರ್ತೆ ನೀಡುತ್ತೀರಾ? ನೀವು ಯಾವುದರ ಬಗ್ಗೆ ಸುವಾರ್ತೆ ನೀಡುತ್ತಿರುವಿರಿ’ ಎಂದು ಇಬ್ರಾಹೀಮರು ಹೇಳಿದರು.

55

ಆಗ ಅವರು, ಹೇಳಿದರು; ‘ನಾವು ನಿಮಗೆ ಸತ್ಯವಾದ ಸುವಾರ್ತೆಯನ್ನೇ ನೀಡುತ್ತಿದ್ದೇವೆ. ನೀವು ನಿರಾಶರಲ್ಲಿ ಸೇರಬೇಡಿರಿ.

56

‘ತಮ್ಮ ಪ್ರಭುವಿನ ಕಾರುಣ್ಯದ ಬಗ್ಗೆ ಪಥ ಭ್ರಷ್ಟರಲ್ಲದೆ ಯಾರು ನಿರಾಶರಾಗುತ್ತಾರೆ’ ಎಂದು ಇಬ್ರಾಹೀಮರು ಹೇಳಿದರು.

57

‘ಓ ದೇವದೂತರೇ, ನಿಮ್ಮ (ಮುಖ್ಯ) ವಿಷಯವೇನು?’ ಎಂದು ಕೇಳಿದರು.

58

ಅವರು, ಹೇಳಿದರು; ‘ನಾವು ಒಂದು ಅಪರಾಧಿ ಜನಾಂಗದ ಕಡೆಗೆ ಕಳುಹಿಸಲ್ಪಟ್ಟಿದ್ದೇವೆ.

59

ಆದರೆ `ಲೂಥ’ರ ಕುಟುಂಬದವರು ಇದಕ್ಕೆ ಹೊರ ತಾಗಿದ್ದಾರೆ. ಅವರೆಲ್ಲರನ್ನೂ ನಾವು ರಕ್ಷಿಸುವೆವು.

60

`ಲೂಥ’ರ ಪತ್ನಿಯ ಹೊರತು; ಆಕೆ ನಾಶಕ್ಕೀಡಾಗುವವರಲ್ಲಿ ಸೇರಿದವಳೆಂದು ನಾವು ಲೆಕ್ಕ ಹಾಕಿದ್ದೇವೆ’ ಎಂದರು.

61

ಅನಂತರ ಆ ದೂತರು ಲೂಥರ ಕುಟುಂಬದಲ್ಲಿಗೆ ತಲಪಿದಾಗ

62

‘ನೀವು ನನಗೆ ಅಪರಿಚಿತರಾಗಿ ತೋರುತ್ತೀರಿ’ ಎಂದು ಅವರು ಹೇಳಿದರು.

63

ಆಗ ಅವರು, (ದೂತರು) ಹೇಳಿದರು; ‘ಅಲ್ಲ, ಯಾವುದರ ಬಗ್ಗೆ ಇವರು (ಜನರು) ಸಂದೇಹ ಪಡುತ್ತಿದ್ದರೋ ಅದನ್ನು ವಹಿಸಿಕೊಂಡು ನಾವು ನಿಮ್ಮ ಬಳಿಗೆ ಬಂದಿದ್ದೇವೆ.

64

ನಾವು ಸತ್ಯಸಹಿತ ನಿಮ್ಮ ಬಳಿಗೆ ಬಂದಿರುತ್ತೇವೆ ಮತ್ತು ನಾವು ಸತ್ಯವನ್ನೇ ಹೇಳುತ್ತೇವೆ.

65

ಆದುದರಿಂದ ನೀವು ರಾತ್ರಿಯಿಂದ ಸ್ವಲ್ಪ ಉಳಿದಿರುವಾಗಲೇ ನಿಮ್ಮ ಕುಟುಂಬವನ್ನು ಕರಕೊಂಡು ಹೊರಟು ಹೋಗಿರಿ ಮತ್ತು ನೀವು ಅವರ ಹಿಂದೆಯೇ ಅನುಗಮಿಸಿರಿ. ನಿಮ್ಮ ಪೈಕಿ ಯಾರೂ ಹಿಂತಿರುಗಿ ನೋಡಬಾರದು. ನಿಮಗೆ ಆಜ್ಞಾಪಿಸಲಾದ ಭಾಗಕ್ಕೆ ನೇರವಾಗಿ ಸಾಗಿರಿ’. ಎಂದು ಹೇಳಿದರು.

66

ಆ ಕಾರ್ಯ ಅಂದರೆ ಬೆಳಗಾಗುವುದರೊಳಗಾಗಿ ಈ ಮಂದಿಗಳ ಬುಡವನ್ನೇ ಕಿತ್ತೊಗೆಯಲಾಗುವುದೆಂಬ ಕಾರ್ಯವನ್ನು ನಾವು ಅವರಿಗೆ ನಿಖರವಾಗಿ ತಿಳಿಸಿಬಿಟ್ಟೆವು.

67

ನಗರದವರು ಸಂತೋಷದಿಂದ ಲೂಥರ ಮನೆಗೆ ಧಾವಿಸಿ ಬಂದರು.

68

ಲೂಥರು ಹೇಳಿದರು, ‘ಇವರು ನನ್ನ ಅತಿಥಿಗಳು, ನನ್ನನ್ನು ಅವಮಾನಿಸಬೇಡಿರಿ.

69

ಅಲ್ಲಾಹನನ್ನು ಭಯಪಡಿರಿ, ನನ್ನನ್ನು ನಿಂದಿಸಬೇಡಿರಿ’.

70

ಆಗ ಅವರು, ‘ಜನರಿಗೆ ಆತಿಥ್ಯ ನೀಡಬಾರದು ಎಂದು ನಾವು ನಿಮ್ಮನ್ನು ತಡೆ ಹೇರಿಲ್ಲವೇ?’ ಎಂದು ಕೇಳಿದರು.

71

ಲೂಥರು ಹೇಳಿದರು: ‘ಇದೋ ನನ್ನ ಪುತ್ರಿಯರು. ನೀವು ಆಸೆ ತೀರಿಸುವವರಾಗಿದ್ದರೆ (ಅವರನ್ನು ಮದುವೆಯಾಗಬಹುದಲ್ಲ?).

72

ನಿಮ್ಮ ಜೀವದಾಣೆ! ಆಗ ಆ ಜನರುಮದೋ ನ್ಮತ್ತರಾಗಿ ಮೈಮರೆತಿದ್ದರು.

73

ಹಾಗೆ ಸೂರ್ಯೋದಯದ ಹೊತ್ತಲ್ಲಿ ಉಷಃಕಾಲವಾದೊಡನೆ ಒಂದು ಘೋರ ಶಬ್ದವು ಅವರನ್ನು ಹಿಡಿಯಿತು.

74

ಹಾಗೆ ನಾವು ಆ ನಾಡನ್ನು ಬುಡಮೇಲು ಮಾಡಿ ಬಿಟ್ಟೆವು ಮತ್ತು ಅವರ ಮೇಲೆ ಸುಡುಮಣ್ಣಿನ ಕಲ್ಲುಗಳ ಮಳೆಗರೆದೆವು.

75

ವಿಚಾರಶೀಲರಿಗೆ ಅದರಲ್ಲಿ ಅನೇಕ ನಿದರ್ಶನಗಳಿವೆ.

76

ಅದು (ಆ ಪ್ರದೇಶವು) (ಇಂದಿಗೂ) ನೆಲೆನಿಂತಿರುವ ಒಂದು ಮಾರ್ಗದಲ್ಲೇ ಇದೆ.

77

ಇದರಲ್ಲಿ ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳಿಗೆ ಒಂದು ನಿದರ್ಶನವಿದೆ.

78

ಐಕಃದ ಜನರು ಅಕ್ರಮಿಗಳಾಗಿದ್ದರು.

79

ನಾವು ಅವರ ಮೇಲೆ ಶಿಸ್ತುಕ್ರಮ ಕೈಗೊಂಡೆವು. ಈ ಎರಡೂ ಪ್ರದೇಶವೂ ತೆರೆದ ಮಾರ್ಗದಲ್ಲೇ ಇವೆ .

80

ಖಂಡಿತ ಹಿಜ್ರ್‍ನವರೂ ಸಂದೇಶವಾಹಕರನ್ನು ಸುಳ್ಳಾಗಿಸಿದ್ದರು.

81

ನಮ್ಮ ನಿದರ್ಶನಗಳನ್ನು ಅವರಿಗೆ ನಾವು ನೀಡಿದೆವು. ಆದರೆ ಅವರು ಅವೆಲ್ಲವನ್ನೂ ಅವಗಣಿಸುತ್ತಿದ್ದರು.

82

ಅವರು ಪರ್ವತಗಳಿಂದ ಬಂಡೆಗಳನ್ನು ಕೊರೆದು ಮನೆಗಳನ್ನು ಮಾಡಿ ನಿರ್ಭಯರಾಗಿ ಕಳೆಯುತ್ತಿದ್ದರು.

83

ಹೀಗಿರುತ್ತ ಬೆಳಗಾಗುತ್ತಲೇ ಒಂದು ಪ್ರಚಂಡ ಶಬ್ಧವು ಅವರನ್ನು ಹಿಡಿದು ಬಿಟ್ಟಿತು.

84

ಅವರ ಸಂಪಾದನೆಯು ಅವರ ಉಪಯೋಗಕ್ಕೆ ಬರಲಿಲ್ಲ.

85

ಭೂಮಿ-ಆಕಾಶಗಳನ್ನೂ ಅವುಗಳ ನಡುವೆ ಇರು ವುದೆಲ್ಲವನ್ನೂ ನಾವು ವ್ಯರ್ಥವಾಗಿ ಸೃಷ್ಟಿಸಲಿಲ್ಲ ಮತ್ತು ಅಂತ್ಯ ಘಳಿಗೆಯೂ ಖಂಡಿತ ಬರಲಿದೆ. ಆದುದರಿಂದ ಓ ಪೈಗಂಬರರೇ, ಅವರ ಬಗ್ಗೆ ನೀವು ನಿರ್ಲಿಪ್ತರಾಗಿ ನಿರ್ಲಕ್ಯವಹಿಸಿರಿ.

86

ನಿಶ್ಚಯವಾಗಿಯೂ ನಿಮ್ಮ ಪ್ರಭು ಎಲ್ಲರ ಸೃಷ್ಟಿ ಕರ್ತನೂ ಸರ್ವಜ್ಞನೂ ಆಗಿರುತ್ತಾನೆ.

87

ಪುನರಾವರ್ತಿಸಲ್ಪಡುವ ಸಪ್ತ ಸೂಕ್ತಗಳನ್ನೂ ಮಹತ್ತಾದ ಖುರ್‍ಆನನ್ನೂ ನಾವು ನಿಮಗೆ ದಯಪಾಲಿಸಿದ್ದೇವೆ.

88

ಅವರ (ಅವಿಶ್ವಾಸಿಗಳ)ಲ್ಲಿರುವ ಜನರಿಗೆ ಅನೇಕ ವಿಧಗಳಲ್ಲಿ ನಾವು ಕೊಟ್ಟಿರುವ ಲೌಕಿಕ ಸುಖ ಭೋಗಗಳ ಕಡೆಗೆ ನೀವು ಕಣ್ಣೆತ್ತಿ ನೋಡಬೇಡಿರಿ ಮತ್ತು ಅವರಿಗಾಗಿ ವ್ಯಾಕುಲಗೊಳ್ಳದಿರಿ. ಸತ್ಯ ವಿಶ್ವಾಸಿಗಳಿಗೆ ನೀವು ವಿನಯಾನ್ವಿತರಾಗಿರಿ.

89

ನಾನು ಸುಸ್ಪಷ್ಟವಾಗಿ ಎಚ್ಚರಿಕೆ ನೀಡುವವನು ಎಂದು ಹೇಳಿರಿ.

90

ವಿಂಗಡನೆಗಾರರ ಮೇಲೆ ನಾವು ಕಳುಹಿಸಿದ್ದಂತೆ.

91

ಅಂದರೆ ಖುರ್‍ಆನನ್ನು ವಿಭಿನ್ನ ಭಾಗಗಳಾಗಿ ಮಾರ್ಪಡಿಸಿದವರ ಮೇಲೆ.

92

ನಿಮ್ಮ ಪ್ರಭುವಿನಾಣೆ! ನಾವು ಅವರೆಲ್ಲರೊಡನೆ ವಿಚಾರಿಸಿಯೇ ತೀರುವೆವು.

93

ಅವರು ಮಾಡುತ್ತಲಿದ್ದ ಕರ್ಮದ ಬಗ್ಗೆ.

94

ಆದುದರಿಂದ (ಓ ಪೈಗಂಬರರೇ,) ನಿಮಗೆ ಆಜ್ಞಾ ಪಿಸಲಾಗುತ್ತಿರುವ ಆದೇಶಗಳನ್ನು ಘಂಟಾ ಘೋಷವಾಗಿ ಸಾರಿ ಬಿಡಿರಿ ಮತ್ತು ಬಹುದೇವ ವಿಶ್ವಾಸಿಗಳನ್ನು ಅವಗಣಿಸಿರಿ.

95

ಪರಿಹಾಸ್ಯ ಮಾಡುವವರಿಂದ ನಿಮ್ಮನ್ನು ರಕ್ಷಿಸಲು ನಾವು ಸಾಕು.

96

ಅಲ್ಲಾಹನೊಂದಿಗೆ ಬೇರೆ ದೇವರನ್ನು ಸ್ಥಾಪಿಸುವವರವರು. ಮುಂದೆ ಅವರಿಗೆ ಗೊತ್ತಾಗಲಿದೆ.

97

ಅವರಾಡುತ್ತಿರುವ (ಸುಳ್ಳು ಹಾಗೂ ಅಪಹಾಸ್ಯದ) ಮಾತುಗಳಿಂದ ನಿಮ್ಮ ಎದೆ ಇಕ್ಕಟ್ಟಾಗುತ್ತಿದೆಯೆಂಬುದನ್ನು ನಾವು ಬಲ್ಲೆವು.

98

ನಿಮ್ಮ ಪ್ರಭುವಿನ ಕೀರ್ತನೆಯೊಂದಿಗೆ ಅವನನ್ನು ಸ್ತುತಿಸಿರಿ. ಸಾಷ್ಟಾಂಗವೆರಗುವವರಲ್ಲಿ ಸೇರಿರಿ.

99

ಖಚಿತವಾದ ಕಾರ್ಯ (ಮರಣ) ನಿಮಗೆ ಬರುವ ವರೆಗೂ ನೀವು ನಿಮ್ಮ ಪ್ರಭುವಿಗೆ ಆರಾಧಿಸಿರಿ.